ಮಾರ್ಚ್ ತಿಂಗಳಲ್ಲಿ ಫೋರ್ಡ್ ಫಿಗೊ ಫೇಸ್‍ಲಿಫ್ಟ್ ಬಿಡುಗಡೆಯಾವುದು ಖಚಿತ..

ಫೋರ್ಡ್ ಇಂಡಿಯಾ ಸಂಸ್ಥೆಯು ಕೆಲ ದಿನಗಳ ತಮ್ಮ ಆಸ್ಫೈರ್ ಸೆಡಾನ್ ಕಾರಿನ ಫೇಸ್‍‍ಲಿಫ್ಟ್ ಮಾದರಿಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.5.55 ಲಕ್ಷದ ಬೆಲಯಲ್ಲಿ ಬಿಡುಗಡೆಗೊಳಿಸಿದ್ದು, ಮಾಹಿತಗಳ ಪ್ರಕಾರ ಸಂಸ್ಥೆಯು ತಮ್ಮ ಜನಪ್ರಿಯ ಫಿಗೊ ಕಾರಿನ ಫೇಸ್‍ಲಿಫ್ಟ್ ಅನ್ನು 2019ರ ಮಾರ್ಚ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಗೆ ಪರಿಚಯಿಸಲಿದೆ.

ಮಾರ್ಚ್ ತಿಂಗಳಲ್ಲಿ ಫೋರ್ಡ್ ಫಿಗೊ ಫೇಸ್‍ಲಿಫ್ಟ್ ಬಿಡುಗಡೆಯಾವುದು ಖಚಿತ..

ಫೋರ್ಡ್ ಪರಿಚಯಿಸುತ್ತಿರುವ ಫಿಗೊ ಫೇಸ್‌ಲಿಫ್ಟ್ ಆವೃತ್ತಿಯು ಪ್ರಸ್ತುತ ಮಾದರಿಗಿಂತಲೂ ಹೆಚ್ಚಿನ ಬದಲಾವಣೆ ಹೊಂದಿದ್ದು, ಕಾರಿನ ಒಳಗೂ ಹಾಗು ಹೊರಗಿನ ವಿನ್ಯಾಸಗನ್ನು ಬದಲಾವಣೆ ಮಾಡಿ ಹೊಸ ಲುಕ್ ನೀಡಿರುವುದು ಗ್ರಾಹಕರನ್ನು ಸೆಳೆಯಲು ನೆರವಾಗಲಿದೆ.

ಮಾರ್ಚ್ ತಿಂಗಳಲ್ಲಿ ಫೋರ್ಡ್ ಫಿಗೊ ಫೇಸ್‍ಲಿಫ್ಟ್ ಬಿಡುಗಡೆಯಾವುದು ಖಚಿತ..

ಇನ್ನು ಫೋರ್ಡ್ ಫಿಗೊ ಫೇಸ್ ಲಿಫ್ಟ್ ಬದಲಾವಣೆಗೆ ಸಂಬಂಧಿಸಿದಂತೆ ಫಿಗೊ ಮಾದರಿಯು ದೊಡ್ಡದಾದ ಹೆಡ್‌ಲ್ಯಾಂಪ್‌ಗಳು, ಹೊಸ ನಮೂನೆ ಗ್ರಿಲ್ ಅನ್ನು ಪಡೆದುಕೊಂಡಿದೆ.

ಮಾರ್ಚ್ ತಿಂಗಳಲ್ಲಿ ಫೋರ್ಡ್ ಫಿಗೊ ಫೇಸ್‍ಲಿಫ್ಟ್ ಬಿಡುಗಡೆಯಾವುದು ಖಚಿತ..

ಕಾರಿನ ಒಳ ವಿನ್ಯಾಸ

ಫಿಗೊ ಫೇಸ್‌ಲಿಫ್ಟ್ ಮಾದರಿಯು 6.5 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದ್ದು, ಇದು ಇತ್ತೀಚೆಗೆ ಅನಾವರಣಗೊಂಡ ಫ್ರೀ ಸ್ಟೈಲ್ ಕ್ರಾಸ್ ಓವರ್‌ನಲ್ಲೂ ಅವಳವಡಿಸಲಾಗಿದೆ. ಇದರ ಜೊತೆಗೆ ಫೋರ್ಡ್ ಸಿಂಕ್ 3 ತಂತ್ರಜ್ಞಾನ, ಆ್ಯಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಸಂಪರ್ಕದ ವೈಶಿಷ್ಟ್ಯತೆಯನ್ನು ಪಡೆದಿದೆ.

ಮಾರ್ಚ್ ತಿಂಗಳಲ್ಲಿ ಫೋರ್ಡ್ ಫಿಗೊ ಫೇಸ್‍ಲಿಫ್ಟ್ ಬಿಡುಗಡೆಯಾವುದು ಖಚಿತ..

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಳ್ಳಲಿರುವ ಹೊಸ ಫೋರ್ಡ್ ಫಿಗೊ ಫೇಸ್‍‍ಲಿಫ್ಟ್ ಕಾರುಗಳು 1.2 ಲೀಟರ್ ಮತ್ತು 1.5 ಲೀಟರ್ ಪೆಟ್ರೋಲ್ ಎಂಜಿನ್ ಹಾಗು 1.5 ಲೀಟರ್ ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಿರಲಿದೆ ಎನ್ನಲಾಗಿರ್ರುಮ್ 1.2 ಲೀಟರ್ ಡ್ರಾಗನ್ ಸಿರೀಸ್ ಪೆಟ್ರೋಲ್ ಎಂಜಿನ್ 95ಬಿಹೆಚ್‍ಪಿ ಮತ್ತು 120ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂದಿದೆ.

ಮಾರ್ಚ್ ತಿಂಗಳಲ್ಲಿ ಫೋರ್ಡ್ ಫಿಗೊ ಫೇಸ್‍ಲಿಫ್ಟ್ ಬಿಡುಗಡೆಯಾವುದು ಖಚಿತ..

ಇನ್ನು 1.5 ಲೀಟರ್ ಪೆಟ್ರೋಲ್ ಎಂಜಿನ್ 121ಬಿಹೆಚ್‍ಪಿ ಮತ್ತು 150ಎನ್ಎಮ್ ಟಾರ್ಕ್ ಅನ್ನು ಉತ್ಪದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಹಾಗೆಯೆ 1.5 ಲೀಟರ್ ಡೀಸೆಲ್ ಎಂಜಿನ್ 99ಬಿಹೆಚ್‍ಪಿ ಮತ್ತು 215ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಮಾರ್ಚ್ ತಿಂಗಳಲ್ಲಿ ಫೋರ್ಡ್ ಫಿಗೊ ಫೇಸ್‍ಲಿಫ್ಟ್ ಬಿಡುಗಡೆಯಾವುದು ಖಚಿತ..

ಫೋರ್ಡ್ ಫಿಗೊ ಕಾರಿನ 1.2 ಲೀಟರ್ ಪೆಟ್ರೋಲ್ ಹಾಗು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಿದರೆ ಇನ್ನು 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಮ್ಯಾನುವಲ್ ಹಾಗು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿರಲಿದೆ.

ಮಾರ್ಚ್ ತಿಂಗಳಲ್ಲಿ ಫೋರ್ಡ್ ಫಿಗೊ ಫೇಸ್‍ಲಿಫ್ಟ್ ಬಿಡುಗಡೆಯಾವುದು ಖಚಿತ..

ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಡ್ಯುಯಲ್ ಏರ್‍‍ಭ್ಯಾಗ್ಸ್, ಎಬಿಎಸ್, ಇಬಿಡಿ ಮತ್ತು ಐಎಸ್‍ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಕಾರಿನ ಟಾಪ್ ವೇರಿಯಂಟ್‍‍ಗಳಲ್ಲಿ ಆಟೋಮ್ಯಾಟಿಕ್ ಹೆಡ್‍‍ಲ್ಯಾಂಪ್ಸ್, ರೈನ್ ಸೆಂಸಿಂಗ್ ವೈಪರ್ಸ್ ಮತ್ತು ರಿವರ್ಸ್ ಮಾರ್ಕಿಂಗ್ ಸೆನ್ಸಾರ್‍‍ಗಳನ್ನು ಒದಗಿಸಲಾಗಿದೆ.

ಮಾರ್ಚ್ ತಿಂಗಳಲ್ಲಿ ಫೋರ್ಡ್ ಫಿಗೊ ಫೇಸ್‍ಲಿಫ್ಟ್ ಬಿಡುಗಡೆಯಾವುದು ಖಚಿತ..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಫೋರ್ಡ್ ಸಂಸ್ಥೆಯು ತಮ್ಮ ಅಪ್ಡೇಟೆಡ್ ಫಿಗೊ ಫೇಸ್‍‍ಲಿಫ್ಟ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ 2019ರ ಮಾರ್ಚ್ ತಿಂಗಳ ಅವಧಿಯಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಒಮ್ಮೆ ಮಾರುಕಟ್ಟೆಗೆ ಈ ಕಾರು ಲಗ್ಗೆಯಿಟ್ಟಲ್ಲಿ ಮಾರುತಿ ಸ್ವಿಫ್ಟ್, ಹ್ಯುಂಡೈ ಗ್ರ್ಯಾಂಡ್ ಐ10 ಮತ್ತು ಮಾರುತಿ ಸುಜುಕಿ ಇಗ್ನಿಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
2019 Ford Figo Facelift Launch Date Confirmed. Read In Kannada
Story first published: Monday, February 25, 2019, 14:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X