ನಮ್ಮ ಬೆಂಗಳೂರಿನಲ್ಲಿ ಮೊದಲ ಬಾರಿಗೆ ರೋಡ್ ‌ಟೆಸ್ಟಿಂಗ್ ನಡೆಸಿದ ಡಿಎಸ್7 ಕ್ರಾಸ್‌ಬ್ಯಾಕ್ ಕಾರು

ಯುರೋಪ್ ಮಾರುಕಟ್ಟೆಯ ಎರಡನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಪಿಎಸ್‌ಎ ಗ್ರೂಪ್‌ ತನ್ನ ಜನಪ್ರಿಯ ಕಾರ್ ಬ್ರಾಂಡ್‌ಗಳಾದ ಸಿಟ್ರನ್ ಮತ್ತು ಡಿಎಸ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸಿದ್ದು, ಮೊದಲ ಬಾರಿಗೆ ಡಿಎಸ್7 ಕ್ರಾಸ್‌ಬ್ಯಾಕ್ ಕಾರು ನಮ್ಮ ಬೆಂಗಳೂರಿನಲ್ಲಿ ರೋಡ್ ಟೆಸ್ಟಿಂಗ್ ನಡೆಸಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಬಾರಿಗೆ ರೋಡ್ ‌ಟೆಸ್ಟಿಂಗ್ ನಡೆಸಿದ ಡಿಎಸ್7 ಕ್ರಾಸ್‌ಬ್ಯಾಕ್ ಕಾರು

ಮುಂಬರುವ ಮಾರ್ಚ್ ಅಂತ್ಯಕ್ಕೆ ರಸ್ತೆಗಿಳಿಯಲಿರುವ ಸಿಟ್ರನ್ ಎಸ್‌ಯುವಿ ಕಾರುಬಿಡುಗಡೆಗಾಗಿ ಭರ್ಜರಿ ಸಿದ್ದತೆ ನಡೆಸಿರುವ ಪಿಎಸ್ಎ ಗ್ರೂಪ್ ಸಂಸ್ಥೆಯು ಡಿಎಸ್ ಮತ್ತು ಫ್ಯೂಜ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಯುರೋಪ್ ಮಾರುಕಟ್ಟೆಯಲ್ಲಿ ಸಿಟ್ರನ್, ಡಿಎಸ್ ಮತ್ತು ಫ್ಯೂಜ್ ಕಾರು ಉತ್ಪಾದನಾ ಸಂಸ್ಥೆಗಳು ಪಿಎಸ್ಎ ಗ್ರೂಪ್ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಇದೀಗ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವುದು ಭಾರೀ ಬದಲಾವಣೆ ನೀರಿಕ್ಷಿಸಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಬಾರಿಗೆ ರೋಡ್ ‌ಟೆಸ್ಟಿಂಗ್ ನಡೆಸಿದ ಡಿಎಸ್7 ಕ್ರಾಸ್‌ಬ್ಯಾಕ್ ಕಾರು

ಸಿಟ್ರನ್ ಮತ್ತು ಫ್ಯೂಜ್ ಕಾರುಗಳು ಮಧ್ಯಮ ಕ್ರಮಾಂಕದ ಕಾರು ಮಾದರಿಯಾಗಿ ಮಾರಾಟವಾಗಲಿದ್ದರೆ ಡಿಎಸ್ ಕಾರುಗಳು ಮಾತ್ರ ಐಷಾರಾಮಿ ಸೌಲಭ್ಯಗಳೊಂದಿಗೆ ದುಬಾರಿ ಬೆಲೆಗೆ ಮಾರಾಟಗೊಳ್ಳಲಿವೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಬಾರಿಗೆ ರೋಡ್ ‌ಟೆಸ್ಟಿಂಗ್ ನಡೆಸಿದ ಡಿಎಸ್7 ಕ್ರಾಸ್‌ಬ್ಯಾಕ್ ಕಾರು

ಇದೀಗ ರೋಡ್ ಟೆಸ್ಟಿಂಗ್ ಮಾಡುತ್ತಿರುವ ಡಿಎಸ್7 ಕ್ರಾಸ್‌ಬ್ಯಾಕ್ ಕಾರು ಕೂಡಾ ಐಷಾರಾಮಿ ಎಂಟ್ರಿ ಲೆವಲ್ ಎಸ್‌ಯುವಿ ಮಾದರಿಯಾಗಿದ್ದು, ಬಿಎಂಡಬ್ಲ್ಯು ಎಕ್ಸ್1, ಆಡಿ ಕ್ಯೂ3, ಮರ್ಸಿಡಿಸ್ ಬೆಂಝ್ ಜಿಎಲ್ಎ ಮತ್ತು ವೋಲ್ವೊ ಎಕ್ಸ್‌ಸಿ40 ಕಾರುಗಳಿಗೆ ಪೈಪೋಟಿ ನೀಡಲಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಬಾರಿಗೆ ರೋಡ್ ‌ಟೆಸ್ಟಿಂಗ್ ನಡೆಸಿದ ಡಿಎಸ್7 ಕ್ರಾಸ್‌ಬ್ಯಾಕ್ ಕಾರು

ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲದೇ ಹೈಬ್ರಿಡ್ ವರ್ಷನ್‌ನಲ್ಲೂ ಖರೀದಿಗೆ ಲಭ್ಯವಾಗಲಿರುವ ಡಿಎಸ್7 ಕ್ರಾಸ್‌ಬ್ಯಾಕ್ ಕಾರು ಏಪ್ರಿಲ್ 1ರಿಂದ ಕಡ್ಡಾಯವಾಗಲಿರುವ ಬಿಎಸ್-6 ನಿಯಮದಂತೆಯೇ ಹೊಸ ಎಂಜಿನ್‌ನೊಂದಿಗೆಯೇ ರೋಡ್ ಟೆಸ್ಟಿಂಗ್ ನಡೆಸುತ್ತಿದ್ದು, 1.6-ಲೀಟರ್ ಪೆಟ್ರೋಲ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್‌ ಆಯ್ಕೆಯನ್ನು ಹೊಸ ಕಾರಿನಲ್ಲಿ ಜೋಡಿಸಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಬಾರಿಗೆ ರೋಡ್ ‌ಟೆಸ್ಟಿಂಗ್ ನಡೆಸಿದ ಡಿಎಸ್7 ಕ್ರಾಸ್‌ಬ್ಯಾಕ್ ಕಾರು

ಆದರೆ ಹೈಬ್ರಿಡ್ ಆವೃತ್ತಿಯ ಬಗೆಗೆ ಹೆಚ್ಚಿನ ಮಾಹಿತಿ ಇಲ್ಲವಾದರೂ 1.6-ಲೀಟರ್ ಪೆಟ್ರೋಲ್ ಮಾದರಿಯಲ್ಲೇ ಪ್ಲಗ್ ಇನ್ ಹೈಬ್ರಿಡ್ ಮಾದರಿಯು ಅಭಿವೃದ್ದಿಗೊಂಡಿರುವ ಸಾಧ್ಯತೆಗಳಿದ್ದು, ಮುಂಬರುವ ದಿನಗಳಲ್ಲಿ ಹೊಸ ಕಾರಿನ ಬಗೆಗೆ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿವೆ.

ನಮ್ಮ ಬೆಂಗಳೂರಿನಲ್ಲಿ ಮೊದಲ ಬಾರಿಗೆ ರೋಡ್ ‌ಟೆಸ್ಟಿಂಗ್ ನಡೆಸಿದ ಡಿಎಸ್7 ಕ್ರಾಸ್‌ಬ್ಯಾಕ್ ಕಾರು

ಇನ್ನು ಪಿಎಸ್ಎ ಗ್ರೂಪ್ ಸಂಸ್ಥೆಯು ಸಿಟ್ರನ್, ಡಿಎಸ್ ಮತ್ತು ಫ್ಯೂಜ್ ಹೊಸ ಕಾರುಗಳನ್ನು ಭಾರತದಲ್ಲೇ ಸಂಪೂರ್ಣ ಉತ್ಪಾದನೆ ಮಾಡಲು ಮುಂದಾಗಿದ್ದು, ಸ್ಥಳೀಯ ಸಂಪನ್ಮೂಲ ಬಳಕೆಯೊಂದಿಗೆ ಬೆಲೆ ಇಳಿಕೆಗೆ ಯೋಜನೆ ರೂಪಿಸುತ್ತಿದೆ.

MOST READ: ಮಾಲಿನ್ಯ ತಗ್ಗಿಸಲು ಬೆಂಗಳೂರು ದಂಪತಿಯ ಕಾರ್ಯವನ್ನು ಮೆಚ್ಚಲೇಬೇಕು..!

ನಮ್ಮ ಬೆಂಗಳೂರಿನಲ್ಲಿ ಮೊದಲ ಬಾರಿಗೆ ರೋಡ್ ‌ಟೆಸ್ಟಿಂಗ್ ನಡೆಸಿದ ಡಿಎಸ್7 ಕ್ರಾಸ್‌ಬ್ಯಾಕ್ ಕಾರು

ಭಾರತದಲ್ಲಿ ಸಿಕೆ ಬಿರ್ಲಾ ಗ್ರೂಪ್ ಜೊತೆಗೂಡಿ ಕಾರು ಉತ್ಪಾದನಾ ಮತ್ತು ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡುತ್ತಿರುವ ಪಿಎಸ್ಎ ಗ್ರೂಪ್ ಸಂಸ್ಥೆಯು ಹೊಸ ಕಾರುಗಳ ಬಿಡುಗಡೆಗೂ ಮುನ್ನ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದ್ದು, ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

MOST READ: ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ನಮ್ಮ ಬೆಂಗಳೂರಿನಲ್ಲಿ ಮೊದಲ ಬಾರಿಗೆ ರೋಡ್ ‌ಟೆಸ್ಟಿಂಗ್ ನಡೆಸಿದ ಡಿಎಸ್7 ಕ್ರಾಸ್‌ಬ್ಯಾಕ್ ಕಾರು

ಜೊತೆಗೆ ಹೊಸ ಕಾರುಗಳನ್ನು ಪರಿಚಯಿಸುವುದಕ್ಕೂ ಮುನ್ನ ದೇಶದ 80 ಪ್ರಮುಖ ನಗರಗಳಲ್ಲಿ 'ಎಕ್ಸ್‌ಪಿರೆನ್ಸ್ ಸ್ಟೋರ್'ಗಳನ್ನು ತೆರೆಯಲಿದ್ದು, ಈ ಮೂಲಕ ಗ್ರಾಹಕರನ್ನು ಹೊಸ ಕಾರ್ ಬ್ರಾಂಡ್‌ನತ್ತ ಸೆಳೆಯುವ ಮಾರುಕಟ್ಟೆ ತಂತ್ರಗಳನ್ನು ರೂಪಿಸುತ್ತಿದೆ.

MOST READ: ನಡುರಸ್ತೆಯಲ್ಲೇ ಹೊತ್ತಿ ಉರಿದ ಹೊಚ್ಚ ಹೊಸ ಎಂಜಿ ಹೆಕ್ಟರ್ ಕಾರು..!

ನಮ್ಮ ಬೆಂಗಳೂರಿನಲ್ಲಿ ಮೊದಲ ಬಾರಿಗೆ ರೋಡ್ ‌ಟೆಸ್ಟಿಂಗ್ ನಡೆಸಿದ ಡಿಎಸ್7 ಕ್ರಾಸ್‌ಬ್ಯಾಕ್ ಕಾರು

ಈ ಮೂಲಕ ಮಧ್ಯಮ ಗಾತ್ರದ ಕಾರು ಮಾರಾಟದಲ್ಲಿ ಮಾತ್ರವಲ್ಲದೇ ಐಷಾರಾಮಿ ಕಾರು ಆವೃತ್ತಿಗಳನ್ನು ಸಹ ಬಿಡುಗಡೆಗೆ ಮುಂದಾಗಿರುವ ಪಿಎಸ್ಎ ಗ್ರೂಪ್ ಸಂಸ್ಥೆಯು ಮಹತ್ವದ ಬದಲಾವಣೆಗಾಗಿ ಬೃಹತ್ ಯೋಜನೆ ರೂಪಿಸಿದ್ದು, ಮುಂಬರುವ ದಿನಗಳಲ್ಲಿ ಹೊಸ ಕಾರುಗಳು ಯಾವ ರೀತಿ ಬೇಡಿಕೆ ಪಡೆದುಕೊಳ್ಳಲಿವೆ ಎನ್ನುವುದನ್ನು ಕಾಯ್ದನೋಡಬೇಕಿದೆ.

Most Read Articles

Kannada
English summary
DS7 Crossback Spotted Testing In India. Read more in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X