ಅನಾವರಣವಾಯ್ತು ಹೊಸ ಫಿಯೆಟ್ ಅಬರ್ಥ್ 695 ಎಸ್ಸೆಸ್ಸಿ ಲಿಮಿಟೆಡ್ ಎಡಿಷನ್

ಇಟಲಿ ಮೂಲದ ಕಾರು ತಯಾರಕ ಕಂಪನಿಯಾಗಿರುವ ಫಿಯೆಟ್ ಭಾರತವನ್ನು ತೊರೆದಿದ್ದರೂ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹುಜನಪ್ರಿಯ ಬ್ರ್ಯಾಂಡ್ ಆಗಿದೆ. ಈ ಫಿಯೆಟ್ ಬ್ರ್ಯಾಂಡ್ ಹೊಸ 695 ಎಸ್ಸೆಸ್ಸಿ ಎಂಬ ಹೊಸ ಸ್ಪೆಷಲ್ ಎಡಿಷನ್ ಅನ್ನು ಅನಾವರಣಗೊಳಿಸಿದೆ.

ಅನಾವರಣವಾಯ್ತು ಹೊಸ ಫಿಯೆಟ್ ಅಬರ್ಥ್ 695 ಎಸ್ಸೆಸ್ಸಿ ಲಿಮಿಟೆಡ್ ಎಡಿಷನ್

ಹೊಸ 695 ಎಸೆಕ್ಸ್ ಅಬಾರ್ಥ್ ಅದೇ ಹೆಸರಿನ 1964ರ ಮಾದರಿಯನ್ನು ಆಧರಿಸಿದೆ. ಅಬರ್ಥ್ ಫಿಯೆಟ್ 500 ಸರಣಿಯಲ್ಲಿನ ಅತಿ ವೇಗದ ರೂಪಾಂತರವಾಗಿದೆ. ಅಬರ್ಥ್ 695 ಎಸ್ಸೆಸ್ಸಿಯ ಉತ್ಪಾದನೆಯು ಕೇವಲ 1390 ಯುನಿಟ್‌ಗಳಿಗೆ ಸೀಮಿತಗೊಳಿಸಲಾಗಿದೆ. ಅದರಲ್ಲಿ 695 ಸ್ಕಾರ್ಪಿಯಾನ್ ಬ್ಲ್ಯಾಕ್‌ ಬಣ್ಣಗಳಲ್ಲಿದ್ದರೆ, 695 ಯುನಿಟ್‌ಗಳು ಕ್ಯಾಂಪೊವೊಲೊ ಗ್ರೇ ಬಣ್ಣದಲ್ಲಿರುತ್ತದೆ. 695 ಎಸ್ಸೆಸ್ಸಿ ಎಂದರೆ ಪರ್ಫಾಮೆನ್ಸ್ ಮತ್ತು ರೇಸಿಂಗ್ ಕಾರುಗಳನ್ನು ಇಷ್ಟಪಡುವವರಿಗೆ ಸಮರ್ಪಿಸಲಾಗಿದೆ.

ಅನಾವರಣವಾಯ್ತು ಹೊಸ ಫಿಯೆಟ್ ಅಬರ್ಥ್ 695 ಎಸ್ಸೆಸ್ಸಿ ಲಿಮಿಟೆಡ್ ಎಡಿಷನ್

ಹೊಸ ಅಬರ್ಥ್ 695 ಎಸ್ಸೆಸ್ಸಿ ಕಾರು ಕ್ಲಾಸಿಕ್ ಮಾದರಿಯ ಮುಂಭಾಗ ಮತ್ತು ಹಿಂಭಾಗದ ಸ್ಪಾಯ್ಲರ್, ಮಿರರ್ ಕ್ಯಾಪ್ಸ್ ಮತ್ತು ಸೈಡ್ ಡೆಕಲ್‌ಗಳ ಮೇಲೆ ಬಿಳಿ ಅಂಶಗಳನ್ನು ಹೊಂದಿವೆ. ಈ ಕಾರಿನಲ್ಲಿ 17 ಇಂಚಿನ ಅಲಾಯ್ ವ್ಹೀಲ್ ಗಳು ಹೊಂದಿದ್ದು, ಇದು ಬಿಳಿ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಫಿಯೆಟ್ ಅಬರ್ಥ್ 695 ಎಸ್ಸೆಸ್ಸಿ ಲಿಮಿಟೆಡ್ ಎಡಿಷನ್

ಈ ಕಾರಿನ ಎಫ್‌ಎಸ್‌ಡಿ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿವೆ. ಇನ್ನು ಕೆಂಪು ಬ್ರೆಂಬೊ ಬ್ರೇಕ್ ಕ್ಯಾಲಿಪರ್‌ಗಳಿಂದ ಎದ್ದು ಕಾಣುತ್ತದೆ. ಹಿಂಭಾಗದಲ್ಲಿ 60 ಡಿಗ್ರಿಗಳಷ್ಟು ಹೊಂದಾಣಿಕೆ ಸ್ಪಾಯ್ಲರ್ ಅನ್ನು ಸೇರಿಸಲಾಗುತ್ತದೆ.

ಅನಾವರಣವಾಯ್ತು ಹೊಸ ಫಿಯೆಟ್ ಅಬರ್ಥ್ 695 ಎಸ್ಸೆಸ್ಸಿ ಲಿಮಿಟೆಡ್ ಎಡಿಷನ್

ಅಬರ್ಥ್ 695 ಎಸ್ಸೆಸ್ಸಿ ಅಲ್ಯೂಮಿನಿಯಂ ಬಾನೆಟ್ ರೂಪದಲ್ಲಿ ಕೆಲವು ತೂಕ ಉಳಿಸುವ ತಂತ್ರಗಳನ್ನು ಸಹ ಫಿಯೆಟ್ ಬಳಸಿದ್ದಾರೆ. ಇನ್ನು ಟ್ವಿನ್ ಟೈಟಾನಿಯಂ ಅಕ್ರಪೋವಿಕ್ ಟೈಲ್‌ಪೈಪ್‌ಗಳ ಜೊತೆಗೆ 695 ಎಸ್ಸೆಸ್ಸಿ ಅಬರ್ಥ್ 595 ಕಾಂಪೆಟಿಜಿಯೋನ್ ಗಿಂತ 10 ಕೆಜಿ ಹಗುರವಾಗಿದೆ.

ಅನಾವರಣವಾಯ್ತು ಹೊಸ ಫಿಯೆಟ್ ಅಬರ್ಥ್ 695 ಎಸ್ಸೆಸ್ಸಿ ಲಿಮಿಟೆಡ್ ಎಡಿಷನ್

ಈ ಕಾರಿನ ಒಳಭಾಗದಲ್ಲಿ, 695 ಎಸ್ಸೆಸ್ಸಿ ಇದೇ ರೀತಿಯ ಬ್ಯಾಡ್ಜಿಂಗ್ ಅನ್ನು ಹೊಂದಿದೆ. ಇನ್ನು ಕೆಂಪು ಸೀಟ್ ಬೆಲ್ಟ್‌ಗಳು, ಅಲ್ಕಾಂಟರಾ ಮತ್ತು ಕಾರ್ಬನ್ ಫೈಬರ್ ಅಂಶಗಳನ್ನು ಒಳಗೊಂಡಿವೆ.

ಅನಾವರಣವಾಯ್ತು ಹೊಸ ಫಿಯೆಟ್ ಅಬರ್ಥ್ 695 ಎಸ್ಸೆಸ್ಸಿ ಲಿಮಿಟೆಡ್ ಎಡಿಷನ್

ಫಿಯೆಟ್ ಅಬರ್ಥ್ 695 ಎಸ್ಸೆಸ್ಸಿ ಕಾರಿನಲ್ಲಿ 1.4-ಲೀಟರ್, ನಾಲ್ಕು-ಸಿಲಿಂಡರ್ ಟಿ-ಜೆಟ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 178 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಅನಾವರಣವಾಯ್ತು ಹೊಸ ಫಿಯೆಟ್ ಅಬರ್ಥ್ 695 ಎಸ್ಸೆಸ್ಸಿ ಲಿಮಿಟೆಡ್ ಎಡಿಷನ್

ಫಿಯೆಟ್ ಆಟೋಮೊಬೈಲ್ಸ್ ಲ್ಯಾಟಿನ್ ಅಮೆರಿಕ ದೇಶಗಳಿಗಾಗಿ ತನ್ನ ಹೊಚ್ಚ ಹೊಸ ಮೊದಲ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಹೊಸ ಕಾರು ಲ್ಯಾಟಿನ್ ಅಮೆರಿಕ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಪ್ರಮುಖ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಪೈಪೋಟಿ ನೀಡಲಿದೆ.

ಅನಾವರಣವಾಯ್ತು ಹೊಸ ಫಿಯೆಟ್ ಅಬರ್ಥ್ 695 ಎಸ್ಸೆಸ್ಸಿ ಲಿಮಿಟೆಡ್ ಎಡಿಷನ್

ಫಿಯೆಟ್ ಅಬರ್ಥ್ 695 ಎಸ್ಸೆಸ್ಸಿ ಲಿಮಿಟೆಡ್ ಎಡಿಷನ್ ಕಾರು ಕೇವಲ ಸೆಕೆಂಡುಗಳಲ್ಲಿ ಮೂರು ಅಂಕಿ ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರು 225 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ. ಶೀಘ್ರದಲ್ಲೇ ಈ ಕಾರು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ.

Most Read Articles

Kannada
Read more on ಫಿಯೆಟ್ fiat
English summary
Fiat Abarth 695 Esseesse Limited Edition Unveiled. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X