ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದ ಹ್ಯುಂಡೈ ಕೋನಾ

ಹ್ಯುಂಡೈ ಮೋಟಾರ್ಸ್ ಕಂಪನಿಯ ಎಲೆಕ್ಟ್ರಿಕ್ ಎಸ್‍‍ಯುವಿ ತನ್ನ ಹೆಸರನ್ನು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍‍ಗೆ ಸೇರ್ಪಡೆಗೊಳಿಸಿ ಕೊಂಡಿದೆ. ಸ್ವದೇಶಿ ನಿರ್ಮಿತ ಈ ಎಲೆಕ್ಟ್ರಿಕ್ ಕಾರು ಟಿಬೆಟ್‍‍ನಲ್ಲಿರುವ 5,731 ಮೀಟರ್ ಎತ್ತರದ ಸವುಲಾ ಪಾಸ್ ಅನ್ನು ಏರಿದೆ.

ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದ ಹ್ಯುಂಡೈ ಕೋನಾ

ಈ ಹಿಂದೆ ನಿಯೊ ಇ‍ಎಸ್ 8 ಕಾರು, 5,715.28 ಮೀಟರ್ ಎತ್ತರವನ್ನು ಏರಿ ದಾಖಲೆಯನ್ನು ನಿರ್ಮಿಸಿತ್ತು. ಈ ದಾಖಲೆಯನ್ನು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಅಳಿಸಿ ಹಾಕಿದೆ. ಇದರ ಬಗ್ಗೆ ಹ್ಯುಂಡೈ ಇಂಡಿಯಾದ ಎಂಡಿ ಹಾಗೂ ಸಿ‍ಇ‍ಒ ಎಸ್ಎಸ್ ಕಿಮ್‍‍ರವರು ಸಂತಸ ವ್ಯಕ್ತಪಡಿಸಿದ್ದಾರೆ.

ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದ ಹ್ಯುಂಡೈ ಕೋನಾ

ಈ ಬಗ್ಗೆ ಮಾತನಾಡಿರುವ ಅವರು, ಹ್ಯುಂಡೈ ಕೋನಾ ಕಾರು ಎಮಿಷನ್ ಇಂಪಾಸಿಬಲ್ ಮಿಷನ್ ಅಡಿಯಲ್ಲಿ ಈ ದಾಖಲೆಯನ್ನು ನಿರ್ಮಿಸಿದೆ. ಕೋನಾ ಈ ಸಾಧನೆಯನ್ನು ಮಾಡುವಾಗ ಯಾವುದೇ ತೊಂದರೆಯಾಗಲಿಲ್ಲ ಎಂದು ತಿಳಿಸಿದರು.

ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದ ಹ್ಯುಂಡೈ ಕೋನಾ

ಈ ಕಾರು ಟೆಕ್ನಾಲಜಿಯ ಪ್ರಪಂಚದಲ್ಲಿ ಒಂದು ಹೊಸ ಐಕಾನ್ ಆಗಿದೆ. ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ 452 ಕಿ.ಮೀ ಚಲಿಸುವ ಹ್ಯುಂಡೈ ಕೋನಾ ಕಾರು ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಸೆಳೆಯಲಿದೆ ಎಂದು ಅವರು ಹೇಳಿದರು.

ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದ ಹ್ಯುಂಡೈ ಕೋನಾ

ದೂರ ಸಾಗಲು ಯಾವುದೇ ರೀತಿಯ ತೊಂದರೆಯಾಗದಂತೆ ಮಾಡಲು ಕೋನಾ ಕಾರ್ ಅನ್ನು ಖರೀದಿಸುವ ಗ್ರಾಹಕರಿಗೆ ಎರಡು ಚಾರ್ಜರ್‍‍ಗಳನ್ನು ನೀಡಲಾಗುವುದು. ಇವುಗಳಲ್ಲಿ ಪೋರ್ಟಬಲ್ ಚಾರ್ಜರ್ ಹಾಗೂ ಎಸಿ ವಾಲ್ ಬಾಕ್ಸ್ ಚಾರ್ಜರ್‍‍ಗಳಿರಲಿವೆ.

ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದ ಹ್ಯುಂಡೈ ಕೋನಾ

ಆಯ್ದ ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು ಹಾಗೂ ಚೆನ್ನೈಗಳಲ್ಲಿ ಸ್ಪೇಷಲ್ ಎಲೆಕ್ಟ್ರಿಕ್ ಕಾರ್ನರ್ ಹೊಂದಿರುವ ಪವರ್ ಕನ್ವರ್ಟರ್‍‍ಗಳನ್ನು ನೀಡಲಾಗುವುದು. ಇದರಿಂದಾಗಿ ಎಮರ್ಜೆನ್ಸಿ ಸಂದರ್ಭಗಳಲ್ಲಿ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಕಿಮ್‍‍ರವರು ಹೇಳಿದರು.

ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದ ಹ್ಯುಂಡೈ ಕೋನಾ

ಹ್ಯುಂಡೈ ಮೋಟಾರ್ಸ್ ಕಂಪನಿಯು ಕೋನಾ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವ ಡೀಲರ್‍‍ಶಿಪ್‍‍ಗಳಲ್ಲಿ ಗ್ರಾಹಕರ ಅನುಕೂಲಕ್ಕಾಗಿ 7.2 ಕಿ.ವ್ಯಾ ಎಸಿ ಚಾರ್ಜಿಂಗ್‍‍ಗಳನ್ನು ಸ್ಥಾಪಿಸಲಿದೆ.

ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದ ಹ್ಯುಂಡೈ ಕೋನಾ

ಗಿನ್ನಿಸ್ ವರ್ಲ್ಡ್ ರೆಕಾರ್ಡ್‍‍ನ ಅಧಿಕಾರಿಗಳಾದ ರಿಷಿನಾಥ್‍‍ರವರು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರ್ ಅನ್ನು ಈ ಸಾಧನೆ ಮಾಡಿದ್ದಕ್ಕೆ ಅಭಿನಂದಿಸಿದ್ದಾರೆ. ಈ ಎಲೆಕ್ಟ್ರಿಕ್ ಕಾರು ಹೆಚ್ಚು ಎತ್ತರವನ್ನು ಏರುವ ಮೂಲಕ ಹೊಸ ಸಾಧನೆ ಮಾಡಿದೆ ಎಂದು ಅವರು ಹೇಳಿದರು.

ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದ ಹ್ಯುಂಡೈ ಕೋನಾ

ಕೋನಾ ಎಲೆಕ್ಟ್ರಿಕ್ ಕಾರು 2019ರ ನಾರ್ಥ್ ಅಮೇರಿಕಾ ಯುಟಿಲಿಟಿ ವೆಹಿಕಲ್ ಪ್ರಶಸ್ತಿಯನ್ನು ಪಡೆದಿದೆ. ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನಲ್ಲಿ 39.2 ಕಿ.ವ್ಯಾನ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿ 134 ಬಿ‍‍ಹೆಚ್‍‍ಪಿ ಪವರ್ ಹಾಗೂ 395 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದ ಹ್ಯುಂಡೈ ಕೋನಾ

ಈ ಎಸ್‍‍ಯುವಿ 0-100 ಕಿ.ಮೀ ವೇಗವನ್ನು ಕೇವಲ 9.7 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಎ‍ಆರ್‍ಎ‍ಐ ಪ್ರಮಾಣ ಪತ್ರದ ಪ್ರಕಾರ ಈ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಚ್ ಮಾಡಿದರೆ 452 ಕಿ.ಮೀ ದೂರ ಚಲಿಸುತ್ತದೆ.

ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದ ಹ್ಯುಂಡೈ ಕೋನಾ

ಕೋನಾ ಎಲೆಕ್ಟ್ರಿಕ್ ಕಾರ್ ಅನ್ನು ಸಿಸಿ‍ಎಸ್ ಟೈಪ್ 2 ಚಾರ್ಜಿಂಗ್ ಪೋರ್ಟ್‍ನಿಂದ ಕೇವಲ 57 ನಿಮಿಷಗಳಲ್ಲಿ 80%ನಷ್ಟು ಚಾರ್ಜ್ ಮಾಡಬಹುದು. ಈ ಕಾರ್ ಅನ್ನು 7.2 ಕಿ.ವ್ಯಾ ಟೈಪ್ 2 ನಲ್ಲೂ ಚಾರ್ಜ್ ಮಾಡಬಹುದು. ಇದರಿಂದ ಬ್ಯಾಟರಿಯನ್ನು 6 ಗಂಟೆ 10 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಚ್ ಮಾಡಬಹುದು.

Most Read Articles

Kannada
English summary
Hyundai Kona creates Guinness Record. Read in Kannada.
Story first published: Saturday, January 18, 2020, 14:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X