Just In
- 52 min ago
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- 2 hrs ago
ಹೊಸ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕದ ಮೇಲೆ ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾದ ಒಕಿನಾವ
- 2 hrs ago
ಡೀಲರ್ ಬಳಿ ತಲುಪಿದ ಹೊಸ ಬೆನೆಲ್ಲಿ ಟಿಆರ್ಕೆ 502 ಬೈಕ್
- 2 hrs ago
ನ್ಯಾಷನಲ್ ಡ್ರ್ಯಾಗ್ ರೇಸಿಂಗ್: 2020ರ ಆವೃತ್ತಿಯನ್ನು ಗೆದ್ದ ಕನ್ನಡಿಗ ಹೇಮಂತ್ ಮುದ್ದಪ್ಪ!
Don't Miss!
- News
ಜಮ್ಮು-ಕಾಶ್ಮೀರ: ಭಾರತೀ ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಪೈಲಟ್ ಸಾವು
- Lifestyle
ಗಣರಾಜ್ಯೋತ್ಸವ ಪರೇಡ್ನಲ್ಲಿ ಇತಿಹಾಸ ಸೃಷ್ಟಿಸಲಿದ್ದಾರೆ ಸ್ವಾತಿ ರಾಥೋಡ್
- Movies
ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Education
Indian Air Force Recruitment 2021: ಏರ್ಮೆನ್ ಗ್ರೂಪ್ X & Y ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯ ಸನಿಹದಲ್ಲಿ ಹೊಸ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಕಾರು
ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಎ-ಕ್ಲಾಸ್ ಲಿಮೋಸಿನ್ ಕಾರನ್ನು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಇದೀಗ ಮರ್ಸಿಡಿಸ್ ಬೆಂಝ್ ತನ್ನ ಹೊಸ ಎ-ಕ್ಲಾಸ್ ಲಿಮೋಸಿನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.

ಕರೋನಾ ಸೋಂಕಿನ ಭೀತಿಯಿಂದಾಗಿ ಎ-ಕ್ಲಾಸ್ ಲಿಮೋಸಿನ್ ಕಾರಿನ ಬಿಡುಗಡೆ ವಿಳಂಬವಾಗಿದೆ. ಆಟೋಕಾರ್ ವರದಿ ಪ್ರಕಾರ, ಈ ತಿಂಗಳ ಅಂತ್ಯದಲ್ಲಿ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರು ಬಿಡುಗಡೆ ಮಾಡಲಿದೆ. ಮರ್ಸಿಡಿಸ್ ಬೆಂಝ್ ತನ್ನ ಹೊಸ ಎ-ಕ್ಲಾಸ್ ಲಿಮೋಸಿನ್ ಕಾರಿನ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಬಿಸಲಾಗಿದೆ. ಈ ಹೊಸ ಎ-ಕ್ಲಾಸ್ ಲಿಮೋಸಿನ್ ಕಾರಿಗೆ ರೂ.2 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಈ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ.

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಮುಂಭಾಗದಲ್ಲಿ ದೊಡ್ಡ ಗ್ರಿಲ್ ಅನ್ನು ಅಳವಡಿಸಿದೆ. ಇಂಟಿಗ್ರೇಟೆಡ್ ಡಿಆರ್‍ಎಲ್‍ಗಳನ್ನು ಹೊಂದಿರುವ ಎಲ್‍ಇಡಿ ಹೆಡ್‍ಲ್ಯಾಂಪ್‍ಗಳನ್ನು ಹೊಂದಿದೆ. ಐಷಾರಾಮಿ ಸೆಡಾನ್ ಎ-ಕ್ಲಾಸ್‍ನಲ್ಲಿ ದೊಡ್ಡ ರೂಫ್ ಅನ್ನು ಹೊಂದಿದೆ. ದೊಡ್ಡದಾದ ಸ್ವೆಫ್ಟ್ ಲೈಟ್ ಮತ್ತು ಹಿಂಭಾಗದಲ್ಲಿ ಆಕರ್ಷಕ ಬಂಪರ್ ಅನ್ನು ಹೊಂದಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ವಿಶೇಷವಾಗಿ ಎ-ಕ್ಲಾಸ್ ಕಾರಿನಲ್ಲಿ ಟ್ವೀಕ್ಡ್ ಫ್ರಂಟ್ ಗ್ರಿಲ್ ಮತ್ತು ಬಂಪರ್, ಸ್ಪೋರ್ಟಿಯರ್ ಅಲಾಯ್ ವ್ಹೀಲ್, ಆಗ್ರೆಸಿವ್ ಹಿಂಭಾಗದ ಡಿಫ್ಯೂಸರ್ ಮತ್ತು ವೃತ್ತಕಾರದ ಡ್ಯುಯಲ್ ಟಿಪ್ ಎಕ್ಸಾಸ್ಟ್ ಪೈಪ್‍ಗಳನ್ನು ಒಳಗೊಂಡಿದೆ.

ಎ-ಕ್ಲಾಸ್ ಕಾರಿನ ಇಂಟಿರಿಯರ್‍ನಲ್ಲಿ ದೊಡ್ಡ ಸಲೂನ್‍ಗಳನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಎಂಬಿಯುಎಕ್ಸ್ ಸಿಸ್ಟಂ, ವಾಯ್ಸ್ ಕಂಟ್ರೋಲ್ ಮತ್ತು ಫ್ರೀಸ್ಟ್ಯಾಂಡಿಂಗ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇನ್ಫೋಟೇನ್‍ಮೆಂಟ್ ಡಿಸ್‍ಪ್ಲೇ ಸುತ್ತಲೂ ಮೂರು ವೃತ್ತಾಕಾರದ ಕ್ರೋಮ್ ಮತ್ತು ಕ್ರೋಮ್ ಕವರ್ ಆಗಿರುವ ಸ್ಟೀಯರಿಂಗ್ ನಿಂದ ಕಾರಿನ ಇಂಟಿರಿಯರ್ ಐಷಾರಾಮಿ ಲುಕ್ ಅನ್ನು ಹೊಂದಿದೆ.
MOST READ: ಐಷಾರಾಮಿ ಫೋಕ್ಸ್‌ವ್ಯಾಗನ್ ಎಸ್‍ಯುವಿಯನ್ನು ಖರೀದಿಸಿದ ಜನಪ್ರಿಯ ಬಾಲಿವುಡ್ ನಟ

ಈ ಕಾರಿನಲ್ಲಿ 2.0 ಲೀಟರ್, ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 306 ಬಿಹೆಚ್‍ಪಿ ಪವರ್ ಮತ್ತು 400 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಇನ್ನು ಈ ಕಾರಿನಲ್ಲಿ 4 ಮ್ಯಾಟಿಕ್ ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಕೂಡ ಅಳವಡಿಸಲಾಗಿದೆ. ಈ ಎಎಂಜಿ ಎ35 ಕಾರು ಕೇವಲ 4.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಕಾರು ಎಂಎಫ್ಎ 2 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಕಾರುಗಳನ್ನು ನಾಕ್ ಡೌನ್(ಸಿಕೆಡಿ) ಮೂಲಕ ಭಾರತಕ್ಕೆ ತರಲಾಗುತ್ತದೆ.

ಚೀನಾ ಮಾರುಕಟ್ಟೆಯಲ್ಲಿ ಈ ಸೆಡಾನ್ ಉದ್ದವಾದ ವ್ಹೀಲ್ ಬೇಸ್‍ನಲ್ಲಿ ಮಾರಾಟವಾಗುತ್ತಿದೆ. ಭಾರತದಲ್ಲಿ ಈ ಸೆಡಾನ್ 2,729 ಎಂಎಂ ವ್ಹೀಲ್‍ಬೇಸ್ ಅನ್ನು ಹೊಂದಿದೆ. ಈ ಕಾರಿಗೆ ಎ-ಕ್ಲಾಸ್ ನಿಂದ ಪ್ರತ್ಯೇಕಿಸಲು ಮರ್ಸಿಡಿಸ್ ಸೆಡಾನ್ ಎ-ಕ್ಲಾಸ್ ಲಿಮೋಸಿನ್ ಎಂಬ ನಾಮಕರಣ ಮಾಡಲು ಮರ್ಸಿಡಿಸ್ ಕಂಪನಿ ನಿರ್ಧರಿಸಿದೆ.

ಈ ಐಷಾರಾಮಿ ಕಾರು ಭಾರತದಲ್ಲಿ ಬಿಡುಗಡೆಯಾದ ಬಳಿಕ ಆಡಿ ಎ2 ಮತ್ತು ಬಿಎಂಡಬ್ಲೂ 2 ಸೀರಿಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.40 ಲಕ್ಷಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.