ಬಿಡುಗಡೆಯಾದ ಮೂರು ವಾರದಲ್ಲೇ ಹೆಚ್ಚು ಮಾರಾಟವಾದ ಬೆಂಝ್ ಜಿ-350ಡಿ
ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಬಿಡುಗಡೆಯಾದ ಮೂರು ವಾರಗಳಲ್ಲಿ ಭಾರತದಲ್ಲಿ ನಿಗದಿಪಡಿಸಿದ ಜಿ 350 ಡಿ ಯುನಿಟ್‍ಗಳನ್ನು ಮಾರಾಟ ಮಾಡುವಲ್ಲಿ ಯಶ್ವಸಿಯಾಗಿದೆ. ಕಳೆದ ಅಕ್ಟೋಬರ್ 16ರಂದು ಈ ಎಸ್‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಭಾರತದ ಎಕ್ಸ್ ಶೋರೂಂ ಪ್ರಕಾರ ಮರ್ಸಿಡಿಸ್ ಬೆಂಝ್ ಜಿ 350ಡಿ ಎಸ್‍ಯುವಿ ರೂ.1.5 ಕೋಟಿ ಬೆಲೆಯನ್ನು ಹೊಂದಿದೆ. ಕಂಪನಿಯ ಜಿ-ಕ್ಲಾಸ್ ಸರಣಿಯ ಈ ಆಫ್‍ರೋಡ್ ಎಸ್‍ಯುವಿಯು ಎಂಟ್ರಿ ಲೆವೆಲ್ ಎಸ್‍ಯುವಿಯಾಗಿದೆ. ಭಾರತದ ಎಕ್ಸ್ ಶೋರೂಂ ಪ್ರಕಾರ ಮರ್ಸಿಡಿಸ್, ರೇಂಜ್-ಟಾಪಿಂಗ್ ಮತ್ತು ಪರ್ಫಾರ್ಮೆನ್ಸ್ ಓರಿಯೆಂಟೆಡ್ ಎಎಂಜಿ ಜಿ 63 ಎಸ್‍ಯುವಿಯ ಬೆಲೆಯು ರೂ.2.19 ಕೋಟಿಗಳಾಗಿದೆ.

ಮರ್ಸಿಡಿಸ್ ಬೆಂಝ್ ಜಿ 350 ಡಿ ಎಸ್‍ಯುವಿಯು 3.0 ಲೀಟರ್ ಇನ್‍ಲೈನ್ ಆರು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 282 ಬಿಹೆಚ್‍ಪಿ ಪವರ್ ಮತ್ತು 600 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದೇ ಮಾದರಿಯ ಎಂಜಿನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿರುವ ಎಸ್-ಕ್ಲಾಸ್ 350 ಡಿನಲ್ಲಿ ಅಳವಡಿಸಲಾಗಿದೆ. ಈ ಎಂಜಿನ್ ಮೊದಲೇ ಬಿಎಸ್-6 ಎಂಜಿನ್ ಆಗಿದೆ. ಎಂಜಿನ್‍ನೊಂದಿಗೆ ಸ್ಟ್ಯಾಂಡರ್ಡ್ 9ಜಿ-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಆಫ್ ರೋಡ್ ಎಸ್‍ಯುವಿಯು ಪ್ರತಿ ಗಂಟೆಗೆ 199 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಬೆಂಝ್ 241 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 700 ಎಂಎಂ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿ 350 ಡಿ ಎಸ್‍ಯುವಿಯು ಬಾಕ್ಸೀ ಮತ್ತು ಐಕಾನಿಕ್ ವಿನ್ಯಾಸವನ್ನು ಹೊಂದಿದೆ. ಈ ಬೆಂಝ್ ಮುಂಭಾಗದಲ್ಲಿ ದೊಡ್ಡ ಪ್ಯಾನ್ ಅಮೆರಿಕಾನಾ ಗ್ರಿಲ್, ವೃತ್ತಾಕಾರದ ಹೆಡ್‍ಲ್ಯಾಂಪ್ ಯುನಿಟ್ ಮತ್ತು ದೊಡ್ಡ 20 ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

ಜಿ ವ್ಯಾಗನ್ ಇಂಟಿರಿಯರ್‍ನಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸ ಮರ್ಸಿಡಿಸ್ ಬೆಂಝ್ ಜಿ 350 ಡಿ ಇಂಟಿರಿಯರ್‍ನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇನ್ಪೋಟೈನ್‍ಮೆಂಟ್ ಸಿಸ್ಟಂ, ಲೆದರ್ ಸೀಟ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್, ಎಲ್‍ಇಡಿ ಹೆಡ್‍ಲ್ಯಾಂಪ್, ತ್ರಿ ಝೋನ್ ಕ್ಲೈಮೇಟ್ ಕಂಟ್ರೋಲ್, ಮಲ್ಟಿ ಪಂಕ್ಷನಲ್ ಸ್ಟಿಯರೀಂಗ್ ವ್ಹೀಲ್ ಜೊತೆಯಲ್ಲಿ ಇತರ ವೈಶಿಷ್ಟ್ಯಗಳನ್ನು ಹೊಂದಿದೆ.

ಬೆಂಝ್ ಜಿ 350ಡಿ ಎಸ್‍ಯುವಿಯ ಇಂಟಿರಿಯರ್‍ನ ಡ್ಯಾಶ್‍ಬೋರ್ಡ್‍ನಲ್ಲಿ ಎರಡು 12.3 ಇಂಚಿನ ಸ್ಕ್ರೀನ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೇನ್‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದು ಕಂಪನಿಯ ವೈಡ್-ಸ್ಕ್ರೀನ್ ಕಾಕ್‍ಪಿಟ್ ಎಂದು ಪ್ರಸಿದ್ದಿಯಾಗಿದೆ.

ಈ ಎಸ್‍ಯುವಿಯಲ್ಲಿ ಸೆಂಟರ್ ಕನ್ಸೋಲ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಅನ್ನು ಸುಲಭವಾಗಿ ಕಂಟ್ರೋಲ್ ಮಾಡಲು ಟಚ್ ಪ್ಯಾಡ್ ಅನ್ನು ಅಳವಡಿಸಲಾಗಿದೆ. ಫ್ಲಾಟ್-ಬಾಟಮ್ ಸ್ಟೀಯರಿಂಗ್ ವ್ಹೀಲ್ ಮೌಂಟೆಡ್ ಕಂಟ್ರೋಲ್ ಮತ್ತು ಟಚ್‍ಪ್ಯಾಡ್ ಅನ್ನು ಇನ್ಸ್ ಟ್ರೂಮೆಂಟ್ ಮೂಲಕ ನ್ಯಾವಿಗೇಟ್ ಮಾಡುತ್ತದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಹೊಸ ಬೆಂಝ್ 350 ಡಿ ಎಸ್‍ಯುವಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಸುರಕ್ಷತೆಗಾಗಿ 8 ಏರ್‍ಬ್ಯಾಗ್‍ಗಳು, ಇಎಸ್‍ಸಿ, ಎಬಿಎಸ್ ಜೊತೆ ಇಬಿಡಿ,ಬ್ರೇಕ್ ಅಸಿಸ್ಟ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಅನ್ನು ಹೊಂದಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಮರ್ಸಿಡಿಸ್ ದೇಶಿಯ ಮಾರುಕಟ್ಟೆಯಲ್ಲಿ ನಿಗದಿಪಡಿಸಿ ಬಿಡುಗಡೆಗೊಳಿಸಿದ ಎಲ್ಲಾ ಯುನಿಟ್‍ಗಳನ್ನು ಮಾರಾಟ ಮಾಡುವಲ್ಲಿ ಯಶ್ವಸಿಯಾಗಿದೆ. ಆಟೋ ಮೊಬೈಲ್ ಕ್ಷೇತ್ರವು ಕುಸಿತ ಕಾಣುತ್ತಿರುವ ವೇಳೆಯಲ್ಲಿ ಬೆಂಝ್ ಕಂಪನಿಯು ದುಬಾರಿ ಎಸ್‍ಯುವಿಯನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಎಸ್‍ಯುವಿಯು ಬಿಎಸ್-6 ಎಂಜಿನ್ ಅನ್ನು ಹೊಂದಿರುವ ಕಾರಣಕ್ಕೆ ಹೆಚ್ಚು ಮಾರಾಟವಾಗಿದೆ.


Click it and Unblock the Notifications








