ಅತಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಬೇಡಿಕೆ ಪಡೆದುಕೊಂಡ ಕಿಯಾ ಕಾರ್ನಿವಾಲ್

ಕಳೆದ ಫೆಬ್ರುವರಿ 5ರಂದು ನಡೆದಿದ್ದ ದೆಹಲಿ ಆಟೋಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡು ಬಿಡುಗಡೆಯಾಗಿದ್ದ ಕಿಯಾ ಕಾರ್ನಿವಾಲ್ ಕಾರು ಎಂಪಿವಿ ಕಾರು ಮಾರಾಟ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣಾಗಿದ್ದು, ದುಬಾರಿ ಬೆಲೆ ನಡುವೆಯೂ ಹೊಸ ಕಾರು ಉತ್ತಮ ಬೇಡಿಕೆ ಪಡೆದುಕೊಂಡಿದೆ.

ಅತಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಬೇಡಿಕೆ ಪಡೆದುಕೊಂಡ ಕಿಯಾ ಕಾರ್ನಿವಾಲ್

ಕಾರ್ನಿವಾಲ್ ಸದ್ಯ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿಯಾಗಿ ಮಾರಾಟಗೊಳ್ಳುತ್ತಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ದುಬಾರಿ ಬೆಲೆಯೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹೀಗಾಗಿ ಹೊಸ ಕಾರು ಪ್ರತಿ ಸ್ಪರ್ಧಿ ಕಾರು ಮಾದರಿಗಳಿಂತಲೂ ದುಬಾರಿ ಬೆಲೆ ಹೊಂದಿದ್ದರೂ ಸಹ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಬಿಡುಗಡೆಯಾದ 3 ತಿಂಗಳ ಅವಧಿಯಲ್ಲಿ 3 ಸಾವಿರ ಯುನಿಟ್ ಮಾರಾಟಗೊಂಡಿದೆ.

ಅತಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಬೇಡಿಕೆ ಪಡೆದುಕೊಂಡ ಕಿಯಾ ಕಾರ್ನಿವಾಲ್

ಕರೋನಾ ವೈರಸ್ ಹಿನ್ನಲೆಯಲ್ಲಿ ಸದ್ಯಕ್ಕೆ ಕಾರು ಮಾರಾಟ ಸ್ಥಗಿತಗೊಳಿಸಿರುವುದರಿಂದ ಕಾರ್ನಿವಾಲ್ ವಿತರಣೆಯನ್ನು ಬಂದ್ ಮಾಡಲಾಗಿದ್ದು, ಹೊಸ ಕಾರು ಖರೀದಿಗಾಗಿ ಈಗಾಗಲೇ 6 ಸಾವಿರಕ್ಕೂ ಹೆಚ್ಚು ಗ್ರಾಹಕರು ಬೇಡಿಕೆ ಸಲ್ಲಿಸಿದ್ದಾರೆ.

MOST READ: ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳಿವು..!

ಅತಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಬೇಡಿಕೆ ಪಡೆದುಕೊಂಡ ಕಿಯಾ ಕಾರ್ನಿವಾಲ್

ಇದರಲ್ಲಿ ಇದೀಗ 3 ಸಾವಿರ ಯುನಿಟ್ ಮಾತ್ರವೇ ವಿತರಣೆ ಮಾಡಲಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.24.95 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 33.95 ಲಕ್ಷ ಬೆಲೆ ಪಡೆದುಕೊಂಡಿದೆ.

ಅತಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಬೇಡಿಕೆ ಪಡೆದುಕೊಂಡ ಕಿಯಾ ಕಾರ್ನಿವಾಲ್

ಕಾರ್ನಿವಾಲ್ ಕಾರಿನಲ್ಲಿ ಕೇವಲ ಒಂದೇ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, 2.2-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಜೋಡಣೆ ಹೊಂದಿದೆ. ಪ್ರತಿ ವೆರಿಯೆಂಟ್‌ನಲ್ಲೂ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡಲಾಗಿದ್ದು, 200-ಬಿಎಚ್‌ಪಿ, 440-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಈ ಮೂಲಕ ಮೈಲೇಜ್‌ನಲ್ಲೂ ಗಮನಸೆಳೆಯುವ ಕಾರ್ನಿವಾಲ್ ಕಾರು 2,200 ಕೆಜಿ ತೂಕ ಹೊಂದಿದ್ದು, ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದಂತೆ ಪ್ರತಿ ಲೀಟರ್ ಡೀಸೆಲ್‌ಗೆ ಗರಿಷ್ಠ 13.9 ಕಿ.ಮೀ ಮೈಲೇಜ್ ನೀಡಲಿದೆ.

MOST READ: ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿದ ಮಾರುತಿ ಸುಜುಕಿ

ಅತಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಬೇಡಿಕೆ ಪಡೆದುಕೊಂಡ ಕಿಯಾ ಕಾರ್ನಿವಾಲ್

ಹೊಸ ಕಾರಿನಲ್ಲಿರುವ ಪ್ರೀಮಿಯಂ ತಾಂತ್ರಿಕ ಸೌಲಭ್ಯಗಳು ಮತ್ತು ಐಷಾರಾಮಿ ವಿನ್ಯಾಸದಿಂದಾಗಿ ಕಾರ್ನಿವಾಲ್ ಕಾರು ಆವೃತ್ತಿಯನ್ನು 'ಲಗ್ಷುರಿ ಎಂಪಿವಿ' ವಿಭಾಗದಲ್ಲಿ ಗುರುತಿಸಲಾಗಿದ್ದು, ಸಿಗ್ನೆಚರ್ ಟೈಗರ್ ನೋಸ್ ಗ್ರಿಲ್ ಮತ್ತು ಸ್ವೆಪ್ಟ್ ಆಫ್ ಕ್ರೋಮ್ , ಸ್ವೆಪ್ಟ್‌ಬ್ಯಾಕ್ ಎಲ್‌ಇಡಿ ಪ್ರೋಜೆಕ್ಟರ್, ಬಂಪರ್ ರಕ್ಷಣೆಗಾಗಿ ಸಿಲ್ವರ್ ಸ್ಕಫ್ ಪ್ಲೇಟ್ ಜೋಡಣೆ ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಅತಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಬೇಡಿಕೆ ಪಡೆದುಕೊಂಡ ಕಿಯಾ ಕಾರ್ನಿವಾಲ್

ಫುಲ್ ಸೈಜ್ ಎಂಪಿವಿಯಾಗಿರುವ ಕಾರ್ನಿವಾಲ್ ಕಾರು ಉದ್ದಳತೆಯಲ್ಲಿ ಗಮನಸೆಳೆಯಲಿದ್ದು, ಎಲೆಕ್ಟ್ರಾನಿಕ್ ಸ್ಲೈಡಿಂಗ್ ಡೋರ್ ಸಿಸ್ಟಂ ಹೊಂದಿದೆ. ಹಾಗೆಯೇ ಹೊಸ ಕಾರಿನಲ್ಲಿ 18-ಇಂಚಿನ ಕ್ರೋಮ್ ಲೇಪಿತ ಅಲಾಯ್ ವೀಲ್ಹ್ ಜೋಡಣೆ ಮಾಡಲಾಗಿದ್ದು, ಇದು ಕಾರ್ನಿವಾಲ್ ಕಾರಿನ ಬಲಿಷ್ಠತೆಗೆ ಮತ್ತಷ್ಟು ಪೂರಕವಾಗಿದೆ.

MOST READ: ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಅತಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಬೇಡಿಕೆ ಪಡೆದುಕೊಂಡ ಕಿಯಾ ಕಾರ್ನಿವಾಲ್

ಕಿಯಾ ಕಾರ್ನಿವಾಲ್ ಕಾರು ಎಂಪಿವಿ ಕಾರುಗಳಲ್ಲೇ ಅತಿ ಹೆಚ್ಚು ಉದ್ದಳತೆ ಹೊಂದಿದ್ದು, 5,115-ಎಂಎಂ ಉದ್ದ, 1,985-ಎಂಎಂ ಅಗಲ, 1,740-ಎಂಎಂ ಎತ್ತರ, 3,060-ಎಂಎಂ ವೀಲ್ಹ್ ಬೆಸ್, 180-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು 540-ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೆಸ್ ಸೌಲಭ್ಯ ಹೊಂದಿದೆ.

ಅತಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಬೇಡಿಕೆ ಪಡೆದುಕೊಂಡ ಕಿಯಾ ಕಾರ್ನಿವಾಲ್

ಕಾರ್ನಿವಾಲ್ ಪ್ರೀಮಿಯಂ ಫೀಚರ್ಸ್‌ಗಳು

* 8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ * ಎಂಟು ಸ್ಪೀಕರ್ಸ್(ಹರ್ಮನ್/ಕರ್ಡೋನ್) * 220 ವೊಲ್ಟ್ ಲ್ಯಾಪ್‌ಟಾಪ್ ಚಾರ್ಜರ್ * 10-ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ * ವೆಂಟಿಲೆಟೆಡ್ ಡ್ರೈವರ್ ಸೀಟ್ * ಸ್ಮಾರ್ಟ್ ಕೀ ಜೊತೆ ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ * ಸೆಂಟ್ರಲ್ ಲಾಕಿಂಗ್ * ಆಟೋ ORVMs * 18-ಇಂಚಿನ ಅಲಾಯ್ ವೀಲ್ಹ್ * ಮೂರನೇ ಸಾಲಿನಲ್ಲೂ 60:40 ಅನುಪಾತದ ಆಸನ * UVO ಕನೆಕ್ಟೆಡ್ ಟೆಕ್ನಾಲಜಿ * ವೈರ್ ಲೆಸ್ ಮೊಬೈಲ್ ಚಾರ್ಜಿಂಗ್

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಅತಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಬೇಡಿಕೆ ಪಡೆದುಕೊಂಡ ಕಿಯಾ ಕಾರ್ನಿವಾಲ್

ಸುರಕ್ಷಾ ಫೀಚರ್ಸ್‌ಗಳು

* ಎಬಿಎಸ್ ಜೊತೆ ಇಬಿಡಿ * ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ * ರೋಲ್ ಓವರ್ ಮಿಟಿಗೆಷನ್ * ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ * 6 ಏರ್‌ಬ್ಯಾಗ್ * ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಕ್ಯಾಮೆರಾ * ಸೀಟ್ ಬೆಲ್ಟ್ ರಿಮೆಂಡರ್ * ಇಮ್‌ಮೊಬಿಲೈಜರ್ * ISOFIX ಚೈಲ್ಡ್ ಸೀಟ್ ಮೌಂಟ್

Most Read Articles

Kannada
English summary
Kia Carnival Sales Cross 3,000 Units: Milestone Achieved In Three Months Of Launch. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X