ನೆಕ್ಸಾ ಟರ್ಮಿನಲ್ ಶುರು ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ನೆಕ್ಸಾ ಟರ್ಮಿನಲ್ ಅನ್ನು ಶುರು ಮಾಡಿದೆ. ಇದು ಮೊಬೈಲ್ ನೆಕ್ಸಾ ಶೋರೂಂ ಆಗಿರಲಿದೆ. ಮಾರುತಿ ಸುಜುಕಿಯ ವರದಿಗಳ ಪ್ರಕಾರ, ಈ ಸೌಲಭ್ಯದಿಂದಾಗಿ ಮಾರುತಿ ಸುಜುಕಿಯ ಡೀಲರ್‍‍ಗಳು ಭಾರತದಲ್ಲಿ ಇದುವರೆಗೂ ತಲುಪದೇ ಇದ್ದ ಜಾಗಗಳನ್ನು ತಲುಪಬಹುದಾಗಿದೆ.

ನೆಕ್ಸಾ ಟರ್ಮಿನಲ್ ಶುರು ಮಾಡಿದ ಮಾರುತಿ ಸುಜುಕಿ

ಈ ಯೋಜನೆಯಿಂದಾಗಿ ಗ್ರಾಮೀಣ ಭಾಗದಲ್ಲಿರುವ ಮಾರುತಿ ಸುಜುಕಿಯ ಗ್ರಾಹಕರು, ಹತ್ತಿರದಲ್ಲಿರುವ ನೆಕ್ಸಾ ಶೋರೂಂಗಳಿಗೆ ಭೇಟಿ ನೀಡದೇ ತಾವಿರುವ ಪ್ರದೇಶದಲ್ಲಿಯೇ ನೆಕ್ಸಾದ ಅನುಭವವನ್ನು ಪಡೆಯಬಹುದು. ಮಾರುತಿ ಸುಜುಕಿ ಕಂಪನಿಯು ಸೆಪ್ಟೆಂಬರ್ 2015ರಲ್ಲಿ ತನ್ನ ಗ್ರಾಹಕರಿಗೆ ಪ್ರಿಮೀಯಂ ಅನುಭವವನ್ನು ನೀಡುವ ಸಲುವಾಗಿ ನೆಕ್ಸಾ ಡೀಲರ್‍‍ಶಿಪ್‍‍ಗಳನ್ನು ಆರಂಭಿಸಿತ್ತು. ಮಾರುತಿ ಸುಜುಕಿ ಕಂಪನಿಯು ಮೊದಲಿನಿಂದಲೂ ತನ್ನ ಗ್ರಾಹಕರಿಗೆ ವಿಶ್ವಾಸರ್ಹವಾದ, ನಂಬಿಕೆಯ ಹಾಗೂ ಆರಾಮದಾಯಕ ಕಾರುಗಳನ್ನು ಕೈಗೆಟುಕುವ ದರದಲ್ಲಿ ನೀಡುತ್ತಾ ಬಂದಿದೆ.

ನೆಕ್ಸಾ ಟರ್ಮಿನಲ್ ಶುರು ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಡೀಲರ್‍‍ಗಳ ಗುಣಮಟ್ಟವು ಸಾಧಾರಣ ಮಟ್ಟದಲ್ಲಿದ್ದು, ಅದರಲ್ಲಿನ ಅನುಭವವು ಸಹ ಉತ್ತಮವಾಗಿರಲಿಲ್ಲ. ಡೀಲರ್‍‍ಗಳ ಅನುಭವವನ್ನು ನೋಡಿದ್ದ ಗ್ರಾಹಕರು ಕಂಪನಿಯ ಬಗ್ಗೆಯೂ ಒಳ್ಳೆಯ ಅಭಿಪ್ರಾಯವನ್ನು ನೀಡಲಾರರು ಎಂಬ ಅಭಿಪ್ರಾಯವಿತ್ತು. ಆದರೆ ಬದಲಾದ ಕಾಲದಲ್ಲಿ ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಕಠಿಣ ಸ್ಪರ್ಧೆ ಏರ್ಪಟಿತ್ತು.

ನೆಕ್ಸಾ ಟರ್ಮಿನಲ್ ಶುರು ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು, ದೊಡ್ಡ ಬೆಲೆಯ ಕಾರುಗಳ ಉತ್ಪಾದನೆಯ ಹೊರತಾಗಿಯೂ, ಕಡಿಮೆ ಬೆಲೆಯ ಕಾರುಗಳ ತಯಾರಕ ಎಂಬ ಹಣೆಪಟ್ಟಿಯನ್ನು ಹೋಗಲಾಡಿಸಲು ಹೆಣಗಾಡುತ್ತಿತ್ತು. ಆದ ಕಾರಣ ಮಾರುತಿ ಸುಜುಕಿ ಕಂಪನಿಯು ಹೊಸದಾಗಿ ನೆಕ್ಸಾ ಸರಣಿಯ ಡೀಲರ್‍‍ಶಿಪ್‍‍ಗಳನ್ನು ತೆರೆಯಿತು.

ನೆಕ್ಸಾ ಟರ್ಮಿನಲ್ ಶುರು ಮಾಡಿದ ಮಾರುತಿ ಸುಜುಕಿ

ಈ ಡೀಲರ್‍‍ಶಿಪ್‍‍ಗಳಲ್ಲಿ ಪ್ರಿಮೀಯಂ ಕಾರುಗಳ ಮಾರಾಟವನ್ನು ಆರಂಭಿಸಲಾಯಿತು. ಮೊದಲಿಗೆ ಮಾರುತಿ ಸುಜುಕಿಯ ಎಸ್ ಕ್ರಾಸ್ ಕಾರುಗಳನ್ನು ಮಾರಾಟ ಮಾಡಲಾಯಿತು. ನಂತರ ಈ ಶೋರೂಂಗಳಲ್ಲಿ ಇಗ್ನಿಸ್ ಹಾಗೂ ಸಿಯಾಜ್ ಕಾರುಗಳ ಮಾರಾಟವನ್ನು ಶುರು ಮಾಡಲಾಯಿತು. ಇದಾದ ನಂತರ ಬಲೆನೋ ಕಾರುಗಳನ್ನು ಮಾರಾಟ ಮಾಡಲಾಯಿತು. ದೇಶಾದ್ಯಂತವಿರುವ ನೆಕ್ಸಾ ಡೀಲರ್‍‍ಗಳಲ್ಲಿ ಈ ನಾಲ್ಕು ಕಾರುಗಳ ಮಾರಾಟವನ್ನು ಮುಂದುವರೆಸಲಾಗಿದೆ.

ನೆಕ್ಸಾ ಟರ್ಮಿನಲ್ ಶುರು ಮಾಡಿದ ಮಾರುತಿ ಸುಜುಕಿ

ಕಳೆದ ನಾಲ್ಕು ವರ್ಷಗಳಲ್ಲಿ ನೆಕ್ಸಾ ಡೀಲರ್‍‍ಶಿಪ್ ಬೃಹದಾಕಾರವಾಗಿ ಬೆಳೆದಿದೆ. ಈಗ ದೇಶಾದ್ಯಂತವಿರುವ 200 ನಗರಗಳಲ್ಲಿ 360 ಕ್ಕೂ ಹೆಚ್ಚು ಔಟ್‍‍ಲೆಟ್‍‍ಗಳನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯ ಮಾರ್ಕೆಟಿಂಗ್ ಹಾಗೂ ಸೇಲ್ಸ್ ವಿಭಾಗದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಶಾಂಕ್ ಶ್ರೀವಾಸ್ತವ ರವರು ಮಾತನಾಡಿ, ನಾಲ್ಕು ವರ್ಷಗಳ ಅವಧಿಯಲ್ಲಿ ನೆಕ್ಸಾ ಡೀಲರ್‍‍ಶಿಪ್ ವೇಗವಾಗಿ ಬೆಳೆದು ಭಾರತದಲ್ಲಿನ ಯಶಸ್ವಿ ಪ್ರಿಮೀಯಂ ರಿಟೇಲ್ ನೆಟ್‍‍ವರ್ಕ್ ಆಗಿದ್ದು, ನಮ್ಮ ಒಟ್ಟಾರೆ ಮಾರಾಟಕ್ಕೆ 20% ನಷ್ಟು ಕೊಡುಗೆ ನೀಡುತ್ತಿದೆ.

MOST READ: ಪ್ರಪಂಚದ ದೊಡ್ಡ ಜೆಟ್ ವಿಮಾನವನ್ನು ಎಳೆದ ಮಿನಿ ಕೂಪರ್..!

ನೆಕ್ಸಾ ಟರ್ಮಿನಲ್ ಶುರು ಮಾಡಿದ ಮಾರುತಿ ಸುಜುಕಿ

ಈ ಕಡಿಮೆ ಅವಧಿಯಲ್ಲಿ ನಾವು 200 ನಗರಗಳಲ್ಲಿ 360ಕ್ಕೂ ಹೆಚ್ಚು ಔಟ್‍‍ಲೆಟ್‍‍ಗಳನ್ನು ಹೊಂದಿದ್ದೇವೆ ಹಾಗೂ 9ಲಕ್ಷಕ್ಕೂ ಹೆಚ್ಚು ನೆಕ್ಸಾ ಗ್ರಾಹಕರನ್ನು ಹೊಂದಿದ್ದೇವೆ. ಈ ಮೊಬೈಲ್ ನೆಕ್ಸಾ ಟರ್ಮಿನಲ್‍‍ಗಳಿಂದಾಗಿ, ನೆಕ್ಸಾ ಔಟ್‍‍ಲೆಟ್‍‍ಗಳು ಲಭ್ಯವಿಲ್ಲದ ಪ್ರದೇಶಗಳಲ್ಲಿ ನಮ್ಮ ಗ್ರಾಹಕರ ಜೊತೆ ಸಂಪರ್ಕ ದೊರೆಯಲಿದೆ ಎಂದು ಹೇಳಿದರು.

ನೆಕ್ಸಾ ಟರ್ಮಿನಲ್ ಶುರು ಮಾಡಿದ ಮಾರುತಿ ಸುಜುಕಿ

ಭಾರತದಂತಹ ದೊಡ್ಡ ದೇಶದಲ್ಲಿ ಜನರು ಕಾರುಗಳ ಶೋರೂಂಗಳನ್ನು ಹುಡುಕಿ ಕೊಂಡು ದೊಡ್ಡ ದೊಡ್ಡ ನಗರಗಳಿಗೆ ಅಥವಾ ನಗರ ಪ್ರದೇಶಗಳಿಗೆ ಹೋಗಬೇಕಾಗುತ್ತದೆ.

MOST READ: ಬಿಡುಗಡೆಯಾಯಿತು ವೆಸ್ಪಾ ಕ್ಲಬ್ ರೇಂಜ್ ಸ್ಕೂಟರ್

ನೆಕ್ಸಾ ಟರ್ಮಿನಲ್ ಶುರು ಮಾಡಿದ ಮಾರುತಿ ಸುಜುಕಿ

ಹ್ಯುಂಡೈ ಹಾಗೂ ಮಾರುತಿ ಸುಜುಕಿ ಕಂಪನಿಗಳು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡೀಲರ್‍‍ಗಳನ್ನು ಹೊಂದಿ, ಗ್ರಾಹಕರ ಜೊತೆ ಹೆಚ್ಚಿನ ಸಂಪರ್ಕ ಹೊಂದಿವೆ. ಆದರೆ ನೆಕ್ಸಾ ಸರಣಿಯಂತಹ ಪ್ರಿಮೀಯಂ ಕಾರುಗಳ ಸೇವೆಯನ್ನು ಒದಗಿಸುವ ಡೀಲರ್‍‍ಗಳು ಎಲ್ಲಾ ತರಹದ ಗ್ರಾಹಕರ ಕೈಗೆಟುಕುವುದಿಲ್ಲ.

ನೆಕ್ಸಾ ಟರ್ಮಿನಲ್ ಶುರು ಮಾಡಿದ ಮಾರುತಿ ಸುಜುಕಿ

ಆದ ಕಾರಣ ಮಾರುತಿ ಸುಜುಕಿ ಕಂಪನಿಯು ಹೊಸ ನೆಕ್ಸಾ ಮೊಬೈಲ್ ಡೀಲರ್‍‍ಶಿಪ್‍‍ಗಳನ್ನು ಆರಂಭಿಸಿ ಎಲ್ಲಾ ರೀತಿಯ ಗ್ರಾಹಕರನ್ನು ತಲುಪಿ ಗ್ರಾಹಕ ಸ್ನೇಹಿಯಾಗಲಿದೆ. ಈ ಮೊಬೈಲ್ ಡೀಲರ್‍‍ಶಿಪ್‍‍ಗಳನ್ನು ಅಶೋಕ್ ಲೇಲ್ಯಾಂಡ್ ಟ್ರಕ್ಕಿನ ಎಂಜಿನ್ ಹಾಗೂ ಚಾಸೀಸ್ ಹೊಂದಿರುವ ವಾಹನಗಳಿಂದ ತಯಾರಿಸಲಾಗಿದೆ. ಇನ್ನೊಂದು ಚಿತ್ರದಲ್ಲಿ ಸಿಯಾಜ್ ಕಾರ್ ಅನ್ನು ಐಷರ್ ಟ್ರಕ್ಕಿನಲ್ಲಿ ತೋರಿಸಲಾಗಿದೆ. ಈ ರೀತಿಯ ಅನೇಕ ಮೊಬೈಲ್ ಪ್ಲಾಟ್ ಫಾರಂಗಳನ್ನು ತಯಾರಿಸಿ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ನೀಡಲಾಗುವುದು.

MOST READ: ಭಾರತಕ್ಕೆ ಲಗ್ಗೆಯಿಡಲಿದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬೈಕ್

ನೆಕ್ಸಾ ಟರ್ಮಿನಲ್ ಶುರು ಮಾಡಿದ ಮಾರುತಿ ಸುಜುಕಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ಕಂಪನಿಯು ಗ್ರಾಹಕರನ್ನು ತಲುಪಲು ಯಾವ ರೀತಿಯ ಕ್ರಮಗಳನ್ನು ಬೇಕಾದರೂ ಕೈಗೊಳ್ಳುತ್ತದೆ ಎಂಬುದಕ್ಕೆ ಈ ಮೊಬೈಲ್ ಟರ್ಮಿನಲ್ ಸಾಕ್ಶಿಯಾಗಿದೆ. ಕಂಪನಿಯ ಪ್ರತಿನಿಧಿಗಳಿಗೆ ಪ್ರಿಮೀಯಂ ಕಾರುಗಳನ್ನು ಖರೀದಿಸುವ ಗ್ರಾಹಕರು ಗ್ರಾಮೀಣ ಭಾಗಗಳಲ್ಲಿ ದೊರೆಯುವುದಿಲ್ಲವೆಂದು ತಿಳಿದಿದ್ದರೂ ಈ ರೀತಿಯ ಪ್ರಯತ್ನವನ್ನು ಮಾಡುತ್ತಿರುವುದಕ್ಕೆ ಶ್ಲಾಘಿಸಲೇ ಬೇಕಿದೆ. ಆಲ್ ದಿ ಬೆಸ್ಟ್.

Most Read Articles

Kannada
English summary
Maruti Suzuki Launches Nexa Terminal — Mobile Dealerships On Trucks To Reach New Regions - Read in kannada
Story first published: Wednesday, June 5, 2019, 17:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X