ಇದು ವಿಶ್ವದ ಅತಿ ಉದ್ದದ ಕಾರು..!

ಟ್ರಾಫಿಕ್ ಸಮಸ್ಯೆ ವಿಶ್ವದ ಬಹುತೇಕ ಎಲ್ಲಾ ದೇಶಗಳನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಜನಸಂಖ್ಯೆ ಹೆಚ್ಚಿದಂತೆಲ್ಲಾ ವಾಹನಗಳ ಸಂಖ್ಯೆಯು ಸಹ ಹೆಚ್ಚಾಗುತ್ತಿರುವುದು ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ.

ಇದು ವಿಶ್ವದ ಅತಿ ಉದ್ದದ ಕಾರು..!

ಅದರಲ್ಲೂ ಕಚೇರಿ ವೇಳೆಯಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆಯನ್ನು ಹೇಳತೀರದು. ಗೊತ್ತುಗುರಿಯಿಲ್ಲದೇ ತಯಾರಾಗಿರುವ ರಸ್ತೆಗಳಲ್ಲಿ ಆಂಬ್ಯುಲೆನ್ಸ್ ನಂತಹ ಎಮರ್ಜೆನ್ಸಿ ವಾಹನಗಳು ಸಾಗುವುದು ಸಹ ಕಷ್ಟವಾಗುತ್ತಿದೆ.

ಇದು ವಿಶ್ವದ ಅತಿ ಉದ್ದದ ಕಾರು..!

ವಾಹನ ದಟ್ಟಣೆ ಸಮಸ್ಯೆಯನ್ನು ಬಹುತೇಕ ಎಲ್ಲಾ ರಾಷ್ಟ್ರಗಳು ಎದುರಿಸುತ್ತಿವೆ. ಈ ಸನ್ನಿವೇಶದಲ್ಲಿ ಉದ್ದವಾಗಿರುವ ವಾಹನಗಳನ್ನು ಚಾಲನೆ ಮಾಡುವುದು ಕಷ್ಟಕರವಾಗಲಿದೆ. ಈ ಕಾರಣಕ್ಕೆ ಜನರು ಚಿಕ್ಕ ವಾಹನಗಳನ್ನು ಚಾಲನೆ ಮಾಡಲು ಬಯಸುತ್ತಾರೆ.

ಇದು ವಿಶ್ವದ ಅತಿ ಉದ್ದದ ಕಾರು..!

ವಾಹನ ತಯಾರಕ ಕಂಪನಿಗಳೂ ಸಹ ಉದ್ದವಾಗಿರುವ ವಾಹನಗಳ ಬದಲಿಗೆ ಚಿಕ್ಕ ವಾಹನಗಳನ್ನು ತಯಾರಿಸಲು ಹೆಚ್ಚು ಆದ್ಯತೆ ನೀಡುತ್ತವೆ. ಚಿಕ್ಕ ವಾಹನಗಳನ್ನು ಪಾರ್ಕ್ ಮಾಡಲು ಚಿಕ್ಕ ಜಾಗ ಸಾಕಾಗುತ್ತದೆ. ಇವುಗಳನ್ನು ಮೆಂಟೆನ್ ಮಾಡುವುದು ಸಹ ಸುಲಭ.

ಇದು ವಿಶ್ವದ ಅತಿ ಉದ್ದದ ಕಾರು..!

ಈ ಕಾರಣಕ್ಕೆ ಕಾರು ಪ್ರಿಯರು ಅದೇ ಪ್ರದೇಶದಲ್ಲಿ ಸವಾರಿ ಮಾಡಲು ಚಿಕ್ಕ ಕಾರುಗಳನ್ನು ಬಳಸುತ್ತಾರೆ. ಆದರೆ ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಹೊಸ ಕಾನ್ಸೆಪ್ಟ್ ಮಾದರಿಯ ಕಾರ್ ಅನ್ನು ಅಭಿವೃದ್ಧಿಪಡಿಸಿದೆ. ಈ ಕಾರು ಟೆಂಪೋ ಟ್ರಾವೆಲರ್‍‍ಗಿಂತ ಉದ್ದವಾಗಿದೆ.

ಇದು ವಿಶ್ವದ ಅತಿ ಉದ್ದದ ಕಾರು..!

ಟೆಂಪೋ ಟ್ರಾವೆಲರ್ 13 ಸೀಟುಗಳನ್ನು ಹೊಂದಿದ್ದರೆ, ಈ ಕಾರು ಕೇವಲ ಇಬ್ಬರನ್ನು ಮಾತ್ರ ಕರೆದೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಕಾರುಗಳನ್ನು ರಿವ್ಯೂ ಮಾಡುವ ಸೂಪರ್ ಕಾರ್ ಬ್ಲಾಂಡಿ ಎಂಬ ಯುಟ್ಯೂಬ್ ಚಾನೆಲ್ ಈ ಹೊಸ ಕಾರಿನ ಮಾಹಿತಿಯನ್ನು ಬಿಡುಗಡೆಗೊಳಿಸಿದೆ.

ಇದು ವಿಶ್ವದ ಅತಿ ಉದ್ದದ ಕಾರು..!

ವಿಷನ್ 6 ಎಂಬ ಹೆಸರಿನ ಈ ಕಾರು 6 ಮೀಟರ್ ಉದ್ದವನ್ನು ಹೊಂದಿದೆ. ಇದು ಇಷ್ಟು ಉದ್ದವನ್ನು ಹೊಂದಿರುವ ಪ್ರಪಂಚದ ಮೊದಲ ಕಾರ್ ಆಗಿದೆ. ಮರ್ಸಿಡಿಸ್ ಬೆಂಝ್ ಕಂಪನಿಯು ಈ ಕಾರಿನ ಕಾನ್ಸೆಪ್ಟ್ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಸದ್ಯಕ್ಕೆ ಈ ಕಾರ್ ಅನ್ನು ಉತ್ಪಾದನೆ ಮಾಡುತ್ತಿಲ್ಲವೆಂದು ಕಂಪನಿಯು ತಿಳಿಸಿದೆ.

ಇದು ವಿಶ್ವದ ಅತಿ ಉದ್ದದ ಕಾರು..!

ಮರ್ಸಿಡಿಸ್ ಬೆಂಝ್ ಕಂಪನಿಯು ಈ ಕಾರ್ ಅನ್ನು ಮೊದಲ ಬಾರಿಗೆ 2017ರ ಮಾಂಟೆರೋ ಕಾರ್ ವೀಕ್‍‍ನಲ್ಲಿ ಪ್ರದರ್ಶಿಸಿತ್ತು. ನಂತರ ಈ ಕಾರ್ ಅನ್ನು ಕಾನ್ಸೆಪ್ಟ್ ಮಾದರಿಯಾಗಿ ಪ್ರದರ್ಶಿಸಲಾಗಿತ್ತು. ಈ ಕಾರ್ ಅನ್ನು ಕ್ರೀಪಿ ಕ್ಲಾಸಿಕ್‍‍ನಂತೆ ವಿನ್ಯಾಸಗೊಳಿಸಲಾಗಿದೆ.

ಇದು ವಿಶ್ವದ ಅತಿ ಉದ್ದದ ಕಾರು..!

ಮರ್ಸಿಡಿಸ್ ಬೆಂಝ್ ಕಂಪನಿಯು ಈ ಕಾರಿನಲ್ಲಿ ಯಾವುದೇ ರೀತಿಯ ಆಧುನಿಕ ಟೆಕ್ನಾಲಜಿಗಳನ್ನು ಅಳವಡಿಸಿಲ್ಲ. ಈ ಕಾರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸುತ್ತಿರುವುದು ವಿಶೇಷ. ಈ ಕಾರ್ ಅನ್ನು ಜರ್ಮನಿಯಲ್ಲಿ ಚಲಾಯಿಸಿದ ಸೂಪರ್ ಕಾರ್ ಬ್ಲಾಂಡಿ ಈ ಕಾರು 100 ವರ್ಷ ಹಳೆಯ ಕಾರಿನಂತಿದೆ ಎಂದು ಹೇಳಿದೆ.

ಇದು ವಿಶ್ವದ ಅತಿ ಉದ್ದದ ಕಾರು..!

ಈ ಕಾರಿನ ವಿನ್ಯಾಸವು ದೋಣಿಯಂತಿದೆ. ಇದಕ್ಕೆ ಈ ಕಾರಿನಲ್ಲಿರುವ ಹಿಂಭಾಗದ ವಿನ್ಯಾಸವೇ ಸಾಕ್ಷಿಯಾಗಿದೆ. ಇದರ ಮುಂಭಾಗವು ಗಮನಸೆಳೆಯುವ ಗ್ರಿಲ್ ಅನ್ನು ಹೊಂದಿದೆ. ಕಾರಿನ ಮುಂಭಾಗದಲ್ಲಿರುವ ಬಾನೆಟ್ ಹಾಗೂ ಲೊಗೊಗಳು ಆಕರ್ಷಕವಾಗಿವೆ.

ಇದು ವಿಶ್ವದ ಅತಿ ಉದ್ದದ ಕಾರು..!

ಈ ಕಾರಿನಲ್ಲಿರುವ ಪ್ರತಿಯೊಂದು ಭಾಗವನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ತಯಾರಿಸಲಾಗಿದೆ. ಈ ಕಾರಿನೊಳಗೆ ಎರಡು ಪೆಡಲ್‍‍ಗಳಿವೆ. ಒಂದನ್ನು ಬ್ರೇಕ್‍‍ಗಳಿಗಾಗಿ ನೀಡಲಾಗಿದ್ದರೆ ಮತ್ತೊಂದನ್ನು ರೇಸಿಂಗ್‍‍ಗಾಗಿ ನೀಡಲಾಗಿದೆ. ಈ ಕಾರಿನಲ್ಲಿರುವ ಸೀಟುಗಳು ವಿಶಿಷ್ಟವಾದ ವಿನ್ಯಾಸವನ್ನು ಹೊಂದಿವೆ. ವಿಷನ್ 6 ಕಾರು ಹಲವಾರು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ.

ಇದು ವಿಶ್ವದ ಅತಿ ಉದ್ದದ ಕಾರು..!

ಟೆಂಪೋ ಟ್ರಾವೆಲರ್ 5.4 ಮೀಟರ್ ಉದ್ದವನ್ನು ಹೊಂದಿದ್ದರೆ, ಈ ವಿಷನ್ 6 ಕಾರು 6 ಮೀಟರ್ ಉದ್ದವನ್ನು ಹೊಂದಿದೆ. ಅಂದರೆ ಈ ಕಾರಿನ ಉದ್ದವು 19.7 ಅಡಿಗಳಾಗಿದೆ. ಆದರೆ ಈ ಕಾರಿನಲ್ಲಿ ಕೇವಲ ಇಬ್ಬರು ಮಾತ್ರ ಕೂರಬಹುದಾಗಿದೆ.

ಈ ಕಾರಿನಲ್ಲಿ ದೊಡ್ಡದಾದ ಸ್ಕ್ರೀನ್ ಅನ್ನು ಹೊಂದಿದೆ. ಈ ಸ್ಕ್ರೀನ್ ಕಾರಿನ ಹಾಗೂ ಚಾಲಕನಿಗೆ ಸಂಬಂಧಪಟ್ಟ ಹಲವು ಮಾಹಿತಿಗಳನ್ನು ಪ್ರದರ್ಶಿಸುತ್ತದೆ. ಮರ್ಸಿಡಿಸ್ ಬೆಂಝ್ ಈ ಕಾರಿನಲ್ಲಿ ಅಳವಡಿಸಿರುವ ಬ್ಯಾಟರಿಯನ್ನು ಒಂದು ಬಾರಿಗೆ ಪೂರ್ತಿಯಾಗಿ ಚಾರ್ಜ್ ಮಾಡಿದರೆ 322 ಕಿ.ಮೀಗಳವರೆಗೆ ಚಲಿಸುತ್ತದೆ.

ಇದು ವಿಶ್ವದ ಅತಿ ಉದ್ದದ ಕಾರು..!

ಈ ಕಾರಿನಲ್ಲಿರುವ ನಾಲ್ಕು ಎಲೆಕ್ಟ್ರಿಕ್ ಮೋಟರ್‍‍ಗಳು 750 ಬಿಹೆಚ್‍‍ಪಿ ಪವರ್ ಅಥವಾ 550 ಕಿ.ವ್ಯಾ ಪವರ್ ಉತ್ಪಾದಿಸುತ್ತವೆ. ಈ ಎಲೆಕ್ಟ್ರಿಕ್ ಮೋಟರ್‍‍ಗಳು 0 - 100 ಕಿ.ಮೀ ವೇಗವನ್ನು ಕೇವಲ 4 ಸೆಕೆಂಡುಗಳಲ್ಲಿ ಆಕ್ಸೆಲರೇಟ್ ಮಾಡುತ್ತವೆ.

Most Read Articles

Kannada
English summary
World's longest car Mercedes Maybach Vision 6. Read in Kannada.
Story first published: Wednesday, February 19, 2020, 11:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X