ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಜನಪ್ರಿಯ ಹ್ಯುಂಡೈ ಐ20 ಕಾರು

ಹ್ಯುಂಡೈ ಐ20 ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ ಹ್ಯುಂಡೈ ಐ20 ಪ್ರೀಮಿಯಂ ಗುಣಮಟ್ಟದ ಇಂಟಿರಿಯರ್, ಅತ್ಯಾಧುನಿಕ ಫೀಚರ್‌ಗಳು ಮತ್ತು ಆಕರ್ಷಕ ವಿನ್ಯಾಸದಿಂದ ಕೂಡಿದ ಉತ್ತಮ ಫ್ಯಾಮಿಲಿ ಹ್ಯಾಚ್‌ಬ್ಯಾಕ್ ಇದಾಗಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಜನಪ್ರಿಯ ಹ್ಯುಂಡೈ ಐ20 ಕಾರು

ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದ್ದರು, ಇದನ್ನು ಹಲವರು ಮಾಡಿಫೈಗೊಳಿಸುತ್ತಾರೆ. ಹೆಚ್ಚಾಗಿ ಎರಡನೇ ತಲೆಮಾರಿ ಹ್ಯುಂಡೈ ಐ20 ಕಾರನ್ನು ಮಾಡಿಫೈಗೊಳಿಸುತ್ತಾರೆ. ಅದೇ ರೀತಿ ಹ್ಯುಂಡೈ ಐ20 ಕಾರು ವಿಭಿನ್ನವಾಗಿ ಮಾಡಿಫೈಗೊಳಿಸಿದ ಒಂದು ಉದಾಹರಣೆ ಇಲ್ಲಿದೆ. ಇದು ಕೇರಳದ ಕೊಚ್ಚಿನ್‌ನಲ್ಲಿ ಎನ್1 ಕಾನ್ಸೆಪ್ಟ್ ಆಧರಿಸಿ ಮಾಡಿಫೈಗೊಳಿದ್ದಾರೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಜನಪ್ರಿಯ ಹ್ಯುಂಡೈ ಐ20 ಕಾರು

ಈ ಮಾಡಿಫೈ ಕಾರು ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ ಅನ್ನು ಹೊಂದಿದೆ. ಅಲ್ಲದೇ ಇದರಲ್ಲಿ ಕೆಲವು ವಿಭಿನ್ನ ಅಂಶಗಳನ್ನು ಒಳಗೊಂಡಿದೆ. ಈ ಕಾರು ಸಂಪೂರ್ಣವಾಗಿ ಕಪ್ಪು ಬಣ್ಣವನ್ನು ಹೊಂದಿದೆ. ಇದು ಕಾರಿಗೆ ಸ್ಪೋರ್ಟಿ ಲುಕ್ ಅನ್ನು ನೀಡಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಜನಪ್ರಿಯ ಹ್ಯುಂಡೈ ಐ20 ಕಾರು

ಹ್ಯುಂಡೈ ಲೋಗೊ ಕೂಡ ಕಪ್ಪು ಬಣ್ಣದಲ್ಲಿದೆ. ಇನ್ನು ಇದರ ವ್ಹೀಲ್ ಅರ್ಚಾರ್ ಅನ್ನು ಮೆಟಲ್ ನಿಂದ ತಯಾರಿಸಲಾಗಿದೆ. ಇದು ಬಾಡಿಯ ಬಣ್ಣದೊಂದಿಗೆ ಆಕರ್ಷಕವಾಗಿ ಕಾಣುತ್ತದೆ. ಪ್ರೊಫೈಲ್‌ನಲ್ಲಿ ಈ ಐ20 ಸೈಡ್ ಸ್ಕರ್ಟ್‌ಗಳನ್ನು ಸಹ ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಜನಪ್ರಿಯ ಹ್ಯುಂಡೈ ಐ20 ಕಾರು

ಇನ್ನು ಕಾರಿನ ಹಿಂಭಾಗದ ಟೈಲ್‌ಗೇಟ್‌ನ ಮೇಲೆ ಅಳವಡಿಸಲಾಗಿರುವ ಸ್ಪಾಯ್ಲರ್ ಸಹ ಇದೆ ಮತ್ತು ಅದು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಇನ್ನು ಇದರಲ್ಲಿ 17-ಇಂಚಿನ ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಜನಪ್ರಿಯ ಹ್ಯುಂಡೈ ಐ20 ಕಾರು

ಆದರೆ ಈ ಐ20 ಕಾರಿನ ದೊಡ್ಡ ಮಾಡಿಫೈ ಏರ್ ಸಸ್ಪೆಂಕ್ಷನ್ ಸೆಟಪ್ ಸೇರ್ಪಡೆಯಾಗಿದೆ. ಈ ಮಾಡಿಫೈ ಕಾರಿನ ಬೂಟ್‌ನಲ್ಲಿ ಅಂದವಾಗಿ ಸಂಯೋಜಿಸಲಾಗಿರುವ ಸಂಪೂರ್ಣ ಏರ್ ಸಸ್ಪೆಂಕ್ಷನ್ ಕಾರ್ಯವಿಧಾನವನ್ನು ನೀವು ನೋಡಬಹುದು. ಈ ಏರ್ ಸಸ್ಪೆಂಕ್ಷನ್ ನಿಂದಾಗಿ ನೀವು ಆರಾಮದಾಯಕ ಸವಾರಿ ಅನುಭವವನ್ನು ಪಡೆಯಬಹುದು.

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಜನಪ್ರಿಯ ಹ್ಯುಂಡೈ ಐ20 ಕಾರು

ಏರ್ ಸಸ್ಪೆಂಕ್ಷನ್ ಕಂಟ್ರೋಲ್ ಗಳನ್ನು ಸೆಂಟರ್ ಕನ್ಸೋಲ್‌ನಲ್ಲಿ ಸಂಯೋಜಿಸಲಾಗಿದೆ. ಮುಂಭಾಗ ಮತ್ತು ಹಿಂಭಾಗದ ಸಸ್ಪೆಂಕ್ಷನ್ ಎತ್ತರವನ್ನು ಪ್ರತ್ಯೇಕವಾಗಿ ಸರಿಹೊಂದಿಸಬಹುದು ಮತ್ತು ನಿಖರವಾದ ಸೆಟ್ಟಿಂಗ್ ಅನ್ನು ನಿಮಗೆ ಡಿಸ್ ಪ್ಲೇಯಲ್ಲಿ ತೋರಿಸುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಜನಪ್ರಿಯ ಹ್ಯುಂಡೈ ಐ20 ಕಾರು

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಜನರೇಷನ್ ಹ್ಯುಂಡೈ ಐ20 ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೊಸ ಐ20 ಹೆಚ್ಚು ಸ್ಪೋರ್ಟಿ ಮತ್ತು ಬೋಲ್ಡ್ ಲುಕ್ ಅನ್ನು ಹೊಂದಿದೆ. ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ಹ್ಯುಂಡೈ ಐ20 ಗ್ರಾಹಕರನ್ನು ತನ್ನತ ಸೆಳೆಯುವಂತಹ ಆಕರ್ಷಕ ಲುಕ್ ಮತ್ತು ಸ್ಟೈಲಿಶ್ ನಿಂದ ಹೆಚ್ಚು ಜನಪ್ರಿಯವಾಗಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಜನಪ್ರಿಯ ಹ್ಯುಂಡೈ ಐ20 ಕಾರು

ಇನ್ನು ಈ ಹೊಸ ಹ್ಯುಂಡೈ ಐ20 ಕಾರಿನ ಮುಂಭಾಗದಲ್ಲಿರು ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಹೊಂದಿದೆ. ಹಿಂದಿನ ಐ20 ಮಾದರಿಗೆ ಹೋಲಿಸಿದರೆ ಹೆಡ್ ಲ್ಯಾಂಪ್ ಮತ್ತು ಸೈಡ್ ಫ್ರೋಪೈಲ್ ವಿನ್ಯಾಸವನ್ನು ನವೀಕರಿಸಲಾಗಿದೆ ದೊಡ್ಡ ಕ್ರೀಸ್ ಲೈನ್ ಗಳನ್ನು ಹೊಂದಿವೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಜನಪ್ರಿಯ ಹ್ಯುಂಡೈ ಐ20 ಕಾರು

ಹೊಸ ಹುಂಡೈ ಐ20 ಕಾರಿನ ಪಿಲ್ಲರ್‍‍ಗಳು ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ವಿಡಬ್ಲ್ಯೂ ಟೈಗನ್‍‍‍ನಲ್ಲಿ ಇರುವಂತಹ ಕೆಂಪು ಇ‍ಲ್‍ಇಡಿ ಡಿಆರ್‍ಎಲ್ ಸ್ಟಾಪ್ ಲೈಟ್ ಹಿಂಭಾಗದಲ್ಲಿ ಇ‍ಲ್‍ಇಡಿ ಟೇಲ್‍‍ಲೈಟ್ ಹೊಂದಿದೆ. ಇನ್ನು ಹೊಸ ಹ್ಯುಂಡೈ ಕಾರಿನ ಇಂಟಿರಿಯರ್‍‍ನಲ್ಲಿ 4 ಸ್ಫೋಕ್ ಸ್ಟೀಟಿಯರಿಂಗ್ ವ್ಹೀಲ್ ಅನ್ನು ನೀಡಲಾಗಿದೆ

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಜನಪ್ರಿಯ ಹ್ಯುಂಡೈ ಐ20 ಕಾರು

ಹೊಸ ಹ್ಯುಂಡೈ ಐ20 ಕಾರು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಈ ಎಂಜಿನ್ 83 ಬಿಹೆಚ್‌ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಮಾಡಿಫೈಗೊಂಡ ಜನಪ್ರಿಯ ಹ್ಯುಂಡೈ ಐ20 ಕಾರು

ಇದರೊಂದಿಗೆ 1.0ಎಲ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 120 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5ಎಲ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿಯು ಕೂಡ ಇದು ಲಭ್ಯವಿದೆ.

Image Courtesy: Musafir Aka Joshi

Most Read Articles

Kannada
English summary
This Modified Hyundai i20 Features Air Suspension. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X