ಪ್ರಮುಖ ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿ ಬ್ಯಾಟರಿ ಉತ್ಪಾದನೆ ಕೈಗೊಳ್ಳಲಿದೆ ಫೋರ್ಡ್

ವಿಶ್ವದ ಪ್ರಮುಖ ಕಾರು ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಫೋರ್ಡ್ ಭವಿಷ್ಯದ ವಾಹನ ಮಾದರಿಗಳ ಅಭಿವೃದ್ದಿಯತ್ತ ಮಹತ್ವದ ಹೆಜ್ಜೆಯಿರಿಸುತ್ತಿದ್ದು, ವಿವಿಧ ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿ ಸ್ವಂತ ಬ್ಯಾಟರಿ ಉತ್ಪಾದನಾ ಘಟಕವನ್ನು ತೆರೆಯುವ ಸಿದ್ದತೆ ನಡೆಸಿದೆ.

ಪ್ರಮುಖ ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿ ಬ್ಯಾಟರಿ ಉತ್ಪಾದನೆ ಕೈಗೊಳ್ಳಲಿದೆ ಫೋರ್ಡ್

ವಿಶ್ವಾದ್ಯಂತ ಪ್ರಮುಖ ರಾಷ್ಟ್ರಗಳಲ್ಲಿ 2030ರಿಂದ ಕಡ್ಡಾಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಘೋಷಣೆ ಮಾಡಿದ್ದು, ಫೋರ್ಡ್ ಕೂಡಾ ಹೊಸ ವಾಹನಗಳ ಉತ್ಪಾದನೆಗಾಗಿ ಈಗಾಗಲೇ ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಿದೆ. ಆದರೆ ಎಲೆಕ್ಟ್ರಿಕ್ ವಾಹನಗಳ ಪ್ರಮುಖ ತಾಂತ್ರಿಕ ಅಂಶವಾಗಿರುವ ಬ್ಯಾಟರಿ ಸಂಪನ್ಮೂಲವು ಇವಿ ವಾಹನಗಳ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ಬ್ಯಾಟರಿ ಸಂಪನ್ಮೂಲಕ್ಕಾಗಿ ಸ್ವಂತ ಘಟಕಗಳನ್ನು ಹೊಂದುವುದು ಆಟೋ ಉತ್ಪಾದನಾ ವರವಾಗಲಿದೆ.

ಪ್ರಮುಖ ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿ ಬ್ಯಾಟರಿ ಉತ್ಪಾದನೆ ಕೈಗೊಳ್ಳಲಿದೆ ಫೋರ್ಡ್

ಜೊತೆಗೆ ಬ್ಯಾಟರಿ ಸಂಪನ್ಮೂಲಕ್ಕಾಗಿ ಬಹುತೇಕ ಆಟೋ ಕಂಪನಿಗಳು ಚೀನಿ ಮತ್ತು ತೈವಾನ್ ಕಂಪನಿಗಳನ್ನೇ ನೆಚ್ಚಿಕೊಂಡಿರುವುದು ಕೂಡಾ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ಭವಿಷ್ಯದಲ್ಲಿ ಚೀನಿ ಮಾರುಕಟ್ಟೆಯನ್ನು ನೆಚ್ಚಿಕೊಳ್ಳುವುದು ಆಟೋ ಕಂಪನಿಗಳಿಗೆ ಭಾರೀ ಹೊಡೆತ ನೀಡಲಿದೆ.

ಪ್ರಮುಖ ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿ ಬ್ಯಾಟರಿ ಉತ್ಪಾದನೆ ಕೈಗೊಳ್ಳಲಿದೆ ಫೋರ್ಡ್

ಈ ಹಿನ್ನಲೆಯಲ್ಲಿ ಪ್ರಮುಖ ಆಟೋ ಕಂಪನಿಗಳು ವಾಹನಗಳ ಬೇಡಿಕೆಯ ಆಧಾರದ ಮೇಲೆ ಆಯಾಕಟ್ಟಿನ ಪ್ರದೇಶಗಳಲ್ಲಿ ತಮ್ಮದೆ ಸ್ವಂತ ಬ್ಯಾಟರಿ ಉತ್ಪಾದನಾ ಘಟಕಗಳನ್ನು ತೆರೆಯಲು ಮುಂದಾಗುತ್ತಿದ್ದು, ಅಮೆರಿಕದ ಫೋರ್ಡ್ ಕಂಪನಿಯು ಕೂಡಾ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ.

ಪ್ರಮುಖ ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿ ಬ್ಯಾಟರಿ ಉತ್ಪಾದನೆ ಕೈಗೊಳ್ಳಲಿದೆ ಫೋರ್ಡ್

ಹೊಸ ಬ್ಯಾಟರಿ ಉತ್ಪಾದನಾ ಘಟಕವನ್ನು ಎಲ್ಲಿ ತೆರೆಯಲಿದೆ ಎನ್ನುವ ಬಗೆಗೆ ಇನ್ನು ಕೂಡಾ ಯಾವುದೇ ಮಾಹಿತಿಗಳನ್ನು ಬಿಟ್ಟುಕೊಡದ ಫೋರ್ಡ್ ಕಂಪನಿಯು ಶೀಘ್ರದಲ್ಲೇ ಬ್ಯಾಟರಿ ಉತ್ಪಾದನಾ ಘಟಕದ ಉತ್ಪಾದನೆಗೆ ಚಾಲನೆ ನೀಡಲಿದ್ದು, ಮುಂಬರುವ 2 ವರ್ಷಗಳ ಅವಧಿಯಲ್ಲಿ ವಿವಿಧ ಕಾರ್ ಬ್ರಾಂಡ್‌ಗಳ ಅಡಿಯಲ್ಲಿ ಎಲೆಕ್ಟ್ರಿಕ್ ವರ್ಷನ್ ಬಿಡುಗಡೆ ಮಾಡಲಿದೆ.

ಪ್ರಮುಖ ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿ ಬ್ಯಾಟರಿ ಉತ್ಪಾದನೆ ಕೈಗೊಳ್ಳಲಿದೆ ಫೋರ್ಡ್

ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂತಲೂ ದುಪ್ಪಟ್ಟು ಬೆಲೆ ಹೊಂದಿರುವ ಎಲೆಕ್ಟ್ರಿಕ್ ಕಾರುಗಳು ದುಬಾರಿ ಬೆಲೆಯಿಂದಾಗಿ ಗ್ರಾಹಕ ಬೇಡಿಕೆಯಲ್ಲಿ ಹಿನ್ನಡೆ ಅನುಭವಿಸಿದ್ದು, ಕಾರಿನ ಪ್ರಮುಖ ತಾಂತ್ರಿಕ ಅಂಶವಾಗಿರುವ ಬ್ಯಾಟರಿ ಸಂಪನ್ಮೂಲಕ್ಕಾಗಿ ವಿದೇಶಿ ಮಾರುಕಟ್ಟೆಗಳನ್ನು ಅವಲಂಭಿಸಿರುವುದೇ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಪ್ರಮುಖ ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿ ಬ್ಯಾಟರಿ ಉತ್ಪಾದನೆ ಕೈಗೊಳ್ಳಲಿದೆ ಫೋರ್ಡ್

ಈ ಹಿನ್ನಲೆಯಲ್ಲಿ ಫೋರ್ಡ್ ಸೇರಿದಂತೆ ಪ್ರಮುಖ ಆಟೋ ಕಂಪನಿಗಳು ಸಹಭಾಗೀತ್ವ ಯೋಜನೆ ಅಡಿ ಬ್ಯಾಟರಿ ಉತ್ಪಾದನಾ ಘಟಕಗಳನ್ನು ತೆರೆಯುತ್ತಿದ್ದು, ಇದರಿಂದ ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನು ಕಡಿತಗೊಳಿಸಲು ಸಹಕಾರಿಯಾಗಲಿದೆ.

ಪ್ರಮುಖ ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿ ಬ್ಯಾಟರಿ ಉತ್ಪಾದನೆ ಕೈಗೊಳ್ಳಲಿದೆ ಫೋರ್ಡ್

ಇನ್ನು ಅತಿಯಾದ ಮಾಲಿನ್ಯವು ಹೊಸ ಹೊಸ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದ್ದು, ಮಾಲಿನ್ಯ ಸಮಸ್ಯೆಗೆ ಹಲವಾರು ಕಾರಣಗಳಿವೆ. ಇದರಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಬಳಕೆ ಕೂಡಾ ಪ್ರಮುಖ ಕಾರಣವಾಗಿದ್ದು, ಭವಿಷ್ಯದ ದೃಷ್ಠಿಯಿಂದ 2030ರ ವೇಳೆ ಹಲವು ರಾಷ್ಟ್ರಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರವೇ ಮಾರಾಟ ಮಾಡಲು ಅವಕಾಶ ನೀಡಲಿವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಪ್ರಮುಖ ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿ ಬ್ಯಾಟರಿ ಉತ್ಪಾದನೆ ಕೈಗೊಳ್ಳಲಿದೆ ಫೋರ್ಡ್

ಇದಕ್ಕಾಗಿಯೇ ಈಗಿನಿಂದಲೇ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಪ್ರೋತ್ಸಾಹಿಸಲಾಗುತ್ತಿದ್ದು, ಭಾರತದಲ್ಲೂ ಅತಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಮಾಲಿನ್ಯ ಸಮಸ್ಯೆಗೆ ಎಲೆಕ್ಟ್ರಿಕ್ ವಾಹನ ಬಳಕೆಯು ಮಹತ್ವದ ಪರಿಹಾರ ಕ್ರಮವಾಗಲಿದೆ.

Most Read Articles

Kannada
Read more on ಫೋರ್ಡ್ ford
English summary
Ford Plans To Manufacture Batteries For Its Electric Vehicles. Read in Kannada.
Story first published: Saturday, November 21, 2020, 17:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X