ಬಿಎಸ್-6 ಜಾರಿ ನಂತರವೂ ಡೀಸೆಲ್ ಕಾರುಗಳ ಮಾರಾಟ ಮುಂದುವರಿಸಲಿದೆ ಹ್ಯುಂಡೈ

ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸುವ ಸಂಬಂಧ ಫೇಮ್ 2 ಯೋಜನೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರವು ಮತ್ತೊಂದು ಕಡೆಗೆ ಬಿಎಸ್ 4 ಎಂಜಿನ್ ವಾಹನ ಉತ್ಪಾದನೆ ಮತ್ತು ಮಾರಾಟಕ್ಕೆ ಬ್ರೇಕ್ ಹಾಕುತ್ತಿದ್ದು, 2020ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಬಿಎಸ್-6 ಎಂಜಿನ್ ಮಾದರಿಯನ್ನು ಜಾರಿಗೆ ತರುತ್ತಿದೆ. ಹೀಗಾಗಿ ಬಹುತೇಕ ವಾಹನ ಸಂಸ್ಥೆಗಳು ಹೊಸ ನಿಯಮಕ್ಕೆ ಅನುಗುಣವಾಗಿ ಅಭಿವೃದ್ಧಿಗೊಳ್ಳಲು ಸಾಧ್ಯವಿರದ ಡೀಸೆಲ್ ಎಂಜಿನ್‌ ಆಯ್ಕೆ ಕೈಬಿಡುತ್ತಿವೆ.

ಬಿಎಸ್-6 ಜಾರಿ ನಂತರವೂ ಡೀಸೆಲ್ ಕಾರುಗಳ ಮಾರಾಟ ಮುಂದುವರಿಸಲಿದೆ ಹ್ಯುಂಡೈ

ವಾಯು ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಬಿಎಸ್-4 ಎಂಜಿನ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಮುಂದಿನ 2020ರ ಏಪ್ರಿಲ್ 1 ರಿಂದಲೇ ನಿಷೇಧಗೊಳಿಸಿ ಬಿಎಸ್-6 ಜಾರಿಗೆ ತರಲಾಗುತ್ತಿದ್ದು, ಮಾರುತಿ ಸುಜುಕಿ ಸೇರಿದಂತೆ ಹಲವು ಸಂಸ್ಥೆಗಳು ಬಿಎಸ್-6 ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೈಬಿಡುವುದಾಗಿ ಸುಳಿವು ಕೊಟ್ಟಿವೆ. ಆದರೆ ಈ ಬಗ್ಗೆ ಮಹತ್ವದ ಹೆಜ್ಜೆಯಿಡುತ್ತಿರುವ ಹ್ಯುಂಡೈ ಸಂಸ್ಥೆಯು ಯಾವುದೇ ಕಾರಣಕ್ಕೂ ಮಾರಾಟಗೊಳ್ಳುತ್ತಿರುವ ಸಣ್ಣ ಗಾತ್ರದ ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಯನ್ನು ನಿಲ್ಲಿಸದೆ ಬಿಎಸ್-6 ನಿಯಮಾವಳಿಗಳಿಗೆ ಉನ್ನತಿಕರಿಸುವುದಾಗಿ ಹೇಳಿಕೊಂಡಿದೆ.

ಬಿಎಸ್-6 ಜಾರಿ ನಂತರವೂ ಡೀಸೆಲ್ ಕಾರುಗಳ ಮಾರಾಟ ಮುಂದುವರಿಸಲಿದೆ ಹ್ಯುಂಡೈ

ಬಿಎಸ್-6 ನಿಯಮದ ಪ್ರಕಾರ ಸದ್ಯ ಮಾರುಕಟ್ಟೆಯಲ್ಲಿರುವ ಹಲವಾರು ಕಾರು ಉತ್ಪಾದನಾ ಸಂಸ್ಥೆಗಳ ಡೀಸೆಲ್ ಎಂಜಿನ್‌ಗಳು ಹೊಸ ನಿಯಮವನ್ನು ಪಾಲಿಸುವಲ್ಲಿ ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಮರುಅಭಿವೃದ್ಧಿ ಮಾಡುವುದೋ ಅಥವಾ ಮಾರಾಟವನ್ನು ಸ್ಥಗಿತಗೊಳಿಸಬೇಕೋ ಎಂಬ ಗೊಂದಲದಲ್ಲಿವೆ.

ಬಿಎಸ್-6 ಜಾರಿ ನಂತರವೂ ಡೀಸೆಲ್ ಕಾರುಗಳ ಮಾರಾಟ ಮುಂದುವರಿಸಲಿದೆ ಹ್ಯುಂಡೈ

ಒಂದು ವೇಳೆ ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್-4 ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮಕ್ಕೆ ಉನ್ನತಿಕರಿಸಿದರೂ ಸಹ ಕಾರಿನ ಬೆಲೆಗಳು ಕನಿಷ್ಠ ರೂ. 1.50 ರಿಂದ ರೂ.2 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿದ್ದು, ಇದು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊರೆಯಾಗಿ ಪರಿಣಮಿಸಲಿದೆ.

ಬಿಎಸ್-6 ಜಾರಿ ನಂತರವೂ ಡೀಸೆಲ್ ಕಾರುಗಳ ಮಾರಾಟ ಮುಂದುವರಿಸಲಿದೆ ಹ್ಯುಂಡೈ

ಇದರಿಂದಾಗಿ ಮಾರುತಿ ಸುಜುಕಿ ಸೇರಿದಂತೆ ಹಲವು ಅಗ್ಗದ ಕಾರು ಉನ್ಪತ್ನಗಳನ್ನು ಮಾರಾಟ ಮಾಡುವ ಕಾರು ಸಂಸ್ಥೆಗಳಿಗೆ ಇದು ಬಿಸಿತುಪ್ಪವಾಗಿ ಪರಿಣಮಿಸಲಿದ್ದು, ಕಾರುಗಳ ಬೆಲೆಗಳನ್ನು ಒಂದೇ ಬಾರಿಗೆ ರೂ.1.50 ಲಕ್ಷ ರೂ. 2 ಲಕ್ಷ ಹೆಚ್ಚಳ ಮಾಡಿದ್ದಲ್ಲಿ ಗ್ರಾಹಕರನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಿಸಬೇಕಾಗಬಹುದು. ಹೀಗಾಗಿ ಬಿಎಸ್-4 ವೈಶಿಷ್ಟ್ಯತೆಯ ಸಣ್ಣ ಗಾತ್ರದ ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮಕ್ಕೆ ಉನ್ನತಿಕರಿಸಲು ಬಹುತೇಕ ಸಂಸ್ಥೆಗಳು ಮುಂದಾಗುತ್ತಿಲ್ಲ.

ಬಿಎಸ್-6 ಜಾರಿ ನಂತರವೂ ಡೀಸೆಲ್ ಕಾರುಗಳ ಮಾರಾಟ ಮುಂದುವರಿಸಲಿದೆ ಹ್ಯುಂಡೈ

ಇದೇ ಕಾರಣಕ್ಕೆ ಜಾಣ್ಮೆಯ ಹೆಜ್ಜೆಯಿಡುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರತಿ ಕಾರು ಮಾದರಿಯಲ್ಲೂ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳನ್ನು ಹೆಚ್ಚಿಸುತ್ತಿದ್ದು, 2020ರ ಏಪ್ರಿಲ್ ವೇಳೆಗೆ ಸಂಪೂರ್ಣವಾಗಿ ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಯನ್ನು ನಿಲ್ಲಿಸಲು ಪ್ಲ್ಯಾನ್ ಮಾಡಿಕೊಂಡಿದೆ.

ಬಿಎಸ್-6 ಜಾರಿ ನಂತರವೂ ಡೀಸೆಲ್ ಕಾರುಗಳ ಮಾರಾಟ ಮುಂದುವರಿಸಲಿದೆ ಹ್ಯುಂಡೈ

ಇದೇ ಅವಕಾಶವನ್ನು ಬಳಕೆ ಮಾಡಿಕೊಳ್ಳಲು ಮುಂದಾಗುತ್ತಿರುವ ಹ್ಯುಂಡೈ ಸಂಸ್ಥೆಯು ಬೆಲೆ ಹೆಚ್ಚಳವಾದರೂ ಪರವಾಗಿಲ್ಲಾ ಡೀಸೆಲ್ ಎಂಜಿನ್ ಮೇಲೆ ಅವಲಂಬಿತವಾಗಿರುವ ಗ್ರಾಹಕರನ್ನು ತನ್ನತ್ತ ಸೆಳೆಯುವ ನೀರಿಕ್ಷೆಯಲ್ಲಿದ್ದು, ದುಬಾರಿ ವೆಚ್ಚದೊಂದಿಗೆ ಬಿಎಸ್-6 ನಿಯಮದ ಪ್ರಕಾರವೇ ಹೊಸ ಡೀಸೆಲ್ ಎಂಜಿನ್‌ಗಳನ್ನು ಸಿದ್ದಪಡಿಸುವುದಾಗಿ ಹೇಳಿಕೊಂಡಿದೆ.

ಬಿಎಸ್-6 ಜಾರಿ ನಂತರವೂ ಡೀಸೆಲ್ ಕಾರುಗಳ ಮಾರಾಟ ಮುಂದುವರಿಸಲಿದೆ ಹ್ಯುಂಡೈ

ಹ್ಯುಂಡೈ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿ 1.2-ಲೀಟರ್ ಮತ್ತು 1.4- ಡೀಸೆಲ್ ಎಂಜಿನ್ ಮಾರಾಟಮಾಡುತ್ತಿದ್ದು, ಇದರ ಜೊತೆಗೆ ಮತ್ತೊಂದು ಹೊಸ ಡೀಸೆಲ್ ಎಂಜಿನ್ 1.5-ಲೀಟರ್ ಮಾದರಿಯನ್ನು ಸಹ ಪರಿಚಯಿಸುವ ಸುಳಿವು ನೀಡಿದೆ.

ಬಿಎಸ್-6 ಜಾರಿ ನಂತರವೂ ಡೀಸೆಲ್ ಕಾರುಗಳ ಮಾರಾಟ ಮುಂದುವರಿಸಲಿದೆ ಹ್ಯುಂಡೈ

ಇನ್ನು ಬಿಎಸ್-6 ವೈಶಿಷ್ಟ್ಯತೆಯನ್ನು ಹೊಂದಲಿರುವ ಹೊಸ ಡೀಸೆಲ್ ಎಂಜಿನ್‌ಗಳು ಸದ್ಯ ಮಾರುಕಟ್ಟೆಯಲ್ಲಿರುವ ಡೀಸೆಲ್ ಎಂಜಿನ್‌ಗಿಂತ ಹೆಚ್ಚು ಕಾರ್ಯಕ್ಷಮತೆ, ಉತ್ತಮ ಪರ್ಫಾಮೆನ್ಸ್ ಜೊತೆ ಮೈಲೇಜ್ ಪ್ರಮಾಣದಲ್ಲೂ ಅಧಿಕವಾಗಿರಲಿದ್ದು, ಹಾಗೆಯೇ ದುಬಾರಿ ಬೆಲೆಗಳಿಂದಾಗಿ ಕಾರು ಖರೀದಿ ಪ್ರಕ್ರಿಯೆಯೂ ಮತ್ತಷ್ಟು ಕಠಿಣವಾಗಲಿದೆ.

MOST READ: ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಬಿಎಸ್-6 ಜಾರಿ ನಂತರವೂ ಡೀಸೆಲ್ ಕಾರುಗಳ ಮಾರಾಟ ಮುಂದುವರಿಸಲಿದೆ ಹ್ಯುಂಡೈ

ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಹೊಗೆ ಉಗುಳುವ ಪ್ರಮಾಣದಲ್ಲೂ ಈಗಿರುವ ಡೀಸೆಲ್ ಎಂಜಿನ್‌ಗಳಿಂತಲೂ ಶೇ.25 ರಷ್ಟು ಕಡಿತಗೊಳ್ಳಲಿದ್ದು, ಬೆಲೆ ದುಬಾರಿಯಾಗಿ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತೆ ಎನ್ನುವ ಒಂದೇ ಕಾರಣಕ್ಕೆ ಬಹುತೇಕ ಸಂಸ್ಥೆಗಳು ಡೀಸೆಲ್ ಎಂಜಿನ್‌ಗೆ ಗುಡ್ ಬೈ ಹೇಳುತ್ತಿವೆ. ಆದ್ರೆ ಹ್ಯುಂಡೈ ಮಾತ್ರ ಡೀಸೆಲ್ ಎಂಜಿನ್ ಮುಂದುವರಿಸುವ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎನ್ನಬಹುದು.

Most Read Articles

Kannada
English summary
Hyundai Confirms Diesel Engine Upgradation to BS-VI Norms. Read in Kannada.
Story first published: Tuesday, June 18, 2019, 14:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X