ಆಡಿ ಇ-ಟ್ರಾನ್ ಕ್ವಾಟ್ರೋ 55 ಎಲೆಕ್ಟ್ರಿಕ್ ಕಾರಿನ ವಿಡಿಯೋ ರಿವ್ಯೂ

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಆಡಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾಗಿರುವ ಇ-ಟ್ರಾನ್ ಎಸ್‌ಯುವಿಯನ್ನು ಭಾರತದಲ್ಲಿ ಮುಂದಿನ ತಿಂಗಳು 22ರಂದು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಹೊಸ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಆಡಿ ಕಂಪನಿಯು ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಮೊದಲ ಬಾರಿಗೆ 2019ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಪ್ರದರ್ಶನಗೊಳಿಸಿತ್ತು. ಹೊಸ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಈಗಾಗಲೇ ಯುರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿರುವ ಕಂಪನಿಯು ಕೋವಿಡ್ ಕಾರಣಕ್ಕೆ ಭಾರತದಲ್ಲಿನ ಬಿಡುಗಡೆಯನ್ನು ಪ್ರಕ್ರಿಯೆಯನ್ನು ಮುಂದೂಡಿಕೆ ಮಾಡಿತ್ತು. ಇದೀಗ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಆಡಿ ಇ-ಟ್ರಾನ್ ಸೇರಿದಂತೆ ಹಲವು ಹೊಸ ಕಾರುಗಳು ಬಿಡುಗಡೆಯಾಗುತ್ತಿದೆ.

ಇ-ಟ್ರಾನ್ ಹೊಸ ಕಾರು ಬಿಡುಗಡೆಗೂ ಮುನ್ನ ಆಡಿ ಕಂಪನಿಯು ಕಾರ್ಯಕ್ಷಮತೆಯ ಪರೀಕ್ಷೆಗಾಗಿ ಮಾಧ್ಯಮ ಸಂಸ್ಥೆಗಳನ್ನು ಆಹ್ವಾನಿಸಿತ್ತು. ಡ್ರೈವ್‌ಸ್ಪಾರ್ಕ್ ತಂಡಕ್ಕೂ ವಿಶೇಷ ಆಹ್ವಾನ ನೀಡಿದ್ದ ಕಂಪನಿಯು ಹೊಸ ಕಾರಿನ ಇ-ಟ್ರಾನ್ ಕ್ವಾಟ್ರೊ 55 ಮಾದರಿಯನ್ನು ಫಸ್ಟ್ ಡ್ರೈವ್ ಚಾಲನೆಗಾಗಿ ಹಸ್ತಾಂತರ ಮಾಡಿತ್ತು.

ಇ-ಟ್ರಾನ್ ಎಸ್‌ಯುವಿಯು 4,901 ಎಂಎಂ ಉದ್ದ, 1,935 ಎಂಎಂ ಅಗಲ, 1,629 ಎಂಎಂ ಎತ್ತರ, 2,928 ಎಂಎಂ ವ್ಹೀಲ್‌ಬೇಸ್, 600 ಲೀಟರ್ ಬೂಟ್ ಸ್ಪೇಸ್, 172 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, 50 ಕ್ವಾಟ್ರೋ ಮತ್ತು 55 ಕ್ವಾಟ್ರೋ ರೂಪಾಂತರಗಳನ್ನು ಹೊಂದಿದೆ.

ಆಡಿ ಇ-ಟ್ರಾನ್ ಕ್ವಾಟ್ರೋ 55 ಎಲೆಕ್ಟ್ರಿಕ್ ಕಾರಿನ ವಿಡಿಯೋ ರಿವ್ಯೂ

50 ಕ್ವಾಟ್ರೋ ಮಾದರಿಯು 71.2 ಕಿ.ವ್ಯಾ ಬ್ಯಾಟರಿ ಪ್ಯಾಕ್‌ನೊಂದಿಗೆ 312 ಬಿಹೆಚ್‌ಪಿ ಪವರ್ ಹಾಗೂ 540 ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ 55 ಕ್ವಾಟ್ರೋ ಮಾದರಿಯು 95 ಕಿ.ವ್ಯಾ ಬ್ಯಾಟರಿ ಪ್ಯಾಕ್‌ನೊಂದಿಗೆ 435 ಬಿಹೆಚ್‌ಪಿ ಪವರ್ ಹಾಗೂ 808 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹಾಗೆಯೇ ಬೂಸ್ಟ್ ಮೋಡ್‌ನಲ್ಲಿ 503 ಬಿಹೆಚ್‌ಪಿ ಪವರ್ ಹಾಗೂ 973 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಒಂದು ಬಾರಿ ಪೂರ್ತಿಯಾಗಿ ಚಾರ್ಜ್‌ ಆದ ನಂತರ ಇ-ಟ್ರಾನ್ ಎಸ್‌ಯುವಿಯು 441 ಕಿ.ಮೀಗಳವರೆಗೆ ಚಲಿಸುತ್ತದೆ

ಇ-ಟ್ರಾನ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.90 ಲಕ್ಷದಿಂದ ರೂ. 1 ಕೋಟಿ ಇರಬಹುದೆಂದು ಅಂದಾಜಿಸಲಾಗಿದ್ದು, ಹೊಸ ಕಾರು ಮರ್ಸಿಡಿಸ್ ಇಕ್ಯೂಸಿ 400 ಹಾಗೂ ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ಆಡಿ audi
English summary
Audi e-Tron Quattro 55 Review Video. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X