ಫೋಕ್ಸ್‌ವ್ಯಾಗನ್ ಬಸ್ ರೀತಿಯಲ್ಲಿ ಮಾಡಿಫೈಗೊಂಡ ಮೆಟಡಾರ್ ವ್ಯಾನ್

ಫೋರ್ಸ್ ಮೋಟಾರ್ಸ್ ಕಂಪನಿಯು ಹಲವಾರು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ತನ್ನ ವಾಹನಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಯು ಕಮರ್ಷಿಯಲ್ ವೆಹಿಕಲ್ ಸೆಗ್ ಮೆಂಟಿನಲ್ಲಿ ಜನಪ್ರಿಯವಾಗಿದೆ.

ಫೋಕ್ಸ್‌ವ್ಯಾಗನ್ ಬಸ್ ರೀತಿಯಲ್ಲಿ ಮಾಡಿಫೈಗೊಂಡ ಮೆಟಡಾರ್ ವ್ಯಾನ್

ಫೋರ್ಸ್ ಮೋಟಾರ್ಸ್ ಕಂಪನಿಯ ಟ್ರಾವೆಲರ್ ವ್ಯಾನ್‌ಗಳು ಹೆಚ್ಚು ಜನಪ್ರಿಯವಾಗಿವೆ. ಟ್ರಾವೆಲರ್ ಬರುವ ಮುನ್ನ ಫೋರ್ಸ್ ಕಂಪನಿಯ ಮೆಟಡಾರ್ ವ್ಯಾನ್‌ಗಳು ಭಾರೀ ಜನಪ್ರಿಯತೆಯನ್ನು ಹೊಂದಿದ್ದವು. ಈ ವ್ಯಾನ್‌ಗಳನ್ನು ವಾಣಿಜ್ಯ ಬಳಕೆಗಾಗಿ ಮಾತ್ರವಲ್ಲದೆ ವೈಯಕ್ತಿಕ ಬಳಕೆಗಾಗಿಯೂ ಖರೀದಿಸಲಾಗುತ್ತಿತ್ತು.

ಫೋಕ್ಸ್‌ವ್ಯಾಗನ್ ಬಸ್ ರೀತಿಯಲ್ಲಿ ಮಾಡಿಫೈಗೊಂಡ ಮೆಟಡಾರ್ ವ್ಯಾನ್

ಈಗ ಮೆಟಡಾರ್ ವ್ಯಾನ್‌ಗಳ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಆದರೂ ಭಾರತದ ರಸ್ತೆಗಳಲ್ಲಿ ಈ ವ್ಯಾನ್‌ಗಳನ್ನು ಈಗಲೂ ಕಾಣಬಹುದು. ಹಳೆಯ ಮೆಟಡಾರ್ ವ್ಯಾನ್ ಒಂದನ್ನು ಆಕರ್ಷಕವಾಗಿ ಮಾಡಿಫೈಗೊಳಿಸಲಾಗಿದೆ.

ಫೋಕ್ಸ್‌ವ್ಯಾಗನ್ ಬಸ್ ರೀತಿಯಲ್ಲಿ ಮಾಡಿಫೈಗೊಂಡ ಮೆಟಡಾರ್ ವ್ಯಾನ್

ಈ ಮಾಡಿಫಿಕೇಶನ್'ಗೆ ಸಂಬಂಧಿಸಿದ ವೀಡಿಯೊವನ್ನು ದಜೀಶ್ ಪಿ ಎಂಬ ಯೂಟ್ಯೂಬ್ ಚಾನೆಲ್'ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಈ ವ್ಯಾನ್‌ನಲ್ಲಿ ಮಾಡಲಾಗಿರುವ ಬದಲಾವಣೆಗಳನ್ನು ವಿವರವಾಗಿ ತೋರಿಸಲಾಗಿದೆ.

ಫೋಕ್ಸ್‌ವ್ಯಾಗನ್ ಬಸ್ ರೀತಿಯಲ್ಲಿ ಮಾಡಿಫೈಗೊಂಡ ಮೆಟಡಾರ್ ವ್ಯಾನ್

ಈ ವೀಡಿಯೊದಲ್ಲಿ ಮಾತಾನಾಡಿರುವ ವ್ಯಾನ್‌ ಮಾಲೀಕರು ಕಾರುಗಳ ಬಗ್ಗೆ ತಮಗಿರುವ ಕ್ರೇಜ್ ಬಗ್ಗೆ ತಿಳಿಸಿದ್ದಾರೆ. ತಮ್ಮ ಬಳಿ ಹಿಂದೂಸ್ತಾನ್ ಅಂಬಾಸಿಡರ್ ಹಾಗೂ ಈ ಮೆಟಡಾರ್ ವ್ಯಾನ್ ಇದ್ದು, ಹಳೆಯ ಕ್ಲಾಸಿಕ್ ಕಾರುಗಳಲ್ಲಿ ಒಂದಾದ ಕಾಂಟೆಸ್ಸಾ ಕಾರನ್ನು ಖರೀದಿಸಲು ಬಯಸಿರುವುದಾಗಿ ತಿಳಿಸಿದ್ದಾರೆ.

ಫೋಕ್ಸ್‌ವ್ಯಾಗನ್ ಬಸ್ ರೀತಿಯಲ್ಲಿ ಮಾಡಿಫೈಗೊಂಡ ಮೆಟಡಾರ್ ವ್ಯಾನ್

ಅವರು ಈ ವ್ಯಾನ್ ಅನ್ನು ಆಂಧ್ರಪ್ರದೇಶದಲ್ಲಿ ಖರೀದಿಸಿದರು. ಈ ವ್ಯಾನ್ ಖರೀದಿಸಿದಾಗ ಹದಗೆಟ್ಟ ಸ್ಥಿತಿಯಲ್ಲಿತ್ತು. ಯೂಟ್ಯೂಬ್'ನಲ್ಲಿ ವ್ಯಕ್ತಿಯೊಬ್ಬರ ಬಳಿ ವ್ಯಾನ್ ನೋಡಿ ಅವರು ಸಹ ಈ ವ್ಯಾನ್ ಖರೀದಿಸಿದ್ದಾರೆ.

ಫೋಕ್ಸ್‌ವ್ಯಾಗನ್ ಬಸ್ ರೀತಿಯಲ್ಲಿ ಮಾಡಿಫೈಗೊಂಡ ಮೆಟಡಾರ್ ವ್ಯಾನ್

ನೀಲಿ ಬಣ್ಣವನ್ನು ಹೊಂದಿದ್ದ ಈ ವ್ಯಾನ್‌ನ ಹೊರಭಾಗಕ್ಕೆ ಈಗ ಆರೇಂಜ್ ಹಾಗೂ ವೈಟ್ ಡ್ಯುಯಲ್ ಕಲರ್ ಪೇಂಟ್ ನೀಡಲಾಗಿದೆ. ಈ ವ್ಯಾನ್ ನೋಡಿದ ತಕ್ಷಣ ಈ ಹಿಂದೆ ಮಾರಾಟವಾಗುತ್ತಿದ್ದ ಫೋಕ್ಸ್‌ವ್ಯಾಗನ್ ಬಸ್ ನೆನಪಾಗುತ್ತದೆ.

ಫೋಕ್ಸ್‌ವ್ಯಾಗನ್ ಬಸ್ ರೀತಿಯಲ್ಲಿ ಮಾಡಿಫೈಗೊಂಡ ಮೆಟಡಾರ್ ವ್ಯಾನ್

ಈ ವ್ಯಾನ್‌ನಲ್ಲಿದ್ದ ಹೆಡ್‌ಲೈಟ್‌ಗಳು ಸ್ವಲ್ಪ ಮಂಕಾಗಿದ್ದವು. ಇವುಗಳ ಬದಲು ಈಗ ಆಕ್ಸಿಲರಿ ಲೈಟ್'ಗಳನ್ನು ಅಳವಡಿಸಲಾಗಿದೆ. ಹಿಂಭಾಗದಲ್ಲಿ ಮಹೀಂದ್ರಾ ಜೀತೊದಲ್ಲಿರುವಂತಹ ಟೇಲ್‌ಲೈಟ್‌ಗಳನ್ನು ಅಳವಡಿಸಲಾಗಿದೆ.

ಫೋಕ್ಸ್‌ವ್ಯಾಗನ್ ಬಸ್ ರೀತಿಯಲ್ಲಿ ಮಾಡಿಫೈಗೊಂಡ ಮೆಟಡಾರ್ ವ್ಯಾನ್

ಹೊಸ ಬಣ್ಣಗಳನ್ನು ಹೊರತುಪಡಿಸಿ ಈ ವಾಹನದ ಹೊರಭಾಗದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ. ಮುಂಭಾಗದಲ್ಲಿರುವ ಡೋರುಗಳಲ್ಲಿ ಅಗಲವಾದ ವಿಂಡೋಗಳನ್ನು ನೀಡಲಾಗಿದೆ.

ಈ ವ್ಯಾನ್ ಒಳಗೆ ಫೋರ್ಸ್ ಟ್ರಾವೆಲರ್'ನಲ್ಲಿರುವಂತಹ ಸೀಟುಗಳನ್ನು ಅಳವಡಿಸಲಾಗಿದೆ. ಎಸಿ ಬದಲು ಈ ವ್ಯಾನ್‌ನ ಕ್ಯಾಬಿನ್‌ನಲ್ಲಿ ಕೆಲವು ಫ್ಯಾನ್'ಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿ ಗಾಳಿಗಾಗಿ ರೂಫ್ ಮೇಲೆ ಎರಡು ಸ್ಥಳಗಳಲ್ಲಿ ಸರ್ಕ್ಯುಲರ್ ಶೇಪಿನಲ್ಲಿ ಕತ್ತರಿಸಲಾಗಿದೆ.

ಫೋಕ್ಸ್‌ವ್ಯಾಗನ್ ಬಸ್ ರೀತಿಯಲ್ಲಿ ಮಾಡಿಫೈಗೊಂಡ ಮೆಟಡಾರ್ ವ್ಯಾನ್

ಚಿತ್ರ ಕೃಪೆ: ದಜೀಶ್ ಪಿ

ಈ ಆಧುನಿಕ ವ್ಯಾನ್‌ನಲ್ಲಿ ಟಿವಿ, ಮ್ಯೂಸಿಕ್ ಸಿಸ್ಟಂ, ಇಂಡಕ್ಷನ್ ಕುಕ್ಕರ್'ಗಳನ್ನು ನೀಡಲಾಗಿದೆ. ಇವುಗಳಿಗೆ ಪವರ್ ನೀಡಲು ವ್ಯಾನ್ ರೂಫ್ ಮೇಲೆ ಸೋಲಾರ್ ಪ್ಯಾನೆಲ್'ಗಳನ್ನು ಅಳವಡಿಸಲಾಗಿದೆ.

Most Read Articles

Kannada
English summary
Matador van modified like a Volkswagen bus. Read in Kannada.
Story first published: Wednesday, June 30, 2021, 10:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X