ಓಲಾ ಜೊತೆ ಹ್ಯುಂಡೈ ಬಿಗ್ ಡೀಲ್- ಉಬರ್ ಸಂಸ್ಥೆಗೆ ಶುರುವಾಗಿದೆ ತಳಮಳ..!

ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಮೂಲದ ಓಲಾ ಸಂಸ್ಥೆಯು ಸದ್ಯದಲ್ಲೇ ಮತ್ತಷ್ಟು ಮಾರುಕಟ್ಟೆ ವಿಸ್ತರಣೆ ಮಾಡುತ್ತಿದ್ದು, ಹೊಸ ಯೋಜನೆಗಳಿಗೆ ಆಟೋ ಉತ್ಪಾದನಾ ಸಂಸ್ಥೆಯಾಗಿರುವ ಹ್ಯುಂಡೈ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾಗಿದೆ.

ಓಲಾ ಜೊತೆ ಹ್ಯುಂಡೈ ಬಿಗ್ ಡೀಲ್- ಉಬರ್ ಸಂಸ್ಥೆಗೆ ಶುರುವಾಗಿದೆ ತಳಮಳ..!

ಓಲಾ ಸಂಸ್ಥೆಯು ಸದ್ಯ ಉಬರ್ ಸಂಸ್ಥೆಗೆ ಭಾರೀ ಪೈಪೋಟಿ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ಪರಿಚಯಿಸಲು ಮುಂದಾಗಿದೆ. ಹೀಗಾಗಿ ಹೊಸ ಹೂಡಿಕೆದಾರರನ್ನು ಎದುರು ನೋಡುತ್ತಿರುವ ಓಲಾ ಸಂಸ್ಥೆಯಲ್ಲಿ ಹ್ಯುಂಡೈ ಸಂಸ್ಥೆಯು ಬರೋಬ್ಬರಿ ರೂ.2100 ಕೋಟಿ ಬಂಡವಾಳ ಹೂಡಿಕೆಗಾಗಿ ಮಾತುಕತೆ ನಡೆಸಿದೆ.

ಓಲಾ ಜೊತೆ ಹ್ಯುಂಡೈ ಬಿಗ್ ಡೀಲ್- ಉಬರ್ ಸಂಸ್ಥೆಗೆ ಶುರುವಾಗಿದೆ ತಳಮಳ..!

ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮುಂದಿನ ಆರು ವಾರಗಳ ಅವಧಿಯಲ್ಲಿ ಹ್ಯುಂಡೈ ಸಂಸ್ಥೆಯು ಓಲಾದಲ್ಲಿ ಶೇ.4 ರಷ್ಟು ಸ್ಪಾಕ್ ಪಡೆದುಕೊಳ್ಳಲಿದ್ದು, ಈ ಮೂಲಕ ಓಲಾ ಮಾರುಕಟ್ಟೆಯ ಮೌಲ್ಯವು ರೂ.29 ಸಾವಿರ ಕೋಟಿಗೆ ಏರಿಕೆಯಾಗಲಿದೆ.

ಓಲಾ ಜೊತೆ ಹ್ಯುಂಡೈ ಬಿಗ್ ಡೀಲ್- ಉಬರ್ ಸಂಸ್ಥೆಗೆ ಶುರುವಾಗಿದೆ ತಳಮಳ..!

ಓಲಾದಲ್ಲಿ ಸದ್ಯ ಸಾಫ್ಟ್ ಬ್ಯಾಂಕ್ ಶೇ. 25ರಷ್ಟು ಸ್ಟಾಕ್ ಹೊಂದಿದಲ್ಲಿ, ಸಂಸ್ಥಾಪಕರಾದ ಭಾವಿಷ್ ಅಗರವಾಲ್ ಮತ್ತು ಅಂಕಿತ್ ಭಾಟಿ (ಶೇ. 15 ರಷ್ಟು), ಟೆನ್ ಸೆಂಟ್ (ಶೇ.10 ರಷ್ಟು), ಮ್ಯಾಟ್ರಿಕ್ ಪಾಟ್ನರ್ಸ್(ಶೇ.8 ರಷ್ಟು), ಡಿಎಸ್‌ಟಿ ಗ್ಲೊಬಲ್(ಶೇ.6 ರಷ್ಟು) ಮತ್ತು ಟೆಮಾಸೆಕ್ (ಶೇ.5 ರಷ್ಟು) ಸ್ಟಾಕ್ ಹೊಂದಿವೆ.

ಓಲಾ ಜೊತೆ ಹ್ಯುಂಡೈ ಬಿಗ್ ಡೀಲ್- ಉಬರ್ ಸಂಸ್ಥೆಗೆ ಶುರುವಾಗಿದೆ ತಳಮಳ..!

ಇದೀಗ ಹ್ಯುಂಡೈ ಸಂಸ್ಥೆಯು ರೂ. 2100 ಕೋಟಿ ಹೂಡಿಕೆ ಮಾಡಿದ್ದಲ್ಲಿ ಓಲಾ ಸಂಸ್ಥೆಯು ಮಾರುಕಟ್ಟೆಯ ಮೌಲ್ಯದಲ್ಲಿ ಶೇ.4 ಪಾಲು ಹೊಂದಲಿದ್ದು, ಭಾರತದಲ್ಲಿ ಟ್ಯಾಕ್ಸಿ ಸೇವೆಗಳಲ್ಲಿ ಮುಂಚೂಣಿ ಸಾಧಿಸುತ್ತಿರುವ ಓಲಾದಲ್ಲಿ ಹೂಡಿಕೆ ಮಾಡಲು ಹ್ಯುಂಡೈ ಉತ್ಸುಕವಾಗಿದೆ.

MOST READ: ಬರೋಬ್ಬರಿ ಮೂರುವರೆ ಕೋಟಿ ಬೆಲೆಬಾಳುವ ಲಂಬೋರ್ಗಿಸಿ ಕಾರ್ ಗಿಫ್ಟ್ ಕೊಟ್ಟ ಅಪ್ಪು..!

ಓಲಾ ಜೊತೆ ಹ್ಯುಂಡೈ ಬಿಗ್ ಡೀಲ್- ಉಬರ್ ಸಂಸ್ಥೆಗೆ ಶುರುವಾಗಿದೆ ತಳಮಳ..!

ಇದಕ್ಕೂ ಮುನ್ನ ಹ್ಯುಂಡೈ ಸಂಸ್ಥೆಯು ಕಳೆದ ವರ್ಷ ದೆಹಲಿ ಮೂಲದ ಇಕೋ ಸಿಸ್ಟಂ ಎನ್ನುವ ಆ್ಯಪ್ ಆಧಾರಿತ ಸ್ಟಾರ್ಟ್ ಅಪ್ ಟ್ಯಾಕ್ಸಿ ಸಂಸ್ಥೆಯಲ್ಲೂ ರೂ.100 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಓಲಾದೊಂದಿಗಿನ ಹೊಸ ಯೋಜನೆಯಿಂದಾಗಿ ದೇಶದ ಎರಡನೇ ಮತ್ತು ಮೂರನೇ ದರ್ಜೆಯ ನಗರಗಳಲ್ಲೂ ಟ್ಯಾಕ್ಸಿ ಸೇವೆಗಳು ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ. ಇದರಿಂದ ಸಹಜವಾಗಿಯೇ ಉಬರ್ ಸಂಸ್ಥೆಗೆ ಮತ್ತಷ್ಟು ಪೈಪೋಟಿ ಶುರುವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

MOST READ: ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಚಾಲಕ..!

Most Read Articles

Kannada
English summary
Hyundai In Talks To Invest $300 Million In Ola — Uber Better Watch Its Back. Read in Kannada.
Story first published: Saturday, March 9, 2019, 14:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X