ಬೆಂಗಳೂರಿನಲ್ಲಿ ಪಾಪ್ ಅಪ್ ಸ್ಟೋರ್ ತೆರೆದ ಫೋಕ್ಸ್ ವ್ಯಾಗನ್

ಗ್ರಾಹಕರ ಆಕ್ಸೆ‍‍ಸಿಬಿಲಿಟಿ ಹಾಗೂ ಟಚ್ ಪಾಯಿಂಟ್‍‍ಗಳನ್ನು ಹೆಚ್ಚು ಮಾಡುವ ಉದ್ದೇಶದಿಂದ ಜರ್ಮನಿ ಮೂಲದ ಆಟೋ ಮೋಬೈಲ್ ದೈತ್ಯ, ಫೋಕ್ಸ್ ವ್ಯಾಗನ್ ತನ್ನ ಮೊದಲ ಪಾಪ್ ಅಪ್ ಮತ್ತು ಸಿಟಿ ಸ್ಟೋರ್‍ಅನ್ನು ಬೆಂಗಳೂರಿನಲ್ಲಿ ಉದ್ಘಾಟಿಸಿದೆ.

ಬೆಂಗಳೂರಿನಲ್ಲಿ ಪಾಪ್ ಅಪ್ ಸ್ಟೋರ್ ತೆರೆದ ಫೋಕ್ಸ್ ವ್ಯಾಗನ್

ಬ್ರಾಂಡಿನ ಫಿಟ್ ಫಾರ್ ಫ್ಯೂಚರ್ ಯೋಜನೆಯಡಿ, ಫೋಕ್ಸ್ ವ್ಯಾಗನ್ ಈ ರೀತಿಯ 30 ಹೊಸ ಪಾಪ್ ಅಪ್ ಮತ್ತು ಸಿಟಿ ಸ್ಟೋರ್‍‍ಗಳನ್ನು ದೇಶದ ಪ್ರಮುಖ ನಗರಗಳಲ್ಲಿ ಮುಂದಿನ ವರ್ಷದಲ್ಲಿ ಪ್ರಾರಂಭಿಸಲಿದೆ. ತನ್ನ ತಂತ್ರಗಳ ಮೂಲಕ, ಫೋಕ್ಸ್ ವ್ಯಾಗನ್ ಪಾಪ್ ಅಪ್ ಸ್ಟೋರ್‍‍ಗಳು, ಪ್ರಿಮೀಯಂ ಮೊಬಿಲಿಟಿಯನ್ನು ಗ್ರಾಹಕರಿಗೆ ನೀಡುವ ಗುರಿಯನ್ನು ಹೊಂದಿವೆ. ಕಂಪನಿಯು ಭಾರತದ ಹೃದಯಭಾಗವನ್ನು ಬೆಸೆಯಲು, ಲುಕ್ ಅಂಡ್ ಫೀಲ್ ದಿ ಬ್ರಾಂಡ್ ಅವಕಾಶವನ್ನು ನೀಡಲಿದ್ದು, ಗ್ರಾಹಕರು ಖರೀದಿಸುವ ಆಯ್ಕೆಯನ್ನು ಪಡೆಯಲಿದ್ದಾರೆ.

ಬೆಂಗಳೂರಿನಲ್ಲಿ ಪಾಪ್ ಅಪ್ ಸ್ಟೋರ್ ತೆರೆದ ಫೋಕ್ಸ್ ವ್ಯಾಗನ್

ಭಾರತದಂತಹ ರಾಷ್ಟ್ರದಲ್ಲಿ ಕಾರು ಖರೀದಿಯು ಒಂದು ರೀತಿಯಲ್ಲಿ ಕುಟುಂಬದ ಸಾಮೂಹಿಕ ಒಪ್ಪಂದವಾಗಿದೆ. ಈ ಅನುಭವವನ್ನು ಮತ್ತಷ್ಟು ಆರಾಮದಾಯಕವಾಗಿಸಲು, ಈ ಪಾಪ್ ಅಪ್ ಸ್ಟೋರ್‍‍ಗಳು ಪ್ರಿಮೀಯಂ ಅನುಭವವನ್ನು ಒದಗಿಸಲಿದ್ದು, ದೇಶದಲ್ಲಿನ ಮಾರುಕಟ್ಟೆಯ ಬೆಳವಣಿಗೆಗೆ ಅನುಕೂಲವಾಗಲಿದೆ.

ಬೆಂಗಳೂರಿನಲ್ಲಿ ಪಾಪ್ ಅಪ್ ಸ್ಟೋರ್ ತೆರೆದ ಫೋಕ್ಸ್ ವ್ಯಾಗನ್

ಈ ಸಿಟಿ ಸ್ಟೋರ್‍‍ಗಳು ನಗರ ಪ್ರದೇಶಗಳಲ್ಲಿರುವ ಉತ್ಸಾಹಿ, ಕ್ರಿಯಾಶೀಲ, ಯುವ ಜನಾಂಗವನ್ನು ತನ್ನತ್ತ ಸೆಳೆಯಲಿವೆ. ಈ ಸಿಟಿ ಸ್ಟೋರ್‍‍ಗಳು ಪರಿಣಾಮಕಾರಿಯಾಗಿ, ದಕ್ಷವಾಗಿ, ಲವಲವಿಕೆಯಿಂದ ತಮ್ಮ ಪ್ರಿಮೀಯಂ ಅನುಭವವನ್ನು ನೀಡಲಿವೆ.

ಬೆಂಗಳೂರಿನಲ್ಲಿ ಪಾಪ್ ಅಪ್ ಸ್ಟೋರ್ ತೆರೆದ ಫೋಕ್ಸ್ ವ್ಯಾಗನ್

ಇವುಗಳು ಕಾಗದ ರಹಿತವಾಗಿದ್ದು, ಗ್ರಾಹಕರ ಕೇಳುವ ಮಾಹಿತಿಗಳಿಗೆ ಡಿಜಿಟಲ್ ಟೆಕ್ನಾಲಜಿಯ ಮೂಲಕ ಉತ್ತರಿಸುತ್ತವೆ. ಮಾರಾಟದ ನಂತರ ಸರ್ವಿಸ್‍‍ಗಳನ್ನು, ಹತ್ತಿರದಲ್ಲಿರುವ ಡೀಲರ್‍‍ಗಳು ನಡೆಸುವ ವರ್ಕ್‍‍ಶಾಪ್‍‍ಗಳಲ್ಲಿ ಮಾಡಲಾಗುವುದು. ಈ ಹೊಸ ಯೋಜನೆಯ ಬಗ್ಗೆ ಮಾತನಾಡಿದ, ಫೋಕ್ಸ್ ವ್ಯಾಗನ್ ಪ್ಯಾಸೆಂಜರ್ ಕಾರುಗಳ ನಿರ್ದೇಶಕರಾದ ಸ್ಟೀಫನ್ ಕ್ನಾಪ್‍‍ರವರು, ನಾವು ವ್ಯವಹಾರಿಸುವ ರೀತಿಯು ಹೊಸ ಟೆಕ್ನಾಲಜಿಗಳ ಹಿನ್ನೆಲೆಯಲ್ಲಿ ಬದಲಾಗುತ್ತಿದೆ, ಗ್ರಾಹಕರ ನಿರೀಕ್ಷೆಗಳೂ ಸಹ ಹೆಚ್ಚುತ್ತಿವೆ.

ಬೆಂಗಳೂರಿನಲ್ಲಿ ಪಾಪ್ ಅಪ್ ಸ್ಟೋರ್ ತೆರೆದ ಫೋಕ್ಸ್ ವ್ಯಾಗನ್

ಗ್ರಾಹಕರು ಹೊಸ ಹೊಸ ಆವಿಷ್ಕಾರಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದು, ಇದರ ಬದಲಿಗೆ ಪ್ರಾಮಾಣಿಕ ಹಾಗೂ ಯಾವುದೇ ಸಮಸ್ಯೆಗಳಿಲ್ಲದ ಸೇವೆಯನ್ನು ಫೋಕ್ಸ್ ವ್ಯಾಗನ್‍‍ನಿಂದ ಬಯಸುತ್ತಾರೆ. ಅದರಂತೆ ಫೋಕ್ಸ್ ವ್ಯಾಗನ್ ಸಹ ನಿರಂತರವಾಗಿ ಫಿಟ್ ಫಾರ್ ದಿ ಫ್ಯೂಚರ್ ಯೋಜನೆಗೆ ಕಾರ್ಯನಿರ್ವಹಿಸುತ್ತಿದ್ದು, ತನ್ನ ಮೊದಲ ಪಾಪ್ ಅಪ್ ಮತ್ತು ಸಿಟಿ ಸ್ಟೋರ್ ಅನ್ನು ಕರ್ನಾಟಕದಲ್ಲಿ ಆರಂಭಿಸಿದ್ದೇವೆ ಎಂದು ತಿಳಿಸಿದರು.

MOST READ: 10 ಮಿಲಿಯನ್ ವಾಹನ ಉತ್ಪಾದಿಸಿದ ಯಮಹಾ

ಬೆಂಗಳೂರಿನಲ್ಲಿ ಪಾಪ್ ಅಪ್ ಸ್ಟೋರ್ ತೆರೆದ ಫೋಕ್ಸ್ ವ್ಯಾಗನ್

ಕ್ನಾಪ್‍‍ರವರು, ಗ್ಲೋಬಲ್ ಮಾರುಕಟ್ಟೆಯಲ್ಲಿನ ಡಿಜಿಟಲ್ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದು ನಮ್ಮ ಮಾರಾಟದ ಹೊಸ ವಿಧಾನವಾಗಿದೆ. ಆಟೋಮೋಬೈಲ್ ಪ್ರಪಂಚವು, ಮಾರಾಟ ಮತ್ತು ಮಾರಾಟ ನಂತರದ ಪ್ರಕ್ರಿಯೆಗೆ ಸಂಬಂಧಪಟ್ಟಂತೆ, ಕನೆಕ್ಟೆಡ್ ಮೊಬಿಲಿಟಿ ಸಲ್ಯೂಷನ್‍‍ನೆಡೆಗೆ, ಡಿಜಿಟಲೀಕರಣದೆಡೆ ಸಾಗುತ್ತಿರುವಾಗ, ನಾವು ಸಹ ನಮ್ಮ ಬ್ರಾಂಡ್ ನೀಡುತ್ತಿರುವ ಕೊಡುಗೆಗಳನ್ನು ಬದಲಾಯಿಸುತ್ತೇವೆ. ನಮ್ಮ ಗ್ರಾಹಕರು ಫೋಕ್ಸ್ ವ್ಯಾಗನ್ ನೀಡುವ ಕೊಡುಗೆಗಳಿಂದ ಸಂತಸದಿಂದಿರುತ್ತಾರೆ ಎಂದು ನಂಬಿದ್ದೇವೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಪಾಪ್ ಅಪ್ ಸ್ಟೋರ್ ತೆರೆದ ಫೋಕ್ಸ್ ವ್ಯಾಗನ್

ಫೋಕ್ಸ್ ವ್ಯಾಗನ್ ತನ್ನ ಈ ಯೋಜನೆಯಲ್ಲಿ ಪಿ‍‍ಪಿ‍ಎಸ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಜೊತೆ ಸಹ ಭಾಗಿತ್ವ ಹೊಂದಿದೆ. ಪಿ‍‍ಪಿ‍ಎಸ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಆಟೋಮೋಟಿವ್ ಗ್ರೂಪಿನ ಭಾಗವಾಗಿದ್ದು, ಅಶೋಕ್ ಲೆಲ್ಯಾಂಡ್, ಮಹೀಂದ್ರಾ, ಆಡಿ, ಫೋಕ್ಸ್ ವ್ಯಾಗನ್, ಫೋರ್ಡ್, ರೆನಾಲ್ಟ್, ಜೀಪ್, ಕಿಯಾ ಮೋಟಾರ್ಸ್ ಮತ್ತು ಕೊಬೆಲ್ಕೊ ಕನ್‍‍ಸ್ಟ್ರಕ್ಷನ್ ಗಳನ್ನು ಪ್ರತಿನಿಧಿಸಿ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಕಾರ್ಯಚರಿಸುತ್ತದೆ.

ಬೆಂಗಳೂರಿನಲ್ಲಿ ಪಾಪ್ ಅಪ್ ಸ್ಟೋರ್ ತೆರೆದ ಫೋಕ್ಸ್ ವ್ಯಾಗನ್

ಪಿಪಿ‍ಎಸ್ ಮೋಟಾರ್ಸ್ ಕಾರ್ಯಾಚರಣೆಯ ನೇತೃತ್ವವನ್ನು ರಾಜೀವ್ ಸಾಂಘ್ವಿ ರವರು ವಹಿಸಿದ್ದು, ಇವರು ಫ್ಯಾಮಿಲಿ ಬಿಸಿನೆಸ್ ಅನ್ನು ಉದ್ಯಮವು ಕಠಿಣ ಪರಿಸ್ಥಿತಿಯಲ್ಲಿದ್ದಾಗ ಸೇರಿಕೊಂಡರು, ಮಾರುವ ಹಂತದಲ್ಲಿದ್ದ ಉದ್ಯಮವನ್ನು ಕೊಳ್ಳುವ ಹಂತಕ್ಕೆ ತಂದರು. ಈ ಆಟೋಮೋಟಿವ್ ಗ್ರೂಪ್ 3 ಎಸ್ ಸೌಲಭ್ಯಗಳನ್ನು ಹೊಂದಿರುವ 40 ಕ್ಕೂ ಹೆಚ್ಚು ಶಾಖೆಗಳನ್ನು ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‍‍ಗಳಲ್ಲಿ ಹೊಂದಿದೆ. ಇದರ ಜೊತೆಗೆ 59 ಶೋರೂಂ ಹಾಗೂ ಸರ್ವಿಸ್ ಪಾಯಿಂಟ್‍‍ಗಳು, 48 ಸ್ವತಂತ್ರ ವರ್ಕ್‍‍ಶಾಪ್‍‍ಗಳು ಮತ್ತು 150ಕ್ಕೂ ಹೆಚ್ಚು ಟಚ್ ಪಾಯಿಂಟ್‍‍ಗಳನ್ನು ದೇಶದ ಪಶ್ಚಿಮ ಮತ್ತು ದಕ್ಷಿಣದ ರಾಜ್ಯಗಳಲ್ಲಿ ಹೊಂದಿದೆ.

ಬೆಂಗಳೂರಿನಲ್ಲಿ ಪಾಪ್ ಅಪ್ ಸ್ಟೋರ್ ತೆರೆದ ಫೋಕ್ಸ್ ವ್ಯಾಗನ್

ಬೆಂಗಳೂರಿನಲ್ಲಿನ ಫೋಕ್ಸ್ ವ್ಯಾಗನ್ ಇಂಡಿಯಾದ ಸಹಭಾಗಿತ್ವದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ, ಪಿಪಿ‍ಎಸ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್‍‍ನ ಮ್ಯಾನೇಜಿಂಗ್ ಡೈರೆಕ್ಟರ್, ರಾಜೀವ್ ಸಾಂಘ್ವಿ, ರವರು ಮಾತನಾಡಿ, ಡಿಜಿಟಲ್ ಯುಗದಲ್ಲಿ ಗ್ರಾಹಕರ ಖರೀದಿಯ ಅನುಭವವನ್ನು ಹೆಚ್ಚಿಸಲು, ನಾವು ಈ ವಿಶ್ವ ದರ್ಜೆಯ ಶೋರೂಂ ಅನ್ನು ಬಳಸಿಕೊಳ್ಳಲಿದ್ದೇವೆ, ಈ ಶೋರೂಂನಲ್ಲಿ ಸಾಂಪ್ರಾದಾಯಿಕ ಮತ್ತು ಡಿಜಿಟಲ್ ಮಾದರಿಗಳಿರಲಿದ್ದು, ನಮ್ಮ ಗ್ರಾಹಕರಿಗೆ ಅಪರಿಮಿತ ಮಾರಾಟದ ಅನುಭವವನ್ನು ನೀಡಲಿದ್ದೇವೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಪಾಪ್ ಅಪ್ ಸ್ಟೋರ್ ತೆರೆದ ಫೋಕ್ಸ್ ವ್ಯಾಗನ್

ಫೋಕ್ಸ್ ವ್ಯಾಗನ್‍‍ನ ಸಿಟಿ ಮತ್ತು ಪಾಪ್ ಅಪ್ ಸ್ಟೋರ್‍‍ಗಳು ಈಗ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ಗ್ರಾಹಕ ಅನುಭವಕ್ಕಾಗಿ ಈ ಸ್ಟೋರ್‍‍ಗಳಿಗೆ ಭೇಟಿ ನೀಡಬಹುದಾಗಿದೆ. ಹೊಸ ಪಾಪ್ ಅಪ್ ಸ್ಟೋರ್‍‍ಗಳ ಹೆಚ್ಚುವರಿ ಸೇರ್ಪಡೆಯೊಂದಿಗೆ ಫೋಕ್ಸ್ ವ್ಯಾಗನ್ ಒಟ್ಟಾರೆಯಾಗಿ 119 ಶೋರೂಂಗಳು ಮತ್ತು 113 ವರ್ಕ್ ಶಾಪ್‍‍ಗಳನ್ನು ಭಾರತದ್ಯಂತ 100 ಸಿಟಿಗಳಲ್ಲಿ ಹೊಂದಲಿದೆ.

ಬೆಂಗಳೂರಿನಲ್ಲಿ ಪಾಪ್ ಅಪ್ ಸ್ಟೋರ್ ತೆರೆದ ಫೋಕ್ಸ್ ವ್ಯಾಗನ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಬಹುತೇಕವಾಗಿ ಕಾರುಗಳನ್ನು ಕೊಳ್ಳುವಾಗ ಫ್ಯಾಮಿಲಿಯವರ ಮಾತುಗಳಿಗೆ ಹಾಗೂ ಭಾವನೆಗಳಿಗೆ ಬೆಲೆ ಕೊಡಲಾಗುತ್ತದೆ. ಕಾರು ಕೊಳ್ಳುವಾಗ ಕಾರನ್ನು ಖರೀದಿಸುವವನ ಮಾತಿಗೆ ಮಾತ್ರವಲ್ಲದೇ ಆ ಖರೀದಿದಾರನ ಮನೆಯವರ ಮಾತಿಗೂ ಬೆಲೆ ಕೊಡುವ ಯೋಜನೆಯು ನಿಜಕ್ಕೂ ಅತ್ಯುತ್ತಮವಾಗಿದೆ.

Most Read Articles

Kannada
English summary
Volkswagen Opens Pop-Up Store In Bangalore — Fancy An Experience? - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X