ಬಿಡುಗಡೆಗೆ ಸಜ್ಜಾದ ಮೇಡ್ ಇನ್ ಇಂಡಿಯಾ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ಹೊಸ ಎಎಂಜಿ ಜಿಎಲ್‌ಸಿ 43 ಕೂಪೆ ಕಾರನ್ನು ಸ್ಥಳೀಯವಾಗಿ ತಯಾರಿಸಿ ಬಿಡುಗಡೆಗೊಳಿಸಲಿದೆ. ಮರ್ಸಿಡಿಸ್ ಬೆಂಝ್ ತನ್ನ ಹೊಸ ಎಎಂಜಿ ಜಿಎಲ್‌ಸಿ 43 ಕೂಪೆ ಕಾರಿನ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ.

ಬಿಡುಗಡೆಗೆ ಸಜ್ಜಾದ ಮೇಡ್ ಇನ್ ಇಂಡಿಯಾ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ

ಹೊಸ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರು ಮುಂದಿನ ತಿಂಗಳ 3 ರಂದು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಮರ್ಸಿಡಿಸ್ ಬೆಂಝ್ ಕಂಪನಿಯು ಭಾರತದಲ್ಲಿ ಸ್ಥಳೀಯವಾಗಿ ತಯಾರಿಸುವ ಮೊದಲ ಕಾರು ಇದಾಗಿದೆ. ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಮೇಡ್ ಇನ್ ಇಂಡಿಯಾ ಮರ್ಸಿಡಿಸ್ ಬೆಂಝ್ ಎಎಂಜಿ ಜಿಎಲ್‌ಸಿ 43 ಕೂಪೆ ಸೇರುತ್ತದೆ. ಈ ಮರ್ಸಿಡಿಸ್ ಬೆಂಝ್ ಎಎಂಜಿ ಜಿಎಲ್‌ಸಿ 43 ಕೂಪೆ ಕಳೆದ ವರ್ಷ ಜಾಗತಿಕವಾಗಿ ಬಿಡುಗಡೆಯಾಗಿತ್ತು.

ಬಿಡುಗಡೆಗೆ ಸಜ್ಜಾದ ಮೇಡ್ ಇನ್ ಇಂಡಿಯಾ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ

ಇದು ಸಂಪೂರ್ಣವಾಗಿ ನಾಕ್ ಡೌನ್ (ಸಿಕೆಡಿ) ಆವೃತ್ತಿಯಾಗಿರುವುದರಿಂದ ಈ ಕಾರಿನ ಬೆಲೆಯು ರೂ.80 ಲಕ್ಷಕ್ಕೆ ಹತ್ತಿರವಿರಬಹುದು. ಮರ್ಸಿಡಿಸ್ ಬೆಂಝ್ ಎಎಂಜಿ ಜಿಎಲ್‌ಸಿ 43 ಕೂಪೆ ವರ್ಟಿಕಲ್ ಸ್ಲ್ಯಾಟ್‌ಗಳೊಂದಿಗೆ ಪನಾಮೆರಿಕಾನಾ ಗ್ರಿಲ್ ಮತ್ತು ಡೇ ಟೈಮ್ ರನ್ನಿಂಗ್ ಲ್ಯಾಂಪ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಗೆ ಸಜ್ಜಾದ ಮೇಡ್ ಇನ್ ಇಂಡಿಯಾ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ

ಇನ್ನು ಹೊಸ ಮರ್ಸಿಡಿಸ್ ಬೆಂಝ್ ಎಎಂಜಿ ಜಿಎಲ್‌ಸಿ 43 ಕೂಪೆಯಲ್ಲಿ ಎಲ್‌ಇಡಿ ಹೈ-ಪರ್ಫಾರ್ಮೆನ್ಸ್ ಹೆಡ್‌ಲ್ಯಾಂಪ್‌ಗಳು ಮತ್ತು ಏರ್ ಇಂಟೆಕ್‌ಗಳ ಮೇಲೆ ಮ್ಯಾಟ್ ಬ್ಲ್ಯಾಕ್ ಫಿನ್‌ಗಳೊಂದಿಗೆ ಬರಲಿದೆ. ಈ ಕಾರಿನಲ್ಲಿ 19 ಇಂಚಿನ ಲೈಟ್-ಅಲಾಯ್ ವ್ಹೀಲ್ ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗುತ್ತದೆ.

ಬಿಡುಗಡೆಗೆ ಸಜ್ಜಾದ ಮೇಡ್ ಇನ್ ಇಂಡಿಯಾ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ

ಇದರೊಂದಿಗೆ ಮರ್ಸಿಡಿಸ್ 19 ರಿಂದ 21 ಇಂಚು ಗಾತ್ರದ 5 ರೀತಿಯ ಅಲಾಯ್ ವ್ಜೀಲ್ ಆಯ್ಕೆಗಳನ್ನು ನೀಡುತ್ತದೆ. ಹಿಂಭಾಗದಲ್ಲಿ ಕಾರು ವಿಶಾಲವಾದ ಏಪ್ರನ್, ಡಿಫ್ಯೂಸರ್ ಮತ್ತು ಎರಡು ಸುತ್ತಿನ ಟ್ವಿನ್ ಟೈಲ್‌ಪೈಪ್‌ಗಳನ್ನು ಹೊಂದಿರಲಿವೆ. ಜೊತೆಗೆ ಮರುವಿನ್ಯಾಸಗೊಳಿಸಲಾದ ಎಲ್ಇಡಿ ಟೈಲ್‌ಲೈಟ್‌ಗಳನ್ನು ಒಳಗೊಂಡಿರುತ್ತದೆ.

MOST READ: ಐಷಾರಾಮಿ ಫೋಕ್ಸ್‌ವ್ಯಾಗನ್ ಎಸ್‍ಯುವಿಯನ್ನು ಖರೀದಿಸಿದ ಜನಪ್ರಿಯ ಬಾಲಿವುಡ್ ನಟ

ಬಿಡುಗಡೆಗೆ ಸಜ್ಜಾದ ಮೇಡ್ ಇನ್ ಇಂಡಿಯಾ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ

ಹೊಸ ಮರ್ಸಿಡಿಸ್-ಎಎಂಜಿ ಎಎಂಜಿ ಜಿಎಲ್‌ಸಿ 43 ಕೂಪೆ ಸ್ಪೋರ್ಟಿ ಒಳಾಂಗಣದೊಂದಿಗೆ ಬರಲಿದ್ದು, ಸ್ಟೀಯರಿಂಗ್, ಸೀಟುಗಳು, ಸ್ಕಫ್ ಪ್ಲೇಟ್‌ಗಳಂತಹ ವಿಭಾಗಗಳು ಬ್ಲ್ಯಾಕ್ ಆರ್ಟಿಕೊ ಮ್ಯಾನ್ ಮೇಡ್ ಲೆದರ್ ದಿನಾಮಿಕಾ ಮೈಕ್ರೋಫೈಬರ್‌ನೊಂದಿಗೆ ಒಳಗೊಂಡಿರಲಿದೆ.

ಬಿಡುಗಡೆಗೆ ಸಜ್ಜಾದ ಮೇಡ್ ಇನ್ ಇಂಡಿಯಾ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ

ಹೊಸ ಮರ್ಸಿಡಿಸ್-ಎಎಂಜಿ ಎಎಂಜಿ ಜಿಎಲ್‌ಸಿ 43 ಕೂಪೆ ಎಂಬಿಯುಎಕ್ಸ್ ಇನ್ಫೋಟೈನ್‌ಮೆಂಟ್ ಸಿಸ್ಟಂನ ಇತ್ತೀಚಿನ ಆವೃತ್ತಿಯೊಂದಿಗೆ ಬರಲಿದೆ. ಈ ಮರ್ಸಿಡಿಸ್ ಎಂದು ಹೇಳುವ ಮೂಲಕ ಇದನ್ನು ಆಕ್ಟಿವ್ ಮಾಡಬಹುದಾಗಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಬಿಡುಗಡೆಗೆ ಸಜ್ಜಾದ ಮೇಡ್ ಇನ್ ಇಂಡಿಯಾ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ

ಹೊಸ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರಿನಲ್ಲಿ ವಿ6 ಬೈ-ಟರ್ಬೊ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 385 ಬಿಹೆಚ್‌ಪಿ ಪವರ್ ಮತ್ತು 520 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಗೆ ಸಜ್ಜಾದ ಮೇಡ್ ಇನ್ ಇಂಡಿಯಾ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ

ಇನ್ನು ಹೊಸ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಮರ್ಸಿಡಿಸ್ ಬೆಂಝ್ ಎಎಂಜಿ ಜಿಎಲ್‌ಸಿ 43 ಕೂಪೆ ಕೇವಲ 4.9 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಸಾಧಿಸುತ್ತದೆ.

Most Read Articles

Kannada
English summary
Made-In-India Mercedes-AMG GLC 43 Coupe Launch Date Announced. Read In Kannada.
Story first published: Thursday, October 22, 2020, 19:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X