ದೇಶದ ಮೊದಲ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸಿಕ್ತು ಗ್ರೀನ್ ಸಿಗ್ನಲ್

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರವು ಸಾಕಷ್ಟು ಇ-ಮೊಬಿಲಿಟಿ ವಲಯದ ಅಭಿವೃದ್ದಿಗಾಗಿ ಭಾರೀ ಪ್ರಮಾಣದ ಅನುದಾನ ಬಿಡುಗಡೆ ಮಾಡಿದ್ದು, ಸರ್ಕಾರಿ ವಲಯದಲ್ಲಿ ಮಾತ್ರವಲ್ಲದೆ ಅಲ್ಲದೇ ಖಾಸಗಿ ವಲಯದಲ್ಲೂ ಮಹತ್ವದ ಬದಲಾವಣೆಗೆ ಕಾರಣವಾಗಿದೆ.

ದೇಶದ ಮೊದಲ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸಿಕ್ತು ಗ್ರೀನ್ ಸಿಗ್ನಲ್

ವ್ಯಯಕ್ತಿಕ ಬಳಕೆಯ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸಲು ಹಲವು ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಇದೀಗ ಸಾರ್ವಜನಿಕ ಸಾರಿಗೆ ವಲಯಕ್ಕೂ ಸಾಕಷ್ಟು ವಿನಾಯ್ತಿಗಳನ್ನು ನೀಡುತ್ತಿರುವುದು ಹೊಸ ಭರವಸೆಗೆ ಕಾರಣವಾಗಿದೆ. ಮಾಲಿನ್ಯ ತಡೆ ಉದ್ದೇಶದಿಂದ ಸಾರ್ವಜನಿಕ ಬಳಕೆಯ ಎಲೆಕ್ಟ್ರಿಕ್ ಬಸ್‌ಗಳ ಬಿಡುಗಡೆಗೆ ಒತ್ತು ನೀಡಲಾಗುತ್ತಿದ್ದು, ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ ಅಂತರ್‌ರಾಜ್ಯಗಳ ನಡುವಿನ ಪ್ರಯಾಣಕ್ಕೂ ಸಿದ್ದವಾಗುತ್ತಿವೆ.

ದೇಶದ ಮೊದಲ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸಿಕ್ತು ಗ್ರೀನ್ ಸಿಗ್ನಲ್

ಮುಂಬೈ ಮೂಲದ ಮಿತ್ರಾ ಮೊಲಿಬಿಟಿ ಕೂಡಾ ಈ ನಿಟ್ಟಿನಲ್ಲಿ ಹೊಸ ಬದಲಾವಣೆಗೆ ಕಾರಣವಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಅಂತರ್‌ರಾಜ್ಯ ನಡುವಿನ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದೆ.

ದೇಶದ ಮೊದಲ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸಿಕ್ತು ಗ್ರೀನ್ ಸಿಗ್ನಲ್

ಅಂತರ್‌ರಾಜ್ಯ ನಡುವಿನ ಮೊದಲ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು, ಮಿತ್ರಾ ಮೊಲಿಬಿಟಿ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದ್ದಲ್ಲದೆ ಸರ್ಕಾರಿ ಸಾರಿಗೆ ವಲಯದಲ್ಲೂ ಶೀಘ್ರದಲ್ಲೇ ಅಂತರ್‌ರಾಜ್ಯ ನಡುವಿನ ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸಲಿವೆ ಎಂದಿದ್ದಾರೆ.

ದೇಶದ ಮೊದಲ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸಿಕ್ತು ಗ್ರೀನ್ ಸಿಗ್ನಲ್

ಕಳೆದ 5 ವರ್ಷಗಳಲ್ಲಿ ಭಾರತದಲ್ಲಿ ಸಾಕಷ್ಟು ಪ್ರಮಾಣದ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಿದ್ದು, ಮುಂದಿನ ಎರಡು ವರ್ಷಗಳಲ್ಲಿ ಮತ್ತೊಂದು ಹಂತದ ಬದಲಾವಣೆಯ ನೀರಿಕ್ಷೆಯಿದೆ ಎಂದಿರುವ ನಿತಿನ್ ಗಡ್ಕರಿಯರುವ ಎಲೆಕ್ಟ್ರಿಕ್ ವಾಹನಗಳಿಗಾಗಿ ಇ-ಹೈವೇ ನಿರ್ಮಾಣ ಮಾಡುವುದು ನಮ್ಮ ಗುರಿ ಎಂದಿದ್ದಾರೆ. ಇ-ಹೈವೇ ಗಳು ಸಾಕಷ್ಟು ಪ್ರಮಾಣದಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿರಲಿದ್ದು, ಇದು ಅಂತರ್‌ರಾಜ್ಯ ನಡುವೆ ನಡುವೆ ಸಂಚರಿಸುವ ವಾಹನಗಳಿಗೆ ಸಾಕಷ್ಟು ಅನುಕೂಲಕರವಾಗಲಿದೆ ಎಂದಿದ್ದಾರೆ.

ದೇಶದ ಮೊದಲ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸಿಕ್ತು ಗ್ರೀನ್ ಸಿಗ್ನಲ್

ಹಾಗೆಯೇ ಇದೇ ವರ್ಷಾಂತ್ಯಕ್ಕೆ ಸಾರ್ವಜನಿಕ ಸಾರಿಗೆ ವಲಯದಲ್ಲಿ ಸುಮಾರು 10 ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಆರಂಭವಾಗುತ್ತಿರುವ ಬಗ್ಗೆ ಭರವಸೆ ನೀಡಿರುವ ಕೇಂದ್ರ ಸಚಿವರು, ಇ-ಮೊಲಿಬಿಟಿ ಬೆಳವಣಿಗೆ ಪೂರಕವಾದ ನೀತಿ ನಿಯಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಬದ್ದವಾಗಿದೆ ಎಂದಿದ್ದಾರೆ.

ದೇಶದ ಮೊದಲ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸಿಕ್ತು ಗ್ರೀನ್ ಸಿಗ್ನಲ್

ಇನ್ನು ಮಿತ್ರಾ ಮೊಬಿಲಿಟಿ ಆರಂಭಿಸಿರುವ ಅಂತರ್‌ರಾಜ್ಯ ನಡುವಿನ ಪರ್ಪಲ್ ಎಲೆಕ್ಟ್ರಿಕ್ ಬಸ್ ಸಂಚಾರವು ಮುಂಬೈ ಮತ್ತು ಪುಣೆ ನಡುವೆ ಸಂಚರಿಸಲಿದ್ದು, ಹೊಸ ಎಲೆಕ್ಟ್ರಿಕ್ ಬಸ್ ಪ್ರತಿ ಚಾರ್ಜ್‌ಗೆ ಗರಿಷ್ಠ 300 ಕಿ.ಮೀ ಮೈಲೇಜ್ ರೇಂಜ್ ಹೊಂದಿದೆ.

ದೇಶದ ಮೊದಲ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸಿಕ್ತು ಗ್ರೀನ್ ಸಿಗ್ನಲ್

ಹಾಗೆಯೇ ಹೊಸ ಎಲೆಕ್ಟ್ರಿಕ್ ಬಸ್‌ನಲ್ಲಿ 43 ಪುಶ್‌ಬ್ಯಾಕ್ ಆಸನಗಳನ್ನು ಜೋಡಣೆ ಮಾಡಲಾಗಿದ್ದು, ಸುಖಕರ ಪ್ರಯಾಣಕ್ಕಾಗಿ ಹಲವು ಐಷಾರಾಮಿ ಸೌಲಭ್ಯಗಳನ್ನು ನೀಡಲಾಗಿದೆ. ಜೊತೆಗೆ ಹೊಸ ಬಸ್ ರನ್ನಿಂಗ್ ಕಾಸ್ಟ್ ಕೂಡಾ ಡೀಸೆಲ್ ಎಂಜಿನ್ ಬಸ್‌ಗಿಂತಲೂ ಸಾಕಷ್ಟು ಕಡಿಮೆ ಇರಲಿದೆ.

ದೇಶದ ಮೊದಲ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸಿಕ್ತು ಗ್ರೀನ್ ಸಿಗ್ನಲ್

ಮಾಹಿತಿಗಳ ಪ್ರಕಾರ ಅಂತರ್‌ರಾಜ್ಯ ನಡುವೆ ಸಂಚರಿಸುವ ಡೀಸೆಲ್ ಎಂಜಿನ್ ಬಸ್‌ಗಳ ರನ್ನಿಂಗ್ ಕಾಸ್ಟ್ ರೂ. 22 ಯಿಂದ ರೂ. 26 ಇದ್ದು, ಅದೇ ಎಲೆಕ್ಟ್ರಿಕ್ ಬಸ್‌ಗಳ ರನ್ನಿಂಗ್ ಕಾಸ್ಟ್ ಅಚ್ಚರಿ ಎನ್ನುವಂತೆ ರೂ. 8ರಿಂದ ರೂ. 10 ಆಗಿರುವುದು ಸಾಕಷ್ಟು ಅದಾಯ ಹರಿದು ಬರುವುದಲ್ಲದೆ ಮಾಲಿನ್ಯ ಕೂಡಾ ಪರಿಣಾಮಕಾರಿಯಾಗಿ ತಗ್ಗಲಿದೆ.

ದೇಶದ ಮೊದಲ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸಿಕ್ತು ಗ್ರೀನ್ ಸಿಗ್ನಲ್

ಇದೇ ಕಾರಣಕ್ಕೆ ಎಲೆಕ್ಟ್ರಿಕ್ ಬಸ್‌ಗಳ ಸಂಚಾರವನ್ನು ಹೆಚ್ಚಿಸುತ್ತಿರುವ ಮಿತ್ರಾ ಮೊಬಿಲಿಟಿ ಸಂಸ್ಥೆಯು ಈಗಾಗಲೇ ಮಧ್ಯಮ ಗಾತ್ರದ 1,300 ಎಲೆಕ್ಟ್ರಿಕ್ ಬಸ್‌ಗಳನ್ನು ವಾಣಿಜ್ಯ ಬಳಕೆಗಾಗಿ ನಿಯೋಜಿಸಿದ್ದು, ಇದೀಗ ಹೆಚ್ಚಿನ ಮೈಲೇಜ್ ರೇಂಜ್ ಹೊಂದಿರುವ ಇಂಟರ್‌ಸಿಟಿ ಬಸ್‌ಗಳನ್ನು ದೇಶದ ವಿವಿಧ ನಗರಗಳಿಗೆ ಪರಿಚಯಿಸಲು ಸಜ್ಜಾಗುತ್ತಿದೆ.

Most Read Articles

Kannada
English summary
Nitin Gadkari Inaugurates India's First Inter-City Electric Bus. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X