ಆಡಿ ಆರ್‌ಎಸ್ ಗ್ರಿಲ್'ನೊಂದಿಗೆ ಮಾಡಿಫೈಗೊಂಡ ಹ್ಯುಂಡೈ ಕ್ರೆಟಾ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಇಂಡಿಯಾ ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಕ್ರೆಟಾ ಎಸ್‌ಯು‌ವಿಯನ್ನು ಬಿಡುಗಡೆಗೊಳಿಸಿತು. ಹ್ಯುಂಡೈ ಕ್ರೆಟಾ ಈ ಸೆಗ್ ಮೆಂಟಿನಲ್ಲಿರುವ ಜನಪ್ರಿಯ ಎಸ್‌ಯು‌ವಿಗಳಲ್ಲಿ ಒಂದಾಗಿದೆ.

ಆಡಿ ಆರ್‌ಎಸ್ ಗ್ರಿಲ್'ನೊಂದಿಗೆ ಮಾಡಿಫೈಗೊಂಡ ಹ್ಯುಂಡೈ ಕ್ರೆಟಾ

ಪ್ರೀಮಿಯಂ ಲುಕ್ ಹಾಗೂ ಹಲವಾರು ಫೀಚರ್'ಗಳಿಂದಾಗಿ ಕ್ರೆಟಾ ಎಸ್‌ಯು‌ವಿಯು ಅಲ್ಪಾವಧಿಯಲ್ಲಿಯೇ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಬಿಡುಗಡೆಯಾದ ಕೆಲವು ವಾರಗಳ ನಂತರ ಈ ಎಸ್‌ಯು‌ವಿಯ ಬಿಡಿಭಾಗಗಳು ಮಾರುಕಟ್ಟೆಗೆ ಬರಲು ಆರಂಭಿಸಿದವು.

ಆಡಿ ಆರ್‌ಎಸ್ ಗ್ರಿಲ್'ನೊಂದಿಗೆ ಮಾಡಿಫೈಗೊಂಡ ಹ್ಯುಂಡೈ ಕ್ರೆಟಾ

ಈ ಹಿಂದೆ ಮಾಡಿಫೈಗೊಂಡ ಹಾಗೂ ಕಸ್ಟಮೈಸ್ ಆದ ಹಲವು ಕ್ರೆಟಾ ಎಸ್‌ಯು‌ವಿಗಳ ಬಗ್ಗೆ ವರದಿ ಪ್ರಕಟಿಸಲಾಗಿತ್ತು. ಈಗ ಹ್ಯುಂಡೈ ಕ್ರೆಟಾದ ಮೂಲ ಮಾದರಿಯನ್ನು ಮಾಡಿಫೈಗೊಳಿಸಿ ಟಾಪ್ ಎಂಡ್ ಆವೃತ್ತಿಯಾಗಿ ಬದಲಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಆಡಿ ಆರ್‌ಎಸ್ ಗ್ರಿಲ್'ನೊಂದಿಗೆ ಮಾಡಿಫೈಗೊಂಡ ಹ್ಯುಂಡೈ ಕ್ರೆಟಾ

ಈ ಎಸ್‌ಯು‌ವಿಯ ಬಂಪರ್ ಕೆಳಭಾಗದಲ್ಲಿ ಗ್ಲಾಸ್ ಬ್ಲಾಕ್ ಸ್ಪ್ಲಿಟರ್ ಜೋಡಿಸಲಾಗಿದೆ. ಇದರ ಜೊತೆಗೆ ಈ ಕ್ರೆಟಾದ ಬಂಪರ್'ನಲ್ಲಿ ಆಫ್ಟರ್ ಮಾರ್ಕೆಟ್ ಎಲ್ಇಡಿ ರಿಫ್ಲೆಕ್ಟರ್ ಲೈಟ್'ಗಳನ್ನು ಅಳವಡಿಸಲಾಗಿದೆ.

ಆಡಿ ಆರ್‌ಎಸ್ ಗ್ರಿಲ್'ನೊಂದಿಗೆ ಮಾಡಿಫೈಗೊಂಡ ಹ್ಯುಂಡೈ ಕ್ರೆಟಾ

ಈ ಎಸ್‌ಯು‌ವಿಯಲ್ಲಿ ಮಾಡಿರುವ ಪ್ರಮುಖ ಬದಲಾವಣೆಯೆಂದರೆ ಈ ಎಸ್‌ಯು‌ವಿಯ ಮುಂಭಾಗದ ಗ್ರಿಲ್ ಅನ್ನು ಬದಲಿಸಲಾಗಿದೆ. ಈ ಎಸ್‌ಯು‌ವಿಯಲ್ಲಿದ್ದ ಗ್ರಿಲ್ ಅನ್ನು ತೆಗೆದುಹಾಕಿ ಆಡಿ ಆರ್‌ಎಸ್ ಕಾರಿನಲ್ಲಿರುವಂತಹ ಗ್ರಿಲ್ ಅಳವಡಿಸಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಆಡಿ ಆರ್‌ಎಸ್ ಗ್ರಿಲ್'ನೊಂದಿಗೆ ಮಾಡಿಫೈಗೊಂಡ ಹ್ಯುಂಡೈ ಕ್ರೆಟಾ

ಕ್ರೆಟಾ ಆರ್‌ಎಸ್ ಗ್ರಿಲ್ ಎಂದು ಕರೆಯಲಾಗುವ ಈ ಗ್ರಿಲ್ ಹೊಸ ಹ್ಯುಂಡೈ ಕ್ರೆಟಾ ಎಸ್‌ಯು‌ವಿಗೆ ಮಾತ್ರ ಮೀಸಲಾಗಿದೆ. ಈ ಗ್ರಿಲ್'ನಲ್ಲಿ ಎಬಿಎಸ್ ಗ್ರಿಲ್ ಹಾಗೂ ಕ್ರೋಮ್ ಔಟ್‌ಲೈನ್ ಬಾರ್ಡರ್‌ ಬಳಸಲಾಗಿದೆ.

ಆಡಿ ಆರ್‌ಎಸ್ ಗ್ರಿಲ್'ನೊಂದಿಗೆ ಮಾಡಿಫೈಗೊಂಡ ಹ್ಯುಂಡೈ ಕ್ರೆಟಾ

ಈ ಗ್ರಿಲ್ ಕಾರಿನ ಮುಂಭಾಗಕ್ಕೆ ಸರಿಯಾಗಿ ಹೊಂದಿಕೊಳ್ಳುವುದರಿಂದ ಈ ಆರ್‌ಎಸ್ ಗ್ರಿಲ್ ಅಳವಡಿಸಲು ಬೇರೆ ಯಾವುದೇ ಮಾಡಿಫಿಕೇಶನ್ ಮಾಡಲಾಗಿಲ್ಲ. ಆಡಿ ಕಾರಿನ ಆರ್‌ಎಸ್ ಗ್ರಿಲ್'ನಿಂದ ಸ್ಪೂರ್ತಿ ಪಡೆದಿರುವುದರಿಂದ ಒಳಭಾಗದಲ್ಲಿ ಹನಿಕೂಂಬ್ ವಿನ್ಯಾಸದೊಂದಿಗೆ ಗ್ಲಾಸಿ ಬ್ಲಾಕ್ ಫಿನಿಶ್ ಹೊಂದಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಆಡಿ ಆರ್‌ಎಸ್ ಗ್ರಿಲ್'ನೊಂದಿಗೆ ಮಾಡಿಫೈಗೊಂಡ ಹ್ಯುಂಡೈ ಕ್ರೆಟಾ

ಆರ್‌ಎಸ್ ಗ್ರಿಲ್ ಕ್ರೆಟಾ ಎಸ್‌ಯು‌ವಿಗೆ ಸ್ಪೋರ್ಟಿ ಲುಕ್ ನೀಡುವ ಬದಲು ಪ್ರೀಮಿಯಂ ಲುಕ್ ನೀಡುತ್ತಿದೆ. ಈ ಗ್ರಿಲ್ ಅನ್ನು ಕಸ್ಟಮೈಸ್ ಮಾಡಲಾಗಿಲ್ಲ, ಬದಲಿಗೆ ಚೀನಾದಿಂದ ಆಮದು ಮಾಡಿಕೊಳ್ಳಲಾಗಿದೆ ಎಂಬುದು ಗಮನಾರ್ಹ.

ಆಡಿ ಆರ್‌ಎಸ್ ಗ್ರಿಲ್'ನೊಂದಿಗೆ ಮಾಡಿಫೈಗೊಂಡ ಹ್ಯುಂಡೈ ಕ್ರೆಟಾ

ಮಾರುಕಟ್ಟೆಯಲ್ಲಿ ಈ ಗ್ರಿಲ್‌ನ ಬೆಲೆ ಸುಮಾರು ರೂ.6,000ಗಳೆಂದು ಹೇಳಲಾಗಿದೆ. ಹ್ಯುಂಡೈ ಕಂಪನಿಯು ಹ್ಯುಂಡೈ ಎಸ್‌ಯು‌ವಿಯಲ್ಲಿ ಹಲವಾರು ಹೊಸ ಫೀಚರ್'ಗಳನ್ನು ನೀಡುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಆಡಿ ಆರ್‌ಎಸ್ ಗ್ರಿಲ್'ನೊಂದಿಗೆ ಮಾಡಿಫೈಗೊಂಡ ಹ್ಯುಂಡೈ ಕ್ರೆಟಾ

ಇವುಗಳಲ್ಲಿ ವೆಂಟೆಡ್ ಸೀಟ್, ಇಂಟಿಗ್ರೇಟೆಡ್ ಏರ್ ಪ್ಯೂರಿಫೈಯರ್, ಪನೋರಾಮಿಕ್ ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸ್ಕ್ರೀನ್, ಹೈ ಎಂಡ್ ಮಾದರಿಗಳಲ್ಲಿ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್, ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಕ್ರೂಸ್ ಕಂಟ್ರೋಲ್'ಗಳು ಸೇರಿವೆ. ಆರ್‌ಎಸ್ ಗ್ರಿಲ್'ನೊಂದಿಗೆ ಮಾಡಿಫೈಗೊಂಡಿರುವ ಕ್ರೆಟಾ ಎಸ್‌ಯು‌ವಿಯ ಬಗ್ಗೆ ಮೈಂಡ್ ಆಟೋ ಮೋಡ್ ತನ್ನ ಇನ್ಸ್'ಟಾಗ್ರಾಮ್ ಖಾತೆಯಲ್ಲಿ ವಿವರಗಳನ್ನು ಪ್ರಕಟಿಸಿದೆ.

Most Read Articles

Kannada
English summary
Hyundai Creta SUV modified with Audi RS grill. Read in Kannada.
Story first published: Sunday, April 25, 2021, 12:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X