ವಿವಿಧ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಡಿಸ್ಕೌಂಟ್ ಘೋಷಿಸಿದ ಫೋರ್ಡ್

ಫೋರ್ಡ್ ಇಂಡಿಯಾ ಕಂಪನಿಯು ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಹಲವು ಆಫರ್‌ಗಳನ್ನು ಘೋಷಣೆ ಮಾಡಿದ್ದು, ಫೆಬ್ರವರಿ ಅವಧಿಗಾಗಿ ವಿವಿಧ ಕಾರು ಮಾದರಿಗಳ ಮೇಲೆ ಗ್ರಾಹಕರಿಗೆ ಗರಿಷ್ಠ ಪ್ರಮಾಣದ ಡಿಸ್ಕೌಂಟ್ ನೀಡುತ್ತಿದೆ.

ವಿವಿಧ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಡಿಸ್ಕೌಂಟ್ ಘೋಷಿಸಿದ ಫೋರ್ಡ್

ಕಾರು ಮಾರಾಟ ಸುಧಾರಣೆಗಾಗಿ ಹೊಸ ವರ್ಷದ ಆಫರ್‌ಗಳನ್ನು ಘೋಷಣೆ ಮಾಡುತ್ತಿರುವ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಗ್ರಾಹಕರನ್ನು ಸೆಳೆಯುತ್ತಿದ್ದು, ಫೋರ್ಡ್ ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ಆಕರ್ಷಕ ಆಫರ್‌ಗಳನ್ನು ಘೋಷಿಸಿದೆ. ಹೊಸ ಆಫರ್‌ಗಳು ಫೋರ್ಡ್ ನಿರ್ಮಾಣದ ಫಿಗೊ, ಆಸ್ಪೈರ್, ಫ್ರೀಸ್ಟೈಲ್, ಇಕೋಸ್ಪೋರ್ಟ್ ಮತ್ತು ಎಂಡೀವರ್ ಕಾರುಗಳ ಖರೀದಿಯ ಅನ್ವಯವಾಗಲಿದ್ದು, ಹೊಸ ಆಫರ್‌ಗಳು ಈ ತಿಂಗಳ 28ರ ತನಕ ಲಭ್ಯವಿರಲಿವೆ.

ವಿವಿಧ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಡಿಸ್ಕೌಂಟ್ ಘೋಷಿಸಿದ ಫೋರ್ಡ್

ಫೋರ್ಡ್ ಕಂಪನಿಯು ಘೋಷಣೆ ಮಾಡಿರುವ ಹೊಸ ಆಫರ್‌ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಆಫರ್ ಜೊತೆಗೆ ವಿಶೇಷ ಪ್ಯಾಕೇಜ್ ನೀಡುತ್ತಿದ್ದು, ಕನಿಷ್ಠ ರೂ. 4 ಸಾವಿರದಿಂದ ಗರಿಷ್ಠ ರೂ. 20 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ.

ವಿವಿಧ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಡಿಸ್ಕೌಂಟ್ ಘೋಷಿಸಿದ ಫೋರ್ಡ್

ಇದರೊಂದಿಗೆ ಫೋರ್ಡ್ ಇಂಡಿಯಾ ಕಂಪನಿಯು ತನ್ನ ವಿವಿಧ ಕಾರು ಮಾದರಿಗಳ ಮಾರಾಟದಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಫಿಗೊ, ಆಸ್ಪೈರ್ ಮತ್ತು ಫ್ರೀಸ್ಪೈಲ್ ಕಾರುಗಳಲ್ಲಿನ ವಿವಿಧ ವೆರಿಯೆಂಟ್‌‌ಗಳನ್ನು ಸ್ಥಗಿತಗೊಳಿಸಲಾಗಿದೆ.

ವಿವಿಧ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಡಿಸ್ಕೌಂಟ್ ಘೋಷಿಸಿದ ಫೋರ್ಡ್

ಫಿಗೊ, ಆಸ್ಪೈರ್ ಮತ್ತು ಫ್ರೀಸ್ಪೈಲ್ ಕಾರುಗಳಲ್ಲಿನ ವಿವಿಧ ವೆರಿಯೆಂಟ್‌ಗಳನ್ನು ಸ್ಥಗಿತಗೊಳಸಿರುವ ಫೋರ್ಡ್ ಕಂಪನಿಯು ಸ್ಟ್ಯಾಂಡರ್ಡ್, ಹೈ ಎಂಡ್ ಮತ್ತು ಸ್ಪೆಷಲ್ ಎಡಿಷನ್ ಮಾದರಿಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಿದ್ದು, ತಾಂತ್ರಿಕವಾಗಿ ಸನೀಹದಲ್ಲಿರುವ ಪ್ರಮುಖ ವೆರಿಯೆಂಟ್‌ಗಳನ್ನು ಹೈ ಎಂಡ್ ಮಾದರಿಗಳಲ್ಲಿ ವಿಲೀನಗೊಳಿಸಿ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಆದರೆ ಎಂಜಿನ್ ಆಯ್ಕೆಯಲ್ಲಿ ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, ಹೆಚ್ಚುವರಿಯಾಗಿದ್ದ ವೆರಿಯೆಂಟ್‌ಗಳನ್ನು ಮಾತ್ರ ತೆಗದುಹಾಕಲಾಗಿದೆ.

ವಿವಿಧ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಡಿಸ್ಕೌಂಟ್ ಘೋಷಿಸಿದ ಫೋರ್ಡ್

ವೆರಿಯೆಂಟ್ ಬದಲಾವಣೆ ನಂತರ ಫಿಗೊ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಪೆಟ್ರೋಲ್ ಆವೃತ್ತಿಯನ್ನು ಆ್ಯಂಬಿಯೆಂಟ್, ಟೈಟಾನಿಯಂ ಮತ್ತು ಟೈಟಾನಿಯಂ ಬ್ಲ್ಯೂ ವೆರಿಯೆಂಟ್‌ನಲ್ಲಿ ಮತ್ತು ಡೀಸೆಲ್ ಆವೃತ್ತಿಯನ್ನು ಟೈಟಾನಿಯಂ ಮತ್ತು ಟೈಟಾನಿಯಂ ಬ್ಲ್ಯೂ ವೆರಿಯೆಂಟ್‌ಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ.

ವಿವಿಧ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಡಿಸ್ಕೌಂಟ್ ಘೋಷಿಸಿದ ಫೋರ್ಡ್

ಫಿಗೊ ಕಾರು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಪೆಟ್ರೋಲ್ ಆವೃತ್ತಿಗೆ ಆರಂಭಿಕವಾಗಿ ರೂ. 5.64 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ 7.09 ಲಕ್ಷ ಮತ್ತು ಫಿಗೊ ಡೀಸೆಲ್ ಆವೃತ್ತಿಗೆ ಆರಂಭಿಕವಾಗಿ ರೂ. 7.74 ಲಕ್ಷ ಮತ್ತು ಹೈ ಎಂಡ್ ಮಾದರಿಯು ರೂ.8.19 ಲಕ್ಷ ಬೆಲೆ ಹೊಂದಿದೆ.

ವಿವಿಧ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಡಿಸ್ಕೌಂಟ್ ಘೋಷಿಸಿದ ಫೋರ್ಡ್

ಆಸ್ಪೈರ್ ಕಂಪ್ಯಾಕ್ಟ್ ಸೆಡಾನ್ ಮಾದರಿಯಲ್ಲಿ ವೆರಿಯೆಂಟ್ ಬದಲಾವಣೆಯ ನಂತರ ಟೈಟಾನಿಯಂ ಮತ್ತು ಟೈಟಾನಿಯಂ ಪ್ಲಸ್ ವೆರಿಯೆಂಟ್‌ಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.24 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 8.69 ಲಕ್ಷ ಬೆಲೆಯೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ವಿವಿಧ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಡಿಸ್ಕೌಂಟ್ ಘೋಷಿಸಿದ ಫೋರ್ಡ್

ಇನ್ನು ಕೊನೆಯದಾಗಿ ಫ್ರೀಸ್ಟೈಲ್ ಕ್ರಾಸ್ ಓವರ್ ಕಾರು ಮಾದರಿಯಲ್ಲಿ ವೆರಿಯೆಂಟ್ ಬದಲಾವಣೆಯ ನಂತರ ಟೈಟಾನಿಯಂ, ಟೈಟಾನಿಯಂ ಪ್ಲಸ್ ಮತ್ತು ಫ್ಲೈರ್ ವೆರಿಯೆಂಟ್‌ಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಮಧ್ಯಂತರ ವೆರಿಯೆಂಟ್‌ಗಳನ್ನು ಟಾಪ್ ಎಂಡ್‌ನೊಂದಿಗೆ ವಿಲೀನ ಮಾಡಲಾಗಿದೆ.

ವಿವಿಧ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಡಿಸ್ಕೌಂಟ್ ಘೋಷಿಸಿದ ಫೋರ್ಡ್

ವೆರಿಯೆಂಟ್ ಬದಲಾವಣೆಯ ನಂತರ ಫ್ರೀಸ್ಟೈಲ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.09 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8.89 ಲಕ್ಷ ಬೆಲೆ ಹೊಂದಿದ್ದು, ಅನಾವಶ್ಯಕ ಎನ್ನಿಸುವ ವೆರಿಯೆಂಟ್ ಬದಲಾಣೆಗೊಳಿಸಿ ಗ್ರಾಹಕರ ಆಯ್ಕೆಯನ್ನು ಸರಳಗೊಳಿಸಲಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ವಿವಿಧ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಡಿಸ್ಕೌಂಟ್ ಘೋಷಿಸಿದ ಫೋರ್ಡ್

ಫೋರ್ಡ್ ಕಂಪನಿಯು ಮೇಲಿನ ಫಿಗೊ, ಆಸ್ಪೈರ್ ಮತ್ತು ಫ್ರೀಸ್ಪೈಲ್ ಕಾರುಗಳಲ್ಲಿ ಒಂದೇ ಮಾದರಿಯ ಎಂಜಿನ್ ಆಯ್ಕೆ ನೀಡಿದ್ದು, ಗ್ರಾಹಕರ ಬೇಡಿಕೆಯೆಂತೆ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿವೆ. ಇನ್ನುಳಿದಂತೆ ಇಕೋಸ್ಪೋರ್ಟ್ ಮತ್ತು ಎಂಡೀವರ್ ಕಾರು ಮಾದರಿಗಳ ಎಂಜಿನ್ ಮತ್ತು ವೆರಿಯೆಂಟ್‌ಗಳಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವಂತೆ ಮುಂದುವರಿಸಲಾಗಿದೆ.

Most Read Articles

Kannada
Read more on ಫೋರ್ಡ್ ford
English summary
Ford India Offering Attractive Discounts In February 2021. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X