ಪ್ರಧಾನಿ ಮೋದಿ ಪ್ರಯಾಣಕ್ಕೆ ಮತ್ತೊಂದು ದುಬಾರಿ ಕಾರು ಖರೀದಿ..!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಈ ಹಿಂದಿನ ಅವಧಿಯಲ್ಲಿ ಹಾಗೂ ಈ ಅವಧಿಯಲ್ಲಿ ಹಲವಾರು ಕಾರುಗಳನ್ನು ಬದಲಾಯಿಸಿದ್ದಾರೆ. ಅವರ ಅಧಿಕೃತ ಕಾರ್ ಆದ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರು ಈಗ ಹೆಚ್ಚು ಕಾಣಿಸುತ್ತಿಲ್ಲ.

ಪಿ‍ಎಂರವರಿಗಾಗಿ ಬಂತು ಮತ್ತೊಂದು ಬುಲೆಟ್ ಪ್ರೂಫ್ ಕಾರು

ಈ ಹಿಂದೆ ಪ್ರಧಾನಿಯವರು ಲ್ಯಾಂಡ್ ರೋವರ್ ರೇಂಜ್ ರೋವರ್ ಹಾಗೂ ಹಳೆ ತಲೆಮಾರಿನ ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಓಡಾಡುತ್ತಿದ್ದರು. ನರೇಂದ್ರ ಮೋದಿಯವರು ಈಗ ಹೊಸ ತಲೆಮಾರಿನ ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.

ಪಿ‍ಎಂರವರಿಗಾಗಿ ಬಂತು ಮತ್ತೊಂದು ಬುಲೆಟ್ ಪ್ರೂಫ್ ಕಾರು

ಮೋದಿಯವರು ಥೈಲ್ಯಾಂಡ್ನಿಂದ ಭಾರತಕ್ಕೆ ಆಗಮಿಸಿದ ವೀಡಿಯೊವನ್ನು ಕೆಲವು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದು, ಅದರಲ್ಲಿ ಮೋದಿಯವರು ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಹೋಗುತ್ತಿರುವುದನ್ನು ತೋರಿಸಲಾಗಿದೆ. ಈ ಕಾರು ಅವರು ಬಳಸುತ್ತಿರುವ ಹಳೆಯ ಲ್ಯಾಂಡ್ ಕ್ರೂಸರ್ ಅಲ್ಲ. ಇದು ಹೊಸ ತಲೆಮಾರಿನ ಎಸ್‍‍ಯುವಿಯಾಗಿದೆ.

ಪಿ‍ಎಂರವರಿಗಾಗಿ ಬಂತು ಮತ್ತೊಂದು ಬುಲೆಟ್ ಪ್ರೂಫ್ ಕಾರು

ಈ ಎಸ್‍‍ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.7 ಕೋಟಿಗಳಾಗಿದೆ. ತೆರಿಗೆಗಳನ್ನು ಪಾವತಿಸಿ ರಸ್ತೆಗಿಳಿದ ನಂತರ ಈ ಕಾರಿನ ಬೆಲೆಯು ರೂ.2 ಕೋಟಿಗಳಾಗಲಿದೆ. ಗಮನಿಸಬೇಕಾದ ಸಂಗತಿಯೆಂದರೆ ಇದು ಸಾಮಾನ್ಯವಾದ ಟೊಯೊಟಾ ಲ್ಯಾಂಡ್ ಕ್ರೂಸರ್ ಅಲ್ಲ.

ಪಿ‍ಎಂರವರಿಗಾಗಿ ಬಂತು ಮತ್ತೊಂದು ಬುಲೆಟ್ ಪ್ರೂಫ್ ಕಾರು

ಇದು ಭಾರೀ ಪ್ರಮಾಣದ ಬುಲೆಟ್ ಪ್ರೂಫ್ ವಾಹನವಾಗಿದೆ. ಟೊಯೊಟಾ ಕಂಪನಿಯು ಮರ್ಸಿಡಿಸ್ ಬೆಂಜ್, ಲ್ಯಾಂಡ್ ರೋವರ್ ಹಾಗೂ ಬಿಎಂಡಬ್ಲ್ಯುಗಳಂತೆ ಅಧಿಕೃತವಾಗಿ ಬುಲೆಟ್ ಪ್ರೂಫ್ ವಾಹನಗಳನ್ನು ಮಾರಾಟ ಮಾಡುವುದಿಲ್ಲ.

ಪಿ‍ಎಂರವರಿಗಾಗಿ ಬಂತು ಮತ್ತೊಂದು ಬುಲೆಟ್ ಪ್ರೂಫ್ ಕಾರು

ಈ ವಾಹನವನ್ನು ಹೊರಗಿನ ಏಜೆನ್ಸಿಯಿಂದ ತಯಾರಿಸಲಾಗಿದೆ. ಈ ವಾಹನವನ್ನು ಪ್ರಧಾನ ಮಂತ್ರಿಗಳು ಬಳಸುವ ಕಾರಣ ಬುಲೆಟ್ ಪ್ರೂಫ್‍‍ಗಾಗಿ ಮಾಡಲಾದ ಖರ್ಚಿನ ಬಗೆಗಿನ ಮಾಹಿತಿಯನ್ನು ರಹಸ್ಯವಾಗಿಡಲಾಗಿದೆ.

ಪಿ‍ಎಂರವರಿಗಾಗಿ ಬಂತು ಮತ್ತೊಂದು ಬುಲೆಟ್ ಪ್ರೂಫ್ ಕಾರು

ಇತ್ತೀಚಿನ ದಿನಗಳಲ್ಲಿ ಪ್ರಧಾನ ಮಂತ್ರಿಯವರ ಅಧಿಕೃತ ವಾಹನವನ್ನು ಹಲವಾರು ಬಾರಿ ಅಪ್‍‍ಡೇಟ್‍‍ಗೊಳಿಸಲಾಗಿದೆ. ಈ ಮೊದಲು ಭಾರತದ ಪ್ರಧಾನ ಮಂತ್ರಿಗಳು ಹಿಂದೂಸ್ತಾನ್ ಮೋಟಾರ್ಸ್‍‍‍ನ ಅಂಬಾಸಿಡರ್ ಕಾರ್ ಅನ್ನು ಬಳಸುತ್ತಿದ್ದರು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಪಿ‍ಎಂರವರಿಗಾಗಿ ಬಂತು ಮತ್ತೊಂದು ಬುಲೆಟ್ ಪ್ರೂಫ್ ಕಾರು

ಅಟಲ್ ಬಿಹಾರಿ ವಾಜಪೇಯಿರವರು ಪ್ರಧಾನ ಮಂತ್ರಿಯಾದ ನಂತರ ಮೊದಲ ಬಾರಿಗೆ ಅಧಿಕೃತ ಕಾರ್ ಆಗಿ ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರ್ ಅನ್ನು ಬಳಸಲು ಶುರು ಮಾಡಿದರು. ಇದಾದ ನಂತರ ಮನ್ ಮೋಹನ್ ಸಿಂಗ್‍‍ರವರು ಸಹ ತಮ್ಮ ಅವಧಿಯಲ್ಲಿ ಹೈ ಸೆಕ್ಯೂರಿಟಿಯ ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರ್ ಅನ್ನು ಬಳಸುತ್ತಿದ್ದರು.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಪಿ‍ಎಂರವರಿಗಾಗಿ ಬಂತು ಮತ್ತೊಂದು ಬುಲೆಟ್ ಪ್ರೂಫ್ ಕಾರು

ನರೇಂದ್ರ ಮೋದಿರವರು ಪ್ರಧಾನ ಮಂತ್ರಿಯಾದ ನಂತರ ಬುಲೆಟ್ ಪ್ರೂಫ್ ಸ್ಕಾರ್ಪಿಯೊದಲ್ಲಿ ಬಂದು ಪ್ರಮಾಣ ವಚನ ಸ್ವೀಕರಸಿದ್ದರು. ಈ ವಾಹನದಲ್ಲಿಯೇ ನರೇಂದ್ರ ಮೋದಿರವರು ಚುನಾವಣಾ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಪಿ‍ಎಂರವರಿಗಾಗಿ ಬಂತು ಮತ್ತೊಂದು ಬುಲೆಟ್ ಪ್ರೂಫ್ ಕಾರು

ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ಇದೇ ವಾಹನವನ್ನು ಬಳಸುತ್ತಿದ್ದರು. ಪ್ರಧಾನಿಯಾದ ನಂತರ ಪ್ರಧಾನ ಮಂತ್ರಿಯವರ ಅಧಿಕೃತ ವಾಹನವಾದ ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಬಳಸಲು ಶುರು ಮಾಡಿದರು. ದೇಶದಲ್ಲಿರುವ ಬೇರೆ ಪ್ರದೇಶಗಳಿಗೆ ತೆರಳಲು ಮೋದಿಯವರು ಲ್ಯಾಂಡ್ ರೋವರ್ ರೇಂಜ್ ರೋವರ್ ಸೆಂಟಿನಲ್ ಬಳಸುತ್ತಿದ್ದರು.

ಪಿ‍ಎಂರವರಿಗಾಗಿ ಬಂತು ಮತ್ತೊಂದು ಬುಲೆಟ್ ಪ್ರೂಫ್ ಕಾರು

ಮೋದಿಯವರು ಹೆಚ್ಚಾಗಿ ಬುಲೆಟ್ ಪ್ರೂಫ್ ರೇಂಜ್ ರೋವರ್ ಹಾಗೂ ಟೊಯೊಟಾ ಲ್ಯಾಂಡ್ ಕ್ರೂಸರ್‍‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಮೋದಿಯವರು ಬಳಸುತ್ತಿರುವ ಕ್ರೂಸರ್ ಹೊಸ ತಲೆಮಾರಿನ ವಾಹನವಾಗಿದೆ.

ಪಿ‍ಎಂರವರಿಗಾಗಿ ಬಂತು ಮತ್ತೊಂದು ಬುಲೆಟ್ ಪ್ರೂಫ್ ಕಾರು

ಈ ಕ್ರೂಸರ್‍‍ನಲ್ಲಿ 4.5 ಲೀಟರಿನ ವಿ8 ಡೀಸೆಲ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 262 ಬಿ‍ಹೆಚ್‍‍ಪಿ ಪವರ್ ಹಾಗೂ 650 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ವಾಹನವನ್ನು ಬುಲೆಟ್ ಪ್ರೂಫ್ ಮಾಡುವುದರಿಂದ ವಾಹನದ ತೂಕವು ಹೆಚ್ಚಾಗುವ ಕಾರಣಕ್ಕೆ ಬಲಶಾಲಿಯಾದ ಎಂಜಿನ್‍‍ನ ಅಗತ್ಯವಿದೆ.

ಪಿ‍ಎಂರವರಿಗಾಗಿ ಬಂತು ಮತ್ತೊಂದು ಬುಲೆಟ್ ಪ್ರೂಫ್ ಕಾರು

ಈ ಲ್ಯಾಂಡ್ ಕ್ರೂಸರ್‍‍ನಲ್ಲಿ 4X4 ಸಿಸ್ಟಂ ನೀಡಲಾಗಿದ್ದು, ಇದರ ಜೊತೆಗೆ ಹಲವು ಹೈ ಟೆಕ್ ಫೀಚರ್‍‍ಗಳಿದ್ದು, ಕಠಿಣ ರಸ್ತೆಗಳಲ್ಲೂ ಸರಾಗವಾಗಿ ಚಲಿಸುವಂತೆ ಮಾಡುತ್ತದೆ.

Most Read Articles

Kannada
English summary
PM Narendra Modi new car toyota land cruiser worth rs.2 crore - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X