ಡೀಸೆಲ್ ವಾಹನಗಳ ಮಾರಾಟ ಮುಂದುವರೆಸಲಿರುವ ಫೋರ್ಡ್

ಅಮೆರಿಕಾದ ಆಟೋ ಮೋಬೈಲ್ ಕಂಪನಿ ಫೋರ್ಡ್ ಭಾರತೀಯ ಮಾರುಕಟ್ಟೆಯಲ್ಲಿರುವ ತನ್ನ ಡೀಸೆಲ್ ಮಾದರಿಯ ವಾಹನಗಳ ಮಾರಾಟವನ್ನು ಮುಂದುವರೆಸುವುದಾಗಿ ತಿಳಿಸಿದ್ದು, ಚಿಕ್ಕ ಡೀಸೆಲ್ ಎಂಜಿನ್ ವಾಹನಗಳನ್ನು ನಿಲ್ಲಿಸುವ ಯಾವುದೇ ಯೋಜನೆಗಳಿಲ್ಲ ಎಂದು ತಿಳಿಸಿದೆ. ಕಂಪನಿಯು ತನ್ನ ಎಲ್ಲಾ ಡೀಸೆಲ್ ಮಾದರಿ ವಾಹನಗಳಲ್ಲಿ 1ನೇ ಏಪ್ರಿಲ್ 2019ರಿಂದ ಬಿಎಸ್6 ನಿಯಮಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದೆ.

ಡೀಸೆಲ್ ವಾಹನಗಳ ಮಾರಾಟ ಮುಂದುವರೆಸಲಿರುವ ಫೋರ್ಡ್

ಟೈಮ್ಸ್ ನ್ಯೂಸ್ ನೌ ವರದಿಗಳ ಪ್ರಕಾರ, ಫೋರ್ಡ್ ಇಂಡಿಯಾದ ಮಾರ್ಕೆಟಿಂಗ್ ಸೇಲ್ಸ್ ಮತ್ತು ಸರ್ವಿಸ್ ನ ಕಾರ್ಯಕಾರಿ ನಿರ್ದೇಶಕರಾದ ವಿನಯ್ ರೈನಾರವರು ಪಿಟಿಐ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ನಾವು ನಮ್ಮ ಗ್ರಾಹಕರಿಗೆ ಅನೇಕ ಆಯ್ಕೆಗಳನ್ನುನೀಡುವುದನ್ನು ಮುಂದುವರೆಸಲಿದ್ದು, ಡೀಸೆಲ್ ಮಾದರಿಯನ್ನು ನಿಲ್ಲಿಸುವುದಿಲ್ಲ. ಫೋರ್ಡ್ ತನ್ನ ಡೀಸೆಲ್ ವಾಹನಗಳಲ್ಲಿ ಬಿಎಸ್6 ನಿಯಮಗಳನ್ನು ಅಳವಡಿಸಿಕೊಳ್ಳಲಿದೆ. ಇದು ಕಂಪನಿಯು ತನ್ನ ಗ್ರಾಹಕರೆಡೆಗೆ ಹೊಂದಿರುವ ತನ್ನ ಬದ್ದತೆಯನ್ನು ತೋರಿಸುತ್ತದೆ ಎಂದು ತಿಳಿಸಿದರು.

ಡೀಸೆಲ್ ವಾಹನಗಳ ಮಾರಾಟ ಮುಂದುವರೆಸಲಿರುವ ಫೋರ್ಡ್

ಏಪ್ರಿಲ್ 2020ರಿಂದ ಜಾರಿಗೆ ಬರಲಿರುವ ಮಾಲಿನ್ಯ ನಿಯಮಗಳಿಂದಾಗಿ ಚಿಕ್ಕ ಡೀಸೆಲ್ ಎಂಜಿನ್ ಕಾರುಗಳ ಬೆಲೆಯು ಏರಿಕೆಯಾಗುವುದರಿಂದ ಬಹುತೇಕ ತಯಾರಕ ಕಂಪನಿಗಳು, ಚಿಕ್ಕ ಡೀಸೆಲ್ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ.

ಡೀಸೆಲ್ ವಾಹನಗಳ ಮಾರಾಟ ಮುಂದುವರೆಸಲಿರುವ ಫೋರ್ಡ್

ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ (ಎಂಎಸ್ಐ) 1ನೇ ಏಪ್ರಿಲ್ 2020 ರಿಂದ ತನ್ನ ಎಲ್ಲಾ ಡೀಸೆಲ್ ಮಾಡೆಲ್ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

ಡೀಸೆಲ್ ವಾಹನಗಳ ಮಾರಾಟ ಮುಂದುವರೆಸಲಿರುವ ಫೋರ್ಡ್

ಮಾರುತಿ ಕಂಪನಿಯ ಪ್ರಕಾರ, ಬಿಎಸ್6 ಆಧಾರಿತ ಎಂಜಿನ್ ಹೊಂದಿರುವ ಕಾರುಗಳ ಬೆಲೆಯು ಹೆಚ್ಚಾಗುವುದರಿಂದ ಗ್ರಾಹಕರ ಮೇಲೆ ಹೊರೆ ಬೀಳುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ರೈನಾ ರವರ ಪ್ರಕಾರ, ಯುಟಿಲಿಟಿ ವಾಹನಗಳ ಮಾಲೀಕರು ಯಾವಾಗಲೂ ಡೀಸೆಲ್ ಮಾದರಿಯ ವಾಹನಗಳನ್ನು ಕೊಳ್ಳಲು ಬಯಸುತ್ತಾರೆ. ಇದಕ್ಕೆ ಉದಾಹರಣೆ ಎಂದರೆ 65% ಕ್ಕೂ ಹೆಚ್ಚು ಗ್ರಾಹಕರು, ಪೆಟ್ರೋಲ್ ಮಾದರಿಯ ಬದಲು ಇಕೋ ಸ್ಪೋರ್ಟ್ ನ ಡೀಸೆಲ್ ಮಾದರಿಯನ್ನು ಖರೀದಿಸಿದ್ದಾರೆ.

ಡೀಸೆಲ್ ವಾಹನಗಳ ಮಾರಾಟ ಮುಂದುವರೆಸಲಿರುವ ಫೋರ್ಡ್

ಸರ್ಕಾರವು ಡೀಸೆಲ್ ಮೇಲಿನ ಸಬ್ಸಿಡಿಯನ್ನು ತೆಗೆದು ಹಾಕಿ ಅನೇಕ ವರ್ಷಗಳು ಕಳೆದಿದ್ದರೂ ಗ್ರಾಹಕರು ಡೀಸೆಲ್ ಮಾದರಿಯ ವಾಹನಗಳನ್ನೆ ಹೆಚ್ಚು ಕೊಳ್ಳಲು ಬಯಸುತ್ತಾರೆ, ನಾವು ಇದನ್ನೇ 2020 ಮತ್ತು ಅದರ ನಂತರದಲ್ಲೂ ಕಾಣಬಯಸುತ್ತೇವೆ ಎಂದು ತಿಳಿಸಿದರು.

ಡೀಸೆಲ್ ವಾಹನಗಳ ಮಾರಾಟ ಮುಂದುವರೆಸಲಿರುವ ಫೋರ್ಡ್

ಬಿಎಸ್6 ನಿಯಮಗಳನ್ನು ಜಾರಿಗೊಳಿಸಿದ ನಂತರ ಪ್ಯಾಸೆಂಜರ್ ವಾಹನಗಳಲ್ಲಿ 10% ಏರಿಕೆ ಕಾಣಬಹುದೆಂಬುದು ಫೋರ್ಡ್ ಕಂಪನಿಯ ನಿರೀಕ್ಷೆಯಾಗಿದೆ. ಆದರೆ ಡೀಸೆಲ್ ಮಾತ್ರವಲ್ಲದೇ ಎಲ್ಲಾ ಮಾದರಿಯ ವಾಹನಗಳ ಬೆಲೆಯಲ್ಲೂ ಏರಿಕೆಯಾಗಬಹುದೆಂಬುದು ಕಂಪನಿಯ ಅನಿಸಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಡೀಸೆಲ್ ಎಂಜಿನ್ ಗಳಿಗೆ ಬದಲಾಗಿ ಸಿಎ‍‍‍ನ್‍ಜಿ ವಾಹನಗಳು ಬರಬಹುದೆಂಬ ಕಾರಣಕ್ಕೆ ತನ್ನ ಮೊದಲ ಸಿಎನ್‍ಜಿ ಮಾದರಿಯಾದ ಆಸ್ಪೈರ್ ವಾಹನವನ್ನು ಬಿಡುಗಡೆ ಮಾಡಿದೆ.

ಡೀಸೆಲ್ ವಾಹನಗಳ ಮಾರಾಟ ಮುಂದುವರೆಸಲಿರುವ ಫೋರ್ಡ್

ಫೋರ್ಡ್ ಕಂಪನಿಯು ಡೀಸೆಲ್ ಮಾದರಿಗಳಿಗೆ ಬದಲಾಗಿ ಪೆಟ್ರೋಲ್ ಮಾದರಿಗಳ ಮಾರಾಟವನ್ನು ಮುಂದುವರೆಸಲಿದೆ. ರೈನಾ ರವರ ಪ್ರಕಾರ, ಫೋರ್ಡ್ ಕಂಪನಿ ಯು.ವಿ ಗ್ರಾಹಕರ ಅನುಕೂಲಕ್ಕಾಗಿ 2013ರಲ್ಲಿ ಪೆಟ್ರೋಲ್ ಎಂಜಿನ್ ನ ಎಕೋ ಸ್ಪೋರ್ಟ್ ವಾಹನವನ್ನು ಬಿಡುಗಡೆಗೊಳಿಸಿತು. ಡೀಸೆಲ್ ಎಂಜಿನ್ ಟೆಕ್ನಾಲಜಿಗೆ ಪೂರಕವಾಗಿ ನಾವು ಪೆಟ್ರೋಲ್ ಎಂಜಿನ್ ವಾಹನಗಳನ್ನು ಹೆಚ್ಚು ಅಭಿವೃದ್ಧಿಪಡಿಸಲಿದ್ದು, ಬಿಎಸ್6 ನಿಯಮಗಳಿಗೆ ತಕ್ಕಂತೆ ಗ್ರಾಹಕರಿಗೆ ಪೆಟ್ರೋಲ್ ಎಂಜಿನ್ ವಾಹನಗಳನ್ನು ನೀಡಲಿದ್ದೇವೆ ಎಂದು ತಿಳಿಸಿದರು.

ಡೀಸೆಲ್ ವಾಹನಗಳ ಮಾರಾಟ ಮುಂದುವರೆಸಲಿರುವ ಫೋರ್ಡ್

ಭಾರತೀಯ ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡ ಎರಡು ದಶಕಗಳ ನಂತರ ಫೋರ್ಡ್ ಕಂಪನಿಯು 2018ರಲ್ಲಿ ಲಾಭಗಳಿಸಿತು. ಕಂಪನಿಯು, ಡೀಸೆಲ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಹೆಚ್ಚು ಬಂಡವಾಳ ಹೂಡಿಕೆ ಮಾಡುವ ಬಗ್ಗೆ ಚಿಂತನೆ ನಡೆಸಿದೆ.

MOST READ: ಟೆಸ್ಲಾ ಕಾರುಗಳಂತೆ ಸದ್ದು ಮಾಡಲಿದೆ ಮರ್ಸಿಡಿಸ್ ಹೊಸ ಎಸ್ ಕ್ಲಾಸ್

ಡೀಸೆಲ್ ವಾಹನಗಳ ಮಾರಾಟ ಮುಂದುವರೆಸಲಿರುವ ಫೋರ್ಡ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಫೋರ್ಡ್ ಕಂಪನಿಯು ತನ್ನ ಲಾಭವನ್ನು ಅಭಿವೃದ್ಧಿಗಾಗಿ ಮತ್ತು ಅಪ್ ಗ್ರೇಡ್ ಗಾಗಿ ಬಳಸಲಿದೆ ಮತ್ತು ಎಲ್ಲಾ ಮಾದರಿಗಳನ್ನು ಡೀಸೆಲ್ ಎಂಜಿನ್ ನಲ್ಲಿ ನೀಡಲಿದೆ. ಇದು ಬಹಳ ಚಾಣಾಕ್ಷ ನಡೆಯಾಗಿದೆ. ಇನ್ನು ಮುಂದೆ ಫೋರ್ಡ್ ಕಂಪನಿಯು ಇನ್ನೊಂದು ಮಾರುತಿ ಸುಜುಕಿ ಕಂಪನಿಯಾಗಬಹುದು ಅಥವಾ ಬೇರೆ ಕಂಪನಿಗಳು ತಮ್ಮ ಡೀಸೆಲ್ ಎಂಜಿನ್ ಕಾರ್ಯತಂತ್ರವನ್ನು ಬದಲಿಸಿಕೊಳ್ಳಬಹುದು.

Most Read Articles

Kannada
Read more on ಫೋರ್ಡ್ ford
English summary
Ford Will Continue Selling BS-VI Compliant Diesel Models — Taking Over The Small Car Segment - Read in Kannada
Story first published: Friday, May 3, 2019, 11:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X