ಇದು ಮುಖೇಶ್ ಅಂಬಾನಿ ಬಳಿಯಿರುವ ಅತಿ ದುಬಾರಿ ಕಾರು..!

ವಿಶ್ವದ ಅತ್ಯಂತ ಶೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಅವರು ದುಬಾರಿ ಮತ್ತು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. 2020ರ ಹೊಸ ವರ್ಷದ ಆರಂಭದಲ್ಲಿ ಅವರು ಅತಿ ದುಬಾರಿ ಕಾರ್ ಒಂದರಲ್ಲಿ ಪ್ರಯಾಣಿಸುವುದು ಕ್ಯಾಮರಾ ಕಣ್ಣಿಗೆ ಬಿದ್ದಿದೆ.

ಇದು ಮುಖೇಶ್ ಅಂಬಾನಿ ಬಳಿಯಿರುವ ಅತಿ ದುಬಾರಿ ಕಾರು..!

ಮುಖೇಶ್ ಅಂಬಾನಿಯವರ ಬಳಿ ಹಲವಾರು ದುಬಾರಿ ಮತ್ತು ಐಷಾರಾಮಿ ಕಾರುಗಳ ಸಂಗ್ರಹವಿದೆ. ಇದರಲಿ ಮರ್ಸಿಡಿಸ್ ಬೆಂಝ್ ಎಸ್ ಗಾರ್ಡ್, ರೋಲ್ಸ್ ರಾಯ್ಸ್ ಫಾಂಟಮ್ ಡ್ರಾಪ್ ಹೆಡ್ ಕೂಪೆ, ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಹೈ ಸೆಕ್ಯೂರಿಟಿ, ರೋಲ್ಸ್ ರಾಯ್ಸ್ ಕಲಿನನ್, ಬೆಂಟ್ಲಿ ಬೆಂಟಾಯ್ಗ ಮತ್ತು ಲ್ಯಾಂಬೊರ್ಗಿನಿ ಉರುಸ್ ಸೇರಿದಂತೆ ಇನ್ನಿತರ ಐಷಾರಾಮಿ ಕಾರುಗಳು ಮತ್ತು ಸ್ಪೋರ್ಟ್ಸ್ ಕಾರುಗಳು ಸೇರಿವೆ.

ಇದು ಮುಖೇಶ್ ಅಂಬಾನಿ ಬಳಿಯಿರುವ ಅತಿ ದುಬಾರಿ ಕಾರು..!

ಇತ್ತೀಚಿಗೆ ಮುಂಬೈ ನಗರದಲ್ಲಿ ಅತಿ ದುಬಾರಿ ಕಾರು ಆದ ರೋಲ್ಸ್ ರಾಯ್ಸ್ ಫಾಂಟಮ್ 8 ಸೀರಿಸ್ ಎಕ್ಸ್ ಡಂಡ್ ವ್ಹೀಲ್ ಬೇಸ್(ಇಡಬ್ಲ್ಯುಬಿ) ಪ್ರಯಾಣಿಸುವಾಗ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಈ ಕಾರನ್ನು ಕಳೆದ ವರ್ಷ ಆಕಾಶ್ ಅಂಬಾನಿ ಅವರ ವಿವಾಹದ ಸಂದರ್ಭದಲ್ಲಿ ಖರೀದಿಸಲಾಗಿದೆ ಎಂದು ವರದಿಗಳಾಗಿವೆ.

ಇದು ಮುಖೇಶ್ ಅಂಬಾನಿ ಬಳಿಯಿರುವ ಅತಿ ದುಬಾರಿ ಕಾರು..!

ರೋಲ್ಸ್ ರಾಯ್ಸ್ ಫಾಂಟಮ್ 8 ಸೀರಿಸ್ ಎಕ್ಸ್ ಡಂಡ್ ವ್ಹೀಲ್ ಬೇಸ್(ಇಡಬ್ಲ್ಯುಬಿ) ಕಾರಿನ ಅನ್ ರೋಡ್ ಬೆಲೆಯು ರೂ.13.5 ಕೋಟಿಗಳಾಗಿದೆ. ಈ ಕಾರು ಕಸ್ಟಮೈಸ್ ಮಾಡಲಾದ ಮಾದರಿಯಾಗಿದೆ. ಈ ಕಾರು ಮುಖೇಶ್ ಅಂಬಾನಿ ಬಳಿ ಇರುವ ಅತ್ಯಂತ ದುಬಾರಿ ಕಾರು ಆಗಿದೆ.

ಇದು ಮುಖೇಶ್ ಅಂಬಾನಿ ಬಳಿಯಿರುವ ಅತಿ ದುಬಾರಿ ಕಾರು..!

ರೋಲ್ಸ್ ರಾಯ್ಸ್ ಫಾಂಟಮ್ 8 ಸೀರಿಸ್ ಎಕ್ಸ್ ಟೆಂಟೆಡ್ ವ್ಹೀಲ್ ಬೇಸ್(ಇಡಬ್ಲ್ಯುಬಿ) ಕಾರು ವಿಶ್ವದಲ್ಲಿರುವ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನಲ್ಲಿ ಅತ್ಯಾಧುನಿಕ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ.

ಇದು ಮುಖೇಶ್ ಅಂಬಾನಿ ಬಳಿಯಿರುವ ಅತಿ ದುಬಾರಿ ಕಾರು..!

ಹೊಸ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಹೊಸ ಅಲ್ಯೂಮಿನಿಯಂ ಸ್ಪೇಸ್‍ಫ್ರೇಮ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಶೇ.30ರಷ್ಟು ಹೆಚ್ಚಿನ ತೂಕವನ್ನು ಹೊಂದಿದೆ. ಹಿಂದಿನ ಮಾದರಿಗಿಂತ 8 ಎಂಎಂ ಉದ್ದ ಮತ್ತು 29 ಎಂಎಂ ಹೆಚ್ಚು ಅಗಲವನ್ನು ಹೊಂದಿದೆ.

ಇದು ಮುಖೇಶ್ ಅಂಬಾನಿ ಬಳಿಯಿರುವ ಅತಿ ದುಬಾರಿ ಕಾರು..!

ರೋಲ್ಸ್ ರಾಯ್ಸ್ ಫ್ಯಾಂಟರ್ಮ್ ದೊಡ್ಡದಾದ 24 ಸ್ಲ್ಯಾಟ್ ಕ್ರೋಮ್ ಗ್ರಿಲ್, ಹೊಸ ಎಲ್‍ಇಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍ಗಳನ್ನು ಹೊಂದಿದೆ. ಇದರ ಜೊತೆಯಲ್ಲಿ ಎಲ್ಇಡಿ ಡಿ‍ಆರ್‍ಎಲ್ ಮತ್ತು ಎಲ್‍‍ಇಡಿ ಟೇಲ್ ಲ್ಯಾಂಪ್‍‍ಗಳನ್ನು ಒಳಗೊಂಡಿದೆ.

ಇದು ಮುಖೇಶ್ ಅಂಬಾನಿ ಬಳಿಯಿರುವ ಅತಿ ದುಬಾರಿ ಕಾರು..!

ಈ ಕಾರು ಡ್ಯುಯಲ್ ಟೋನ್ ಬಣ್ಣಗಳನ್ನು ಹೊಂದಿದೆ. ಇದಲ್ಲದೆ ಪ್ರತಿ ವಿಂಡೋದಲ್ಲಿ 6 ಎಂಎಂ ಡಬಲ್ ಲೇಯರ್ಡ್ ಸೌಂಡ್ ಪ್ರೂಫ್ ಅನ್ನು ಅಳವಡಿಸಲಾಗಿದೆ. ಹೊಸ ರೋಲ್ಸ್ ರಾಯ್ಸ್ 8 ಸೀರಿಸ್ ಇಡಬ್ಲ್ಯೂಬಿ ಕಾರು 6.975 ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ ವಿ12 ಎಂಜಿನ್ ಅನ್ನು ಹೊಂದಿದೆ.

ಇದು ಮುಖೇಶ್ ಅಂಬಾನಿ ಬಳಿಯಿರುವ ಅತಿ ದುಬಾರಿ ಕಾರು..!

ಈ ಎಂಜಿನ್ 563 ಬಿ‍‍ಹೆಚ್‍‍ಪಿ ಪವರ್ ಮತ್ತು 900 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 8 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಕಾರು ಕೇವಲ 5.4 ಸೆಕೆಂಡುಗಳಲ್ಲಿ ಬರೊಬ್ಬರಿ 100 ಕಿ.ಮೀ ಆಕ್ಸೆಲೆರೇಟ್ ಮಾಡುತ್ತದೆ.

ಇದು ಮುಖೇಶ್ ಅಂಬಾನಿ ಬಳಿಯಿರುವ ಅತಿ ದುಬಾರಿ ಕಾರು..!

ಭಾರತದಲ್ಲಿ ರೋಲ್ಸ್ ರಾಯ್ಸ್ ಬ್ರ್ಯಾಂಡ್ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಹೊಸ ರೋಲ್ಸ್ ರಾಯ್ಸ್ 8 ಸೀರಿಸ್ ಇಡಬ್ಲ್ಯೂಬಿ ಕಾರಿಗೆ 4 ವರ್ಷದ ಸರ್ವಿಸ್ ಮತ್ತು ಪ್ರಾದೇಶಿಕ ವಾರಂಟಿ ಪ್ಯಾಕೇಜ್ ಅನ್ನು ನೀಡಲಾಗುತ್ತದೆ. ಈ ಕಾರು ವಿಶ್ವದ ದುಬಾರಿ ಕಾರುಗಳಲ್ಲಿ ಒಂದಾಗಿದೆ.

Most Read Articles

Kannada
English summary
This Rolls Royce is the most EXPENSIVE car in Ambani’s garage. Read in Kannada.
Story first published: Monday, January 13, 2020, 18:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X