ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಸೇವಾ ಮಳಿಗೆಯನ್ನು ತೆರೆದ ಮರ್ಸಿಡಿಸ್ ಬೆಂಝ್

ಐಷಾರಾಮಿ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮರ್ಸಿಡಿಸ್ ಬೆಂಝ್(Mercedes Benz) ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರಾಟ ಮಳಿಗೆಗಳು ಮತ್ತು ಸೇವಾ ಕೇಂದ್ರಗಳನ್ನು ವಿಸ್ತರಿಸುತ್ತಿದ್ದು, ಕಂಪನಿಯು ಇತ್ತೀಚೆಗೆ ನಮ್ಮ ಬೆಂಗಳೂರಿನಲ್ಲಿ ಅಕ್ಷಯ್ ಮೋಟಾರ್ಸ್‌ನೊಂದಿಗೆ ಅತ್ಯಾಧುನಿಕ ಸೌಲಭ್ಯವುಳ್ಳ ಹೊಸ ಸೇವಾ ಮಳಿಗೆಯನ್ನು ಆರಂಭಿಸಿದೆ.

ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಸೇವಾ ಮಳಿಗೆಯನ್ನು ತೆರೆದ ಮರ್ಸಿಡಿಸ್ ಬೆಂಝ್

ಬೆಂಗಳೂರಿನಲ್ಲಿ ಈಗಾಗಲೇ ಮೂರು ಸೇವಾ ಮಳಿಗೆಗಳನ್ನು ತೆರೆದಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಇದೀಗ ಅಕ್ಷಯ್ ಮೋಟಾರ್ಸ್ ಜೊತೆಗೂಡಿ ನಾಲ್ಕನೇ ಸೇವಾ ಮಳಿಗೆಯನ್ನು ಆರಂಭಿಸಿದ್ದು, ಹೊಸೂರು ರಸ್ತೆಯಲ್ಲಿರುವ ಹೊಸ ಸೇವಾ ಮಳಿಗೆ ಮೂಲಕ ಒಂದೇ ಸೂರಿನಡಿಯಲ್ಲಿ ಗರಿಷ್ಠ ಮಟ್ಟದ ಗ್ರಾಹಕ ಸೇವೆಗಳನ್ನು ಅತಿ ಕಡಿಮೆ ಅವಧಿಯಲ್ಲಿ ಒದಗಿಸಲು ಸಾಧ್ಯವಾಗುವಂತೆ ನಿರ್ಮಾಣ ಮಾಡಿದೆ.

ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಸೇವಾ ಮಳಿಗೆಯನ್ನು ತೆರೆದ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ 'MAR 2020' ಯೋಜನೆ ಅಡಿ ಹೊಸ ಸೇವಾ ಮಳಿಗೆಯನ್ನು ಆರಂಭಿಸಿದ್ದು, ಹೊಸ ಸೇವಾ ಮಳಿಗೆಯ ಮೂಲಕ ಬ್ರಾಂಡ್ ವಿನ್ಯಾಸ, ಸುಧಾರಿತ ಆರ್ಕಿಟೆಕ್ಚರ್, ಗ್ರಾಹಕ ಆಧಾರಿತ ಪ್ರಕ್ರಿಯೆಗಳು ಮತ್ತು ಡಿಜಿಟಲ್ ವರ್ಧನೆಗಳನ್ನು ಹೆಚ್ಚಿಸುವ ಗುರಿಹೊಂದಲಾಗಿದೆ.

ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಸೇವಾ ಮಳಿಗೆಯನ್ನು ತೆರೆದ ಮರ್ಸಿಡಿಸ್ ಬೆಂಝ್

ಅಕ್ಷಯ್ ಮೋಟಾರ್ಸ್ ಜೊತೆಗೂಡಿ ತೆರೆಯಲಾಗಿರುವ ಮರ್ಸಿಡಿಸ್ ಬೆಂಝ್ ಹೊಸ ಸೇವಾ ಮಳಿಗೆಯು ಸುಮಾರು 20,000 ಚದರ ಅಡಿಯಲ್ಲಿ ಹರಡಿಕೊಂಡಿದ್ದು, ಅತ್ಯಾಧುನಿಕ ಸೇವಾ ಮಳಿಗೆಯನ್ನು ತೆರೆಯಲು ಸುಮಾರು ರೂ. 4.50 ಕೋಟಿ ಹೂಡಿಕೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಸೇವಾ ಮಳಿಗೆಯನ್ನು ತೆರೆದ ಮರ್ಸಿಡಿಸ್ ಬೆಂಝ್

ಹೊಸ ಸೇವಾ ಮಳಿಗೆಯನ್ನು ಮೂಲಕ ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಹಳೆಯ ಪ್ರೀಮಿಯಂ ಎಕ್ಸ್‌ಪ್ರೆಸ್ ಪ್ರೈಮ್ 2.0 ಯೋಜನೆಯನ್ನು ಪುನಾರಂಭಿಸಿದ್ದು, ಹೊಸ ಪ್ರೀಮಿಯಂ ಎಕ್ಸ್‌ಪ್ರೆಸ್ ಪ್ರೈಮ್ 2.0 ಯೋಜನೆ ಅಡಿ ಗ್ರಾಹಕರು ಕೇವಲ 3 ಗಂಟೆಗಳಲ್ಲಿ ಕಾರ್ ಸರ್ವಿಸ್ ಪಡೆದುಕೊಳ್ಳಬಹುದಾಗಿದೆ.

ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಸೇವಾ ಮಳಿಗೆಯನ್ನು ತೆರೆದ ಮರ್ಸಿಡಿಸ್ ಬೆಂಝ್

ಇದರೊಂದಿಗೆ ಹೊಸ ಸೇವಾ ಮಳಿಗೆಯಲ್ಲಿ ಗ್ರಾಹಕರ ಸೇವೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸುಮಾರು 50 ವೃತ್ತಿಪರ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಹೊಸ ಸೇವಾ ಮಳಿಗೆಯಲ್ಲಿ ವಾರ್ಷಿಕವಾಗಿ 4500 ಕಾರುಗಳಿಗೆ ಸರ್ವಿಸ್ ಒದಗಿಸಬಹುದಾಗಿದೆ.

ಈ ಹೊಸ ಸೇವಾ ಮಳಿಗೆಯ ಮೂಲಕ ಮರ್ಸಿಡಿಸ್ ಬೆಂಝ್ ಮತ್ತಷ್ಟು ಬೇಡಿಕೆಯೊಂದಿಗೆ ಗ್ರಾಹಕರ ಸೇವಾ ಜಾಲವನ್ನು ಗಟ್ಟಿಗೊಳಿಸುತ್ತಿದ್ದು, ಕಂಪನಿಯು ಈಗಾಗಲೇ ದೇಶಾದ್ಯಂತ 47 ಪ್ರಮುಖ ನಗರಗಳಲ್ಲಿ ಸುಮಾರು ನೂರು ಸೇವಾ ಕೇಂದ್ರಗಳ ಜಾಲ ಹೊಂದಿದೆ.

ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಸೇವಾ ಮಳಿಗೆಯನ್ನು ತೆರೆದ ಮರ್ಸಿಡಿಸ್ ಬೆಂಝ್

ಇನ್ನು ಮರ್ಸಿಡಿಸ್ ಬೆಂಝ್ ಕಂಪನಿಯು ಭಾರತದಲ್ಲಿ ಸದ್ಯ ಮುಂಚೂಣಿ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿ ಗುರುತಿಸಿಕೊಂಡಿದ್ದು, ಕಂಪನಿಯು ಕೋವಿಡ್ ಅಬ್ಬರದ ನಡುವೆಯೂ ಭರ್ಜರಿ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಐಷಾರಾಮಿ ಕಾರು ಮಾರಾಟ ವಿಭಾಗದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, 2021ರ ಮೂರನೇ ತ್ರೈಮಾಸಿಕ ಅವಧಿಯಲ್ಲಿ 4101 ಕಾರುಗಳನ್ನು ಮಾರಾಟ ಮಾಡುವ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಸೇವಾ ಮಳಿಗೆಯನ್ನು ತೆರೆದ ಮರ್ಸಿಡಿಸ್ ಬೆಂಝ್

ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯ ಕಳೆದ ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿನ ಕಾರು ಮಾರಾಟ ಪ್ರಮಾಣಕ್ಕಿಂತಲೂ ಶೇ.99ರಷ್ಟು ಬೆಳವಣಿಗೆ ಸಾಧಿಸಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು ಕೇವಲ 2060 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಿತ್ತು.

ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಸೇವಾ ಮಳಿಗೆಯನ್ನು ತೆರೆದ ಮರ್ಸಿಡಿಸ್ ಬೆಂಝ್

ಮೂರನೇ ತ್ರೈಮಾಸಿಕ ಅವಧಿಯಾದ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿನ ಐಷಾರಾಮಿ ಕಾರು ಮಾರಾಟದಲ್ಲಿ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಕಾರು ಮಾದರಿಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ.

ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಸೇವಾ ಮಳಿಗೆಯನ್ನು ತೆರೆದ ಮರ್ಸಿಡಿಸ್ ಬೆಂಝ್

ಭಾರತದಲ್ಲಿ ಸದ್ಯ ಜಮರ್ನ್ ಕಾರು ಕಂಪನಿಯು ಒಟ್ಟು 24 ವಿವಿಧ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, 24 ಕಾರು ಮಾದರಿಗಳಲ್ಲಿ 13 ಕಾರು ಮಾದರಿಗಳನ್ನು ಸ್ಥಳೀಯವಾಗಿ ಉತ್ಪಾದನೆಗೊಳ್ಳುತ್ತಿರುವ ಕಾರು ಮಾದರಿಗಳಾಗಿವೆ.

ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಸೇವಾ ಮಳಿಗೆಯನ್ನು ತೆರೆದ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಇ-ಕ್ಲಾಸ್, ಜಿಎಲ್ಎ, ಜಿಎಲ್‌ಸಿ ಎಫ್ಎಲ್, ಎಸ್-ಕ್ಲಾಸ್, ಜಿಎಲ್ಎಸ್ ಮೇಬ್ಯಾಚ್, ಎಎಂಜಿ ಎ35, ಎಎಂಜಿ ಜಿಎಲ್ಎ 35, ಎಎಂಜಿ ಇ53, ಎಎಂಜಿ ಇ63 ಮತ್ತು ಎಎಂಜಿ ಜಿಎಲ್ಇ63 ಎಸ್ ಮಾದರಿಗಳನ್ನು ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಾಣ ಮಾಡುತ್ತಿದೆ.

ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಸೇವಾ ಮಳಿಗೆಯನ್ನು ತೆರೆದ ಮರ್ಸಿಡಿಸ್ ಬೆಂಝ್

ಇನ್ನುಳಿದ ಕಾರು ಮಾದರಿಗಳನ್ನು ಕೇಂದ್ರ ಸರ್ಕಾರದ ಹೊಸ ಆಮದು ನೀತಿಯಲ್ಲಿ ಭಾರತದಲ್ಲಿ ಮಾರಾಟ ಮಾಡುತ್ತಿದ್ದು, ಕಂಪನಿಯು ಹೊಸ ಉತ್ಪನ್ನಗಳೊಂದಿಗೆ 2021ರ ಮೊದಲ ತ್ರೈಮಾಸಿಕ ಅವಧಿಯಲ್ಲಿ 3193 ಯುನಿಟ್, ಎರಡನೇ ತ್ರೈಮಾಸಿಕ ಅವಧಿಯಲ್ಲಿ 1664 ಯುನಿಟ್ ಮತ್ತು ಮೂರನೇ ತ್ರೈಮಾಸಿಕ ಅವಧಿಯಲ್ಲಿ 4101 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಸೇವಾ ಮಳಿಗೆಯನ್ನು ತೆರೆದ ಮರ್ಸಿಡಿಸ್ ಬೆಂಝ್

ಕಂಪನಿಯ ಪ್ರಮುಖ 24 ಕಾರು ಮಾದರಿಗಳಲ್ಲಿ ಸದ್ಯ ಜಿಎಲ್‌ಸಿ, ಜಿಎಲ್ಇ, ಜಿಎಲ್ಎಸ್, ಜಿಎಲ್ಎಸ್ ಮೇಬ್ಯಾಚ್, ಎಸ್-ಕ್ಲಾಸ್ ಮತ್ತು ಎಎಂಜಿ ಕಾರು ಮಾದರಿಗಳು ಹೆಚ್ಚಿನ ಬೇಡಿಕೆ ಹೊಂದಿದ್ದು, 2021ರ ಆರಂಭದಿಂದ ಕಂಪನಿಯು ಇದುವರೆಗೆ ಕಂಪನಿಯು ಒಟ್ಟು 8,958 ಯುನಿಟ್ ಐಷಾರಾಮಿ ಕಾರುಗಳನ್ನು ಮಾಡಿದೆ.

ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಸೇವಾ ಮಳಿಗೆಯನ್ನು ತೆರೆದ ಮರ್ಸಿಡಿಸ್ ಬೆಂಝ್

ಭಾರತದಲ್ಲಿ ಕಾರು ಉತ್ಪಾದನೆ ಆರಂಭಿಸಿದ ನಂತರ ಹಲವಾರು ಹೊಸ ಬದಲಾವಣೆಗಳೊಂದಿಗೆ ತಂತ್ರಜ್ಞಾನ ಉನ್ನತೀಕರಣ ಹೊಂದಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಕಳೆದ 10 ವರ್ಷಗಳಲ್ಲಿ 1 ಲಕ್ಷ ಯುನಿಟ್ ಐಷಾರಾಮಿ ಕಾರುಗಳನ್ನು ಭಾರತದಲ್ಲಿಯೇ ಉತ್ಪಾದನೆ ಮಾಡಿ ದೇಶಿಯ ಮಾರುಕಟ್ಟೆಯ ಜೊತೆಗೆ ವಿದೇಶಿ ಮಾರುಕಟ್ಟೆಗಳಿಗೂ ಇಲ್ಲಿಂದಲೇ ರಫ್ತು ಮಾಡಿದೆ.

Most Read Articles

Kannada
English summary
Mercedes benz inaugurates a state of art new workshop in bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X