ಕೇವಲ 2.7 ಸೆಕೆಂಡ್‌ನಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ, ಹೊಸ ಫೆರಾರಿ ಕಾರು ಅನಾವರಣ

ಇಟಲಿ ಮೂಲದ ಸೂಪರ್‍‍‍ಕಾರ್ ಉತ್ಪಾದನಾ ಸಂಸ್ಥೆಯಾದ ಫೆರಾರಿ ತನ್ನ ಇತ್ತೀಚೆಗೆ 812 ಸೂಪರ್‌ಫಾಸ್ಟ್‌ನ ಸ್ಪೆಷಲ್ ಎಡಿಷನ್ ಮಾದರಿಯ ಅಧಿಕೃತ ಚಿತ್ರಗಳನ್ನು ಬಹಿರಂಗಪಡಿಸಿದೆ. ಫೆರಾರಿ ಈ 812 ಸೂಪರ್‌ಫಾಸ್ಟ್‌ನ ಸ್ಪೆಷಲ್ ಎಡಿಷನ್ ಮಾದರಿನ್ನು ಮುಂದಿನ ತಿಂಗಳ 5 ರಂದು ಪರಿಚಯಿಸಲಿದೆ.

ಕೇವಲ 2.7 ಸೆಕೆಂಡ್‌ನಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ: ಹೊಸ ಫೆರಾರಿ ಕಾರು ಅನಾವರಣ

ಈ ಹೊಸ ಫೆರಾರಿ 812 ಸೂಪರ್‌ಫಾಸ್ಟ್‌ನ ಸ್ಪೆಷಲ್ ಎಡಿಷನ್ ಅನ್ನು ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಸೀಮಿತ ಆವೃತ್ತಿಯ ಮಾದರಿಯು ಸ್ಟ್ಯಾಂಡರ್ಡ್ 812 ಸೂಪರ್‌ಫಾಸ್ಟ್‌ನ ಮೇಲೆ ಹಲವಾರು ಕಾಸ್ಮೆಟಿಕ್ ಮತ್ತು ಯಾಂತ್ರಿಕ ನವೀಕರಣಗಳನ್ನು ಪಡೆಯುತ್ತದೆ, ನವೀಕರಣಗಳು ಹುಡ್ನಾದ್ಯಂತ ಫೈಬರ್ ಬ್ಲೇಡ್, ಅಗ್ರೇಸಿವ್ ಆಗಿ ವಿನ್ಯಾಸಗೊಳಿಸಲಾಗಿದೆ.

ಕೇವಲ 2.7 ಸೆಕೆಂಡ್‌ನಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ: ಹೊಸ ಫೆರಾರಿ ಕಾರು ಅನಾವರಣ

ಇನ್ನು ಫೆರಾರಿ 812 ಸೂಪರ್‌ಫಾಸ್ಟ್‌ ಸ್ಪೆಷಲ್ ಎಡಿಷನ್ ಮುಂಭಾಗದ ಬಂಪರ್ ಮತ್ತು ಸ್ಪ್ಲಿಟರ್, ಹಿಂಭಾಗದಲ್ಲಿ ಹಗುರವಾದ ಅಲ್ಯೂಮಿನಿಯಂ ಫಲಕ, ದೊಡ್ಡದಾದ ಸಂಯೋಜಿತ ಸ್ಪಾಯ್ಲರ್ ಮತ್ತು ಹೊಸ ಎಕ್ಸಾಸ್ಟ್ ಟಿಪ್, ಇನ್ನು ಹೊಸ ಡಿಫ್ಯೂಸರ್ ಅನ್ನು ಸಹ ಪಡೆಯುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಕೇವಲ 2.7 ಸೆಕೆಂಡ್‌ನಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ: ಹೊಸ ಫೆರಾರಿ ಕಾರು ಅನಾವರಣ

ಫೆರಾರಿ 812 ಸೂಪರ್‌ಫಾಸ್ಟ್‌ ಸ್ಪೆಷಲ್ ಎಡಿಷನ್ ಕಾರಿನಲ್ಲಿ 6.5-ಲೀಟರ್ ವಿ-12 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 818 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಇದರ ಸ್ಟ್ಯಾಂಡರ್ಡ್ ಮಾದರಿಯು 788 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಕೇವಲ 2.7 ಸೆಕೆಂಡ್‌ನಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ: ಹೊಸ ಫೆರಾರಿ ಕಾರು ಅನಾವರಣ

ಇನ್ನು ಈ ಕಾರು ಕೇವಲ 2.7 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಸ್ಪೆಷಲ್ ಎಡಿಷನ್ ನಲ್ಲಿರುವ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಆಳವಡಿಸಲಾಗಿದೆ. ಈ ಗೇರ್‌ಬಾಕ್ಸ್ ಈ ಕಾರಿನ ಹಿಂಭಾಗಕ್ಕೆ ಪವರ್ ಅನ್ನು ಕಳುಹಿಸುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಕೇವಲ 2.7 ಸೆಕೆಂಡ್‌ನಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ: ಹೊಸ ಫೆರಾರಿ ಕಾರು ಅನಾವರಣ

ಸೀಮಿತ ಆವೃತ್ತಿಯ ಕಾರುಗಳು ಫೆರಾರಿಯ ಸೈಡ್ ಸ್ಲಿಪ್ ಕಂಟ್ರೋಲ್(ಎಸ್‌ಎಸ್‌ಸಿ ಟ್ರ್ಯಾಕ್ಷನ್ ಮತ್ತು ಸ್ಟೆಬಿಲಿಟಿ ಕಂಟ್ರೋಲ್ ಸಿಸ್ಟಂ ಅನ್ನು ಪರಿಚಯಿಸಲಿದೆ. ಇನ್ನು ಈ ಮಾದರಿಯು ರೇರ್ ವ್ಹೀಲ್ ಸ್ಟಿಯರಿಂಗ್ ಕೂಡ ಪಡೆಯಲಿದೆ.

ಕೇವಲ 2.7 ಸೆಕೆಂಡ್‌ನಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ: ಹೊಸ ಫೆರಾರಿ ಕಾರು ಅನಾವರಣ

ಫೆರಾರಿ ಸೂಪರ್‌ಫಾಸ್ಟ್ ವಿಶೇಷ ಆವೃತ್ತಿಯ ಇಂಟಿರಿಯರ್ ಸಿಲ್ವರ್ ಮತ್ತು ಬ್ಲ್ಯಾಕ್ ಬಣ್ಣಗಳಿಂದ ಕೂಡಿದೆ. ಈ ಹೊಸ ಫೆರಾರಿ ಸ್ಪೆಷಲ್ ಎಡಿಷನ್ ಆಕರ್ಷಕ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಪರ್ಫಾಮೆನ್ಸ್ ಕಾರು ಪ್ರಿಯರಿಗೆ ಈ ಹೊಸ ಸ್ಪೆಷಲ್ ಎಡಿಷನ್ ಉತ್ತಮ ಆಯ್ಕೆಯಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಕೇವಲ 2.7 ಸೆಕೆಂಡ್‌ನಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ: ಹೊಸ ಫೆರಾರಿ ಕಾರು ಅನಾವರಣ

ಫೆರಾರಿ ಕಾರುಗಳು ತನ್ನ ಆಕರ್ಷಕ ವಿನ್ಯಾಸ, ಕಾರ್ಯಕ್ಷಮತೆ ಹಾಗೂ ತಂತ್ರಜ್ಞಾನಕ್ಕಾಗಿ ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದೆ. ಫೆರಾರಿ ಸೂಪರ್ ಕಾರುಗಳು ವಿಶ್ವದ ಮಿಲಿಯನೇರ್‌ಗಳ ನೆಚ್ಚಿನ ಕಾರುಗಳಾಗಿವೆ. ಫೆರಾರಿ ಕಂಪನಿಯು ತನ್ನ ಕಾರು ಪ್ರಿಯರಿಗಾಗಿ ಓಪನ್ ಹಾಗೂ ಕ್ಲೋಸ್ ರೂಫ್ ಗಳನ್ನು ಹೊಂದಿರುವ ಹೊಸ ಹೈ-ಪರ್ಫಾಮೆನ್ಸ್ ಕನ್ವರ್ಟಿಬಲ್ ಕಾರು ಮಾದರಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

ಕೇವಲ 2.7 ಸೆಕೆಂಡ್‌ನಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ: ಹೊಸ ಫೆರಾರಿ ಕಾರು ಅನಾವರಣ

ಫೆರಾರಿ 812 ಸೂಪರ್‌ಫಾಸ್ಟ್‌ನ ಸ್ಪೆಷಲ್ ಎಡಿಷನ್ ಅನ್ನು ಸೀಮಿತ ಸಂಖ್ಯೆಯಲ್ಲಿ ಉತ್ಪಾದನೆಯನ್ನು ಮಾಡಲಾಗುತ್ತದೆ. ಕಾರು ಬಿಡುಗಡೆಗೂ ಮುನ್ನವೇ ಈ ಎಲ್ಲಾ ಸೀಮಿತ ಮಾದರಿಗಳಿಗೆ ಬುಕ್ಕಿಂಗ್ ಆಗಬಹುದೆಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Ferrari Unveiled The 812 Superfast Limited Edition. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X