Just In
Don't Miss!
- Movies
ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ಮಿನಿ ಕೂಪರ್ ಸ್ಪೆಷಲ್ ಎಡಿಷನ್ ಬಿಡುಗಡೆ
ಮಿನಿ ಬ್ರ್ಯಾಂಡ್ ತನ್ನ ಕೂಪರ್ ಮಾದರಿಯ ಸ್ಪೆಷಲ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಸ್ಪೆಷಲ್ ಎಡಿಷನ್ ಮಿನಿ ಪ್ಯಾಡಿ ಹಾಪ್‌ಕಿರ್ಕ್ ಆಗಿದ್ದು, ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.41.70 ಲಕ್ಷಗಳಾಗಿದೆ.

ಈ ಮಿನಿ ಕೂಪರ್ ಪ್ಯಾಡಿ ಹಾಪ್‌ಕಿರ್ಕ್ ಅನ್ನು ಬಾರತಕ್ಕೆ ಕಂಪ್ಲೀಟ್ಲಿ ಬಿಲ್ಟ್-ಅಪ್ ಯುನಿಟ್ (ಸಿಬಿಯು) ಆಗಿ ತರಲಾಗುತ್ತದೆ. ಈ ಸ್ಪೆಷಲ್ ಎಡಿಷನ್ ಮಾದರಿಯ ಕೇವಲ 15 ಯುನಿಟ್ ಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡಲಾಗುತ್ತದೆ. ಇದನ್ನು ಖರೀದಿಸಲು ಬಯಸುವವರು ಬ್ರ್ಯಾಂಡ್ ವೆಬ್‌ಸೈಟ್ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ.

ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷ ವಿಕ್ರಮ್ ಪವಾಹ್ ಅವರು ಬಿಡುಗಡೆಗೊಳಿಸಿದ ಬಳಿಕ ಮಾತನಾಡಿಮ್ ಮಿನಿ ಪ್ಯಾಡಿ ಹಾಪ್‌ಕಿರ್ಕ್ ಎಡಿಷನ್ ಮಿನಿ ಚಾಲೆಂಜರ್ ಸ್ಪಿರಿಟ್ ಮತ್ತು ರೇಸಿಂಗ್ ಜೀನ್‌ಗಳ ಪ್ರತಿಬಿಂಬವಾಗಿದೆ. ಅಂತರರಾಷ್ಟ್ರೀಯ ಮೋಟಾರ್ ಸ್ಪೋರ್ಟ್ಸ್ ಐಕಾನ್ ಆಗಿರುವ ಮಿನಿ ಪ್ಯಾಡಿ ಹಾಪ್‌ಕಿರ್ಕ್ ಎಡಿಷನ್ ಅನ್ನು ಹೊಸ ವರ್ಷದಲ್ಲಿ ಪರಿಚಯಿಸಲು ಸಂತಸವಾಗುತ್ತದೆ ಎಂದು ಹೇಳಿದರು.
MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

1964ರಲ್ಲಿ ಕ್ಲಾಸಿಕ್ ಮಿನಿ ಕೂಪರ್ ಎಸ್ ಐಕಾನಿಕ್ ಮಾಂಟೆ ಕಾರ್ಲೊ ರ್‍ಯಾಲಿಯಲ್ಲಿ ಚಾಲಕ ಪ್ಯಾಟ್ರಿಕ್ "ಪ್ಯಾಡಿ" ಹಾಪ್ಕಿರ್ಕ್ ಈ ಮಾದರಿಯಲ್ಲಿ ಮೂರು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು. ಅವರು 37 ನಂಬರ್ ರೆಡ್ ಮಿನಿ ಕೂಪರ್ ಎಸ್ ಅನ್ನು ಚಾಲನೆ ಮಾಡುತ್ತಿದ್ದರು. ರೇಸಿಂಗ್ ದಂತಕಥೆ ಮತ್ತು ಮಾಂಟೆ ಕಾರ್ಲೊ ರ್‍ಯಾಲಿಯ ಗೆಲುವಿನ ನೆನಪಿಗಾಗಿ ಕಂಪನಿಯು 37 ನಂಬರ್ ಅನ್ನು ಈ ಮಾದರಿಯಲ್ಲಿ ನೀಡಿದ್ದಾರೆ.

ಈ ಲಿಮಿಟೆಡ್ ಮತ್ತು ಸ್ಪೆಷಲ್ ಎಡಿಷನ್ ಮಾದರಿಯು ವಿಶೇಷ ಚಿಲ್ಲಿ ರೆಡ್ ಬಣ್ಣದೊಂದಿಗೆ ಆಸ್ಪೆನ್ ವೈಟ್ ರೂಫ್, ಬ್ಲ್ಯಾಕ್ ಮಿರರ್ ಕವರ್ ಮತ್ತು 16 ಇಂಚಿನ ವಿಕ್ಟರಿ ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇತರ ಬಿಟ್‌ಗಳಲ್ಲಿ ಬಾನೆಟ್ ಸ್ಕೂಪ್, ಡೋರ್ ಹ್ಯಾಂಡಲ್ಸ್, ಫ್ಯೂಯಲ್ ಫಿಲ್ಲರ್ ಕ್ಯಾಪ್, ಮತ್ತು ಕಿಡ್ನಿ ಗ್ರಿಲ್ ಅನ್ನು ಹೊಂದಿದೆ. ಕೊನೆಯದಾಗಿ, ಕಾರಿನ ಎರಡೂ ಬದಿಯಲ್ಲಿ ಬಿಳಿ ಬಣ್ಣದಲ್ಲಿ 37 ನಂಬರ್ ಸ್ಟಿಕ್ಕರ್ ಅನ್ನು ನೀಡಿದ್ದಾರೆ.

ಮಿನಿ ಕೂಪರ್ ಪ್ಯಾಡಿ ಹಾಪ್‌ಕಿರ್ಕ್ ಎಡಿಷನ್ ನಲ್ಲಿ 2.0-ಲೀಟರ್ 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 188 ಬಿಹೆಚ್‌ಪಿ ಪವರ್ ಮತ್ತು 280 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇನ್ನು ಈ ಸ್ಪೆಷಲ್ ಎಡಿಷನ್ 6.7 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಕೂಪರ್ ಪ್ಯಾಡಿ ಹಾಪ್‌ಕಿರ್ಕ್ ಎಡಿಷನ್ 235 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಮಿನಿ ಕೂಪರ್ ಪ್ಯಾಡಿ ಹಾಪ್‌ಕಿರ್ಕ್ ಎಡಿಷನ್ ಸ್ಪೆಷಲ್ ಮತ್ತು ಲಿಮಿಟೆಡ್ ಎಢಿಷನ್ ಅಗಿದೆ. ಕಾರ್ಲೊ ರ್‍ಯಾಲಿಯಲ್ಲಿ ಮೂರು ಬಾರಿ ಮಿನಿ ಚಾಂಪಿಯನ್ ಆದ ನೆನಪಿಗಾಗಿ ಇದನ್ನು ಲಿಮಿಟೆಡ್ ಸಂಖ್ಯೆಯಲ್ಲಿ ಪರಿಚಯಿಸಿದ್ದಾರೆ. ಭಾರತದಲ್ಲಿ ಇದರ 15 ಯುನಿಟ್ ಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ.