ಬಿಡುಗಡೆಯಾಗಲಿದೆ ಹೊಸ ಫೋರ್ಡ್ ಮಸ್ಟಾಂಗ್ ಕಾರು

ಫೋರ್ಡ್ ಇಂಡಿಯಾ ಕಂಪನಿಯು ಹೊಸ ಮಸ್ಟಾಂಗ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಫೋರ್ಡ್ ಮಸ್ಟಾಂಗ್ ಕಾರು ಭಾರತದಲ್ಲಿ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ.

ಬಿಡುಗಡೆಯಾಗಲಿದೆ ಹೊಸ ಫೋರ್ಡ್ ಮಸ್ಟಾಂಗ್ ಕಾರು

ಹೊಸ ಫೋರ್ಡ್ ಮಸ್ಟಾಂಗ್ ಕಾರು ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಫೋರ್ಡ್ ಕಂಪನಿಯು ಮಸ್ಟಾಂಗ್ ಕಾರನ್ನು ಭಾರತದಲ್ಲಿ ಮೊದಲ ಬಾರಿಗೆ 2016ರಲ್ಲಿ ಬಿಡುಗಡೆಗೊಳಿಸಿದ್ದರು. ಹಿಂದಿನ ಮಸ್ಟಾಂಗ್ ಮಾದರಿಯ 450 ಯುನಿಟ್ ಗಳು ಭಾರತದಲ್ಲಿ ಮಾರಾಟವಾಗಿತ್ತು. ಇನ್ನು ಹೊಸ ಫೋರ್ಡ್ ಮಸ್ಟಾಂಗ್ ಕಾರನ್ನು ಹಿಂದಿನ ಮಾದರಿಗಿಂತ ಸ್ವಲ್ಪ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ. ಇದರಲ್ಲಿ ಬೋನೆಟ್, ಎಸಿ ವೆಂಟ್ಸ್ ಗಳನ್ನು ನವೀಕರಿಸಲಾಗಿದೆ.

ಬಿಡುಗಡೆಯಾಗಲಿದೆ ಹೊಸ ಫೋರ್ಡ್ ಮಸ್ಟಾಂಗ್ ಕಾರು

ಹೊಸ ಮಸ್ಟಾಂಗ್ ಕಾರು ಸಣ್ಣ ಮಟ್ಟದ ನವೀಕರಸಿದ ಫ್ರಂಟ್ ಗ್ರಿಲ್‍ ಅನ್ನು ಹೊಂದಿದೆ. ಹಳೆಯ ಮಾದರಿಗಿಂತ ಹೊಸ ಮಾದರಿಯು ಸ್ಲೀಕರ್ ಆಗಿರಲಿದೆ. ಹೊಸ ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ನವೀಕರಿಸಿದ ಬಂಪರ್‍‍ಗಳನ್ನು ಅಳವಡಿಸಲಾಗಿದೆ. ಮರು ವಿನ್ಯಾಸಗೊಳಿಸಿದ ಹೆಡ್‍‍ಲ್ಯಾಂಪ್‍ಗಳನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಯಾಗಲಿದೆ ಹೊಸ ಫೋರ್ಡ್ ಮಸ್ಟಾಂಗ್ ಕಾರು

ಹೊಸ ಫೋರ್ಡ್ ಮಸ್ಟಾಂಗ್ ಕಾರಿನ ಇಂಟಿರಿಯರ್‍‍ನಲ್ಲಿ 12 ಇಂಚಿನ ಎಲ್‍‍ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍ ಅನ್ನು ಹೊಂದಿದೆ. ಕ್ಯಾಬಿನ್ ಸುತ್ತಲೂ ಸ್ಪಾಟ್ ಟಚ್ ಮ್ಯಾಟಿರಿಯಲ್ ಅನ್ನು ಹೊಂದಿದ್ದು, ವಿಶೇಷವಾಗಿ ಸೆಂಟರ್ ಕನ್ಸೋಲ್ ಮತ್ತು ಡೋರ್‍‍ಗಳಲ್ಲಿ ಹೊಂದಿದೆ.

ಬಿಡುಗಡೆಯಾಗಲಿದೆ ಹೊಸ ಫೋರ್ಡ್ ಮಸ್ಟಾಂಗ್ ಕಾರು

ಹೊಸ ಮಸ್ಟಾಂಗ್‍‍ ಕಾರಿನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಎಲ್‍ಇಡಿ ಲೈಟಿಂಗ್, ಫ್ಲ್ಯಾಟ್ ಬಾಂಟಮ್ ಸ್ಟೀಯರಿಂಗ್ ವ್ಹೀಲ್ ಹಾಗೂ ಇತರ ಕೆಲವು ಸ್ಟ್ಯಾಂಡರ್ಡ್ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಬಿಡುಗಡೆಯಾಗಲಿದೆ ಹೊಸ ಫೋರ್ಡ್ ಮಸ್ಟಾಂಗ್ ಕಾರು

ಹೊಸ ಫೋರ್ಡ್ ಮಸ್ಟಾಂಗ್ ಕಾರಿನಲ್ಲಿ 310 ಬಿಹೆಚ್‌ಪಿ ಉತ್ಪಾದಿಸುವ ಎಂಟ್ರಿ ಲೆವೆಲ್ 2.3-ಲೀಟರ್ ಇಕೋಬೂಸ್ಟ್ ನಾಲ್ಕು ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಇದರೊಂದಿಗೆ 445 ಬಿಹೆಚ್‌ಪಿ ಉತ್ಪಾದಿಸುವ ಮಿಡ್-ಸ್ಪೆಕ್ 5.0-ಲೀಟರ್ ವಿ8 ಎಂಜಿನ್ ಅನ್ನು ಕೂಡ ಹೊಂದಿರುತ್ತದೆ.

ಬಿಡುಗಡೆಯಾಗಲಿದೆ ಹೊಸ ಫೋರ್ಡ್ ಮಸ್ಟಾಂಗ್ ಕಾರು

ಇನ್ನು ಟಾಪ್-ಸ್ಪೆಕ್ ಮಾದರಿಯಲ್ಲಿ 525 ಬಿಹೆಚ್‌ಪಿ ಉತ್ಪಾದಿಸುವ ಜಿಟಿ350 ವಿ8 ಅನ್ನು ಹೊಂದಿರಲಿದೆ. ಈ ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ 10-ಸ್ಫೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಬಹುದು.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಬಿಡುಗಡೆಯಾಗಲಿದೆ ಹೊಸ ಫೋರ್ಡ್ ಮಸ್ಟಾಂಗ್ ಕಾರು

ಹೊಸ ಫೋರ್ಡ್ ಮುಸ್ಟಾಂಗ್‍‍ ಕಾರಿನಲ್ಲಿ ಫೀಚರ್ಸ್‍ ಮತ್ತು ವಿನ್ಯಾಸವನ್ನು ನವೀಕರಿಸಲಾಗಿದೆ. ಹೊಸ ರಿ-ಟ್ಯೂನ್ ಎಂಜಿನ್ ಅನ್ನು ಹೊರತುಪಡಿಸಿ ಹೊಸ ಮುಸ್ಟಾಂಗ್‍‍ನಲ್ಲಿ ಮೂರು ವಿಭಿನ್ನ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ ಬ್ಲೂ, ಆರೇಂಜ್ ಮತ್ತು ರೆಡ್ ಬಣ್ಣಗಳಾಗಿದೆ. ಹೊಸ ಮಸ್ಟಾಂಗ್‍‍‍ನಲ್ಲಿ 19 ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿರಲಿದೆ.

ಬಿಡುಗಡೆಯಾಗಲಿದೆ ಹೊಸ ಫೋರ್ಡ್ ಮಸ್ಟಾಂಗ್ ಕಾರು

ಫೋರ್ಡ್ ಮಸ್ಟಾಂಗ್ ವಿಶ್ವದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಹೊಸ ಫೋರ್ಡ್ ಮುಸ್ಟಾಂಗ್ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಫೋರ್ಡ್ ford
English summary
2020 Ford Mustang Expected India Launch Early Next Year. Read In Kannada.
Story first published: Wednesday, July 15, 2020, 17:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X