ಅನಾವರಣವಾಯ್ತು ಬಹುನೀರಿಕ್ಷಿತ 2021ರ ಆಡಿ ಎಸ್3

ಆಡಿ ಕಂಪನಿಯು ಹೊಸ 2021ರ ಎಸ್3 ಆವೃತ್ತಿಯನ್ನು ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ಮಾದರಿಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗಿದೆ. ಈ ವರ್ಷದ ಕೊನೆಯಲ್ಲಿ ಆಡಿ ಎಸ್3 ಮಾದರಿಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಅನಾವರಣವಾಯ್ತು ಬಹುನೀರಿಕ್ಷಿತ 2021ರ ಆಡಿ ಎಸ್3

ಹೊಸ ಆಡಿ ಎಸ್3 ಮಾದರಿಗಳಲ್ಲಿ ಫೋಕ್ಸ್ ವ್ಯಾಗನ್ ಜಿಟಿಐ ಮತ್ತು ಕುಪ್ರಾ ಲಿಯಾನ್ ಮಾದರಿಗಳಲ್ಲಿರುವಂತಹ 2.0-ಲೀಟರ್, ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಎಸ್3 ಎಂಜಿನ್ 310 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಅಳವಡಿಸಲಾಗಿದೆ. ಆಡಿ ಎಸ್3 ಕೇವಲ 4.8 ಸೆಕೆಂಡುಗಳಲ್ಲಿ 0-100 ಕಿ,ಮೀ ಕ್ರಮಿಸುತ್ತದೆ. ಈ ಎಸ್3 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಅನಾವರಣವಾಯ್ತು ಬಹುನೀರಿಕ್ಷಿತ 2021ರ ಆಡಿ ಎಸ್3

ಸ್ಟ್ಯಾಂಡರ್ಡ್ ಎಸ್3 ಮಾದರಿಯೊಂದಿಗೆ ಪರ್ಫಾಮೆನ್ಸ್ ಮಾದರಿಯ ಸ್ಟೈಲಿಂಗ್ ನಲ್ಲಿಯು ಹಲವು ನವೀಕರಣಗಳನ್ನು ಮಾಡಲಾಗಿದೆ. ಆಡಿ ಎಸ್3 ಮಾದರಿಯಲ್ಲಿ ಮರುವಿನ್ಯಾಸಗೊಳಿಸಲಾದ ಹೆಡ್‌ಲೈಟ್‌ಗಳನ್ನು ಅಳವಡಿಸಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಬಹುನೀರಿಕ್ಷಿತ 2021ರ ಆಡಿ ಎಸ್3

ಆಡಿ ಎಸ್3 ಮಾದರಿಯಲ್ಲಿ ಮ್ಯಾಟ್ರಿಕ್ಸ್ ಎಲ್ಇಡಿ ಸಿಸ್ಟಂನೊಂದಿಗೆ ಹೊಸ ಗ್ರಿಲ್ ಮತ್ತು ಫ್ರಂಟ್ ಸ್ಪ್ಲಿಟರ್ ಮೇಲೆ ದೊಡ್ಡ ಏರ್ ಟೆಕ್ ಗಳನ್ನು ಹೊಂದಿದೆ. ಇನ್ನು ಎಸ್3 ಹಿಂಭಾಗದಲ್ಲಿ ಡಿಫ್ಯೂಸರ್ ಮತ್ತು ಕ್ವಾಡ್-ಎಕ್ಸಿಟ್ ಸ್ಪೋರ್ಟ್ಸ್ ಎಕ್ಸಾಸ್ಟ್ ಒಳಗೊಂಡಿದೆ

ಅನಾವರಣವಾಯ್ತು ಬಹುನೀರಿಕ್ಷಿತ 2021ರ ಆಡಿ ಎಸ್3

ಪರ್ಫಾಮೆನ್ಸ್ ಮಾದರಿಯು ಎ3 ಮಾದರಿಯಂತೆ ಆಕರ್ಷಕ ಇಂಟಿರಿಯರ್ ಅನ್ನು ಹೊಂದಿದೆ. ಈ ಮಾದರಿಯ ಇಂಟಿರಿಯರ್ ನಲ್ಲಿ ಸಣ್ಣ ಗೇರ್ ಸೆಲೆಕ್ಟರ್ ಜೊತೆಗೆ ಹಲವಾರು ಕಾರ್ಬನ್-ಫೈಬರ್ ಅಥವಾ ಅಲ್ಯೂಮಿನಿಯಂ ಅಂಶಗಳನ್ನು ಒಳಗೊಂಡಿದೆ. ಇದರೊಂದಿಗೆ ಡಿಜಿಟಲ್ ಡಿಸ್ಪ್ಲೇ ಹೌಸಿಂಗ್‌ನೊಂದಿಗೆ ನವೀಕರಿಸಿದ ಏರ್ ವೆಂಟ್‌ಗಳನ್ನು ಹೊಂದಿದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಅನಾವರಣವಾಯ್ತು ಬಹುನೀರಿಕ್ಷಿತ 2021ರ ಆಡಿ ಎಸ್3

ಇನ್ನು ಆಡಿ ಎಸ್3 ಇಂಟಿರಿಯರ್ ನಲ್ಲಿ 10.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದನ್ನು 12.3-ಇಂಚಿನ ಆಡಿ ವರ್ಚುವಲ್ ಕಾಕ್‌ಪಿಟ್‌ಗೆ ಅಪ್‌ಗ್ರೇಡ್ ಮಾಡಬಹುದು. ಹೂಸ ತಲೆಮಾರಿನ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಕೈಬರಹದ ಅಕ್ಷರಗಳನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ.

ಅನಾವರಣವಾಯ್ತು ಬಹುನೀರಿಕ್ಷಿತ 2021ರ ಆಡಿ ಎಸ್3

ಇನ್ನು ಲೈವ್ ಟ್ರಾಫಿಕ್ ಡೇಟಾ, ಪಾರ್ಕಿಂಗ್ ಸ್ಪಾಟ್ ಲೊಕೇಟರ್ ಮತ್ತು "ಆಡಿ ಕನೆಕ್ಟ್ ಕೀ" ನಂತಹ ಕನೆಕ್ಟಿವಿಟಿ ಫೀಚರ್ ಗಳನ್ನು ಹೊಂದಿದೆ. ಈ ಕಾರನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮೂಲಕ ಲಾಕ್ ಮಾಡಲು ಮತ್ತು ಅನ್‌ಲಾಕ್ ಮಾಡಬಹುದಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಅನಾವರಣವಾಯ್ತು ಬಹುನೀರಿಕ್ಷಿತ 2021ರ ಆಡಿ ಎಸ್3

ಇನ್ನು ಆಡಿ ಕಂಪನಿಯು ಇತ್ತೀಚೆಗೆ ಆರ್‍ಎಸ್7 ಸ್ಪೋರ್ಟ್‌ಬ್ಯಾಕ್‌ ಮಾದರಿಯನ್ನು ಬಿಡುಗಡೆಗೊಳಿಸುವಾಗ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಆರ್‍ಎಸ್ ಮಾದರಿಯನ್ನು ಬಿಡುಗಡೆಗೊಳಿಸಲು ಯೋಚಿಸಿದೆ ಎಂದು ಹೇಳಿದ್ದರು. ಇದೀಗ ಮತ್ತೊಂದು ಆರ್‍ಎಸ್ ಪರ್ಫಾಮೆನ್ಸ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಅನಾವರಣವಾಯ್ತು ಬಹುನೀರಿಕ್ಷಿತ 2021ರ ಆಡಿ ಎಸ್3

ಆಡಿ ಕಂಪನಿಯು ಹೊಸ ಆರ್‍ಎಸ್ ಕ್ಯೂ8 ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಇದರೊಂದಿಗೆ ಆಡಿ ಎಸ್3 ಮಾದರಿಯನ್ನು ಕೂಡ ಭಾರತದಲ್ಲಿ ಬಿಡುಗಡೆಗೊಳಿಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಆಡಿ audi
English summary
2021 Audi S3 Revealed. Read In Kannada.
Story first published: Friday, August 14, 2020, 11:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X