ದಂಡ ವಿಧಿಸುವ ಬದಲು ಎಟಿವಿಯಲ್ಲಿ ಸವಾರಿ ಮಾಡಿದ ಪೊಲೀಸ್ ಅಧಿಕಾರಿ

ಆಲ್ ಟೆರೈನ್ ವಾಹನ ಅಂದರೆ ಎಟಿವಿ ಗಳು ಭಾರತದಲ್ಲಿ ಜನಪ್ರಿಯವಾಗುತ್ತಿವೆ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಅನೇಕ ಹೊಸ ವಾಹನ ತಯಾರಕ ಕಂಪನಿಗಳು ಮಾರುಕಟ್ಟೆ ಪ್ರವೇಶಿಸಿದ ನಂತರ ಹೆಚ್ಚು ಜನಪ್ರಿಯವಾಗಿವೆ. ಕೆಲವು ವರ್ಷಗಳ ಹಿಂದೆ ಎಟಿವಿಗಳ ಮೇಲೆ ನಿಷೇಧ ವಿಧಿಸಲಾಗಿತ್ತು. ಆದರೆ ವಾಹನ ತಯಾರಕ ಕಂಪನಿಗಳು ವಾಹನಗಳನ್ನು ಟ್ರಾಕ್ಟರ್‌ಗಳಾಗಿ ಹೋಮೋಲೋಗ್ ಮಾಡಿದ ನಂತರ ಪರಿಸ್ಥಿತಿ ಬದಲಾಯಿತು.

ದಂಡ ವಿಧಿಸುವ ಬದಲು ಎಟಿವಿಯಲ್ಲಿ ಸವಾರಿ ಮಾಡಿದ ಪೊಲೀಸ್ ಅಧಿಕಾರಿ

ಆದರೂ ಹೆಚ್ಚಿನ ಎಟಿವಿಗಳಿಗೆ ಇನ್ನೂ ಸಾರ್ವಜನಿಕ ರಸ್ತೆಗಳಲ್ಲಿ ಅನುಮತಿ ನೀಡಲಾಗಿಲ್ಲ. ಸಾರ್ವಜನಿಕ ರಸ್ತೆಯಲ್ಲಿ ಎಟಿವಿ ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸ್ ಅಧಿಕಾರಿಯೊಬ್ಬರು ತಡೆದು ತಪಾಸಣೆ ನಡೆಸಿದ್ದಾರೆ. ನಂತರ ಅಲ್ಲಿ ಏನಾಯಿತು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ದಂಡ ವಿಧಿಸುವ ಬದಲು ಎಟಿವಿಯಲ್ಲಿ ಸವಾರಿ ಮಾಡಿದ ಪೊಲೀಸ್ ಅಧಿಕಾರಿ

ಎಟಿವಿ ಚಾಲನೆ ಮಾಡುತ್ತಿದ ವ್ಯೈಕ್ತಿಯಿಂದ ಪೊಲೀಸ್ ಸಿಬ್ಬಂದಿ ಎಟಿವಿ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದನ್ನು ಈ ವೀಡಿಯೊದಲ್ಲಿ ತೋರಿಸಲಾಗಿದೆ. ಎಟಿವಿ ವಾಹನದ ಮಾಲೀಕರು ಈ ವಾಹನದಲ್ಲಿರುವ ಎಲ್ಲಾ ಫೀಚರ್ ಗಳ ಬಗ್ಗೆ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡುತ್ತಾರೆ. ಅಂದ ಹಾಗೆ ಎಟಿವಿಗಳು ಕಾನೂನುಬದ್ಧವಾಗಿಲ್ಲದ ಕಾರಣಕ್ಕೆ ಅವುಗಳನ್ನು ನೋಂದಾಯಿಸಲು ಸಾಧ್ಯವಿಲ್ಲ. ಇದನ್ನೇ ಆ ವಾಹನದ ಮಾಲೀಕರು ಪೊಲೀಸರಿಗೆ ಹೇಳುತ್ತಾರೆ.

ದಂಡ ವಿಧಿಸುವ ಬದಲು ಎಟಿವಿಯಲ್ಲಿ ಸವಾರಿ ಮಾಡಿದ ಪೊಲೀಸ್ ಅಧಿಕಾರಿ

ಎಟಿವಿಯ ಸಾಮರ್ಥ್ಯಗಳನ್ನು ಪ್ರದರ್ಶಿಸುವಂತೆ ಪೊಲೀಸ್ ಅಧಿಕಾರಿ ವಾಹನ ಮಾಲೀಕರನ್ನು ಕೇಳುತ್ತಾರೆ. ಇದಕ್ಕೆ ಸ್ಪಂದಿಸುವ ವಾಹನ ಮಾಲೀಕರು ವಾಹನವನ್ನು ರಸ್ತೆಯ ಮೇಲ್ಮೈಯಿಂದ ಹೊರತೆಗೆಯುತ್ತಾರೆ. ಈ ವಾಹನವು 4 X 2 ಆಗಿದ್ದರೂ ಸಹ ಕಷ್ಟಕರ ಸಂದರ್ಭಗಳಲ್ಲಿ ಹೇಗೆ ಹೊರಬರಬಹುದು ಎಂಬುದನ್ನು ತೋರಿಸುತ್ತದೆ. ನಂತರ ಆ ವಾಹನದ ಮಾಲೀಕರು ಎಟಿವಿಯಲ್ಲಿರುವ ಎಲ್ಲಾ ಸ್ವಿಚ್‌ ಹಾಗೂ ಗೇರ್‌ಗಳ ಬಗ್ಗೆ ವಿವರಿಸುತ್ತಾರೆ.

ದಂಡ ವಿಧಿಸುವ ಬದಲು ಎಟಿವಿಯಲ್ಲಿ ಸವಾರಿ ಮಾಡಿದ ಪೊಲೀಸ್ ಅಧಿಕಾರಿ

ನಂತರ ಆ ಪೊಲೀಸ್ ಅಧಿಕಾರಿ ಎಟಿವಿ ವಾಹನವನ್ನು ಪರೀಕ್ಷಿಸಲು ಮುಂದಾಗುತ್ತಾರೆ. ಎಟಿವಿ ವಾಹನ ಚಾಲನೆ ಮಾಡಿದ ನಂತರ ಆ ಅಧಿಕಾರಿ ತಾವು ರಿಕ್ಷಾವನ್ನು ಚಾಲನೆ ಮಾಡುಟ್ಟಿರುವ ಭಾವನೆ ಮೂಡಿತು ಎಂದು ಹೇಳುತ್ತಾರೆ. ಇಂತಹ ವಾಹನಗಳನ್ನು ತಿರುಗಿಸಲು ಕಷ್ಟವಾಗುತ್ತದೆ. ಜೊತೆಗೆ ಸವಾರಿ ಮಾಡುವುದು ಸಹ ಕಷ್ಟವಾಗುತ್ತದೆ ಎಂದು ಆ ಪೊಲೀಸ್ ಅಧಿಕಾರಿ ಹೇಳಿದರು.

ಅಂದ ಹಾಗೆ ಭಾರತದಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಎಟಿವಿ ವಾಹನಗಳ ಬಳಕೆ ಕಾನೂನುಬಾಹಿರವಾಗಿದೆ. ಈ ವಾಹನಗಳನ್ನು ಚಾಲನೆ ಮಾಡುವ ಬಹುತೇಕ ಜನರು ನಿಯಮಗಳನ್ನು ಪಾಲಿಸದ ಕಾರಣ ಅವುಗಳನ್ನು ನೋಂದಾಯಿಸಲು ಸಹ ಅನುಮತಿ ನೀಡುವುದಿಲ್ಲ. ಆದರೆ ಕೆಲವು ವಾಹನ ತಯಾರಕ ಕಂಪನಿಗಳು ತಮ್ಮ ಎಟಿವಿಗಳನ್ನು ಟ್ರಾಕ್ಟರ್‌ಗಳಾಗಿ ಹೋಮೋಲಾಗ್ ಮಾಡಿದ್ದಾರೆ.

ದಂಡ ವಿಧಿಸುವ ಬದಲು ಎಟಿವಿಯಲ್ಲಿ ಸವಾರಿ ಮಾಡಿದ ಪೊಲೀಸ್ ಅಧಿಕಾರಿ

ಇದರಿಂದ ಎಟಿವಿಗಳನ್ನು ಟ್ರಾಕ್ಟರ್‌ಗಳಾಗಿ ಮಾರಾಟ ಮಾಡುತ್ತಾರೆ. ಇವುಗಳನ್ನು ನೋಂದಾಯಿಸಿ ಸಾರ್ವಜನಿಕ ರಸ್ತೆಗಳಲ್ಲಿ ಬಳಸಬಹುದು. ಭಾರತದಲ್ಲಿ ಡರ್ಟ್ ಬೈಕ್‌ಗಳ ಬಳಕೆಗೂ ಅನುಮತಿ ನೀಡುವುದಿಲ್ಲ. ಇವುಗಳನ್ನು ಸಾರ್ವಜನಿಕ ರಸ್ತೆಯಲ್ಲಿ ಬಳಸುವಂತಿಲ್ಲ. ಡರ್ಟ್ ಬೈಕುಗಳನ್ನು ಖಾಸಗಿ ಸ್ಥಳಗಳಲ್ಲಿ ಮಾತ್ರ ಬಳಸಬಹುದಾಗಿದೆ.

ದಂಡ ವಿಧಿಸುವ ಬದಲು ಎಟಿವಿಯಲ್ಲಿ ಸವಾರಿ ಮಾಡಿದ ಪೊಲೀಸ್ ಅಧಿಕಾರಿ

ಅದೇ ರೀತಿ ಎಟಿವಿಗಳನ್ನು ಸಹ ಫಾರಂಹೌಸ್‌ನಂತಹ ಖಾಸಗಿ ಸ್ಥಳಗಳಲ್ಲಿ ಬಳಸಬಹುದು. ಖಾಸಗಿ ಸ್ಥಳಗಳಲ್ಲಿ ಬಳಸಲು ಯಾವುದೇ ಅನುಮತಿ ಬೇಕಾಗಿಲ್ಲ. ಈ ವೀಡಿಯೊದಲ್ಲಿರುವ ಪೊಲೀಸ್ ಅಧಿಕಾರಿ ಎಟಿವಿ ಮಾಲೀಕನಿಗೆ ಸಾರ್ವಜನಿಕ ರಸ್ತೆಗಳಲ್ಲಿ ಎಟಿವಿಯನ್ನು ಮತ್ತೆ ಕಂಡರೆ ರೂ. 5,000 ದಂಡ ವಿಧಿಸುವುದಾಗಿ ಹೇಳುತ್ತಾರೆ. ಆದರೆ ಹೀಗೆ ಹೇಳುವ ಮುನ್ನ ಅವರೇ ಈ ಎಟಿವಿಯನ್ನು ಚಾಲನೆ ಮಾಡಿದ್ದರು.

ದಂಡ ವಿಧಿಸುವ ಬದಲು ಎಟಿವಿಯಲ್ಲಿ ಸವಾರಿ ಮಾಡಿದ ಪೊಲೀಸ್ ಅಧಿಕಾರಿ

ಇತ್ತೀಚಿಗೆ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರ ಕಾರು ಚಾಲಕನಿಗೆ ಪೊಲೀಸರು ರೂ. 200 ದಂಡ ವಿಧಿಸಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಈ ಘಟನೆ ನಡೆದಿದೆ. ಅಸಾದುದ್ದೀನ್ ಓವೈಸಿ ರವರು ಚಲಿಸುತ್ತಿದ್ದ ಕಾರಿನಲ್ಲಿ ನಂಬರ್ ಪ್ಲೇಟ್ ಇಲ್ಲದ ಕಾರಣ ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಸಾದುದ್ದೀನ್ ಓವೈಸಿ ಅವರು ಸೊಲ್ಲಾಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದಾಗ ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಂಡ ವಿಧಿಸುವ ಬದಲು ಎಟಿವಿಯಲ್ಲಿ ಸವಾರಿ ಮಾಡಿದ ಪೊಲೀಸ್ ಅಧಿಕಾರಿ

ಹೈದರಾಬಾದ್ ಮೂಲದ ಅಸಾದುದ್ದೀನ್ ಓವೈಸಿ ದೇಶಾದ್ಯಂತ ಖ್ಯಾತಿ ಪಡೆದಿರುವ ರಾಜಕಾರಣಿ. ಇಂತಹ ರಾಜಕಾರಣಿಗೆ ದಂಡ ವಿಧಿಸಿರುವುದು ದೇಶಾದ್ಯಂತ ಸಂಚಲನ ಮೂಡಿಸಿದೆ. ಇದೇ ವೇಳೆ ದಿಟ್ಟತನ ತೋರಿ ಅಸಾದುದ್ದೀನ್ ಓವೈಸಿ ರವರ ಕಾರಿಗೆ ದಂಡ ವಿಧಿಸಿದ ಪೊಲೀಸ್ ಅಧಿಕಾರಿಗೆ ಪ್ರಶಂಸೆ ವ್ಯಕ್ತವಾಗಿದೆ. ಅವರ ಈ ಕಾರ್ಯವನ್ನು ಮೆಚ್ಚಿ, ಅವರಿಗೆ ರೂ. 5 ಸಾವಿರ ಬಹುಮಾನ ನೀಡಲಾಗಿದೆ.

ದಂಡ ವಿಧಿಸುವ ಬದಲು ಎಟಿವಿಯಲ್ಲಿ ಸವಾರಿ ಮಾಡಿದ ಪೊಲೀಸ್ ಅಧಿಕಾರಿ

ಭಾರತದಲ್ಲಿ ಕೆಲವರು ನಂಬರ್ ಪ್ಲೇಟ್ ಇಲ್ಲದೆ ವಾಹನ ಚಲಾಯಿಸುವ ಕೆಟ್ಟ ಅಭ್ಯಾಸವನ್ನು ಹೊಂದಿದ್ದಾರೆ. ಅದೇ ರೀತಿ ನಂಬರ್ ಪ್ಲೇಟ್ ಹೇಗಿರಬೇಕು ಎಂಬುದಕ್ಕೆ ಹಲವಾರು ನಿಯಮಗಳಿವೆ. ಆದರೆ ಆ ನಿಯಮಗಳನ್ನು ಸಹ ಗಾಳಿಗೆ ತೂರಲಾಗಿದೆ. ಭಾರತದಲ್ಲಿನ ಬಹುತೇಕ ವಾಹನ ಮಾಲೀಕರು ತಮ್ಮ ಇಷ್ಟ ಬಂದ ರೀತಿಯಲ್ಲಿ ನಂಬರ್ ಪ್ಲೇಟ್‌ಗಳನ್ನು ವಿನ್ಯಾಸಗೊಳಿಸುತ್ತಾರೆ.

ದಂಡ ವಿಧಿಸುವ ಬದಲು ಎಟಿವಿಯಲ್ಲಿ ಸವಾರಿ ಮಾಡಿದ ಪೊಲೀಸ್ ಅಧಿಕಾರಿ

ಇಂತಹ ವಾಹನಗಳು ರಸ್ತೆಗಳಲ್ಲಿ ಹೆಚ್ಚಾಗಿ ಕಾಣುತ್ತವೆ. ನಿಯಮಗಳ ಪ್ರಕಾರ ನಂಬರ್ ಪ್ಲೇಟ್‌ನಲ್ಲಿರುವ ಸಂಖ್ಯೆಗಳು ಹಾಗೂ ಅಕ್ಷರಗಳು ಸ್ಪಷ್ಟವಾಗಿ ಗೋಚರಿಸಬೇಕು. ಆದರೆ ಸಾಕಷ್ಟು ಮಂದಿ ವಿವಿಧ ವಿನ್ಯಾಸದ ನಂಬರ್ ಪ್ಲೇಟ್ ಗಳನ್ನು ಬಳಸುತ್ತಾರೆ. ಕೆಲವರು ತಮ್ಮ ವಾಹನಗಳ ನಂಬರ್ ಪ್ಲೇಟ್‌ನಲ್ಲಿ ರಾಜಕೀಯ ಪಕ್ಷಗಳ ನಾಯಕರು, ನಟ - ನಟಿಯರ ಚಿತ್ರಗಳನ್ನು, ಜಾತಿ ಸೂಚಕ ಹೆಸರುಗಳನ್ನು ಬಳಸುತ್ತಾರೆ.

Most Read Articles

Kannada
English summary
Cop goes for a round in atv instead of imposing fine video details
Story first published: Thursday, December 2, 2021, 15:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X