ಭಾರತದಲ್ಲೂ ಬಿಡುಗಡೆಯಾಗಲಿವೆ ಸಿಟ್ರನ್ ನಿರ್ಮಾಣದ ಸಿ4 ಮತ್ತು ಸಿ4 ಎಲೆಕ್ಟ್ರಿಕ್

ಫ್ರೆಂಚ್ ಕಾರು ಉತ್ಪಾದನಾ ಕಂಪನಿಯಾಗಿರುವ ಸಿಟ್ರನ್ ತನ್ನ ಹೊಸ ಕಾರುಗಳ ಮಾರಾಟ ಆರಂಭಕ್ಕೆ ಭಾರತದಲ್ಲಿ ಅಂತಿಮ ಹಂತದ ಸಿದ್ದತೆಯಲ್ಲಿದ್ದು, ಭಾರತದಲ್ಲಿ ಕಾರು ಬಿಡುಗಡೆಗೂ ಮುನ್ನ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ವಿವಿಧ ಮಾದರಿಯ ಹೊಸ ಕಾರುಗಳನ್ನು ಅನಾವರಣಗೊಳಿಸಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ ಸಿಟ್ರನ್ ನಿರ್ಮಾಣದ ಸಿ4 ಮತ್ತು ಸಿ4 ಎಲೆಕ್ಟ್ರಿಕ್

ಯುರೋಪ್ ಮಾರುಕಟ್ಟೆಯಲ್ಲಿನ ಮುಂಚೂಣಿ ಕಾರು ಉತ್ಪಾದನಾ ಕಂಪನಿಯಾಗಿರುವ ಸಿಟ್ರನ್ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದು, ಎಂಟ್ರಿ ಲೆವಲ್ ಕಾರುಗಳಿಂದ ಹಿಡಿದು ಹಲವಾರು ಐಷಾರಾಮಿ ಕಾರುಗಳ ಮಾರಾಟವನ್ನು ಹೊಂದಿದೆ. ಕಾರು ಮಾರಾಟದಲ್ಲಿ ಸುಮಾರು 100 ವರ್ಷಗಳ ಅನುಭವ ಹೊಂದಿರುವ ಸಿಟ್ರನ್ ಕಂಪನಿಯು ಸದ್ಯ ಪಿಎಸ್ಎ ಗ್ರೂಪ್ ಕಂಪನಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ವಿಶ್ವಾದ್ಯಂತ 90ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಾರು ಮಾರಾಟ ಜಾಲ ಹೊಂದಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ ಸಿಟ್ರನ್ ನಿರ್ಮಾಣದ ಸಿ4 ಮತ್ತು ಸಿ4 ಎಲೆಕ್ಟ್ರಿಕ್

ಇದೀಗ ಭಾರತದಲ್ಲೂ ಹೊಸದಾಗಿ ಕಾರು ಮಾರಾಟ ಆರಂಭಿಸಲು ಸಜ್ಜಾಗಿರುವ ಸಿಟ್ರನ್ ಕಂಪನಿಯು ಮೊದಲ ಹಂತದಲ್ಲಿ ಸಿ5 ಏರ್‌ಕ್ರಾಸ್ ಎಸ್‌ಯುವಿ ಮತ್ತು ತದನಂತರದಲ್ಲಿ ಒಂದು ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ ಸಿಟ್ರನ್ ನಿರ್ಮಾಣದ ಸಿ4 ಮತ್ತು ಸಿ4 ಎಲೆಕ್ಟ್ರಿಕ್

ಈ ನಡುವೆ ಸಿಟ್ರನ್ ಕಂಪನಿಯು ಯುರೋಪ್ ಮಾರುಕಟ್ಟೆಗಾಗಿ ತನ್ನ ಜನಪ್ರಿಯ ಸಿ4 ಎಸ್‌ಯುವಿ ಕಾರನ್ನು ಹೊಸ ವಿನ್ಯಾಸದೊಂದಿಗೆ ಅನಾವರಣಗೊಳಿಸಿದ್ದು, ಸಾಮಾನ್ಯ ಕಾರಿನ ಜೊತೆಗೆ ಎಲೆಕ್ಟ್ರಿಕ್ ಮಾದರಿಯನ್ನು ಸಹ ಅಭಿವೃದ್ದಿಗೊಳಿಸಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ ಸಿಟ್ರನ್ ನಿರ್ಮಾಣದ ಸಿ4 ಮತ್ತು ಸಿ4 ಎಲೆಕ್ಟ್ರಿಕ್

ಸಿ4 ಕಾರು ಸುಮಾರು ಯುರೋಪ್ ಮಾರುಕಟ್ಟೆಯಲ್ಲಿ ಸುಮಾರು 92 ವರ್ಷ ಇತಿಹಾಸ ಹೊಂದಿದ್ದು, ಸಿಟ್ರನ್ ಕಂಪನಿಯು ಸಿ4 ಕಾರು ಮಾದರಿಯನ್ನು ಕಾಲಕ್ಕೆ ತಕ್ಕಂತೆ ಹಲವಾರು ಬದಲಾವಣೆ ಪರಿಚಯಿಸುತ್ತ ಮಾರಾಟವನ್ನು ಮುಂದುವರಿಸಿಕೊಂಡು ಬಂದಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ ಸಿಟ್ರನ್ ನಿರ್ಮಾಣದ ಸಿ4 ಮತ್ತು ಸಿ4 ಎಲೆಕ್ಟ್ರಿಕ್

ಇದೀಗ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ನ್ಯೂ ಜನರೇಷನ್ ಸಿ4 ಕಾರು ಮಾದರಿಯನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಯಲ್ಲಿ ಮಾತ್ರವಲ್ಲದೆ ಎಲೆಕ್ಟ್ರಿಕ್ ಆವೃತ್ತಿಯಲ್ಲೂ ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಸಾಮಾನ್ಯ ಸಿ4 ಕಾರು ಇದೇ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದ್ದರೆ ಎಲೆಕ್ಟ್ರಿಕ್ ಕಾರು 2021ರ ಆರಂಭದಲ್ಲಿ ಬಿಡುಗಡೆಯಾಗಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಭಾರತದಲ್ಲೂ ಬಿಡುಗಡೆಯಾಗಲಿವೆ ಸಿಟ್ರನ್ ನಿರ್ಮಾಣದ ಸಿ4 ಮತ್ತು ಸಿ4 ಎಲೆಕ್ಟ್ರಿಕ್

ಸಿ4 ಸಾಮಾನ್ಯ ಕಾರು 1.5-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೋ ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಎಲೆಕ್ಟ್ರಿಕ್ ಮಾದರಿಯು ಪ್ರತಿ ಚಾರ್ಜ್‌ಗೆ 350 ಕಿ.ಮೀ ಮೈಲೇಜ್ ರೇಂಜ್ ಹೊಂದಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ ಸಿಟ್ರನ್ ನಿರ್ಮಾಣದ ಸಿ4 ಮತ್ತು ಸಿ4 ಎಲೆಕ್ಟ್ರಿಕ್

ಹೊಸ ಕಾರುಗಳಲ್ಲಿ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಐಷಾರಾಮಿ ಫೀಚರ್ಸ್‌ಗಳನ್ನು ನೀಡಲಾಗುತ್ತಿದ್ದು, ಸಿ4 ಕಾರು ಮಾದರಿಯು ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗುವುದಿಲ್ಲವಾದರೂ ಮುಂಬರುವ ದಿನಗಳಲ್ಲಿ ಹೊಸ ಕಾರು ದೇಶಿಯ ಮಾರುಕಟ್ಟೆ ಪ್ರವೇಶಿಸುವ ಎಲ್ಲಾ ಸಾಧ್ಯತೆಗಳಿವೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಭಾರತದಲ್ಲೂ ಬಿಡುಗಡೆಯಾಗಲಿವೆ ಸಿಟ್ರನ್ ನಿರ್ಮಾಣದ ಸಿ4 ಮತ್ತು ಸಿ4 ಎಲೆಕ್ಟ್ರಿಕ್

ಭಾರತದಲ್ಲಿ ಸಿ4 ಬಿಡುಗಡೆಗೂ ಮುನ್ನ ಸಿ5 ಏರ್‌ಕ್ರಾಸ್ ಮತ್ತು ಸಿ3 ಏರ್‌ಕ್ರಾಸ್ ಮಾದರಿಯಲ್ಲಿ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಡಲಿದ್ದು, ಭಾರತದಲ್ಲಿ ಸಿಟ್ರನ್ ಹೊಸ ಕಾರುಗಳು 2021ರ ಆರಂಭದಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿವೆ.

Most Read Articles

Kannada
English summary
Citroen C4 & e-C4 SUV Details Revealed. Read in Kannada.
Story first published: Wednesday, July 1, 2020, 19:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X