ಕರೋನಾ ಆರ್ಭಟದ ನಡುವೆಯೂ ದ್ವಿಗುಣಗೊಂಡ ಲ್ಯಾಂಬೊರ್ಗಿನಿ ಕಾರು ಮಾರಾಟ ಪ್ರಮಾಣ

ಕರೋನಾ ವೈರಸ್ ಆರ್ಭಟದಿಂದಾಗಿ 2021ರ ಹಣಕಾಸು ವರ್ಷದಲ್ಲಿ ಬಹುತೇಕ ಎಲ್ಲಾ ಐಷಾರಾಮಿ ಕಾರುಗಳ ಮಾರಾಟವು ತೀವ್ರವಾಗಿ ಕುಸಿದಿದೆ. ಆದರೆ ಲ್ಯಾಂಬೊರ್ಗಿನಿ ಕಾರುಗಳ ಮಾರಾಟ ಪ್ರಮಾಣವು ದ್ವಿಗುಣಗೊಂಡಿದೆ.

ಕರೋನಾ ಆರ್ಭಟದ ನಡುವೆಯೂ ದ್ವಿಗುಣಗೊಂಡ ಲ್ಯಾಂಬೊರ್ಗಿನಿ ಕಾರು ಮಾರಾಟ ಪ್ರಮಾಣ

ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಫಾಡಾ) ಬಿಡುಗಡೆಗೊಳಿಸಿರುವ ವಾಹನ ಮಾರಾಟ ಅಂಕಿ ಅಂಶಗಳ ಪ್ರಕಾರ ಇಟಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಲ್ಯಾಂಬೊರ್ಗಿನಿ ಕಂಪನಿಯು ಭಾರತದಲ್ಲಿ 2020ರ ಏಪ್ರಿಲ್‌ನಿಂದ 2021ರ ಮಾರ್ಚ್ ಅಂತ್ಯದವರೆಗೆ ಒಟ್ಟು 26 ಕಾರುಗಳನ್ನು ಮಾರಾಟ ಮಾಡಿದೆ.

ಕರೋನಾ ಆರ್ಭಟದ ನಡುವೆಯೂ ದ್ವಿಗುಣಗೊಂಡ ಲ್ಯಾಂಬೊರ್ಗಿನಿ ಕಾರು ಮಾರಾಟ ಪ್ರಮಾಣ

2019ರ ಏಪ್ರಿಲ್‌ನಿಂದ 2020ರ ಮಾರ್ಚ್ 31ರವರೆಗೆ ಲ್ಯಾಂಬೊರ್ಗಿನಿ ಕಂಪನಿಯು ಕೇವಲ 13 ಕಾರುಗಳನ್ನು ಮಾರಾಟ ಮಾಡಿತ್ತು. ಐಷಾರಾಮಿ ಕಾರುಗಳ ಮಾರಾಟದಲ್ಲಿ ಲ್ಯಾಂಬೊರ್ಗಿನಿ ಕಂಪನಿಯು ಫೆರಾರಿ ಹಾಗೂ ಬೆಂಟ್ಲಿ ಕಂಪನಿಗಳಿಗಿಂತ ಮುಂದಿದೆ.

ಕರೋನಾ ಆರ್ಭಟದ ನಡುವೆಯೂ ದ್ವಿಗುಣಗೊಂಡ ಲ್ಯಾಂಬೊರ್ಗಿನಿ ಕಾರು ಮಾರಾಟ ಪ್ರಮಾಣ

ಕಂಪನಿಯು ಇತರ ಐಷಾರಾಮಿ ಕಾರು ತಯಾರಕ ಕಂಪನಿಗಳಿಗಿಂತ ಹೆಚ್ಚು ಕಾರುಗಳನ್ನು ಮಾರಾಟ ಮಾಡುತ್ತಿದೆ ಎಂದು ಲ್ಯಾಂಬೊರ್ಗಿನಿ ಇಂಡಿಯಾದ ಸಿಇಒ ಶರದ್ ಅಗರ್ ವಾಲ್ ಹೇಳಿದ್ದಾರೆ.

ಕರೋನಾ ಆರ್ಭಟದ ನಡುವೆಯೂ ದ್ವಿಗುಣಗೊಂಡ ಲ್ಯಾಂಬೊರ್ಗಿನಿ ಕಾರು ಮಾರಾಟ ಪ್ರಮಾಣ

ಉರುಸ್ ಎಸ್‌ಯುವಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಲ್ಯಾಂಬೊರ್ಗಿನಿ ಕಂಪನಿಯ ಮಾರಾಟದಲ್ಲಿ ಏರಿಕೆ ಕಂಡು ಬಂದಿದೆ. ಉರುಸ್ ಎಸ್‌ಯುವಿಯು ಸೂಪರ್ ಕಾರಿನ ಪರ್ಫಾಮೆನ್ಸ್ ಹೊಂದಿದ್ದು, ದೈನಂದಿನ ಬಳಕೆಗೆ ಸೂಕ್ತವಾಗಿದೆ.

ಕರೋನಾ ಆರ್ಭಟದ ನಡುವೆಯೂ ದ್ವಿಗುಣಗೊಂಡ ಲ್ಯಾಂಬೊರ್ಗಿನಿ ಕಾರು ಮಾರಾಟ ಪ್ರಮಾಣ

ಈ ಹಿನ್ನೆಲೆಯಲ್ಲಿ ಶ್ರೀಮಂತರು ದಿನನಿತ್ಯದ ಬಳಕೆಗೆ ಉರುಸ್ ಎಸ್‌ಯುವಿಯನ್ನು ಬಳಸುತ್ತಿದ್ದಾರೆ. ಲ್ಯಾಂಬೊರ್ಗಿನಿ ಉರುಸ್ ಎಸ್‌ಯುವಿಯ ಬೆಲೆ ಭಾರತದಎಕ್ಸ್‌ಶೋರೂಂ ದರದಂತೆ ರೂ.3.15 ಕೋಟಿಗಳಾಗಿದೆ.

ಕರೋನಾ ಆರ್ಭಟದ ನಡುವೆಯೂ ದ್ವಿಗುಣಗೊಂಡ ಲ್ಯಾಂಬೊರ್ಗಿನಿ ಕಾರು ಮಾರಾಟ ಪ್ರಮಾಣ

ಉರುಸ್ ಖರೀದಿಸುವವರು ಮೊದಲ ಬಾರಿಗೆ ಲ್ಯಾಂಬೊರ್ಗಿನಿ ಕಾರು ಮಾಲೀಕರಾಗುತ್ತಿರುವುದು ವಿಶೇಷ. ಉರುಸ್ ಎಸ್‌ಯುವಿ ಮಾರಾಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶರದ್ ಅಗರ್ ವಾಲ್, ಉರುಸ್ ಭಾರತದಲ್ಲಿರುವ ನಮ್ಮ ಕಂಪನಿಯ ಪ್ರಮುಖ ಮಾದರಿಯಾಗಿದೆ.

ಕರೋನಾ ಆರ್ಭಟದ ನಡುವೆಯೂ ದ್ವಿಗುಣಗೊಂಡ ಲ್ಯಾಂಬೊರ್ಗಿನಿ ಕಾರು ಮಾರಾಟ ಪ್ರಮಾಣ

ಇದೇ ವೇಳೆ ನಾವು ದೇಶಿಯ ಮಾರುಕಟ್ಟೆಯಲ್ಲಿ ನಮ್ಮ ಕಂಪನಿಯ ಇತರ ಸೂಪರ್ ಸ್ಪೋರ್ಟ್ಸ್ ಕಾರುಗಳ ಮಾರಾಟವನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮುಂದುವರಿಸುತ್ತಿದ್ದೇವೆ ಎಂದು ಹೇಳಿದರು.

ಕರೋನಾ ಆರ್ಭಟದ ನಡುವೆಯೂ ದ್ವಿಗುಣಗೊಂಡ ಲ್ಯಾಂಬೊರ್ಗಿನಿ ಕಾರು ಮಾರಾಟ ಪ್ರಮಾಣ

ಲ್ಯಾಂಬೊರ್ಗಿನಿ ಇಂಡಿಯನ್ ಸೂಪರ್ ಸ್ಪೋರ್ಟ್ಸ್ ಕಾರ್ ವಿಭಾಗವು ಅವೆಂಟಡಾರ್ ಹಾಗೂ ಹುರಾಕನ್ ಮಾದರಿಗಳನ್ನು ಒಳಗೊಂಡಿದೆ. ಲ್ಯಾಂಬೊರ್ಗಿನಿ ಕಂಪನಿಯು ಹೊಸ ಕಾರುಗಳನ್ನು ಬಿಡುಗಡೆಗೊಳಿಸಿದ ಮೊದಲ ಐದು ದೇಶಗಳಲ್ಲಿ ಭಾರತವೂ ಸಹ ಒಂದು.

ಕರೋನಾ ಆರ್ಭಟದ ನಡುವೆಯೂ ದ್ವಿಗುಣಗೊಂಡ ಲ್ಯಾಂಬೊರ್ಗಿನಿ ಕಾರು ಮಾರಾಟ ಪ್ರಮಾಣ

ಇಟಲಿಯಲ್ಲಿ ಬಿಡುಗಡೆಯಾದ ಲ್ಯಾಂಬೊರ್ಗಿನಿ ಕಾರುಗಳನ್ನು ಭಾರತದಲ್ಲಿಯೂ ಶೀಘ್ರವಾಗಿ ಬಿಡುಗಡೆಗೊಳಿಸಲಾಗುತ್ತದೆ. ಆದರೆ ಕರೋನಾ ವೈರಸ್ ಕಾರಣದಿಂದಾಗಿ ಜಾಗತಿಕವಾಗಿ ಬಿಡುಗಡೆಯಾದ ಸುಮಾರು 1 ವರ್ಷದ ನಂತರ ಲ್ಯಾಂಬೊರ್ಗಿನಿ ಹುರಾಕನ್ ಇವೊ ರೇರ್ ವ್ಹೀಲ್ ಡ್ರೈವ್ ಸ್ಪೈಡರ್ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಯಿತು.

ಕರೋನಾ ಆರ್ಭಟದ ನಡುವೆಯೂ ದ್ವಿಗುಣಗೊಂಡ ಲ್ಯಾಂಬೊರ್ಗಿನಿ ಕಾರು ಮಾರಾಟ ಪ್ರಮಾಣ

ಕರೋನಾ ವೈರಸ್ ಮೊದಲ ಅಲೆಯ ನಂತರ ಭಾರತದಲ್ಲಿ ತಮ್ಮ ಕಾರುಗಳ ಮಾರಾಟ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಲ್ಯಾಂಬೊರ್ಗಿನಿ ಹೇಳಿಕೊಂಡಿದೆ. ಆದರೆ ಇತರ ಕಂಪನಿಗಳಂತೆ ಕರೋನಾ ವೈರಸ್ ಎರಡನೇ ಅಲೆಯಲ್ಲಿ ಲ್ಯಾಂಬೊರ್ಗಿನಿ ಕಾರುಗಳ ಮಾರಾಟವು ಸಹ ಕುಸಿದಿದೆ.

Most Read Articles

Kannada
English summary
Lamborghini car sales increased during last financial year. Read in Kannada.
Story first published: Friday, June 11, 2021, 12:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X