ವಾರದ ಟಾಪ್ 5 ಸುದ್ದಿ: ಹ್ಯುಂಡೈ ಐ20 ಬಿಡುಗಡೆ, ಥಾರ್ ವಿತರಣೆ, ಹೊಸ ಲುಕ್‌ನೊಂದಿಗೆ ಎಂಟ್ರಿ ಕೊಟ್ಟ ಕ್ಯಾಮೊ

ಭಾರತೀಯ ಆಟೋ ಉದ್ಯಮ ದಸರಾ ಮತ್ತು ದೀಪಾವಳಿ ಸಂಭ್ರಮದ ನಡುವೆ ನೀರಿಕ್ಷೆಗೂ ಮೀರಿ ಬೆಳವಣಿಗೆ ಸಾಧಿಸಿದ್ದು, ಹೊಸ ವಾಹಗಳ ಮಾರಾಟ ಪ್ರಕ್ರಿಯೆಯೂ ಜೋರಾಗಿದೆ. ಹಾಗೆಯೇ ಸ್ಥಗಿತವಾಗಿದ್ದ ಹೊಸ ವಾಹನಗಳ ಬಿಡುಗಡೆ ಪ್ರಕ್ರಿಯೆ ಕೂಡಾ ಹೆಚ್ಚಳವಾಗಿದ್ದು, ನವೆಂಬರ್ ಆರಂಭದಲ್ಲಿ ನಡೆದ ಪ್ರಮುಖ ಆಟೋ ಉದ್ಯಮ ಬೆಳವಣಿಗಳ ಬಗೆಗೆ ಈ ಲೇಖನದಲ್ಲಿ ನೋಡೋಣ.

ಹ್ಯುಂಡೈ ಐ20 ಬಿಡುಗಡೆ, ಥಾರ್ ವಿತರಣೆ, ಹೊಸ ಲುಕ್‌ನೊಂದಿಗೆ ಎಂಟ್ರಿ ಕೊಟ್ಟ ಕ್ಯಾಮೊ

ನವೆಂಬರ್ ಮೊದಲ ವಾರದಲ್ಲಿ ಹೊಸ ವಾಹನಗಳ ಬಿಡುಗಡೆ ಪ್ರಕ್ರಿಯೆ ಜೋರಾಗಿದ್ದು, ಪ್ರಮುಖ ಆಟೋ ಕಂಪನಿಗಳು ತಮ್ಮ ನ್ಯೂ ಜನರೇಷನ್ ವಾಹನಗಳ ಬಿಡುಗಡೆಯ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿವೆ. ಜೊತೆಗೆ ಕರೋನಾ ವೈರಸ್ ಪರಿಣಾಮ ಕಳೆದ ಐದಾರು ತಿಂಗಳಿನಿಂದ ತೀವ್ರ ಕುಸಿತ ಕಂಡಿದ್ದ ಹೊಸ ವಾಹನ ಮಾರಾಟದಲ್ಲೂ ಭಾರೀ ಹೆಚ್ಚಳವಾಗಿದ್ದು, ಟಾಪ್ 5 ಸುದ್ದಿಗಳು ಇಲ್ಲಿ ಪ್ರಕಟಿಸಲಾಗಿದೆ.

ಹ್ಯುಂಡೈ ಐ20 ಬಿಡುಗಡೆ, ಥಾರ್ ವಿತರಣೆ, ಹೊಸ ಲುಕ್‌ನೊಂದಿಗೆ ಎಂಟ್ರಿ ಕೊಟ್ಟ ಕ್ಯಾಮೊ

ನ್ಯೂ ಜನರೇಷನ್ ಹ್ಯುಂಡೈ ಐ20 ಬಿಡುಗಡೆ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಐ20 ನ್ಯೂ ಜನರೇಷನ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಸ್ಪೋರ್ಟಿ ವಿನ್ಯಾಸದೊಂದಿಗೆ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಿದೆ.

ಹ್ಯುಂಡೈ ಐ20 ಬಿಡುಗಡೆ, ಥಾರ್ ವಿತರಣೆ, ಹೊಸ ಲುಕ್‌ನೊಂದಿಗೆ ಎಂಟ್ರಿ ಕೊಟ್ಟ ಕ್ಯಾಮೊ

ಹೊಸ ಕಾರು ಪ್ರಮುಖ ಮೂರು ಎಂಜಿನ್ ಮಾದರಿಗಳೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.79 ಲಕ್ಷದಿಂದ ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ. 11.17 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಹ್ಯುಂಡೈ ಐ20 ಬಿಡುಗಡೆ, ಥಾರ್ ವಿತರಣೆ, ಹೊಸ ಲುಕ್‌ನೊಂದಿಗೆ ಎಂಟ್ರಿ ಕೊಟ್ಟ ಕ್ಯಾಮೊ

ಹೊಸ ಕಾರಿನಲ್ಲಿ ಒಂದು ಡೀಸೆಲ್ ಮತ್ತು ಎರಡು ಪೆಟ್ರೋಲ್ ಎಂಜಿನ್‌ಗಳ ಆಯ್ಕೆ ನೀಡಿದ್ದು, 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮಾದರಿಯು ಡಿಸಿಟಿ ಅಥವಾ ಆರು-ಸ್ಪೀಡಿನ ಐಎಂಟಿ ಟ್ರಾನ್ಸ್ ಮಿಷನ್‌ನೊಂದಿಗೆ 120-ಬಿಹೆಚ್‌ಪಿ ಉತ್ಪಾದಿಸುತ್ತದೆ. 1.2-ಲೀಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಹೊಂದಿರುವ ಎನ್‌ಎ ಕಪ್ಪಾ ಎಂಜಿನ್ ಮಾದರಿಯು ಐದು-ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 83-ಬಿಹೆಚ್‌ಪಿ ಪವರ್ ಉತ್ಪಾದಿಸಲಿದ್ದರೆ, 1.5-ಲೀಟರಿನ ಡೀಸೆಲ್ ಎಂಜಿನ್ ಮಾದರಿಯು ಆರು-ಸ್ಪೀಡಿನ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ 100-ಬಿಹೆಚ್‌ಪಿ ಮತ್ತು 240-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಹ್ಯುಂಡೈ ಐ20 ಬಿಡುಗಡೆ, ಥಾರ್ ವಿತರಣೆ, ಹೊಸ ಲುಕ್‌ನೊಂದಿಗೆ ಎಂಟ್ರಿ ಕೊಟ್ಟ ಕ್ಯಾಮೊ

ನಿಸ್ಸಾನ್ ಮ್ಯಾಗ್ನೈಟ್ ಕಾರು ಉತ್ಪಾದನೆಗೆ ಚಾಲನೆ

ನಿಸ್ಸಾನ್ ಕಂಪನಿಯು ತನ್ನ ಬಹುನೀರಿಕ್ಷಿತ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಇದೇ ವರ್ಷಾಂತ್ಯದೊಳಗೆ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಕಾರಿನ ಉತ್ಪಾದನೆಗೆ ಅಧಿಕೃತವಾಗಿ ಚಾಲನೆ ನೀಡಿದೆ. ಹೊಸ ಕಾರು ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಎಂಬ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ನೀಡಲಾಗಿದೆ.

ಹ್ಯುಂಡೈ ಐ20 ಬಿಡುಗಡೆ, ಥಾರ್ ವಿತರಣೆ, ಹೊಸ ಲುಕ್‌ನೊಂದಿಗೆ ಎಂಟ್ರಿ ಕೊಟ್ಟ ಕ್ಯಾಮೊ

ಬಿ-ಸೆಗ್ಮೆಂಟ್‌ನಲ್ಲಿರುವ ಪ್ರಮುಖ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳಿಗೆ ಪೈಪೋಟಿಯಾಗಿ ಬಿಡುಗಡೆಯಾಗುತ್ತಿರುವ ಮ್ಯಾಗ್ನೈಟ್ ಕಾರು ಸಬ್ ಫೋರ್ ಮೀಟರ್ ವಿನ್ಯಾಸ ಹೊಂದಿದ್ದು, 1.0-ಲೀಟರ್ ಸಾಮರ್ಥ್ಯದ ಎರಡು ವಿವಿಧ ಎಂಜಿನ್ ಆಯ್ಕೆ ಹೊಂದಲಿರುವ ಹೊಸ ಕಾರು ರೂ. 5.70 ಲಕ್ಷದಿಂದ ರೂ.9 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಹ್ಯುಂಡೈ ಐ20 ಬಿಡುಗಡೆ, ಥಾರ್ ವಿತರಣೆ, ಹೊಸ ಲುಕ್‌ನೊಂದಿಗೆ ಎಂಟ್ರಿ ಕೊಟ್ಟ ಕ್ಯಾಮೊ

ಟಾಟಾ ಹ್ಯಾರಿಯರ್ ಕ್ಯಾಮೊ ಎಡಿಷನ್ ಬಿಡುಗಡೆ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾದರಿಯಾದ ಹ್ಯಾರಿಯರ್ ಕಾರಿನಲ್ಲಿ ಹೊಸ ಬಣ್ಣದ ಆಯ್ಕೆ ಹೊಂದಿರುವ ಕ್ಯಾಮೊ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ವಿವಿಧ ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.40 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 20.30 ಲಕ್ಷ ಬೆಲೆ ಹೊಂದಿದೆ.

ಹ್ಯುಂಡೈ ಐ20 ಬಿಡುಗಡೆ, ಥಾರ್ ವಿತರಣೆ, ಹೊಸ ಲುಕ್‌ನೊಂದಿಗೆ ಎಂಟ್ರಿ ಕೊಟ್ಟ ಕ್ಯಾಮೊ

ಹ್ಯಾರಿಯರ್ ಕ್ಯಾಮೊ ಎಡಿಷನ್ ಮಾದರಿಯು ಎಕ್ಸ್‌ಟಿ , ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್, ಎಕ್ಸ್‌ಜೆಡ್ಎ ಮತ್ತು ಎಕ್ಸ್‌ಜೆಡ್ಎ ಪ್ಲಸ್ ವೆರಿಯೆಂಟ್ ಹೊಂದಿದ್ದು, ಕ್ಯಾಮೊ ಎಡಿಷನ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತ ಹೆಚ್ಚುವರಿಯಾಗಿ ರೂ.10 ಸಾವಿರದಿಂದ ರೂ.30 ಸಾವಿರದಷ್ಟು ದುಬಾರಿಯಾಗಿರಲಿದೆ. ಹೆಚ್ಚಿನ ಮಾಹಿತಿ ಈ ಲಿಂಕ್ ಕ್ಲಿಕ್ ಮಾಡಿ.

ಹ್ಯುಂಡೈ ಐ20 ಬಿಡುಗಡೆ, ಥಾರ್ ವಿತರಣೆ, ಹೊಸ ಲುಕ್‌ನೊಂದಿಗೆ ಎಂಟ್ರಿ ಕೊಟ್ಟ ಕ್ಯಾಮೊ

ಭರ್ಜರಿ ಬೆಲೆಗೆ ಮಾರಾಟವಾಯ್ತು ಮಹೀಂದ್ರಾ ಥಾರ್ ಮೊದಲ ಯುನಿಟ್

ಮಹೀಂದ್ರಾ ಕಂಪನಿಯು ಅಕ್ಟೋಬರ್ 2ರಂದು ಬಿಡುಗಡೆ ಮಾಡಿದ್ದ ಹೊಸ ತಲೆಮಾರಿನ ಥಾರ್ ಎಸ್‌ಯುವಿ ಮಾದರಿಯ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಕೋವಿಡ್ ಕೇರ್ ಪರಿಹಾರ ನಿಧಿಗಾಗಿ ಹೊಸ ಕಾರಿನ ಮೊದಲ ಯುನಿಟ್ ಅನ್ನು ಹರಾಜು ಪ್ರಕ್ರಿಯೆ ಮೂಲಕ ಭಾರೀ ಪ್ರಮಾಣದ ದೇಣಿಗೆ ಸಂಗ್ರಹಿಸಿದೆ.

ಹ್ಯುಂಡೈ ಐ20 ಬಿಡುಗಡೆ, ಥಾರ್ ವಿತರಣೆ, ಹೊಸ ಲುಕ್‌ನೊಂದಿಗೆ ಎಂಟ್ರಿ ಕೊಟ್ಟ ಕ್ಯಾಮೊ

ಹೊಸ ಥಾರ್ ಕಾರಿನ ಮೊದಲ ಯುನಿಟ್ ಮಾಲೀಕತ್ವಕ್ಕಾಗಿ ಆನ್‌ಲೈನ್ ಹರಾಜು ಪ್ರಕ್ರಿಯೆ ನಡೆಸಿದ್ದ ಮಹೀಂದ್ರಾ ಕಂಪನಿಯು ದಾಖಲೆ ಪ್ರಮಾಣದ ಮೊತ್ತಕ್ಕೆ ಮಾರಾಟ ಮಾಡಿದ್ದು, ದೆಹಲಿ ಮೂಲದ ಆನಂದ್ ಮಿಂದಾ ಎನ್ನುವವರು ರೂ. 1.11 ಕೋಟಿ ಬೆಲೆ ಪಾವತಿಸಿ ಹೊಸ ಥಾರ್ ಎಸ್‌ಯುವಿ ಕಾರಿನ ಮಾಲೀಕತ್ವ ಪಡೆದುಕೊಂಡಿದ್ದಾರೆ. ದೇಣಿಗಾಗಿ ಸಂಗ್ರಹಿಸಲಾಗಿರುವ ಭಾರೀ ಮೊತ್ತವನ್ನು ಮಹೀಂದ್ರಾ ಕಂಪನಿಯು ಸರ್ಕಾರೇತರ ಸಂಘ-ಸಂಸ್ಥೆಗಳ ಅಭಿವೃದ್ದಿ ಕಾರ್ಯಗಳಿಗೆ ಹಸ್ತಾಂತರಿಸಿದೆ. ಹೆಚ್ಚಿನ ಮಾಹಿತಿ ಈ ಲಿಂಕ್ ಕಿಕ್ಲ್ ಮಾಡಿ.

ಹ್ಯುಂಡೈ ಐ20 ಬಿಡುಗಡೆ, ಥಾರ್ ವಿತರಣೆ, ಹೊಸ ಲುಕ್‌ನೊಂದಿಗೆ ಎಂಟ್ರಿ ಕೊಟ್ಟ ಕ್ಯಾಮೊ

ದುಬಾರಿ ಬೆಲೆಯ ಬಿಎಂಡಬ್ಲ್ಯು ಎಕ್ಸ್3 ಎಂ ಬಿಡುಗಡೆ

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಎಕ್ಸ್3 ಎಂ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಕಾರು ಪ್ಯಾನ್ ಇಂಡಿಯಾ ಎಕ್ಸ್ ಶೋರೂಂ ಪ್ರಕಾರ ಬರೋಬ್ಬರಿ ರೂ.99.90 ಲಕ್ಷ ಬೆಲೆ ಹೊಂದಿದೆ.

ಹ್ಯುಂಡೈ ಐ20 ಬಿಡುಗಡೆ, ಥಾರ್ ವಿತರಣೆ, ಹೊಸ ಲುಕ್‌ನೊಂದಿಗೆ ಎಂಟ್ರಿ ಕೊಟ್ಟ ಕ್ಯಾಮೊ

ಎಕ್ಸ್3 ಎಂ ಕಾರು ಮಾದರಿಯು ಬ್ರ್ಯಾಂಡ್‌ನ ಮೊದಲ ಹೈ-ಪರ್ಫಾಮೆನ್ಸ್ ಮಿಡ್ ಸೈಜ್ ಎಸ್‍ಯುವಿಯಾಗಿದ್ದು, ಹೊಸ ಕಾರಿನಲ್ಲಿ 3.0-ಲೀಟರ್ ಸಾಮರ್ಥ್ಯದ 6 ಸಿಲಿಂಡರ್ ಟ್ವಿನ್ ಟರ್ಬೊ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 473-ಬಿಹೆಚ್‍ಪಿ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Most Read Articles

Kannada
English summary
Top 5 Car News Of The Week. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X