ವೈರಸ್ ಭೀತಿ: ಕಂಟ್ಯಾಕ್ಟ್ ಲೆಸ್ ಗ್ರಾಹಕರ ಸೇವೆಗಳಿಗಾಗಿ ಡಯಲ್-ಎ-ಫೋರ್ಡ್ ಶುರು

ದೇಶದಲ್ಲಿ ಲಾಕ್‌ಡೌನ್ ಹೊರತಾಗಿಯೂ ಕರೋನಾ ವೈರಸ್ ಸೋಂಕಿತರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಂಕಷ್ಟದ ನಡುವೆಯೂ ಆಟೋ ಉತ್ಪಾದನಾ ಕಂಪನಿಯುಗಳು ಸುರಕ್ಷಿತ ವ್ಯಾಪಾರ-ವಹಿವಾಟು ಕೈಗೊಳ್ಳುವುದು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ.

ಕಂಟ್ಯಾಕ್ಟ್ ಲೆಸ್ ಗ್ರಾಹಕರ ಸೇವೆಗಳಿಗಾಗಿ ಡಯಲ್-ಎ-ಫೋರ್ಡ್ ಶುರು

ಕರೋನಾ ವೈರಸ್ ಭೀತಿ ನಡುವೆಯೂ ಉದ್ಯಮ ವ್ಯವಹಾರಗಳನ್ನು ಸಮರ್ಥವಾಗಿ ನಿಭಾಯಿಸಬೇಕಾದ ಅನಿವಾರ್ಯತೆಗಳಿದ್ದು, ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಗ್ರಾಹಕರ ಜೊತೆಗಿನ ನೇರ ಸಂಪರ್ಕ ತಪ್ಪಿಸುವುದಕ್ಕಾಗಿ ಆನ್‌ಲೈನ್ ವಹಿವಾಟಿನ ಮೇಲೆ ಗಮನಹರಿಸಿವೆ. ಫೋರ್ಡ್ ಕೂಡಾ ಗ್ರಾಹಕರಿಗೆ ಸಂಪರ್ಕ ರಹಿತ ಸೇವೆಗಳನ್ನು ಆರಂಭಿಸಿದ್ದು, ಸೋಂಕು ಹರಡುವಿಕೆಯನ್ನು ತಪ್ಪಿಸಲು ಮನೆಬಾಗಿಲಿಗೆ ಸೇವೆಗಳನ್ನು ನೀಡುತ್ತಿದೆ.

ಕಂಟ್ಯಾಕ್ಟ್ ಲೆಸ್ ಗ್ರಾಹಕರ ಸೇವೆಗಳಿಗಾಗಿ ಡಯಲ್-ಎ-ಫೋರ್ಡ್ ಶುರು

ಮನೆ ಬಾಗಿಲಿಗೆ ಗ್ರಾಹಕರ ಸೇವೆಗಳನ್ನು ನೀಡುವಾಗಲೂ ಸಂಪೂರ್ಣ ಮುಂಜಾಗ್ರತ ವಹಿಸಲಿರುವ ಸಿಯೆಟ್ ಕಂಪನಿಯು ಸಂಪೂರ್ಣ ಸ್ಯಾನಿಟೈಜ್‌ಗೊಂಡ ನಂತರವೇ ಸೇವೆಗಳನ್ನು ನೀಡಲಿದ್ದು, ಸೇವಾ ಪ್ರಕ್ರಿಯೆ ನಂತರವೂ ಸ್ಯಾನಿಟೈಜ್ ಪ್ರಕ್ರಿಯೆ ಮಾಡಿಕೊಡಲಿದೆ.

ಕಂಟ್ಯಾಕ್ಟ್ ಲೆಸ್ ಗ್ರಾಹಕರ ಸೇವೆಗಳಿಗಾಗಿ ಡಯಲ್-ಎ-ಫೋರ್ಡ್ ಶುರು

ಜೊತೆಗೆ ಗ್ರಾಹಕರ ಸೇವೆಗಳಿಗಾಗಿ ಪ್ರತ್ಯೇಕವಾಗಿ ಡಯಲ್-ಇನ್-ಫೋರ್ಡ್ ಎನ್ನುವ ವೆಬ್‌ತಾಣ ಮತ್ತು ಆ್ಯಪ್ ತೆರೆಯಲಾಗಿದ್ದು, ಆ್ಯಪ್ ಮೂಲಕವೇ ಗ್ರಾಹಕರು ತಮ್ಮ ಕಾರುಗಳ ಸೇವೆಗಾಗಿ ಬುಕ್ಕಿಂಗ್ ಮಾಡಬಹುದಾಗಿದೆ.

ಕಂಟ್ಯಾಕ್ಟ್ ಲೆಸ್ ಗ್ರಾಹಕರ ಸೇವೆಗಳಿಗಾಗಿ ಡಯಲ್-ಎ-ಫೋರ್ಡ್ ಶುರು

ಹಾಗೆಯೇ ಸೇವಾ ಶುಲ್ಕಗಳಿಗಾಗಿ ನೇರವಾಗಿ ಹಣ ಸ್ವಿಕರಿಸದೆ ಆನ್‌ಲೈನ್ ಮೂಲಕ ಪಾವತಿಗೆ ಒತ್ತು ನೀಡುತ್ತಿದ್ದು, ಈ ಮೂಲಕ ಸೋಂಕು ಹರಡುವಿಕೆಯನ್ನು ತಡೆಯಲು ಗರಿಷ್ಠ ಮುಂಜಾಗ್ರತ ಕ್ರಮಗಳನ್ನು ವಹಿಸುತ್ತಿದೆ.

ಕಂಟ್ಯಾಕ್ಟ್ ಲೆಸ್ ಗ್ರಾಹಕರ ಸೇವೆಗಳಿಗಾಗಿ ಡಯಲ್-ಎ-ಫೋರ್ಡ್ ಶುರು

ಇನ್ನು ಕರೋನಾ ಮಾಹಾಮಾರಿ ಅಟ್ಟಹಾಸವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಆಟೋ ಉದ್ಯಮದಲ್ಲಿ ಸುರಕ್ಷಿತ ವ್ಯಾಪಾರ-ವಹಿವಾಟು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಇದರಿಂದ ಬಹುತೇಕ ಆಟೋ ಕಂಪನಿಗಳು ಆನ್‌ಲೈನ್ ವಹಿವಾಟಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಕಂಟ್ಯಾಕ್ಟ್ ಲೆಸ್ ಗ್ರಾಹಕರ ಸೇವೆಗಳಿಗಾಗಿ ಡಯಲ್-ಎ-ಫೋರ್ಡ್ ಶುರು

ಗ್ರಾಹಕರು ಕೂಡಾ ವೈರಸ್ ಭಯದಿಂದ ಆನ್‌ಲೈನ್ ಪ್ಲ್ಯಾಟ್‌‌‌ಫಾರ್ಮ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು, ಹೊಸ ಸುರಕ್ಷಾ ಕ್ರಮಗಳಿಂದಾಗಿ ಸಂಕಷ್ಟದ ಪರಿಸ್ಥಿತಿಯಲ್ಲೂ ಆಟೋ ಉದ್ಯಮ ಚಟುವಟಿಕೆಗಳಲ್ಲಿ ಚೇತರಿಕೆ ಕಂಡುಬರುತ್ತಿದೆ.

ಕಂಟ್ಯಾಕ್ಟ್ ಲೆಸ್ ಗ್ರಾಹಕರ ಸೇವೆಗಳಿಗಾಗಿ ಡಯಲ್-ಎ-ಫೋರ್ಡ್ ಶುರು

ಇನ್ನು ದೇಶದಲ್ಲಿ ಕರೋನಾ ವೈರಸ್‌ನಿಂದಾಗಿ ಮುಂಬರುವ ದಿನಗಳಲ್ಲಿ ಹೊಸ ವಾಹನ ಮಾರಾಟ ಪ್ರಮಾಣವು ಹೆಚ್ಚಳವಾಗುವ ನೀರಿಕ್ಷೆಗಳಿದ್ದು, ವೈರಸ್ ಹರಡುವಿಕೆಯನ್ನು ತಪ್ಪಿಸಲು ಬಹುತೇಕರು ಸ್ವಂತ ವಾಹನಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಕಂಟ್ಯಾಕ್ಟ್ ಲೆಸ್ ಗ್ರಾಹಕರ ಸೇವೆಗಳಿಗಾಗಿ ಡಯಲ್-ಎ-ಫೋರ್ಡ್ ಶುರು

ಹೀಗಾಗಿ ಮುಂಬರುವ ದಿನಗಳಲ್ಲಿ ವಾಹನ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ಆಟೋ ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದು, ಫೋರ್ಡ್ ಕೂಡಾ ಮಹೀಂದ್ರಾ ಜೊತೆಗೂಡಿ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.

Most Read Articles

Kannada
Read more on ಫೋರ್ಡ್ ford
English summary
Ford Launched ‘Dial-A-Ford’ Platform. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X