ಏಪ್ರಿಲ್ ತಿಂಗಳಿಂದ ಭಾರತದಲ್ಲಿ ದುಬಾರಿಯಾಗಲಿವೆ ಪೋರ್ಡ್ ಕಾರುಗಳು

ಹೊಸ ಹಣಕಾಸು ವರ್ಷದಲ್ಲಿ ದೇಶಿಯ ಮಾರುಕಟ್ಟೆಯ ಅತಿ ದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ ಮತ್ತು ಅತಿ ದೊಡ್ಡ ದ್ಚಿಚಕ್ರ ತಯಾರಕರಾದ ಹೀರೋ ಮೋಟಾರ್ಕರ್ಪ್ ಸೇರಿದಂತೆ ಹಲವು ಕಂಪನಿಗಳು ಬೆಲೆ ಏರಿಕೆಯನ್ನು ಘೋಷಿಸಿದೆ. ಈ ಹೊಸ ಬೆಲೆ ಏರಿಕೆಯು ಮುಂದಿನ ತಿಂಗಳಿನಿಂದ ಜಾರಿಯಾಗಲಿದೆ.

ಏಪ್ರಿಲ್ ತಿಂಗಳಿಂದ ಭಾರತದಲ್ಲಿ ದುಬಾರಿಯಾಗಲಿವೆ ಪೋರ್ಡ್ ಕಾರುಗಳು

ಇದೀಗ ಅಮೆರಿಕ ಮೂಲದ ಫೋರ್ಡ್ ಕಂಪನಿಯು ಕೂಡ ತನ್ನ ಸರಣಿಯಲ್ಲಿರುವ ಎಲ್ಲಾ ಕಾರುಗಳನ್ನು ಶೇ.3 ರಷ್ಟು ಬೆಲೆಯನ್ನು ಹೆಚ್ಚಿಸಿದೆ. ಈ ಬೆಲೆ ಏರಿಕೆಯು ಏಪ್ರಿಲ್ ತಿಂಗಳಿಂದ ಜಾರಿಯಾಗುತ್ತದೆ. ಇದು ಮಾದರಿಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಫೋರ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಫಿಗೊ, ಆಸ್ಪೈರ್, ಫ್ರೀಸ್ಟೈಲ್, ಇಕೋಸ್ಪೋರ್ಟ್ ಮತ್ತು ಎಂಡೀವರ್ ಎಂಬ ಐದು ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ಏಪ್ರಿಲ್ ತಿಂಗಳಿಂದ ಭಾರತದಲ್ಲಿ ದುಬಾರಿಯಾಗಲಿವೆ ಪೋರ್ಡ್ ಕಾರುಗಳು

ಇನ್ ಪುಟ್ ವೆಚ್ಚಗಳು ಹೆಚ್ಚಳವಾಗಿರುವುದರಿಂದ ಕಾರುಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಕಂಪನಿ ಹೇಳಿದೆ. ಇದರಿಂದ ಹೆಚ್ಚುವರಿ ವೆಚ್ಚವು ಕಾರು ಖರೀದಿಸುವ ಗ್ರಾಹಕರ ಮೇಲೆ ಬೀಳುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಏಪ್ರಿಲ್ ತಿಂಗಳಿಂದ ಭಾರತದಲ್ಲಿ ದುಬಾರಿಯಾಗಲಿವೆ ಪೋರ್ಡ್ ಕಾರುಗಳು

ಫೋರ್ಡ್ ಇಂಡಿಯಾ ಇತ್ತೀಚೆಗೆ ಇಕೋಸ್ಪೋರ್ಟ್‌ನ ಹೊಸ ಎಸ್ಇ ವೆರಿಯೆಂಟ್ ಅನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದು ಈ ಮೊದಲು ಭಾರತದಲ್ಲಿ ಮಾರಾಟವಾದ ವೆರಿಯೆಂಟ್ ಗಿಂತ ಭಿನ್ನವಾಗಿದೆ.

ಏಪ್ರಿಲ್ ತಿಂಗಳಿಂದ ಭಾರತದಲ್ಲಿ ದುಬಾರಿಯಾಗಲಿವೆ ಪೋರ್ಡ್ ಕಾರುಗಳು

ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್‌‌ನ ಟೈಲ್ ಗೇಟ್ ನಲ್ಲಿ ಸ್ಪೇರ್ ವ್ಹೀಲ್ ಇರುವುದಿಲ್ಲ. ಆದರೆ ಟೈಲ್ ಗೇಟ್ ನಲ್ಲಿ ಸ್ಪೇರ್ ವ್ಹೀಲ್ ಅನ್ನು ಹೊಂದಿರುವ ಸಮಾನ್ಯ ಮಾದರಿಯನ್ನು ಎಸ್ ವೆರಿಯೆಂಟ್ ಎಂದು ಕರೆಯಲಾಗುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಏಪ್ರಿಲ್ ತಿಂಗಳಿಂದ ಭಾರತದಲ್ಲಿ ದುಬಾರಿಯಾಗಲಿವೆ ಪೋರ್ಡ್ ಕಾರುಗಳು

ದೇಶಿಯ ಮಾರುಕಟ್ಟೆಯಲ್ಲಿ ಸಬ್ -4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಗಳ ಅಲೆಯನ್ನು ಪ್ರಾರಂಭಿಸಿದ ಮಾದರಿಗಳಲ್ಲಿ ಫೋರ್ಡ್ ಇಕೋಸ್ಪೋರ್ಟ್ ಕೂಡ ಒಂದು ಆಗಿದೆ. ಹೊಸ ವೆರಿಯೆಂಟ್ ಗ್ರಾಹಕರಿಗೆ ಎರಡು ವಿಭಿನ್ನ ಬಾಡಿ ಶೈಲಿಗಳ ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳಲು ಅನುವು ಮಾಡುತ್ತದೆ.

ಏಪ್ರಿಲ್ ತಿಂಗಳಿಂದ ಭಾರತದಲ್ಲಿ ದುಬಾರಿಯಾಗಲಿವೆ ಪೋರ್ಡ್ ಕಾರುಗಳು

ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಪೆಟ್ರೋಲ್ ಮಾದರಿಯ ಬೆಲೆಯು ರೂ.10.49 ಲಕ್ಷಗಳಾದರೆ, ಡೀಸೆಲ್ ಮಾದರಿಗೆ ರೂ.10.99 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಏಪ್ರಿಲ್ ತಿಂಗಳಿಂದ ಭಾರತದಲ್ಲಿ ದುಬಾರಿಯಾಗಲಿವೆ ಪೋರ್ಡ್ ಕಾರುಗಳು

ಇನ್ನು ಫೋರ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪರ್ಫಾಮೆನ್ಸ್ ಆಧಾರಿತ ರೇಂಜರ್ ರಾಪ್ಟರ್ ಪಿಕ್ ಅಪ್‌ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ವರದಿಗಳ ಪ್ರಕಾರ, ಈ ಹೊಸ ಫೋರ್ಡ್ ರೇಂಜರ್ ರಾಪ್ಟರ್ ಪಿಕ್ ಅಪ್‌ ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಭಾರತದಲ್ಲಿ ಬಿಡುಗೆಯಾಗಲಿದೆ.

ಏಪ್ರಿಲ್ ತಿಂಗಳಿಂದ ಭಾರತದಲ್ಲಿ ದುಬಾರಿಯಾಗಲಿವೆ ಪೋರ್ಡ್ ಕಾರುಗಳು

ಈಗಗಾಲೇ ಈ ಫೋರ್ಡ್ ರೇಂಜರ್ ರಾಪ್ಟರ್ ಪಿಕ್ ಅಪ್‌ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿದೆ. ಫೋರ್ಡ್ ಕಂಪನಿಯು ರೇಂಜರ್ ರಾಪ್ಟರ್ ಮಾದರಿಯನ್ನು ಭಾರತಕ್ಕೆ ಸರ್ಕಾರದ ನಿಯಮದಡಿಯಲ್ಲಿ ಸಿಬಿಯು ಯುನಿಟ್ ಆಗಿ ಆಮದು ಮಾಡಿಕೊಳ್ಳಲಾಗುವುದು, ವಾರ್ಷಿಕವಾಗಿ ಕಾರು ತಯಾರಕ ಕಂಪನಿಗಳು 2,500 ಯುನಿಟ್‌ಗಳನ್ನು ಆಮದು ಮಾಡಿಕೊಳ್ಳಬಹುದು.

ಏಪ್ರಿಲ್ ತಿಂಗಳಿಂದ ಭಾರತದಲ್ಲಿ ದುಬಾರಿಯಾಗಲಿವೆ ಪೋರ್ಡ್ ಕಾರುಗಳು

ಇನ್ನು ಭಾರತಕ್ಕೆ ಫೋರ್ಡ್ ಎಂಡೀವರ್ ಎಸ್‍ಯುವಿಯನ್ನು ಥೈಲ್ಯಾಂಡ್‌ನಿಂದ ಸಂಪೂರ್ಣವಾಗಿ ನಾಕ್ ಡೌನ್ (ಸಿಕೆಡಿ) ಯುನಿಟ್ ಆಗಿ ಭಾರತಕ್ಕೆ ತರಲಾಗುತ್ತದೆ. ಇನ್ನು ಥೈಲ್ಯಾಂಡ್‌ನಲ್ಲಿ ಎಂಡೀವರ್ ಎಸ್‍ಯುವಿಯನ್ನು ಎವರೆಸ್ಟ್ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದೆ. ಇದು ಥೈಲ್ಯಾಂಡ್‌ನಲ್ಲಿ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಏಪ್ರಿಲ್ ತಿಂಗಳಿಂದ ಭಾರತದಲ್ಲಿ ದುಬಾರಿಯಾಗಲಿವೆ ಪೋರ್ಡ್ ಕಾರುಗಳು

ಮುಂದಿನ ತಿಂಗಳಿಂದ ಫೋರ್ಡ್ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ದುಬಾರಿಯಾಗಲಿದೆ. ಬೆಲೆ ಏರಿಕೆಯು ಫೋರ್ಡ್ ಕಾರುಗಳ ಮಾರಾಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಾದು ನೋಡಬೇಕು.

Most Read Articles

Kannada
Read more on ಫೋರ್ಡ್ ford
English summary
Ford Cars Get Price Hike By Up To 3 Percent From April. Read In Kannada.
Story first published: Friday, March 26, 2021, 19:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X