ಕರೋನಾ ಎಫೆಕ್ಟ್: ಇಎಕ್ಸ್‌ಯುವಿ300 ಎಲೆಕ್ಟ್ರಿಕ್ ಕಾರಿನ ಬಿಡುಗಡೆಯನ್ನು ಮುಂದೂಡಿದ ಮಹೀಂದ್ರಾ

ಮಾಹಾಮಾರಿ ಕರೋನಾ ವೈರಸ‌್‌ನಿಂದಾಗಿ ಆಟೋ ಉದ್ಯಮವು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಹಲವಾರು ಕಾರು ಮಾದರಿಗಳ ಬಿಡುಗಡೆಯು ಮುಂದೂಡಿಕೆಯಾಗಿರುವುದಲ್ಲದೆ ಕೆಲ ಕಾರು ಮಾದರಿಗಳ ಬಿಡುಗಡೆಯ ಯೋಜನೆಯನ್ನೇ ಕೈಬಿಡಲಾಗಿದೆ.

ಮಹೀಂದ್ರಾ ಇಎಕ್ಸ್‌ಯುವಿ300 ಎಲೆಕ್ಟ್ರಿಕ್ ಕಾರು ಬಿಡುಗಡೆ ಮುಂದೂಡಿಕೆ

ಮಹೀಂದ್ರಾ ಕಂಪನಿಯು ಸಹ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ಕೈಜೋಡಿಸುವ ಮೂಲಕ ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ದೇಣಿಗೆ ನೀಡಿರುವುದಲ್ಲದೇ ಹೊಸ ಸುರಕ್ಷಾ ಕ್ರಮಗಳೊಂದಿಗೆ ಉದ್ಯಮ ವ್ಯವಹಾರಗಳನ್ನು ಮುನ್ನಡೆಸುತ್ತಿದ್ದು, ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿದ್ದ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಮತ್ತು ವಿತರಣೆಯನ್ನು ಸದ್ಯಕ್ಕೆ ಮುಂದೂಡಿಕೆ ಮಾಡಲಾಗಿದೆ.

ಮಹೀಂದ್ರಾ ಇಎಕ್ಸ್‌ಯುವಿ300 ಎಲೆಕ್ಟ್ರಿಕ್ ಕಾರು ಬಿಡುಗಡೆ ಮುಂದೂಡಿಕೆ

ಕೆಯುವಿ100 ಎಲೆಕ್ಟ್ರಿಕ್ ಕಾರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದರೂ ವಿತರಣಾ ಪ್ರಕ್ರಿಯೆಯನ್ನು 2021ಕ್ಕೆ ಮುಂದೂಡಲಾಗಿದ್ದು, ಇನ್ನೊಂದು ಬಹುನೀರಿಕ್ಷಿತ ಎಲೆಕ್ಟ್ರಿಕ್ ಕಾರು ಮಾದರಿಯಾದ ಇಎಕ್ಸ್‌ಯುವಿ300 ಮಾದರಿಯನ್ನು ಮುಂದಿನ ವರ್ಷ ಬಿಡುಗಡೆ ಮಾಡಲಿದೆ.

ಮಹೀಂದ್ರಾ ಇಎಕ್ಸ್‌ಯುವಿ300 ಎಲೆಕ್ಟ್ರಿಕ್ ಕಾರು ಬಿಡುಗಡೆ ಮುಂದೂಡಿಕೆ

ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಫೆಬ್ರುವರಿ ಆರಂಭದಲ್ಲಿ ನಡೆದಿದ್ದ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಿ ಬಿಡುಗಡೆ ಮಾಡಿದ್ದ ಮಹೀಂದ್ರಾ ಕಂಪನಿಯು ಇದೇ ವರ್ಷ ಜೂನ್ ಆರಂಭದಲ್ಲಿ ಬಿಡುಗಡೆ ಮತ್ತು ವಿತರಣಾ ಪ್ರಕ್ರಿಯೆಗೆ ಚಾಲನೆ ನೀಡುವ ಯೋಜನೆಯಲ್ಲಿತ್ತು.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಮಹೀಂದ್ರಾ ಇಎಕ್ಸ್‌ಯುವಿ300 ಎಲೆಕ್ಟ್ರಿಕ್ ಕಾರು ಬಿಡುಗಡೆ ಮುಂದೂಡಿಕೆ

ಆದರೆ ಕರೋನಾ ವೈರಸ್ ಭೀತಿ ಹೆಚ್ಚಿದ್ದರಿಂದ ಎಲೆಕ್ಟ್ರಿಕ್ ಕಾರು ಮಾದರಿಗಳ ಬಿಡುಗಡೆಯನ್ನು ಸದ್ಯಕ್ಕೆ ಮುಂದೂಡಿಕೆ ಮಾಡಿರುವ ಮಹೀಂದ್ರಾ ಕಂಪನಿಯು ಹೊಸ ಕಾರುಗಳನ್ನು 2021ರ ಆರಂಭದಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದೆ.

ಮಹೀಂದ್ರಾ ಇಎಕ್ಸ್‌ಯುವಿ300 ಎಲೆಕ್ಟ್ರಿಕ್ ಕಾರು ಬಿಡುಗಡೆ ಮುಂದೂಡಿಕೆ

ಮಹೀಂದ್ರಾ ಕಂಪನಿಯು ಸದ್ಯ ಹೊಸ ನಿಯಮಗಳಿಗೆ ಅನುಗುಣವಾಗಿ ತನ್ನ ಭವಿಷ್ಯದ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸುರಕ್ಷತೆ ನೀಡುವ ಉದ್ದೇಶದಿಂದ ಈ ಹಿಂದಿನ ಇ2ಓ ಪ್ಲಸ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿ ಹೊಸ ಕಾರು ಉತ್ಪನ್ನಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಮಹೀಂದ್ರಾ ಇಎಕ್ಸ್‌ಯುವಿ300 ಎಲೆಕ್ಟ್ರಿಕ್ ಕಾರು ಬಿಡುಗಡೆ ಮುಂದೂಡಿಕೆ

ಗ್ರಾಹಕರ ಬೇಡಿಕೆಯೆಂತೆ ವಿಶೇಷ ಫೀಚರ್ಸ್ ಮತ್ತು ಅತ್ಯುತ್ತಮ ಬ್ಯಾಟರಿ ಆಯ್ಕೆ ಹೊಂದಲಿರುವ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಭಾರೀ ಪ್ರಮಾಣದ ಹೂಡಿಕೆ ಮಾಡಿದೆ. ಕೆಯುವಿ100 ಎಲೆಕ್ಟ್ರಿಕ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 8.25 ಲಕ್ಷ ಬೆಲೆಯೊಂದಿಗೆ ಬಿಡುಗಡೆಯಾಗಿದ್ದು, 40kW ಎಲೆಕ್ಟ್ರಿಕ್ ಮೋಟಾರ್ ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಮಹೀಂದ್ರಾ ಇಎಕ್ಸ್‌ಯುವಿ300 ಎಲೆಕ್ಟ್ರಿಕ್ ಕಾರು ಬಿಡುಗಡೆ ಮುಂದೂಡಿಕೆ

ಆದರೆ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಮಾದರಿಯು ತುಸು ದುಬಾರಿ ಬೆಲೆಯೊಂದಿಗೆ ಅತಿ ಹೆಚ್ಚು ಮೈಲೇಜ್ ಪ್ರೇರಿತ ಲೀಥಿಯಂ ಅಯಾನ್ ಬ್ಯಾಟರಿ ಬಳಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಹೊಸ ಕಾರಿನ ಬ್ಯಾಟರಿ ಕ್ಷಮತೆ ಕುರಿತಂತೆ ಅಂತಿಮ ಹಂತದ ರೋಡ್ ಟೆಸ್ಟಿಂಗ್ ನಡೆಸುತ್ತಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಮಹೀಂದ್ರಾ ಇಎಕ್ಸ್‌ಯುವಿ300 ಎಲೆಕ್ಟ್ರಿಕ್ ಕಾರು ಬಿಡುಗಡೆ ಮುಂದೂಡಿಕೆ

ನೆಕ್ಸಾನ್‌ಗಿಂತಲೂ ಅತ್ಯುತ್ತಮ ಮೈಲೇಜ್

ಎಕ್ಸ್‌ಯುವಿ300 ಎಲೆಕ್ಟ್ರಿಕ್ ಕಾರು ಮಾದರಿಯು ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗುತ್ತಿದ್ದು, ನೆಕ್ಸಾನ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16 ಲಕ್ಷ ಬೆಲೆ ಹೊಂದಿದೆ. ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ 30.2 kWh ಲೀಥಿಯಂ ಅಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು ಪ್ರತಿ ಚಾರ್ಜ್‌ಗೆ 312 ಕಿ.ಮೀ ಮೈಲೇಜ್ ನೀಡುತ್ತದೆ.

ಮಹೀಂದ್ರಾ ಇಎಕ್ಸ್‌ಯುವಿ300 ಎಲೆಕ್ಟ್ರಿಕ್ ಕಾರು ಬಿಡುಗಡೆ ಮುಂದೂಡಿಕೆ

ಆದರೆ ಹೊಸದಾಗಿ ಬಿಡುಗಡೆಯಾಗುತ್ತಿರುವ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಕಾರು ನೆಕ್ಸಾನ್ ಮಾದರಿಯಲ್ಲೇ ಬೆಲೆ ಪಡೆದುಕೊಳ್ಳಲಿದ್ದರೂ ನೆಕ್ಸಾನ್ ಕಾರಿಗಿಂತಲೂ ಹೆಚ್ಚು ಮೈಲೇಜ್ ಹೊಂದಿದ್ದು, ಪ್ರತಿ ಚಾರ್ಜ್‌ಗೆ 350ಕಿ.ಮೀ ನಿಂದ 370ಕಿ.ಮೀ ಮೈಲೇಜ್ ರೇಂಜ್ ಹೊಂದಿರಲಿದೆಯೆಂತೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಮಹೀಂದ್ರಾ ಇಎಕ್ಸ್‌ಯುವಿ300 ಎಲೆಕ್ಟ್ರಿಕ್ ಕಾರು ಬಿಡುಗಡೆ ಮುಂದೂಡಿಕೆ

ಮೈಲೇಜ್ ಮಾಹಿತಿಯ ಹೊರತಾಗಿ ಲೀಥಿಯಂ ಅಯಾನ್ ಬ್ಯಾಟರಿ ವೈಶಿಷ್ಟ್ಯತೆಯ ಕುರಿತಾಗಿ ಯಾವುದೇ ಮಾಹಿತಿ ಬಿಟ್ಟುಕೊಡದ ಮಹೀಂದ್ರಾ ಸಂಸ್ಥೆಯು ಶೀಘ್ರದಲ್ಲೇ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸುವುದಾಗಿ ಹೇಳಿಕೊಂಡಿದ್ದು, ಹೊಸ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.15 ಲಕ್ಷದಿಂದ ರೂ.17 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Mahindra eXUV300 India Launch & eKUV100 Deliveries Postponed: Here Are All The Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X