ವಿವಿಧ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಪ್ಯಾಕೇಜ್ ಘೋಷಣೆ ಮಾಡಿದ ಫೋರ್ಡ್

ಫೋರ್ಡ್ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ವಿಸ್ತರಿತ ವಾರಂಟಿ ಪ್ಯಾಕೇಜ್ ಘೋಷಣೆ ಮಾಡಿದ್ದು, ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನ ಮಟ್ಟದ ಕಾರು ಮಾರಾಟ ಗುರಿಹೊಂದಿದೆ.

ವಿವಿಧ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಪ್ಯಾಕೇಜ್ ಘೋಷಣೆ ಮಾಡಿದ ಫೋರ್ಡ್

ಕರೋನಾ ವೈರಸ್ ಪರಿಣಾಮ ಕಳೆದ ಕೆಲ ತಿಂಗಳ ಹಿಂದೆ ಕಾರುಗಳ ಮಾರಾಟದಲ್ಲಿ ಸತತ ಹಿನ್ನಡೆ ಅನುಭವಿಸಿದ್ದ ಕಾರು ಕಂಪನಿಗಳು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಮಾರಾಟದಲ್ಲಿ ಸುಧಾರಣೆ ಕಾಣುತ್ತಿದ್ದು, ಫೋರ್ಡ್ ಕಂಪನಿಯು ಕೂಡಾ ಹೆಚ್ಚಿನ ಮಟ್ಟದ ಕಾರು ಮಾರಾಟ ದಾಖಲಿಸುವ ನೀರಿಕ್ಷೆಯಲ್ಲಿದೆ. ಈ ಹಿನ್ನಲೆ ವಿವಿಧ ಕಾರು ಮಾದರಿಗಳ ಮೇಲೆ ವಿಸ್ತರಿತ ವಾರಂಟಿ ಪ್ಯಾಕೇಜ್ ನೀಡುತ್ತಿರುವ ಫೋರ್ಡ್ ಕಂಪನಿಯು ದೀಪಾವಳಿ ಸಂಭ್ರಮದಲ್ಲಿ ಗರಿಷ್ಠ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.

ವಿವಿಧ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಪ್ಯಾಕೇಜ್ ಘೋಷಣೆ ಮಾಡಿದ ಫೋರ್ಡ್

ಫೋರ್ಡ್ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳ ಖರೀದಿ ಮೇಲೆ 1.50 ಲಕ್ಷ ಕಿ.ಮೀ ಅಥವಾ 6 ವರ್ಷಗಳ ವಾರಂಟಿ ನೀಡುತ್ತಿದ್ದು, ವಾರಂಟಿಯಲ್ಲಿ ಯಾವುದು ಮೊದಲ ಬರುತ್ತದೆಯೊ ಅದು ಅನ್ವಯವಾಗುತ್ತದೆ.

ವಿವಿಧ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಪ್ಯಾಕೇಜ್ ಘೋಷಣೆ ಮಾಡಿದ ಫೋರ್ಡ್

ಈ ಮೂಲಕ ಕಾರು ಖರೀದಿದಾರರಿಗೆ ಗರಿಷ್ಠ ಮಟ್ಟದ ಖಾತ್ರಿ ಯೋಜನೆಗಳನ್ನು ನೀಡುವ ಫೋರ್ಡ್ ಕಂಪನಿಯು ಮರು ಮಾರಾಟ ಮೌಲ್ಯವನ್ನು ಹೆಚ್ಚಿಸಿದ್ದು, ಆಕರ್ಷಕ ಬೆಲೆಗಳಲ್ಲಿ ವಾರಂಟಿ ಪ್ಯಾಕೇಜ್‌ಗಳನ್ನು ಪಡೆದುಕೊಳ್ಳಬಹುದು.

ವಿವಿಧ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಪ್ಯಾಕೇಜ್ ಘೋಷಣೆ ಮಾಡಿದ ಫೋರ್ಡ್

ಇದರ ಜೊತೆಗೆ ಗ್ರಾಹಕರು ಪ್ರಮುಖ ಕಾರು ಮಾದರಿಯ ಮೇಲೆ ಎನಿ ಟೈಮ್ ವಾರಂಟಿಯನ್ನು ಸಹ ಪಡೆದುಕೊಳ್ಳಬಹುದಾಗಿದ್ದು, ಇದು ಒಂದು ವರ್ಷ ಅಥವಾ 20 ಸಾವಿರ ಕಿ.ಮೀ ಮೇಲೆ ಲಭ್ಯವಾಗಲಿದೆ. ಈ ವಾರಂಟಿ ಯೋಜನೆಯಲ್ಲಿ ಗ್ರಾಹಕರು ಕಾರಿನ ಪ್ರಮುಖ ಬಿಡಿಭಾಗಗಳ ಮೇಲೆ ಗರಿಷ್ಠ ವಾರಂಟಿ ಹೊಂದಿರಲಿದ್ದು, ಬಿಡಿಭಾಗಗಳಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ.

ವಿವಿಧ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಪ್ಯಾಕೇಜ್ ಘೋಷಣೆ ಮಾಡಿದ ಫೋರ್ಡ್

ಇನ್ನು ಫೋರ್ಡ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯಾದ ಇಕೋಸ್ಪೋರ್ಟ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಉನ್ನತೀಕರಿಸಿದ್ದು, ಹೊಸ ಫೀಚರ್ಸ್ ಹಿನ್ನಲೆಯಲ್ಲಿ ಕಾರಿನ ಬೆಲೆಯಲ್ಲಿ ಕಳೆದ ವಾರವಷ್ಟೇ ಬೆಲೆ ಹೆಚ್ಚಳ ಪ್ರಕಟಿಸಿದೆ.

ವಿವಿಧ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಪ್ಯಾಕೇಜ್ ಘೋಷಣೆ ಮಾಡಿದ ಫೋರ್ಡ್

ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಬಿಎಸ್-6 ಇಕೋಸ್ಪೋರ್ಟ್ ಮಾದರಿಯಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಶೀಘ್ರದಲ್ಲೇ ಹೊಸ ಕಾರು ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಸಹ ಪಡೆದುಕೊಳ್ಳಲಿದೆ. ಇದಕ್ಕೂ ಮುನ್ನ ಹೊಸ ಕಾರಿನ ಬೆಲೆಯಲ್ಲಿ ವಿವಿಧ ವೆರಿಯೆಂಟ್‌ಗಳ ಬೆಲೆಯನ್ನು ರೂ. 1,500 ಬೆಲೆ ಹೆಚ್ಚಳ ಮಾಡಲಾಗಿದ್ದು, ಕಳೆದ ಜುಲೈನಲ್ಲಿ ಹೊಸ ಕಾರು ರೂ. 13,500 ಬೆಲೆ ಹೆಚ್ಚಳ ಪಡೆದುಕೊಂಡಿತ್ತು.

ವಿವಿಧ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಪ್ಯಾಕೇಜ್ ಘೋಷಣೆ ಮಾಡಿದ ಫೋರ್ಡ್

ಬೆಲೆ ಹೆಚ್ಚಳ ನಂತರ ಹೊಸ ಇಕೋಸ್ಪೋರ್ಟ್ ಕಾರಿನ ಬೆಲೆಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.8.19 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.11.73 ಲಕ್ಷ ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಬಿಎಸ್-6 ಎಂಜಿನ್ ಜೋಡಣೆ ನಂತರ ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ.

ವಿವಿಧ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಪ್ಯಾಕೇಜ್ ಘೋಷಣೆ ಮಾಡಿದ ಫೋರ್ಡ್

ಫೋರ್ಡ್ ಇಕೋಸ್ಪೋರ್ಟ್ ಕಾರು ಮಾದರಿಯು ಬಿಎಸ್-6 ಎಂಜಿನ್ ಜೋಡಣೆ ನಂತರ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹೊಸ ಕಾರಿನಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ವಿವಿಧ ಕಾರುಗಳ ಮೇಲೆ ವಿಸ್ತರಿತ ವಾರಂಟಿ ಪ್ಯಾಕೇಜ್ ಘೋಷಣೆ ಮಾಡಿದ ಫೋರ್ಡ್

ಪ್ರತಿ ಮಾದರಿಯಲ್ಲೂ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಆಕರ್ಷಕ ಪ್ರೀಮಿಯಂ ಫೀಚರ್ಸ್ ಮತ್ತು ಸುರಕ್ಷಾ ಸೌಲಭ್ಯಗಳನ್ನು ಒಳಗೊಂಡಿದೆ. ಹೊಸ ಕಾರಿನಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಕೆಲವು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಶೀಘ್ರದಲ್ಲೇ ಹೊಸ ಕಾರು ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಪಡೆದುಕೊಳ್ಳಲಿದೆ.

Most Read Articles

Kannada
Read more on ಫೋರ್ಡ್ ford
English summary
Ford Introduced 6 Years Extended Warranty Package. Read in Kannada.
Story first published: Sunday, November 1, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X