Just In
- 2 hrs ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 4 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 6 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 16 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- Movies
ರಾಖಿ ಸಾವಂತ್ ಬಯೋಪಿಕ್ ಈ ಸ್ಟಾರ್ ನಟಿಯೇ ಮಾಡಬೇಕಂತೆ
- News
Breaking: ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿ?
- Sports
ಐಪಿಎಲ್ 2021: ಈ ಬಾರಿಯ ಆವೃತ್ತಿಯ ಕೆಲ ಗಮನಾರ್ಹ ಬದಲಾವಣೆಗಳು
- Finance
ದಕ್ಷಿಣ ಭಾರತದ ಅತಿದೊಡ್ಡ ಆಭರಣ ರೀಟೈಲರ್ ಮೇಲೆ ಐಟಿ ದಾಳಿ
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಲೊಗೊದೊಂದಿಗೆ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿವೆ ಕಿಯಾ ಮೋಟಾರ್ಸ್ ಕಾರುಗಳು
ದಕ್ಷಿಣ ಕೊರಿಯಾದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಕಿಯಾ ಮೋಟಾರ್ಸ್ ಭಾರತ ಸೇರಿ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಕಾರು ಮಾರಾಟ ಜಾಲ ಹೊಂದಿದ್ದು, ಕಂಪನಿಯು ಶೀಘ್ರದಲ್ಲೇ ತನ್ನ ಕಾರು ಮಾದರಿಗಳಲ್ಲಿ ಬದಲಾವಣೆ ತರುವ ಉದ್ದೇಶದಿಂದ ಹೊಸ ಲೊಗೊ ಸೇರ್ಪಡೆಗೊಳಿಸಲು ನಿರ್ಧರಿಸಿದೆ.

ಕಾರು ಉತ್ಪನ್ನಗಳಲ್ಲಿ ಲೊಗೊ ಬದಲಾವಣೆ ಕುರಿತು ಕಳೆದ ತಿಂಗಳ ಹಿಂದಷ್ಟೇ ಅಧಿಕೃತ ಮಾಹಿತಿ ಹಂಚಿಕೊಂಡಿದ್ದ ಕಿಯಾ ಮೋಟಾರ್ಸ್ ಕಂಪನಿಯು ಹೊಸ ಲೊಗೊ ಬದಲಾವಣೆಗಾಗಿ ಈಗಾಗಲೇ ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದು, ಶೀಘ್ರದಲ್ಲೇ ಕಿಯಾ ನಿರ್ಮಾಣದ ಎಲ್ಲಾ ಕಾರು ಮಾದರಿಗಳಲ್ಲೂ ಹೊಸ ವಿನ್ಯಾಸದ ಲೊಗೊ ಜೋಡಣೆ ಹೊಂದಿರಲಿವೆ. ಹೊಸ ಲೊಗೊ ವಿನ್ಯಾಸವು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಲೊಗೊ ವಿನ್ಯಾಸಕ್ಕಿಂತಲೂ ಆಕರ್ಷಕವಾಗಿರಲಿದ್ದು, ಹೊಸ ಕಾರು ಮಾದರಿಗಳಿಗೆ ಹೊಸ ಲೊಗೊ ವಿನ್ಯಾಸವು ಮತ್ತಷ್ಟು ಮೆರಗು ನೀಡಲಿದೆ.

ಭಾರತದಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಹೊಸ ಲೊಗೊ ಮಾದರಿಯನ್ನು ಮುಂಬರುವ ಮಾರ್ಚ್‌ನಿಂದ ಜೋಡಣೆ ಪ್ರಕ್ರಿಯೆಗೆ ಚಾಲನೆ ನೀಡುವ ಸಾಧ್ಯತೆಗಳಿದ್ದು, ಅದಕ್ಕೂ ಮುನ್ನ ಹೊಸ ಲೊಗೊದೊಂದಿಗೆ ಮಾರಾಟ ಕೇಂದ್ರ ಉನ್ನತೀಕರಿಸಲಾಗುತ್ತಿದೆ.

ಕಿಯಾ ಮೋಟಾರ್ಸ್ ಕಾರು ಮಾರಾಟ ಮಳಿಗೆಗಳನ್ನು ಸದ್ಯಕ್ಕೆ ಹೊಸ ಲೊಗೊ ವಿನ್ಯಾಸದೊಂದಿಗೆ ಬ್ರಾಂಡ್ ಬೋರ್ಡ್‌ಗಳನ್ನು ಬದಲಾಯಿಸಲಾಗುತ್ತಿದ್ದು, ಮುಂದಿನ ಎರಡರಿಂದ ಮೂರು ತಿಂಗಳ ಅವಧಿಯಲ್ಲಿ ಹೊಸ ಲೊಗೊ ಹೊಂದಿರುವ ಕಾರುಗಳು ಖರೀದಿಗೆ ಲಭ್ಯವಿರಲಿವೆ.

ಇನ್ನು ಭಾರತದಲ್ಲಿ ಕಾರು ಮಾರಾಟ ಆರಂಭಿದ ಕೆಲವೇ ದಿನಗಳಲ್ಲಿ ಮಹತ್ವದ ಮುನ್ನಡೆ ಕಾಯ್ದುಕೊಳ್ಳುತ್ತಿರುವ ಕಿಯಾ ಮೋಟಾರ್ಸ್ ಕಂಪನಿಯು ಸದ್ಯ ಪ್ರಮುಖ ಕಾರು ಮಾರಾಟ ಕಂಪನಿಗಳನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನದಲ್ಲಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಮಾರಾಟ ಮಳಿಗೆಗಳೊಂದಿಗೆ ಗ್ರಾಹಕರ ಬೇಡಿಕೆಯಲ್ಲಿ ಮತ್ತಷ್ಟು ಮುನ್ನಡೆ ಸಾಧಿಸಲಿದೆ.

ಕಾರು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್ ನಂತರ ನಾಲ್ಕನೇ ಸ್ಥಾನದಲ್ಲಿರುವ ಕಿಯಾ ಮೋಟಾರ್ಸ್ ಕಂಪನಿಯು ಮಹೀಂದ್ರಾ, ಹೋಂಡಾ, ಟೊಯೊಟಾ ಕಂಪನಿಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದು, ಮುಂಬರುವ ದಿನಗಳಲ್ಲಿ ಹೊಸ ಮಾರಾಟ ಮಳಿಗೆಗಳೊಂದಿಗೆ ಪ್ರಮುಖ ನಗರಗಳಲ್ಲಿ ಮತ್ತಷ್ಟು ಮಾರಾಟ ಸಂಖ್ಯೆ ಹೆಚ್ಚಿಸುವ ಯೋಜನೆಯಲ್ಲಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಕಿಯಾ ಮೋಟಾರ್ಸ್ ಕಂಪನಿಯು ಸದ್ಯ ದೇಶದ ಪ್ರಮುಖ 170 ನಗರಗಳಲ್ಲಿ 250 ಮಾರಾಟ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಕಿಯಾ ಮೋಟಾರ್ಸ್ ಮಾರಾಟ ಮಳಿಗೆಗಳ ಸಂಖ್ಯೆ 300ಕ್ಕೆ ಏರಿಕೆಯಾಗಲಿದೆ.

ಮಾಹಾನಗರಗಳು ಸೇರಿದಂತೆ ಟೈರ್ 1, ಟೈರ್ 2 ನಗರಗಳಲ್ಲಿ ಹೊಸದಾಗಿ 60ಕ್ಕೂ ಹೆಚ್ಚು ಕಿಯಾ ಮೋಟಾರ್ಸ್ ಮಾರಾಟ ಮಳಿಗೆಗಳು ನಿರ್ಮಾಣದ ಹಂತದಲ್ಲಿದ್ದು, ಹೊಸ ವರ್ಷಾಚಾರಣೆ ವೇಳೆಗೆ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಲು ಸಿದ್ದತೆ ನಡೆಸಲಾಗಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಕಿಯಾ ಮೋಟಾರ್ಸ್ ಹೊಸ ಕಾರುಗಳು ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಸೆಲ್ಟೊಸ್ ಮತ್ತು ಸೊನೆಟ್ ಕಾರುಗಳು ಕಂಪನಿಯ ಮಾರಾಟದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಐಷಾರಾಮಿ ಫೀಚರ್ಸ್ ಹೊಂದಿರುವ ಕಾರ್ನಿವಾಲ್ ಕಾರು ಕೂಡಾ ತನ್ನದೆ ಆದ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಮಧ್ಯಮ ಕ್ರಮಾಂಕದ ಎಸ್‌ಯುವಿ ಮತ್ತು ಎಂಪಿವಿ ಕಾರುಗಳು ಬಿಡುಗಡೆಯ ಸಿದ್ದತೆಯಲ್ಲಿವೆ.