ಭಾರತದಲ್ಲಿ 484 ಕಿ.ಮೀ ರೇಂಜ್ ಹೊಂದಿರುವ Porsche Taycan ಎಲೆಕ್ಟ್ರಿಕ್ ಕಾರು ಬಿಡುಗಡೆ

ಪೋರ್ಷೆ ತನ್ನ ಐಷಾರಾಮಿ ಟೇಕಾನ್ ಎಲೆಕ್ಟ್ರಿಕ್ ಸೂಪರ್‌ಕಾರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಪೋರ್ಷೆ ಟೇಕಾನ್(Porsche Taycan) ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.50 ಕೋಟಿಯಾಗಿದೆ.

ಭಾರತದಲ್ಲಿ 484 ಕಿ.ಮೀ ರೇಂಜ್ ಹೊಂದಿರುವ Porsche Taycan ಎಲೆಕ್ಟ್ರಿಕ್ ಕಾರು ಬಿಡುಗಡೆ

ಈ ಹೊಸ ಪೋರ್ಷೆ ಟೇಕಾನ್ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರನ್ನು 2019ರ ಸೆಪ್ಟೆಂಬರ್ ತಿಂಗಳಿನಲ್ಲಿ ಮೊದಲ ಬಾರಿಗೆ ಜಾಗತಿಕವಾಗಿ ಪಾದಾರ್ಪಣೆ ಮಾಡಿತು. ಆದರೆ ಕೋವಿಡ್ -19 ಭೀತಿಯಿಂದಾಗಿ ಇದರ ಬಿಡುಗಡೆಯನ್ನು ಮುಂದೂಡಲಾಯಿತು. ಇದೀಗ ಈ ಪೋರ್ಷೆ ಟೇಕಾನ್ ಎಲೆಕ್ಟ್ರಿಕ್ ಕಾರು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇನ್ನು ಈ ಹೊಸ ಪೋರ್ಷೆ ಟೇಕಾನ್ ಎಲೆಕ್ಟ್ರಿಕ್ ಕಾರು 4ಎಸ್, ಟರ್ಬೂ ಮತ್ತು ಟರ್ಬೂ ಎಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಇದು ಪ್ರಸ್ತುತ ಭಾರತದಲ್ಲಿ ಅತ್ಯಂತ ಪವರ್ ಫುಲ್ ಎಲೆಕ್ಟ್ರಿಕ್ ಕಾರ್ ಆಗಿರುವ ಆಡಿ ಇ-ಟ್ರಾನ್ ಜಿಟಿಯೊಂದಿಗೆ ಅದರ ಹೆಚ್ಚಿನ ಅಂಶಗಳನ್ನು ಹಂಚಿಕೊಳ್ಳುತ್ತದೆ.

ಭಾರತದಲ್ಲಿ 484 ಕಿ.ಮೀ ರೇಂಜ್ ಹೊಂದಿರುವ Porsche Taycan ಎಲೆಕ್ಟ್ರಿಕ್ ಕಾರು ಬಿಡುಗಡೆ

1960ರ ಐಕಾನಿಕ್ 911 ಮಾದರಿಯಿಂದ ಸ್ಫೂರ್ತಿ ಪಡೆದ ಟೇಕಾನ್ ತನ್ನ ಐಸಿ ಎಂಜಿನ್ ಅನ್ನು ಪಡೆಯುತ್ತದೆ. ಈ ಐಷಾರಾಮಿ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸ್ಕಪಲಡಡ್ ಹುಡ್, ಸ್ಲೋಂಪಿಗ್ ರೂಫ್ ಲೈನ್ ಮತ್ತು ಮುಂಭಾಗದ ಬಂಪರ್‌ನಲ್ಲಿ ವಿಶಾಲವಾದ ಬ್ಲ್ಯಾಕ್ ಏರ್ ಡ್ಯಾಮ್ ಅನ್ನು ಹೊಂದಿದೆ. ಅತ್ಯಂತ ಆಕರ್ಷಕ ಮುಖ್ಯಾಂಶಗಳೆಂದರೆ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಎಲ್-ಆಕಾರದ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ.

ಭಾರತದಲ್ಲಿ 484 ಕಿ.ಮೀ ರೇಂಜ್ ಹೊಂದಿರುವ Porsche Taycan ಎಲೆಕ್ಟ್ರಿಕ್ ಕಾರು ಬಿಡುಗಡೆ

ಹೊಸ ಪೋರ್ಷೆ ಟೇಕಾನ್ ಎಲೆಕ್ಟ್ರಿಕ್ ಕಾರು ಸೈಡ್ ಪ್ರೊಫೈಲ್‌ನಲ್ಲಿ, ಇದು ಬ್ಲ್ಯಾಕ್-ಔಟ್ ಬಿ-ಪಿಲ್ಲರ್‌ಗಳು ಮತ್ತು ಬೃಹತ್ ಐದು-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿವೆ. ಹಿಂಭಾಗದಲ್ಲಿ ಎಲ್ಇಡಿ ಲೈಟ್ ಬಾರ್ ಅನ್ನು ಹೊಂದಿದೆ, ಇದು ಐಕಾನಿಕ್ 911 ಮಾದರಿಯನ್ನು ನೆನಪಿಸುತ್ತದೆ.

ಭಾರತದಲ್ಲಿ 484 ಕಿ.ಮೀ ರೇಂಜ್ ಹೊಂದಿರುವ Porsche Taycan ಎಲೆಕ್ಟ್ರಿಕ್ ಕಾರು ಬಿಡುಗಡೆ

ಪೋರ್ಷೆ ಎಕ್ಸ್‌ಕ್ಲೂಸಿವ್ ಮ್ಯಾನುಫ್ಯಾಕ್ಟೂರ್ ಕಾರ್ಯಕ್ರಮದ ಮೂಲಕ ಆಯ್ಕೆ ಮಾಡಬಹುದಾದ 65 ಪೇಂಟ್ ಸ್ಕೀಮ್‌ಗಳ ಜೊತೆಗೆ ಟೇಕಾನ್ 17 ಗುಣಮಟ್ಟದ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇನ್ನು 1960ರ ದಶಕದ 911 ಮಾದರಿಯಂತೇ ಅದ್ದೂರಿ ಕ್ಯಾಬಿನ್‌ನಲ್ಲಿ ಮುಂದುವರಿಯುತ್ತದೆ.

ಭಾರತದಲ್ಲಿ 484 ಕಿ.ಮೀ ರೇಂಜ್ ಹೊಂದಿರುವ Porsche Taycan ಎಲೆಕ್ಟ್ರಿಕ್ ಕಾರು ಬಿಡುಗಡೆ

ಎರಡು-ಟೋನ್ ಡ್ಯಾಶ್‌ಬೋರ್ಡ್ ಸೇಂಟ್ರಲ್ 10.9-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಮತ್ತು ಆಯ್ಕೆಯ ಪ್ರಯಾಣಿಕರಿಗೆ ಮನೋರಂಜನೆಗಾಗಿ ಮಲ್ಟಿ-ಡಿಸ್ ಪ್ಲೇಯನ್ನು ಹೊಂದಿದೆ, ಇದಲ್ಲದೆ, ಹ್ಯಾಪ್ಟಿಕ್ ಪ್ರತಿಕ್ರಿಯೆಯೊಂದಿಗೆ ದೊಡ್ಡ 8.4-ಇಂಚಿನ ಟಚ್ ಪ್ಯಾನೆಲ್ ಅನ್ನು ಏರ್-ಕಾನ್ ವೆಂಟ್‌ಗಳ ಅಡಿಯಲ್ಲಿ ಸೆಂಟರ್ ಕನ್ಸೋಲ್‌ನಲ್ಲಿ ಇರಿಸಲಾಗಿದೆ.

ಭಾರತದಲ್ಲಿ 484 ಕಿ.ಮೀ ರೇಂಜ್ ಹೊಂದಿರುವ Porsche Taycan ಎಲೆಕ್ಟ್ರಿಕ್ ಕಾರು ಬಿಡುಗಡೆ

ಇನ್ನು 16.8-ಇಂಚಿನ ಡಿಸ್ ಪ್ಲೇಯೊಂದಿಗೆ ಕನಿಷ್ಠ ಮತ್ತು ಆಧುನಿಕ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಸಹ ಪಡೆಯುತ್ತದೆ. ಈ ಐಷಾರಾಮಿ ಎಲೆಕ್ಟ್ರಿಕ್ ಕಾರಿನ ಡೋರುಗಳು ಮತ್ತು ಮತ್ತು ಸೆಂಟರ್ ಕನ್ಸೋಲ್‌ಗಳನ್ನು ವುಡ್, ಅಲ್ಯೂಮಿನಿಯಂ, ಕಾರ್ಬನ್ ಫೈಬರ್ ಅಥವಾ ಫ್ಯಾಬ್ರಿಕ್ ಟ್ರಿಮ್‌ಗಳ ಸಂಯೋಜನೆಯಿಂದ ಮಾಡಲಾಗಿದೆ.

ಭಾರತದಲ್ಲಿ 484 ಕಿ.ಮೀ ರೇಂಜ್ ಹೊಂದಿರುವ Porsche Taycan ಎಲೆಕ್ಟ್ರಿಕ್ ಕಾರು ಬಿಡುಗಡೆ

ಇನ್ನು ಈ ಎಲೆಕ್ಟ್ರಿಕ್ ಕಾರಿನ ಆಫರ್‌ನಲ್ಲಿರುವ ಕೆಲವು ಗಮನಾರ್ಹ ವೈಶಿಷ್ಟ್ಯಗಳು ಮುಂಭಾಗದ ಸೀಟುಗಳಲ್ಲಿ ಮಸಾಜ್ ಸೌಲಭ್ಯ, ಹೀಟೆಡ್ ರೇರ್ ಸೀಟುಗಳು, 4-ಝೋನ್ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಮತ್ತು ಹೆಚ್ಚಿನದನ್ನು ಒಳಗೊಂಡಿವೆ.

ಭಾರತದಲ್ಲಿ 484 ಕಿ.ಮೀ ರೇಂಜ್ ಹೊಂದಿರುವ Porsche Taycan ಎಲೆಕ್ಟ್ರಿಕ್ ಕಾರು ಬಿಡುಗಡೆ

ಪೋರ್ಷೆ ಟೇಕಾನ್ ಎಲೆಕ್ಟ್ರಿಕ್ ಕಾರು 76kWh ಮತ್ತು 93.4kWh ಜೊತೆಗೆ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ನೀಡುತ್ತಿದೆ. ಹಿಂದಿನದನ್ನು ಬೇಸ್ 4S ಟ್ರಿಮ್‌ಗಾಗಿ ಕಾಯ್ದಿರಿಸಲಾಗಿದೆ. ಎಲ್ಲಾ ಮೂರು ಟ್ರಿಮ್‌ಗಳನ್ನು ಆಲ್-ವೀಲ್-ಡ್ರೈವ್ ಸೆಟಪ್‌ನಲ್ಲಿ ಪ್ರತಿ ಆಕ್ಸಲ್‌ನಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ನೀಡಲಾಗುತ್ತದೆ.

ಭಾರತದಲ್ಲಿ 484 ಕಿ.ಮೀ ರೇಂಜ್ ಹೊಂದಿರುವ Porsche Taycan ಎಲೆಕ್ಟ್ರಿಕ್ ಕಾರು ಬಿಡುಗಡೆ

ಟೇಕಾನ್ 4ಎಸ್ ರೂಪಾಂತರದಲ್ಲಿ ಡ್ಯುಯಲ್-ಮೋಟರ್ ಸೆಟಪ್ 525 ಬಿಹೆಚ್‍ಪಿ ಪವರ್ ಮತ್ತು 640 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಕೇವಲ 4.0 ಸೆಕೆಂಡುಗಳಲ್ಲಿ 0-100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಭಾರತದಲ್ಲಿ 484 ಕಿ.ಮೀ ರೇಂಜ್ ಹೊಂದಿರುವ Porsche Taycan ಎಲೆಕ್ಟ್ರಿಕ್ ಕಾರು ಬಿಡುಗಡೆ

ಮತ್ತೊಂದೆಡೆ, ಟರ್ಬೊ ಮತ್ತು ಟರ್ಬೊ ಎಸ್ ರೂಪಾಂತರಗಳು ದೊಡ್ಡ 93.4kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿವೆ. ಮೊದಲನೆಯದು 671 ಬಿಹೆಚ್‌ಪಿ ಪವರ್ ಮತ್ತು 850 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇನ್ನು ಎರಡನೆಯದು 751 ಬಿಹೆಚ್‍ಪಿ ಪವರ್ ಮತ್ತು 1,050 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.. ಇನ್ನು ಐಷಾರಾಮಿ ಎಲೆಕ್ಟ್ರಿಕ್ ಕಾರು 484 ಕಿ.ಮೀ ರೇಂಜ್ ಅನ್ನು ನೀಡುತ್ತದೆ,

ಭಾರತದಲ್ಲಿ 484 ಕಿ.ಮೀ ರೇಂಜ್ ಹೊಂದಿರುವ Porsche Taycan ಎಲೆಕ್ಟ್ರಿಕ್ ಕಾರು ಬಿಡುಗಡೆ

ಇನ್ನು ಭಾರತದಲ್ಲಿ ಪೋರ್ಷೆ ಕಂಪನಿಯು ವಿಶಿಷ್ಟವಾದ ಶೋರೂಂ ಅನ್ನು ಇತ್ತೀಚೆಗೆ ತೆರೆದಿದೆ. ಕಂಪನಿಯು ದೆಹಲಿಯ ಕೊನಾಟ್ ಪ್ಲೇಸ್‌ನಲ್ಲಿ ಸ್ಟುಡಿಯೋ ಕೆಫೆ ಶೋರೂಂ ಅನ್ನು ಆರಂಭಿಸಿದೆ. ಈ ಶೋರೂಂನಲ್ಲಿ ಗ್ರಾಹಕರು ಕಾರುಗಳನ್ನು ಖರೀದಿಸಬಹುದು ಹಾಗೂ ಕಾರನ್ನು ಕಸ್ಟಮೈಸ್ ಮಾಡಿಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ.ಈ ಶೋರೂಂನಲ್ಲಿಯೇ ಅನೇಕ ಕಸ್ಟಮೈಸ್ ಆಯ್ಕೆಗಳು ಲಭ್ಯವಿರುವುದರಿಂದ ಇಲ್ಲಿ ಖರೀದಿಸಿದ ಕಾರುಗಳನ್ನು ಶೋರೂಂನ ಹೊರಗೆ ಕಸ್ಟಮೈಸ್ ಮಾಡುವ ಅಗತ್ಯವಿಲ್ಲವೆಂದು ಪೋರ್ಷೆ ಕಂಪನಿ ಹೇಳಿದೆ. ಶೋರೂಂಗೆ ಬರುವ ಗ್ರಾಹಕರು ತಮ್ಮ ನೆಚ್ಚಿನ ಪೋರ್ಷೆ ಕಾರನ್ನು ಆಯ್ಕೆ ಮಾಡಿಕೊಂಡು ಕಸ್ಟಮೈಸ್ ಮಾಡಬಹುದು. ಗ್ರಾಹಕರು ಆಯ್ಕೆ ಮಾಡಿದ ಕಸ್ಟಮೈಸ್ ಅನ್ವಯ ಕಾರನ್ನು ತಲುಪಿಸಲಾಗುತ್ತದೆ.

Most Read Articles

Kannada
English summary
Porsche launched taycan ev sports car in india specs details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X