ವಿನೂತನ ವಿನ್ಯಾಸದ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಿದ ಫಿಯೆಟ್

ಇಟಾಲಿಯನ್ ಆಟೋ ಉತ್ಪಾದನಾ ಕಂಪನಿಯಾಗಿರುವ ಫಿಯೆಟ್ ಆಟೋಮೊಬೈಲ್ಸ್ ಜಾಗತಿಕ ಮಾರುಕಟ್ಟೆಗಳಿಗಾಗಿ ತನ್ನ ಹೊಚ್ಚ ಹೊಸ ಮೊದಲ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರು ಮಧ್ಯಮ ಗಾತ್ರದ ಪ್ರಮುಖ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಪೈಪೋಟಿ ನೀಡಲಿದೆ.

ವಿನೂತನ ವಿನ್ಯಾಸದ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಿದ ಫಿಯೆಟ್

ಯುರೋಪ್ ಮತ್ತು ಅಮೆರಿಕದಲ್ಲಿ ಈ ಹಿಂದೆ ಜೀಪ್ ಮಾತೃಸಂಸ್ಥೆಯಾದ ಕ್ರಿಸ್ಲರ್ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಫಿಯೆಟ್ ಕಂಪನಿಯು ಸದ್ಯ ಹೊಚ್ಚ ಹೊಸ ಕಾರು ಉತ್ಪಾದನಾ ಕಂಪನಿಯಾದ ಸ್ಟೆಲ್ಯಾಂಡಿಸ್ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ಯುರೋಪಿನ್ ಕಾರು ಉತ್ಪಾದನಾ ಕಂಪನಿಯಾದ ಪಿಎಸ್ಎ ಮತ್ತು ಅಮೆರಿಕದ ಕ್ರಿಸ್ಲರ್ ಕಂಪನಿಗಳು ಒಂದಾಗಿ ಹುಟ್ಟುಹಾಕಿರುವ ಸ್ಟೆಲ್ಯಾಂಡಿಸ್ ಕಂಪನಿಯು ಇದೀಗ ಹೊಸ ಬ್ರಾಂಡ್ ಆಗಿ ಹೊರಹೊಮ್ಮಿದ್ದು, ಹೊಸ ಕಂಪನಿಯ ಅಧೀನದಲ್ಲಿ ಫಿಯೆಟ್ ಕೂಡಾ ಜಂಟಿ ಕಾರ್ಯಾಚರಣೆ ಮುಂದುವರಿಸಿದೆ.

ಹೊಸ ಯೋಜನೆಯ ಭಾಗವಾಗಿ ಪಿಎಸ್ಎ ಕಂಪನಿಯು ಫಿಯೆಟ್ ಜೊತೆಗೂಡಿ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಅಭಿವೃದ್ದಿಗೊಳಿಸಿದ್ದು, ಹೊಸ ಕಾರನ್ನು ಲ್ಯಾಟಿನ್ ಅಮೆರಿಕ ದೇಶಗಳಿಗಾಗಿ ಅಭಿವೃದ್ದಿಗೊಳಿಸಿದೆ.

ವಿನೂತನ ವಿನ್ಯಾಸದ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಿದ ಫಿಯೆಟ್

ಸ್ಟೆಲ್ಯಾಂಡಿಸ್ ಅಧೀನದಲ್ಲಿ ಪಿಎಸ್ಎ ಗ್ರೂಪ್ ಮತ್ತು ಕ್ರಿಸ್ಲರ್ ಕಾರ್ಯನಿರ್ವಹಣೆ ಮಾಡಿದ್ದಲ್ಲಿ ಪಿಎಸ್ಎ ಗ್ರೂಪ್ ಅಧೀನದಲ್ಲಿ ಸಿಟ್ರನ್, ಫ್ಯೂಜೊ ಮತ್ತು ಕ್ರಿಸ್ಲರ್ ಅಧೀನದಲ್ಲಿ ಜೀಪ್, ಡಾಡ್ಜ್, ರಾಮ್, ಮೊಪೆರ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಮುಖ ಕಾರ್ ಬ್ರಾಂಡ್‌ಗಳನ್ನು ಒಳಗೊಂಡಿರುವ ಫಿಯೆಟ್ ಕಂಪನಿಯು ಸಹಭಾಗಿತ್ವ ಯೋಜನೆ ಅಡಿ ಹೊಸ ಕಾರನ್ನು ಅಭಿವೃದ್ದಿಪಡಿಸಿದೆ.

ವಿನೂತನ ವಿನ್ಯಾಸದ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಿದ ಫಿಯೆಟ್

ಹೊಸ ಕಾರನ್ನು ಫಿಯೆಟ್ ಕಂಪನಿಯೇ ಅಭಿವೃದ್ದಿಪಡಿಸಿದರೂ ಹೊಸ ಕಾರಿನ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗಳನ್ನು ಪಿಎಸ್ಎ ಅಂಗಸಂಸ್ಥೆಯಾದ ಫ್ಯೂಜೊ ನಿರ್ವಹಿಸಿದ್ದು, ಹೊಸ ಕಾರನ್ನು ಸದ್ಯಕ್ಕೆ ಪ್ರೊಜೆಟ್ಟೊ 363 ಕೋಡ್ ನೆಮ್ ಆಧಾರದ ಮೇಲೆ ಅನಾವರಣಗೊಳಿಸಿದೆ. ಹೊಸ ಕಾರನ್ನು ಫಿಯೆಟ್ ಕಂಪನಿಯು ಕ್ಲಾಸಿಕ್ ಇಟಾಲಿಯನ್ ವಿನ್ಯಾಸದೊಂದಿಗೆ ಅನಾವರಣಗೊಳಿಸಿದ್ದು, ಕಂಪ್ಯಾಕ್ಟ್ ಎಸ್‍ಯುವಿ ಮಾದರಿಯು ಜೀಪ್ ರೆನೆಗಡ್ ಮಾದರಿಯನ್ನು ಆಧರಿಸಿ ಸಿದ್ದಗೊಂಡಿದೆ.

ವಿನೂತನ ವಿನ್ಯಾಸದ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಿದ ಫಿಯೆಟ್

ಹೊಸ ಕಾರಿನ ಉತ್ಪಾದನೆಗಾಗಿ ಫಿಯೆಟ್ ಕಂಪನಿಯು ತನ್ನ ಹೊಸ ಎಂಎಲ್ಎ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ನಿರ್ಮಾಣ ಮಾಡಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ನಿರ್ಮಾಣವಾಗುತ್ತಿರುವ ಪ್ರಮುಖ ಕಾರು ಯುರೋಪಿನ್ ಮಾರುಕಟ್ಟೆಗಳಲ್ಲಿ ಅತ್ಯುತ್ತಮ ಬೇಡಿಕೆ ಹೊಂದಿವೆ.

ಹೊಸ ಸಹಭಾಗಿತ್ವ ಯೋಜನೆಗಾಗಿ ಫಿಯೆಟ್ ಕಂಪನಿಯು ಪ್ರೊಜೆಟ್ಟೊ 363 ಮಾದರಿಯನ್ನು ನಿರ್ಮಾಣ ಮಾಡಿದ್ದು, ಹೊಸ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುವ ಬಗೆಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಪ್ರೊಜೆಟ್ಟೊ 363 ಮಾದರಿಯನ್ನೇ ಹೊಲುವ ಜೀಪ್ ರನೆಗಡ್ ಮತ್ತು ಸಿಟ್ರನ್ ಸಿ21 ಕಾರುಗಳನ್ನು ಬಿಡುಗಡೆ ಮಾಡಲು ಸಿಟ್ರನ್ ಮತ್ತು ಜೀಪ್ ಕಂಪನಿಗಳು ಯೋಜನೆ ರೂಪಿಸುತ್ತಿವೆ.

ವಿನೂತನ ವಿನ್ಯಾಸದ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಿದ ಫಿಯೆಟ್

ಪ್ರೊಜೆಟ್ಟೊ 363 ಕಾರು ಮಾದರಿಯು ಸದ್ಯಕ್ಕೆ ಲ್ಯಾಟಿನ್ ಅಮೆರಿಕ ಮಾರುಕಟ್ಟೆಗಳಲ್ಲಿ ಮಾತ್ರ ಬಿಡುಗಡೆಯಾಗಲಿದ್ದು, ಹೊಸ ಕಾರಿನಲ್ಲಿ ಫಿಯೆಟ್ ಕಂಪನಿಯೇ 1.0-ಲೀಟರ್ ಟರ್ಬೊ ಪೆಟ್ರೋಲ್, 1.3-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡುತ್ತಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ವಿನೂತನ ವಿನ್ಯಾಸದ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಿದ ಫಿಯೆಟ್

ಭಾರತದಲ್ಲೂ ಕೂಡಾ ಪ್ರಮುಖ ಕಾರು ಕಂಪನಿಗಳಿಗೆ ಎಂಜಿನ್ ಒದಗಿಸುವ ಫಿಯೆಟ್ ಕಂಪನಿಯು ಹೊಸ ಎಮಿಷನ್ ನಂತರ ಎಂಜಿನ್ ಪೂರೈಕೆಯನ್ನು ಕೂಡಾ ತಗ್ಗಿಸಿದ್ದು, ಸದ್ಯ ಯಾವುದೇ ಕಾರು ಮಾದರಿಯನ್ನು ಮಾರಾಟ ಮಾಡುತ್ತಿಲ್ಲ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ವಿನೂತನ ವಿನ್ಯಾಸದ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಿದ ಫಿಯೆಟ್

ಹೊಸ ಸಹಭಾಗಿತ್ವ ಯೋಜನೆಯೊಂದಿಗೆ ಸದ್ಯ ಯುರೋಪ್, ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕ ರಾಷ್ಟ್ರಗಳ ಗಮನಹರಿಸುತ್ತಿದ್ದು, ಪ್ರೊಜೆಟ್ಟೊ 363 ಕಾರು ಮಾದರಿಯನ್ನೇ ಆಧರಿಸಿರುವ ಸಿಟ್ರನ್ ಮತ್ತು ಜೀಪ್ ಹೊಸ ಕಂಪ್ಯಾಕ್ಟ್ ಎಸ್‌ಯುವಿಗಳು ಬಿಡುಗೆಯಾಗಲಿವೆ.

Most Read Articles

Kannada
Read more on ಫಿಯೆಟ್ fiat
English summary
Fiat Takes The Wraps Off Its Upcoming Compact SUV. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X