Just In
- 4 min ago
ಭಾರತದ ನಂತರ ಜಪಾನ್ ಮಾರುಕಟ್ಟೆಯಲ್ಲೂ ಬಿಡುಗಡೆಯಾಗುತ್ತಿದೆ ಹೋಂಡಾ ಹೈನೆಸ್ ಸಿಬಿ 350
- 10 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 11 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 11 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
Don't Miss!
- Movies
ಸುದೀಪ್ ಜೊತೆ ಸಿನಿಮಾ: ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ
- News
ವಿಶ್ವದಾದ್ಯಂತ ಕೊರೊನಾಗೆ ಬಲಿಯಾದವರ ಸಂಖ್ಯೆ 2 ಕೋಟಿ ದಾಟಿದೆ!
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೊದಲ ಬಾರಿಗೆ ಪ್ರದರ್ಶಿತವಾದ ಹೊಸ ತಲೆಮಾರಿನ ಪಜೆರೊ ಸ್ಪೋರ್ಟ್
ಮಾರುಕಟ್ಟೆಯಲ್ಲಿರುವ ಮೂರನೇ ತಲೆಮಾರಿನ ಮಿಟ್ಸುಬಿಷಿ ಕಂಪನಿಯ ಪಜೆರೊ ಸ್ಪೋರ್ಟ್ ಅನ್ನು 2015ರಿಂದ ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈಗ ಈ ಕಾರ್ ಅನ್ನು ನವೀಕರಣಗೊಳಿಸಲಾಗುತ್ತಿದೆ.

ಈ ವಾಹನವನ್ನು ಮೊದಲ ಬಾರಿಗೆ ಈ ವರ್ಷದ ಜುಲೈನಲ್ಲಿ ಅನಾವರಣಗೊಳಿಸಲಾಗಿತ್ತು. ಜಪಾನ್ ಮೂಲದ ಮಿಟ್ಸುಬಿಷಿ ಕಂಪನಿಯು ಥೈಲ್ಯಾಂಡ್‍ನಲ್ಲಿ ನಡೆಯುತ್ತಿರುವ 2019ರ ಥಾಯ್ ಮೋಟಾರ್ ಶೋದಲ್ಲಿ ಈ ವಾಹನವನ್ನು ಪ್ರದರ್ಶಿಸಿದೆ.

ಹೊಸ ಪಜೆರೊ ಸ್ಪೋರ್ಟ್ ಸಹ ಮಿಟ್ಸುಬಿಷಿ ಕಂಪನಿಯ ಡೈನಾಮಿಕ್ ಶೀಲ್ಡ್ ವಿನ್ಯಾಸವನ್ನು ಮುಂಭಾಗದಲ್ಲಿರುವ ಫಾಸ್ಕಿಯಾದಲ್ಲಿ ಹೊಂದಿದೆ. ಹೊಸದಾಗಿ ಸ್ಪ್ಲಿಟ್ ಹೆಡ್‍ಲ್ಯಾಂಪ್ ಅನ್ನು ಅಳವಡಿಸಲಾಗಿದೆ. ಬಾನೆಟ್ ಮೇಲೆ ಪಜೆರೊ ಸ್ಪೋರ್ಟ್ ಎಂದು ಬರೆಯಲಾಗಿದೆ.

ಎಸ್‌ಯುವಿಯ ಮುಂಭಾಗದಲ್ಲಿ ಕಂಪನಿಯ ಲಾಂಛನವನ್ನು ಹೊಂದಿರುವ ಟ್ರಿಪಲ್ ಸ್ಲ್ಯಾಟ್‌ಗಳಿವೆ. ಹೆಡ್‌ಲ್ಯಾಂಪ್ ಅಡಿಯಲ್ಲಿರುವ ಸಿ ಶೇಪಿಗೆ ಕ್ರೋಮ್ ಬಣ್ಣವನ್ನು ನೀಡಲಾಗಿದೆ. ಹೊಸ ಕಾರಿನಲ್ಲಿ ಡ್ಯುಯಲ್ ಟೋನ್‍ನಲ್ಲಿ ಅಲಾಯ್ ವ್ಹೀಲ್‍ಗಳಿರುವುದನ್ನು ಹೊರತುಪಡಿಸಿ ಸೈಡ್ ಪ್ರೊಫೈಲ್‍ನಲ್ಲಿ ಬೇರೆ ಬದಲಾವಣೆಗಳಾಗಿಲ್ಲ.

ಹಿಂಭಾಗದಲ್ಲಿರುವ, ವರ್ಟಿಕಲ್ ಟೇಲ್ ಲ್ಯಾಂಪ್ ಸ್ಪ್ಲಿಟ್ ಟೇಲ್ ಗೇಟ್‍ವರೆಗೂ ವಿಸ್ತರಿಸಿದೆ. ಮಾರುಕಟ್ಟೆಯಲ್ಲಿರುವ ಕಾರಿನಲ್ಲಿರುವ ಹಿಂಭಾಗದ ಬಂಪರ್ ಅನ್ನು ಸ್ವಲ್ಪ ಕಡಿಮೆ ಮಾಡಲಾಗಿದೆ. ಹೊಸ ಕಾರಿನಲ್ಲಿ ಹಿಂಭಾಗದ ಸ್ಪಾಯ್ಲರ್, ಜೊತೆಗೆ ಶಾರ್ಕ್ ಫಿನ್ ಆಂಟೆನಾ ಅಳವಡಿಸಲಾಗಿದೆ.

ಹಳೆಯ ಪಜೆರೊ ಸ್ಪೋರ್ಟ್ ಹೆಚ್ಚು ಗಾತ್ರವನ್ನು ಹೊಂದಿತ್ತು. ಮಿಟ್ಸುಬಿಷಿ ಅದನ್ನು ಕಡಿಮೆಗೊಳಿಸಿದೆ. ಪರಿಷ್ಕೃತ ಬಂಪರ್‌ಗಳು, ಸ್ಪಾಯ್ಲರ್ ಹಾಗೂ ಎರಡೂ ತುದಿಗಳಲ್ಲಿರುವ ಹೊಸ ಡಿಫ್ಯೂಸರ್‌ಗಳು ಹೊಸ ಕಾರಿನ ಅಂದವನ್ನು ಹೆಚ್ಚಿಸುವುದರ ಜೊತೆಗೆ ಮಾರುಕಟ್ಟೆಯಲ್ಲಿರುವ ಕಾರಿಗಿಂತ ಕಡಿಮೆ ಗಾತ್ರವನ್ನು ಹೊಂದಿರುವಂತೆ ಮಾಡುತ್ತವೆ.

ಕ್ಯಾಬಿನ್ ಒಳಗೆ, 8 ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆಗೆ ಹೊಸ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂಗಳನ್ನು ಹೊಂದಿದೆ. ಮಿಟ್ಸುಬಿಷಿ ಕಂಪನಿಯು ಹೊಸ ಪಜೆರೊ ಸ್ಪೋರ್ಟ್‍ನಲ್ಲಿ ರಿಮೋಟ್‍ನೊಂದಿಗೆ ಚಾಲನೆಗೊಳ್ಳುವ ಟೇಲ್‌ಗೇಟ್ ಅಳವಡಿಸಿದೆ.
MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಸುರಕ್ಷತೆಗಾಗಿ ಲ್ಯಾಂಗ್ ಚೇಂಜ್ ಅಸಿಸ್ಟ್ ಹಾಗೂ ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಸಿಸ್ಟಂಗಳಿವೆ. ಹೊಸ ಪಜೆರೊ ಸ್ಪೋರ್ಟ್‍ನಲ್ಲಿ 2.4 ಲೀಟರಿನ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ.
MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಈ ಎಂಜಿನ್ 178 ಬಿಹೆಚ್‍ಪಿ ಪವರ್ ಹಾಗೂ 430 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 8 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಮಿಟ್ಸುಬಿಷಿ ಕಂಪನಿಯು ಹೊಸ ಪಜೆರೊ ಸ್ಪೋರ್ಟ್ ವಾಹನವನ್ನು ಥೈಲ್ಯಾಂಡ್‍ನಿಂದ ಸಿಬಿಯು ರೂಪದಲ್ಲಿ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಲಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಈ ಕಾರ್ ಅನ್ನು 2020ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.30 ಲಕ್ಷಗಳಾಗುವ ಸಾಧ್ಯತೆಗಳಿವೆ.

ಭಾರತದತ್ತ ಮಿಟ್ಸುಬಿಷಿ ಎಕ್ಸ್‌ಪ್ಯಾಂಡರ್ ಕ್ರಾಸ್
ಜಪಾನಿನ ವಾಹನ ತಯಾರಕ ಕಂಪನಿಯಾದ ಮಿಟ್ಸುಬಿಷಿ ತನ್ನ ಎಕ್ಸ್‌ಪ್ಯಾಂಡರ್ ಕ್ರಾಸ್ ಎಂಬ ಹೊಸ ಕ್ರಾಸ್ ಒವರ್ ಎಂಪಿವಿಯನ್ನು ಅನಾವರಣಗೊಳಿಸಿದೆ. ಇದು ಮೊದಲಿಗೆ ಇಂಡೋನೇಷ್ಯಾದಲ್ಲಿ ಮಾರಾಟವಾಗಲಿದ್ದು, ನಂತರದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ.

ಇನೋವಾ ಎಂಪಿವಿಯ ಮಾದರಿಯಲ್ಲಿ ಗ್ರಾಹಕರನ್ನು ಗುರಿಯಾಗಿಸಿಕೊಂಡು ಈ ಕ್ರಾಸ್ ಒವರ್ ಅನ್ನು ಬಿಡುಗಡೆಗೊಳಿಸಲಾಗುತ್ತಿದೆ. ಜಪಾನಿನ ಬ್ರ್ಯಾಂಡ್ ಮಿಟ್ಸುಬಿಷಿ ಪ್ರಕಾರ ಈ ಎಂಪಿವಿ ಹೆಚ್ಚು ಇಂಟಿರಿಯರ್ ಸ್ಪೇಸ್ ಮತ್ತು ಹೆಚ್ಚು ದೂರ ಚಲಿಸಲು ಉತ್ತಮ ವಾಹನವಾಗಿದೆ. 2018ರಲ್ಲಿ ಎಕ್ಸ್‌ಪ್ಯಾಂಡರ್ ಎಂಪಿವಿಯು 1 ಲಕ್ಷಕ್ಕೂ ಅಧಿಕ ಯುನಿಟ್‍ಗಳಷ್ಟು ಮಾರಾಟವಾಗಿದೆ. ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ನಾಲ್ಕನೇ ಎಂಪಿವಿ ಇದಾಗಿದೆ.

ಮಿಟ್ಸುಬಿಷಿ ಎಕ್ಸ್‌ಪ್ಯಾಂಡರ್ ಎಂಪಿವಿಯನ್ನು ಎರಡು ವರ್ಷಗಳ ಹಿಂದೆ ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು. ಮಿಟ್ಸುಬಿಷಿ ಎಕ್ಸ್‌ಪ್ಯಾಂಡರ್ ಕ್ರಾಸ್‌ನೊಂದಿಗೆ ತನ್ನ ಯಶಸ್ಸನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಎಕ್ಸ್‌ಪ್ಯಾಂಡರ್ ಕ್ರಾಸ್ ಎಂಪಿವಿ ತಯಾರಿಸುವ ಇಂಡೋನೇಷ್ಯಾದ ಸಿಕಾರಂಗ್ ಘಟಕದಲ್ಲಿ ತಯಾರಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ರಫ್ತು ಹೆಚ್ಚಸಲು ನಿರ್ಧರಿಸಲಾಗಿದೆ.

ಈ ಎಂಪಿವಿಯು ಕಪ್ಪು ಬಣ್ಣದ ಹೊಸ ಗ್ರಿಲ್ ಅನ್ನು ಹೊಂದಿದೆ. ಕಾರಿನಲ್ಲಿ ಹೊಸ ಎಲ್‍ಇಡಿ ಹೆಡ್‍ಲ್ಯಾಂಪ್ ಮತ್ತು ಎಲ್‍ಇಡಿ ಫಾಗ್ ಲ್ಯಾಂಪ್‍ಗಳನ್ನು ಅಳವಡಿಸಲಾಗಿದೆ. ಎಕ್ಸ್‌ಪ್ಯಾಂಡರ್ ಕ್ರಾಸ್‍ನಲ್ಲಿ ಬ್ಲ್ಯಾಕ್ ಬಾಡಿ ಕ್ಲಾಡಿಂಗ್ ಅನ್ನು ಹೊಂದಿದೆ. 17 ಇಂಚಿನ ಅಲಾಯ್ ವ್ಹೀಲ್‍ಗಳ ಜೊತೆ ಪ್ರೊಫೈಲ್ ಟಯರ್‍ಗಳು ಮತ್ತು ಹೊಸ ರೂಫ್ ರೇಲ್ ಮತ್ತು ಹಿಂಭಾಗದಲ್ಲಿ ಹೊಸ ಬಂಪರ್ ಅನ್ನು ಫಾಕ್ಸ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ.

ಇಂಟಿರಿಯರ್‍ನಲ್ಲಿ ಕ್ರಾಸ್ ಡ್ಯುಯಲ್-ಟೋನ್ ಬ್ಲ್ಯಾಕ್ ಮತ್ತು ರೆಡ್ ಥೀಮ್ ಅನ್ನು ಹೊಂದಿದೆ. ಇದಲ್ಲದೆ ರೆಡ್ ಥೀಮ್ ಇರುವ ಹೆಚ್ಚಿನ ರೂಪಾಂತರಗಳು ಹೆಚ್ಚಾಗಿ ಬ್ಲ್ಯಾಕ್ ಬಣ್ಣದ ಇಂಟಿರಿಯರ್ ಹೊಂದಿರುತ್ತವೆ.

ಕಾಸ್ಮೆಟಿಕ್ ಬದಲಾವಣೆಗಳ ಜೊತೆಗೆ ಎಕ್ಸ್‌ಪಾಂಡರ್ ಕ್ರಾಸ್ ಸ್ಟ್ಯಾಂಡರ್ಡ್ ಮಾದರಿಯ 225 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೆಚ್ಚುವರಿ 25 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಈ ಎಂಪಿವಿ 50 ಎಂಎಂ ಅಗಲವನ್ನು ಹೊಂದಿದೆ. ಈ ಮಾದರಿಯನ್ನು ಮಿಟ್ಸುಬಿಷಿ ಇಂಡೋನೇಷ್ಯಾ ಘಟಕದಲ್ಲಿ ತಯಾರಿಸಿ ನಂತರ ಬೇರೆ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ.

ಮಿಟ್ಸುಬಿಷಿ ಎಕ್ಸ್‌ಪ್ಯಾಂಡರ್ ಕ್ರಾಸ್ ಇತ್ತೀಚಿನ 4 ಎ91 1.5-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಿದೆ. ಇದು ಪ್ರಸ್ತುತ ಇರುವ 4ಎ 9 ಸರಣಿಗಿಂತ ಹೆಚ್ಚು ದಕ್ಷತೆಯನ್ನು ಹೊಂದಿದೆ.

ಮಿಟ್ಸುಬಿಷಿ ಹೇಳುವಂತೆ ಈ ಎಂಪಿವಿ ಹೈ ಫರ್ಪಾಮೆನ್ಸ್ ಸೌಂಡ್ ಅಬ್ಸರ್ವಿಂಗ್ ಮತ್ತು ವೈಬರೇಷನ್ ಬ್ಲಾಕಿಂಗ್ ಸಿಸ್ಟಂ ಅನ್ನು ಹೊಂದಿದೆ. ಈ ಎಂಪಿವಿಯು 7 ಜನರು ಪ್ರಯಾಣಿಸುವಷ್ಟು ವಿಶಾಲವಾಗಿದೆ.

ಈ ಎಂಪಿವಿಯಲ್ಲಿ ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀಯರಿಂಗ್ ವ್ಹೀಲ್, ಕ್ರೂಸ್ ಕಂಟ್ರೋಲ್, ಪ್ರೊಗ್ರಾಮೆಬಲ್ ಎಕ್ಸ್ ಟಿರಿಯರ್, ಹೈ-ಕಾಂಟ್ರಾಸ್ಟ್ ಕಲರ್ ಇನ್ಸ್ ಟ್ರೂಮೆಂಟ್ ಪ್ಯಾನೆಲ್ ಮೀಟರ್, ಫ್ಲೋಡಿಂಗ್ ಆರ್ಮ್ ರೆಸ್ಟ್ , ಲಗೇಜ್ ಸ್ಪೇಸ್, ಕ್ಯೂಬಿ ಹೊಲ್ಸ್, ಎರಡನೇ ಸಾಲಿನ ಸೀಟ್ ಬ್ಯಾಕ್ 60:40 ಸ್ಪ್ಲೀಟ್, ಮೂರನೇ ಸಾಲಿನ ಸೀಟು 50:50 ಸ್ಪ್ಲೀಟ್ ಅನ್ನು ಹೊಂದಿದೆ. ಮಿಟ್ಸುಬಿಷಿ ಎಕ್ಸ್‌ಪ್ಯಾಂಡರ್ ಓವರ್ ಎಂಪಿವಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.