ನ್ಯೂ ಜನರೇಷನ್ ಕಿಯಾ ಸ್ಪೋರ್ಟೇಜ್ ಎಸ್‌ಯುವಿಯ ಟೀಸರ್ ಬಿಡುಗಡೆ

ದಕ್ಷಿಣ ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ ಕಿಯಾ ತನ್ನ ಐದನೇ ತಲೆಮಾರಿನ ಸ್ಪೋರ್ಟೇಜ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಕಿಯಾ ಕಂಪನಿಯು ಹೊಸ ಸ್ಪೋರ್ಟೇಜ್ ಎಸ್‍ಯುವಿಯ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ನ್ಯೂ ಜನರೇಷನ್ ಕಿಯಾ ಸ್ಪೋರ್ಟೇಜ್ ಎಸ್‌ಯುವಿಯ ಟೀಸರ್ ಬಿಡುಗಡೆ

ಈ ಹೊಸ ಕಿಯಾ ಸ್ಪೋರ್ಟೇಜ್ ಎಸ್‌ಯುವಿಯು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಎಸ್‍ಯುವಿಯ ಇಂಟಿರಿಯರ್ ಮತ್ತು ಹೊರಭಾಗದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಹೊಂದಿರುತ್ತದೆ. ನ್ಯೂ ಜನರೇಷನ್ ಕಿಯಾ ಸ್ಪೋರ್ಟೇಜ್ ಹೊಸ ವಿನ್ಯಾಸವನ್ನು ಹೊಂದಿದೆ. ಈ ಎಸ್‍ಯುವಿಯ ವಿನ್ಯಾಸ ಸರಳತೆ ಮತ್ತು ಅಗ್ರೇಸಿವ್ ನಿಂದ ಕೂಡ ಇದೆ.

ನ್ಯೂ ಜನರೇಷನ್ ಕಿಯಾ ಸ್ಪೋರ್ಟೇಜ್ ಎಸ್‌ಯುವಿಯ ಟೀಸರ್ ಬಿಡುಗಡೆ

ಹೊಸ ಕಿಯಾ ಸ್ಪೋರ್ಟೇಜ್ ಎಸ್‍ಯುವಿಯು ಮುಂಭಾಗದಲ್ಲಿ ವಿಶಿಷ್ಟವಾದ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಹೊಂದಿದೆ. ಇದು ತೀಕ್ಷ್ಣವಾದ ಮತ್ತು ನಯವಾಗಿ ಕಾಣುತ್ತದೆ. ಜೊತೆಗೆ ವಿಶಾಲವಾದ ಮುಂಭಾಗದ ಗ್ರಿಲ್ ಮತ್ತು ಮಧ್ಯದಲ್ಲಿ ಹೊಸ ಕಿಯಾ ಲೊಗೋವನ್ನು ನೀಡಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ನ್ಯೂ ಜನರೇಷನ್ ಕಿಯಾ ಸ್ಪೋರ್ಟೇಜ್ ಎಸ್‌ಯುವಿಯ ಟೀಸರ್ ಬಿಡುಗಡೆ

ಕಿಯಾ ಸ್ಪೋರ್ಟೇಜ್ ಎಸ್‍ಯುವಿಯ ಸೈಡ್ ಪ್ರೊಫೈಲ್ ಸಹ ಬಲವಾದ ಮತ್ತು ಉತ್ತಮವಾದ ಸಿಲೂಯೆಟ್ ನೊಂದಿಗೆ ಆಕರ್ಷಕವಾಗಿ ಕಾಣುತ್ತದೆ. ನ್ಯೂ ಜನರೇಷನ್ ಸ್ಪೋರ್ಟೇಜ್‌ನ ಹಿಂಭಾಗದ ವಿನ್ಯಾಸವು ಕೂಡ ಆಕರ್ಷಕವಾಗಿದೆ.

ನ್ಯೂ ಜನರೇಷನ್ ಕಿಯಾ ಸ್ಪೋರ್ಟೇಜ್ ಎಸ್‌ಯುವಿಯ ಟೀಸರ್ ಬಿಡುಗಡೆ

ಇನ್ನು ಈ ಹೊಸ ಕಿಯಾ ಸ್ಪೋರ್ಟೇಜ್ ಎಸ್‍ಯುವಿಯ ಹಿಂಭಾಅಗ್ದಲ್ಲಿ ಅನನ್ಯವಾಗಿ ಕಾಣುವ ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ವಿಂಡ್‌ಸ್ಕ್ರೀನ್. ಅನ್ನು ಹೊಂದಿದೆ. ಹೊಸ ಹೊಸ ಕಿಯಾ ಸ್ಪೋರ್ಟೇಜ್ ಎಸ್‍ಯುವಿಯ ಇಂಟಿರಿಯರ್ ವಿನ್ಯಾಸವು ಕಣ್ಮನ ಸೆಳೆಯುವಂತಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ನ್ಯೂ ಜನರೇಷನ್ ಕಿಯಾ ಸ್ಪೋರ್ಟೇಜ್ ಎಸ್‌ಯುವಿಯ ಟೀಸರ್ ಬಿಡುಗಡೆ

ಈ ಸ್ಪೋರ್ಟೇಜ್ ಎಸ್‍ಯುವಿಯ ಡ್ಯಾಶ್‌ಬೋರ್ಡ್‌ನ ಭಾಗವು ವಿಶಿಷ್ಟವಾದ ಸ್ಟೈಲಿಂಗ್ ಅನ್ನು ಹೊಂದಿದೆ. ಮಧ್ಯದ ಬಳಿ ಫಿನ್-ಆಕಾರದ ಎಸಿಯನ್ನು ಹೊಂದಿದೆ. ಈ ಹೊಸ ಸ್ಪೋರ್ಟೇಜ್ ಎಸ್‍ಯುವಿಯ ಸಾಕಷ್ಟು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿರಲಿದೆ.

ನ್ಯೂ ಜನರೇಷನ್ ಕಿಯಾ ಸ್ಪೋರ್ಟೇಜ್ ಎಸ್‌ಯುವಿಯ ಟೀಸರ್ ಬಿಡುಗಡೆ

ಕಿಯಾ ಕಂಪನಿಯು ತನ್ನ ಸೆಲ್ಟೋಸ್ ಎಸ್‍ಯುವಿಯ ಹೊಸ ನೈಟ್‌ಫಾಲ್ ಎಡಿಷನ್ ಅನ್ನು ಇತ್ತೀಚೆಗೆ ಅಮೆರಿಕದಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಕಿಯಾ ಸೆಲ್ಟೋಸ್ ನೈಟ್‌ಫಾಲ್ ಎಡಿಷನ್ ಅನ್ನು ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ವಿನ್ಯಾಸದಲ್ಲಿ ಕೆಲವು ಸೂಕ್ಷ್ಮ ವ್ಯತ್ಯಾಸಗಳನ್ನು ಕಂಡುಬರುತ್ತದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ನ್ಯೂ ಜನರೇಷನ್ ಕಿಯಾ ಸ್ಪೋರ್ಟೇಜ್ ಎಸ್‌ಯುವಿಯ ಟೀಸರ್ ಬಿಡುಗಡೆ

ಇನ್ನು ನ್ಯೂ ಜನರೇಷನ್ಸ್ಪೋರ್ಟೇಜ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ. ಮುಂದಿನ ಮುಂದಿನ ದಿನಗಳಲ್ಲಿ. ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಎಸ್‍ಯುವಿಗಳು ಮತ್ತು ಎಂಪಿವಿಗಳ ಮೇಲೆ ಮಾತ್ರ ಕೇಂದ್ರೀಕರಿಸುತ್ತದೆ ಎಂದು ಕಂಪನಿ ಹೇಳಿದೆ.

ನ್ಯೂ ಜನರೇಷನ್ ಕಿಯಾ ಸ್ಪೋರ್ಟೇಜ್ ಎಸ್‌ಯುವಿಯ ಟೀಸರ್ ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ಸ್ಪೋರ್ಟೇಜ್ ನಂತಹ ಪ್ರೀಮಿಯಂ ಎಸ್‍ಯುವಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು. ಇನ್ನು ಈ ಹೊಸ ಕಿಯಾ ಸ್ಪೋರ್ಟೇಜ್ ಎಸ್‍ಯುವಿಯು ಶೀಘ್ರದಲ್ಲೇ ದಕ್ಷಿಣ ಕೊರಿಯಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
2022 Kia Sportage Teased Ahead Of July Debut, Likely India Bound. Read In Kananda.
Story first published: Monday, May 31, 2021, 12:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X