ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಇಸುಝು ಎಂಯು-ಎಕ್ಸ್ ಎಸ್‍ಯುವಿ

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಇಸುಝು ಮೋಟಾರ್ಸ್ ತನ್ನ ಎಂಯು-ಎಕ್ಸ್ ಎಸ್‍ಯುವಿಯನ್ನು ಥೈಲ್ಯಾಂಡ್‌‌ನಲ್ಲಿ ಬಿಡುಗಡೆಗೊಳಿಸಿದೆ. ಹಲವು ಹೊಸ ನವೀಕರಣಗಳೊಂದಿಗೆ ಎಂಯು-ಎಕ್ಸ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಾಗಿದೆ.

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಇಸುಝು ಎಂಯು-ಎಕ್ಸ್ ಎಸ್‍ಯುವಿ

ಈ ಹೊಸ ಇಸುಝು ಎಂಯು-ಎಕ್ಸ್ ಎಸ್‍ಯುವಿ ಬ್ರೌನ್ ಮರ್ರಕೇಶ್ ಬ್ರೌನ್, ಡೊಲೊಮೈಟ್ ವೈಟ್ ಪರ್ಲ್, ರೆಡ್ ಎಟ್ನಾ ರೆಡ್, ಬವೇರಿಯನ್ ಬ್ಲ್ಯಾಕ್ ಮೈಕಾ, ಗ್ರೇ ಐಸ್ಬರ್ಗ್ ಸಿಲ್ವರ್ ಮತ್ತು ಬೋಹೀಮಿಯನ್ ಸಿಲ್ವರ್ ಮೆಟಾಲಿಕ್ ಎಂಬ ಆರು ಬಣ್ಣ ಆಯ್ಕೆಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಎಂಯು-ಎಕ್ಸ್ ಎಸ್‍ಯುವಿಯ ಹೊರಭಾಗದಲ್ಲಿ ಮತ್ತು ಇಂಟಿರಿಯರ್ ನಲ್ಲಿ ಹಲವು ನವೀಕರಣಗಳನ್ನು ಮಾಡಲಾಗಿದೆ. ಇದೇ ಹೊಸ ಎಂಯು-ಎಕ್ಸ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಇಸುಝು ಎಂಯು-ಎಕ್ಸ್ ಎಸ್‍ಯುವಿ

ಈ ಹೊಸ ಎಂಯು-ಎಕ್ಸ್ ಎಸ್‍ಯುವಿ 4,850 ಎಂಎಂ ಉದ್ದ, 1,870 ಎಂಎಂ ಅಗಲ ಮತ್ತು 1,875 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಹೊಸ ವ್ಹೀಲ್‌ಬೇಸ್ 2,855 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಇಸುಝು ಎಂಯು-ಎಕ್ಸ್ ಎಸ್‍ಯುವಿ

ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಎಂಯು-ಎಕ್ಸ್ ಎಸ್‍ಯುವಿ 25 ಎಂಎಂ ಉದ್ದ, 10 ಎಂಎಂ ಅಗಲ, 15 ಎಂಎಂ ಎತ್ತರ ಮತ್ತು 10 ಎಂಎಂ ವ್ಹೀಲ್‌ಬೇಸ್ ಅಷ್ಟು ಹೆಚ್ಚಿಸಲಾಗಿದೆ. ಈ ಎಸ್‍ಯುವಿಯ ಫ್ಯೂಯಲ್ ಟ್ಯಾಂಕ್ 80 ಲೀಟರ್ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಇಸುಝು ಎಂಯು-ಎಕ್ಸ್ ಎಸ್‍ಯುವಿ

ಹೊಸ ಎಂಯು-ಎಕ್ಸ್ ಎಸ್‍ಯುವಿಯಲ್ಲಿ 1.9-ಲೀಟರ್ ವಿಜಿಎಸ್ ಟರ್ಬೊ ಸಿಆರ್‌ಡಿಐ 16ವಿ ಡಿಒಹೆಚ್‌ಸಿ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 3,600 ಆರ್‌ಪಿಎಂನಲ್ಲಿ 150 ಬಿಹೆಚ್‍ಪಿ ಪವರ್ ಮತ್ತು 1,800-2,600 ಆರ್‌ಪಿಎಂನಲ್ಲಿ ಗರಿಷ್ಠ 350 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಇಸುಝು ಎಂಯು-ಎಕ್ಸ್ ಎಸ್‍ಯುವಿ

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದರೊಂದಿಗೆ 3.0-ಲೀಟರ್ ಇನ್ಲೈನ್ ನಾಲ್ಕು-ಪಾಟ್ ವಿಜಿಎಸ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಇಸುಝು ಎಂಯು-ಎಕ್ಸ್ ಎಸ್‍ಯುವಿ

ಈ ಎಂಜಿನ್ 3,600 ಆರ್‌ಪಿಎಂನಲ್ಲಿ 190 ಬಿಹೆಚ್‍ಪಿ ಪವರ್ ಮತ್ತು 1,600-2,600 ಆರ್‌ಪಿಎಂನಲ್ಲಿ 450 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 4 ಡಬ್ಲ್ಯೂಡಿ ಸಿಸ್ಟಂನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಇಸುಝು ಎಂಯು-ಎಕ್ಸ್ ಎಸ್‍ಯುವಿ

ಹೊಸ ಇಸುಝು ಎಂಯು-ಎಕ್ಸ್ ಅಲ್ಟ್ರಾ-ಹೈ ಟ್ರೆನ್ಸಿಲ್ ಸ್ಟಿಲ್ ನಿರ್ಮಾಣದೊಂದಿಗೆ ಹೊಸ ಬಾಡಿಯ ರಚನೆಯನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳ ಜೊತೆಗೆ ಐಡ್ಲಿಂಗ್ ಸ್ಟಾರ್ಟ್ / ಸ್ಟಾಪ್ ಟೆಕ್ ಅನ್ನು ಹೊಂದಿದೆ.

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಇಸುಝು ಎಂಯು-ಎಕ್ಸ್ ಎಸ್‍ಯುವಿ

ಇನ್ನು ಹೊಸ ಎಂಯು-ಎಕ್ಸ್ ಎಸ್‍ಯುವಿ ಇಂಟಿರಿಯರ್ ನಲ್ಲಿ ಒಂಬತ್ತು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ವೈರ್‌ಲೆಸ್ ಬ್ಲೂಟೂತ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಎಂಟು ಸ್ಪೀಕರ್‌ಗಳು, ಎಬಿಎಸ್, ಇಬಿಡಿ ಮತ್ತು ಬಿಎ, ಇಎಸ್ಸಿ, ಟಿಸಿ, ಎಚ್‌ಡಿಸಿ, ಟೆರೈನ್ ಕಮಾಂಡ್ ಶಿಫ್ಟ್-ಆನ್-ಫ್ಲೈ, ಆಟೋಮ್ಯಾಟಿಕ್ ಹೈ ಬೀಮ್ , ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆರು ಏರ್‌ಬ್ಯಾಗ್ ಮತ್ತು ಎಡಿಎಎಸ್ ಸಿಸ್ಟಂ ಹೊಂದಿದೆ.

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಇಸುಝು ಎಂಯು-ಎಕ್ಸ್ ಎಸ್‍ಯುವಿ

ಹೊಸ ಇಸುಝು ಎಂಯು-ಎಕ್ಸ್ ಎಸ್‍ಯುವಿಯಲ್ಲಿ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಪ್ರೊಜೆಕ್ಟರ್ ಬೈ-ಬೀಮ್ ಎಲ್ಇಡಿ ಹೆಡ್ ಲೈಟ್ ಗಳು, ಕ್ರೋಮ್ಡ್ ಫ್ರಂಟ್ ಗ್ರಿಲ್, ಎಲ್ಇಡಿ ಫ್ರಂಟ್ ಫಾಗ್ ಲೈಟ್ಸ್, ಸಿಗ್ನೇಚರ್ ಎಲ್ಇಡಿ ಡಿಮ್ಮರ್ ಹೊಂದಿರುವ ಎಲ್ಇಡಿ ಟೈಲ್ ಲ್ಯಾಂಪ್ ಗಳು, 20 ಇಂಚಿನ ಅಲಾಯ್ ವ್ಹೀಲ್ ರೂಫ್ ರೈಲ್ ಗಳು ಮತ್ತು ಸಿಲ್ವರ್ ಸೈಡ್ ಸ್ಟೆಪ್ಗಳನ್ನು ಒಳಗೊಂಡಿದೆ.

Most Read Articles

Kannada
Read more on ಇಸುಝು isuzu
English summary
India-Bound 2021 Isuzu MU-X Launched With A Host Of Changes. Read In Kannada.
Story first published: Thursday, October 29, 2020, 9:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X