ಬಿಡುಗಡೆಯಾಗಲಿದೆ ಹೂಸ ಫೋರ್ಡ್ ಫಿಗೋ ಆಟೋಮ್ಯಾಟಿಕ್ ಆವೃತ್ತಿ

ಫೋರ್ಡ್ ಕಂಪನಿಯು ತನ್ನ ಹೊಸ ಫಿಗೋ ಪೆಟ್ರೊಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಫೋರ್ಡ್ ಫೀಗೋ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ

ಬಿಡುಗಡೆಯಾಗಲಿದೆ ಹೂಸ ಫೋರ್ಡ್ ಫಿಗೋ ಆಟೋಮ್ಯಾಟಿಕ್ ಆವೃತ್ತಿ

ಈ ಹೊಸ ಫೋರ್ಡ್ ಫಿಗೋ ಆಟೋಮ್ಯಾಟಿಕ್ ಆವೃತ್ತಿಯು ಮುಂದಿನ ಆಗಸ್ಟ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಫೋರ್ಡ್ ಫಿಗೋ ಆಟೋಮ್ಯಾಟಿಕ್ ಆವೃತ್ತಿಯಲ್ಲಿ 1.2 ಡ್ರ್ಯಾಗನ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 6,500 ಆರ್‌ಪಿಎಂನಲ್ಲಿ 96 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಟಾರ್ಕ್-ಕರ್ನವಾಟರ್'ಗೆ ಜೋಡಿಸಲಾಗುತ್ತದೆ.

ಬಿಡುಗಡೆಯಾಗಲಿದೆ ಹೂಸ ಫೋರ್ಡ್ ಫಿಗೋ ಆಟೋಮ್ಯಾಟಿಕ್ ಆವೃತ್ತಿ

ಹೊಸ ಫೋರ್ಡ್ ಫಿಗೋ ಆಟೋಮ್ಯಾಟಿಕ್ ಆವೃತ್ತಿಯ ಡ್ರ್ಯಾಗನ್ ಎಂಜಿನ್ ಥ್ರೊಟಲ್ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ ಎಂಬುದು ಉತ್ತಮವಾದ ಸಂಗತಿಯಾಗಿದೆ. ಥ್ರೊಟಲ್ ಮೇಲೆ ಟ್ಯಾಪ್ ಮಾಡಲು ಫಿಗೊ ಹೆಚ್ಚು ಸ್ಪಂದಿಸುತ್ತದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಬಿಡುಗಡೆಯಾಗಲಿದೆ ಹೂಸ ಫೋರ್ಡ್ ಫಿಗೋ ಆಟೋಮ್ಯಾಟಿಕ್ ಆವೃತ್ತಿ

ಇನ್ನು ಫಿಗೋ ಕಾರಿನಲ್ಲಿ ಪ್ಯಾಡಲ್‌ಶಿಫ್ಟರ್‌ಗಳನ್ನು ಸಹ ಪಡೆಯಬಹುದು, ಇದು ಫಿಗೋ ಡ್ರೈವ್ ಮಾಡುವವರಿಗೆ ಇನ್ನಷ್ಟು ಮುದ ನೀಡುತ್ತದೆ. ಇನ್ನು ಫಿಗೋ ಆಟೋಮ್ಯಾಟಿಕ್ ಆವೃತ್ತಿಯ ಫೀಚರುಗಳಲ್ಲಿ ಹೆಚ್ಚಿನ ಬದಲಾವಣೆಗಳನ್ಜು ಹೊಂದಿರುವುದಿಲ್ಲ.

ಬಿಡುಗಡೆಯಾಗಲಿದೆ ಹೂಸ ಫೋರ್ಡ್ ಫಿಗೋ ಆಟೋಮ್ಯಾಟಿಕ್ ಆವೃತ್ತಿ

ಈ ಕಾರಿನಲ್ಲಿ ಕಾರುಗಳಲ್ಲಿ ಫೋರ್ಡ್ ಪಾಸ್ ಕನೆಕ್ಟಿವಿಟಿಯನ್ನು ನೀಡಬಹುದು. ಇದು ಕ್ಲೌಡ್ ಕನೆಕ್ಟೆಡ್ ಡಿವೈಸ್ ಆಗಿದ್ದು, ಕಾರಿನ ಮಾಲೀಕರು ರಿಯಲ್ ಟೈಂ ಫೋರ್ಡ್ ಪಾಸ್ ಸ್ಮಾರ್ಟ್‍‍ಫೋನ್ ಅಪ್ಲಿಕೇಶನ್‍‍ನೊಂದಿಗೆ ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಬಿಡುಗಡೆಯಾಗಲಿದೆ ಹೂಸ ಫೋರ್ಡ್ ಫಿಗೋ ಆಟೋಮ್ಯಾಟಿಕ್ ಆವೃತ್ತಿ

ಈ ಫೀಚರ್‍‍ನಿಂದಾಗಿ ಕಾರುಗಳ ಲಾಕಿಂಗ್, ಅನ್‍‍ಲಾಕಿಂಗ್, ಫ್ಯೂಯಲ್ ಲೆವೆಲ್, ಡಿಸ್ಟನ್ಸ್ ಟು ಎಂಪ್ಟಿ, ಕಾರು ಇರುವ ಲೊಕೇಷನ್ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಇದರ ಜೊತೆಗೆ ಹತ್ತಿರದಲ್ಲಿರುವ ಡೀಲರ್ ಹಾಗೂ ಹಿಂದಿನ ಸರ್ವಿಸ್‍‍ಗಳ ಬಗೆಗಿನ ಮಾಹಿತಿಯನ್ನು ಸಹ ಪಡೆಯಬಹುದು.

ಬಿಡುಗಡೆಯಾಗಲಿದೆ ಹೂಸ ಫೋರ್ಡ್ ಫಿಗೋ ಆಟೋಮ್ಯಾಟಿಕ್ ಆವೃತ್ತಿ

ಇನ್ನು ಫೋರ್ಡ್ ಕಂಪನಿಯು ತನ್ನ ಇಕೋಸ್ಪೋರ್ಟ್ ಟಿಟಾನಿಯಂನ ಆಟೋಮ್ಯಾಟಿಕ್ ಮಾದರಿಯನ್ನು ಇತ್ತೀಚೆಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.10.66 ಲಕ್ಷಗಳಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಯಾಗಲಿದೆ ಹೂಸ ಫೋರ್ಡ್ ಫಿಗೋ ಆಟೋಮ್ಯಾಟಿಕ್ ಆವೃತ್ತಿ

ಈ ಹೊಸ ಕಾರು ಕಂಪನಿಯ ಸಬ್ -4-ಮೀಟರ್ ಎಸ್‌ಯುವಿ ಪೋರ್ಟ್ ಫೋಲಿಯೊದಲ್ಲಿ ಟಿಟಾನಿಯಂ ಪ್ಲಸ್ ಮ್ಯಾನುವಲ್ ಮಾದರಿಯ ಕೆಳಗಿನ ಸ್ಥಾನದಲ್ಲಿರಲಿದೆ. ಫೋರ್ಡ್ ಇಕೋಸ್ಪೋರ್ಟ್ ಟಿಟಾನಿಯಂ ಆಟೋಮ್ಯಾಟಿಕ್ ಮಾದರಿಯು 1.5-ಲೀಟರಿನ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಬಿಡುಗಡೆಯಾಗಲಿದೆ ಹೂಸ ಫೋರ್ಡ್ ಫಿಗೋ ಆಟೋಮ್ಯಾಟಿಕ್ ಆವೃತ್ತಿ

ಈ ಹೊಸ ಫೋರ್ಡ್ ಫೀಗೋ ಆಟೋಮ್ಯಾಟಿಕ್ ಆವೃತ್ತಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಫೋರ್ಡ್ ಫಿಗೋ ಆಟೋಮ್ಯಾಟಿಕ್ ಆವೃತ್ತಿಯನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಫೋರ್ಡ್ ford
English summary
Ford Figo Petrol AT Variant Coming In August 2020. Read In Kannada.
Story first published: Monday, July 20, 2020, 12:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X