ಬಿಡುಗಡೆಯಾಯ್ತು ಸ್ಕೋಡಾ ಕೊಡಿಯಾಕ್ ಸ್ಕೌಟ್ ಎಸ್‍ಯು‍ವಿ

ಸ್ಕೋಡಾ ಆಟೋ ಇಂಡಿಯಾ, ತನ್ನ ಪ್ರಮುಖ ಎಸ್‍‍ಯು‍‍ವಿಯಾದ ಕೊಡಿಯಾಕ್‍‍ನ ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದೆ. ದೇಶಿಯ ಮಾರುಕಟ್ಟೆ ಪ್ರವೇಶಿಸಿದ ಹೊಸ ಕೊಡಿಯಾಕ್ ಸ್ಕೌಟ್ ಸ್ಕೋಡಾ ಕಂಪನಿಯ ಪ್ರಮುಖ ಎಸ್‍‍ಯು‍ವಿಯಾಗಿದೆ.

ಬಿಡುಗಡೆಯಾಯ್ತು ಸ್ಕೋಡಾ ಕೊಡಿಯಾಕ್ ಸ್ಕೌಟ್ ಎಸ್‍ಯು‍ವಿ

ಹೊಸ ಸ್ಕೋಡಾ ಕೊಡಿಯಾಕ್ ಸ್ಕೌಟ್ ರೂಪಾಂತರವು ಹಲವಾರು ಕಾಸ್ಮೆಟಿಕ್ ನವೀಕರಣಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಕೊಡಿಯಾಕ್ ಸ್ಕೌಟ್‍‍ನಲ್ಲಿ ಮಾರುಕಟ್ಟೆಯಲ್ಲಿರುವ ಎಸ್‍‍ಯುವಿಗಳು ಹೊಂದಿರುವ ಸ್ಟೈಲ್ ಮತ್ತು ಎಲ್ ಅಂಡ್ ಕೆ ಟ್ರಿಮ್‍‍ಗಳನ್ನ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಸ್ಕೋಡಾ ಕೊಡಿಯಾಕ್ ಸ್ಕೌಟ್ ಎಸ್‍ಯು‍ವಿ

ಕೊಡಿಯಾಕ್ ಸ್ಕೌಟ್ ಸಾಮಾನ್ಯ ಕೊಡಿಯಾಕ್ ಎಸ್‍‍ಯು‍ವಿಗಿಂತಲೂ ಅತ್ಯಂತ ಆಫ್-ರೋಡ್ ತಾಂತ್ರಿಕ ವೈಶಿಷ್ಟ್ಯಗಳನ್ನು ಹೊಂದಿರುವ ಮಾದರಿಯಾಗಿದೆ. ಹೊಸ ಎಸ್‌ಯುವಿಯು ಸ್ಟೈಲ್ ಎಂಬ ಮೂಲ ಮಾದರಿ ಹಾಗೂ ಲೌರಿನ್ ಅಂಡ್ ಕ್ಲೆಮೆಂಟ್ ಎಂಬ ಟಾಪ್ ಮಾದರಿಗಳಲ್ಲಿ ಲಭ್ಯವಿದೆ. ಕೊಡಿಯಾಕ್ ಸ್ಕೌಟ್ ಈ ಸೆಗ್‍‍ಮೆಂಟಿನಲ್ಲಿರುವ ಇತರ ಎರಡು ರೂಪಾಂತರಗಳಿಗಿಂತ ಉತ್ತಮವಾದ ಆಫ್-ರೋಡರ್ ಆಗಿರಲಿದೆ.

ಬಿಡುಗಡೆಯಾಯ್ತು ಸ್ಕೋಡಾ ಕೊಡಿಯಾಕ್ ಸ್ಕೌಟ್ ಎಸ್‍ಯು‍ವಿ

ಸ್ಕೋಡಾ ಕೊಡಿಯಾಕ್ ಸ್ಕೌಟ್ ಏಳು ಡ್ರೈವಿಂಗ್ ಮೋಡ್‍‍ಗಳನ್ನು ಹೊಂದಿದೆ. ಕೊಡಿಯಾಕ್ ಸ್ಕೌಟ್ ಎಸ್‍‍ಯು‍‍ವಿಯನ್ನು ಲಾವಾ ಬ್ಲೂ, ಕ್ವಾರ್ಟ್ಜ್ ಗ್ರೇ, ಮೂನ್ ವೈಟ್ ಮತ್ತು ಮ್ಯಾಜಿಕ್ ಬ್ಲ್ಯಾಕ್ ಎಂಬ ನಾಲ್ಕು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಈ ಎಸ್‍‍ಯುವಿಯಲ್ಲಿ 360 ಡಿಗ್ರಿ ಕ್ಯಾಮರವನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಸ್ಕೋಡಾ ಕೊಡಿಯಾಕ್ ಸ್ಕೌಟ್ ಎಸ್‍ಯು‍ವಿ

ಸ್ಕೌಟ್ ಎಸ್‍‍ಯು‍ವಿನಲ್ಲಿ 18 ಇಂಚಿನ ಅಲಾಯ್ ವ್ಹೀಲ್‍‍ಗಳು, ಎಲ್‍ಇ‍ಡಿ ಹೆಡ್‍‍ಲ್ಯಾಂಪ್, ಗ್ರಿಲ್, ರೂಫ್ ರೈಲ್ಸ್, ವಿಂಡೋಸ್ ಮತ್ತು ಒಆರ್‍‍ವಿಎಂ ಹೌಸಿಂಗ್, ಮುಂಭಾಗ ಮತ್ತು ಹಿಂಭಾಗದ ಅಂಡ‍‍ರ್‍‍ಬಾಡಿ ಪ್ರೊಟೆಕ್ಷನ್ ಸೇರಿದಂತೆ ಹಲವಾರು ಫೀಚರ್‍‍ಗಳಿವೆ. ಸ್ಕೋಡಾ ಕೊಡಿಯಾಕ್ ಸ್ಕೌಟ್‍‍ನ ಇಂಟಿರಿಯರ್‍‍ನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ.

ಬಿಡುಗಡೆಯಾಯ್ತು ಸ್ಕೋಡಾ ಕೊಡಿಯಾಕ್ ಸ್ಕೌಟ್ ಎಸ್‍ಯು‍ವಿ

ಸ್ಕೌಟ್ ಇಂಟಿರಿಯರ್ ಪ್ರೀಮಿಯಂ ಲುಕ್ ಅನ್ನು ಹೊಂದಿದೆ. ಇಂಟಿರಿಯರ್‍‍ನಲ್ಲಿ ಸೀಟ್‍ಗಳು, ಏರ್‍‍ಬ್ಯಾಗ್‍ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಪವರ್ ಹೊಂದಾಣಿಕೆ ಮಾಡಬಹುದಾದ ಫ್ರಂಟ್ ಡ್ರೈವರ್ ಮತ್ತು ಪ್ರಯಾಣಿಕರ ಸೀಟ್‍‍ಗಳು ಮತ್ತು ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್‍‍ಗಳಿವೆ.

ಬಿಡುಗಡೆಯಾಯ್ತು ಸ್ಕೋಡಾ ಕೊಡಿಯಾಕ್ ಸ್ಕೌಟ್ ಎಸ್‍ಯು‍ವಿ

ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ 9.2 ಇಂಚಿನ ಟಚ್‍‍ಸ್ಕ್ರೀನ್ ಇನ್ಪೋಟೈನ್‍‍ಮೆಂಟ್ ಸಿಸ್ಟಂ ಅನ್ನು 10 ಸ್ಪೀಕರ್ 575 ಡಬ್ಲ್ಯು ಕ್ಯಾಂಟನ್ ಸೌಂಡ್ ಸಿಸ್ಟಂಗೆ ಜೋಡಿಸಲಾಗಿದೆ. ಸ್ಟ್ಯಾಂಡರ್ಡ್ ಕೊಡಿಯಾಕ್‍‍ನಲ್ಲಿರುವ ಟಯರ್ ಫ್ರೆಶರ್ ಮಾನಿಟರಿಂಗ್ ಸಿಸ್ಟಂ ಮತ್ತು ಆಫ್ ರೋಡ್ ಡ್ರೈವ್ ಮೋಡ್ ವೈಶಿಷ್ಟ್ಯಗಳು ಈ ಟಾಪ್ ಎಂಡ್ ಎಸ್‍‍ಯುವಿಯಲ್ಲಿ ಲಭ್ಯವಿಲ್ಲ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಬಿಡುಗಡೆಯಾಯ್ತು ಸ್ಕೋಡಾ ಕೊಡಿಯಾಕ್ ಸ್ಕೌಟ್ ಎಸ್‍ಯು‍ವಿ

ಮೆಕಾನಿಕಲ್ ವಿಷಯಗಳ ಬಗ್ಗೆ ಹೇಳುವುದಾದರೆ, ಸ್ಕೋಡಾ ಕೊಡಿಯಾಕ್ ಸ್ಕೌಟ್‍‍ನಲ್ಲಿ ಟರ್ಬೊ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. 2.0 ಲೀಟರಿನ ಈ ಡೀಸೆಲ್ ಎಂಜಿನ್ 150 ಬಿಎ‍ಚ್‍ಪಿ ಪವರ್ ಮತ್ತು 340 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಜೊತೆಯಲ್ಲಿ 7-ಸ್ಪೀಡ್ ಡಿ‍ಎಸ್‍‍ಜಿ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಬಿಡುಗಡೆಯಾಯ್ತು ಸ್ಕೋಡಾ ಕೊಡಿಯಾಕ್ ಸ್ಕೌಟ್ ಎಸ್‍ಯು‍ವಿ

ಕೊಡಿಯಾಕ್ ಸ್ಕೌಟ್, ಸ್ಕೋಡಾ ಕಂಪನಿಯ ಪ್ರಮುಖ ಎಸ್‍‍ಯು‍ವಿಯಾಗಿದ್ದು, ಆಫ್-ರೋಡ್ ಆಧಾರಿತವಾಗಿದೆ. ಕೊಡಿಯಾಕ್ ಸ್ಕೌಟ್ ಎಸ್‍‍ಯುವಿ ಮಹೀಂದ್ರಾ ಜಿ4, ಟೊಯೋಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಪೈಪೋಟಿ ನೀಡಲಿದೆ. ಸ್ಕೋಡಾ ಕೊಡಿಯಾಕ್ ಸ್ಟೈಲ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.33.99 ಲಕ್ಷಗಳಾಗಿದೆ. ಲಾರಿನ್ ಮತ್ತು ಕ್ಲೆಮೆಂಟ್ ರೂಪಾಂತರದ ಬೆಲೆ ರೂ.36.78 ಲಕ್ಷಗಳಾಗಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda Kodiaq Scout launched in Inida- Read in Kannada
Story first published: Monday, September 30, 2019, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X