ಅಸಾದುದ್ದೀನ್ ಓವೈಸಿ ಕಾರಿಗೆ ದಂಡ ವಿಧಿಸಿದ ಅಧಿಕಾರಿಗೆ ಸಿಕ್ಕಿತು ನಗದು ಬಹುಮಾನ

ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರ ಕಾರು ಚಾಲಕನಿಗೆ ಪೊಲೀಸರು ರೂ. 200 ದಂಡ ವಿಧಿಸಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಈ ಘಟನೆ ನಡೆದಿದೆ. ಅಸಾದುದ್ದೀನ್ ಓವೈಸಿ ರವರು ಚಲಿಸುತ್ತಿದ್ದ ಕಾರಿನಲ್ಲಿ ನಂಬರ್ ಪ್ಲೇಟ್ ಇಲ್ಲದ ಕಾರಣ ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಸಾದುದ್ದೀನ್ ಓವೈಸಿ ಅವರು ಸೊಲ್ಲಾಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದಾಗ ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಸಾದುದ್ದೀನ್ ಓವೈಸಿ ಕಾರಿಗೆ ದಂಡ ವಿಧಿಸಿದ ಅಧಿಕಾರಿಗೆ ಸಿಕ್ಕಿತು ನಗದು ಬಹುಮಾನ

ಹೈದರಾಬಾದ್ ಮೂಲದ ಅಸಾದುದ್ದೀನ್ ಓವೈಸಿ ದೇಶಾದ್ಯಂತ ಖ್ಯಾತಿ ಪಡೆದಿರುವ ರಾಜಕಾರಣಿ. ಇಂತಹ ರಾಜಕಾರಣಿಗೆ ದಂಡ ವಿಧಿಸಿರುವುದು ದೇಶಾದ್ಯಂತ ಸಂಚಲನ ಮೂಡಿಸಿದೆ. ಇದೇ ವೇಳೆ ದಿಟ್ಟತನ ತೋರಿ ಅಸಾದುದ್ದೀನ್ ಓವೈಸಿ ರವರ ಕಾರಿಗೆ ದಂಡ ವಿಧಿಸಿದ ಪೊಲೀಸ್ ಅಧಿಕಾರಿಗೆ ಪ್ರಶಂಸೆ ವ್ಯಕ್ತವಾಗಿದೆ. ಅವರ ಈ ಕಾರ್ಯವನ್ನು ಮೆಚ್ಚಿ, ಅವರಿಗೆ ರೂ. 5 ಸಾವಿರ ಬಹುಮಾನ ನೀಡಲಾಗಿದೆ.

ಅಸಾದುದ್ದೀನ್ ಓವೈಸಿ ಕಾರಿಗೆ ದಂಡ ವಿಧಿಸಿದ ಅಧಿಕಾರಿಗೆ ಸಿಕ್ಕಿತು ನಗದು ಬಹುಮಾನ

ಸೊಲ್ಲಾಪುರದ ಹಿರಿಯ ಪೊಲೀಸ್ ಅಧಿಕಾರಿಗಳು ಅವರಿಗೆ ಈ ಬಹುಮಾನದ ಮೊತ್ತವನ್ನು ಹಸ್ತಾಂತರಿಸಿದ್ದಾರೆ. ಅಸಾದುದ್ದೀನ್ ಓವೈಸಿ ತಮ್ಮ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯಲ್ಲಿ ಸೊಲ್ಲಾಪುರಕ್ಕೆ ಆಗಮಿಸಿದ್ದರು. ನಂತರ ಸರ್ಕಾರಿ ಅತಿಥಿ ಗೃಹಕ್ಕೆ ವಿಶ್ರಾಂತಿ ಪಡೆಯಲು ತೆರಳಿದ್ದರು. ಈ ವೇಳೆ ಪೊಲೀಸ್ ಸಹಾಯಕ ನಿರೀಕ್ಷಕರಾದ ರಮೇಶ್ ಚಿಂತಂಕಿಡಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಅಸಾದುದ್ದೀನ್ ಓವೈಸಿ ಕಾರಿಗೆ ದಂಡ ವಿಧಿಸಿದ ಅಧಿಕಾರಿಗೆ ಸಿಕ್ಕಿತು ನಗದು ಬಹುಮಾನ

ಆಗ ಅಸಾದುದ್ದೀನ್ ಓವೈಸಿ ರವರು ಚಲಿಸುತ್ತಿದ್ದ ಕಾರಿನ ಮುಂಭಾಗದಲ್ಲಿ ನಂಬರ್ ಪ್ಲೇಟ್ ಇಲ್ಲದಿರುವುದನ್ನು ಗಮನಿಸಿದ್ದಾರೆ. ಇದಕ್ಕಾಗಿ ದಂಡ ಪಾವತಿಸುವಂತೆ ಅಸಾದುದ್ದೀನ್ ಓವೈಸಿ ಅವರ ಕಾರು ಚಾಲಕನಿಗೆ ರಮೇಶ್ ಚಿಂತಂಕಿಡಿ ಹೇಳಿದ್ದಾರೆ. ಸುದ್ದಿ ತಿಳಿದ ಎಐಎಂಐಎಂ ಕಾರ್ಯಕರ್ತರು ಓವೈಸಿರವರು ತಂಗಿದ್ದ ಸರ್ಕಾರಿ ಅತಿಥಿ ಗೃಹದ ಹೊರಗೆ ಜಮಾಯಿಸಿದ್ದರು.

ಅಸಾದುದ್ದೀನ್ ಓವೈಸಿ ಕಾರಿಗೆ ದಂಡ ವಿಧಿಸಿದ ಅಧಿಕಾರಿಗೆ ಸಿಕ್ಕಿತು ನಗದು ಬಹುಮಾನ

ತಕ್ಷಣವೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಅಸಾದುದ್ದೀನ್ ಓವೈಸಿ ಅವರು ಚಲಿಸುತ್ತಿದ್ದ ಕಾರಿನ ಚಾಲಕನಿಂದ ರೂ. 200 ದಂಡ ವಸೂಲಿ ಮಾಡಿದ್ದಾರೆ. ನಂತರ ಪೊಲೀಸ್ ಅಧಿಕಾರಿಗಳು ರಮೇಶ್ ಚಿಂತಂಕಿಡಿ ಅವರಿಗೆ ರೂ. 5 ಸಾವಿರ ಬಹುಮಾನ ನೀಡಿ ಶ್ಲಾಘಿಸಿದ್ದಾರೆ. ಸದ್ಯ ಈ ಘಟನೆ ಎಲ್ಲರ ಗಮನ ಸೆಳೆಯುತ್ತಿದೆ.

ಅಸಾದುದ್ದೀನ್ ಓವೈಸಿ ಕಾರಿಗೆ ದಂಡ ವಿಧಿಸಿದ ಅಧಿಕಾರಿಗೆ ಸಿಕ್ಕಿತು ನಗದು ಬಹುಮಾನ

ಭಾರತದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದು ಸಾಮಾನ್ಯವಾಗಿದೆ. ಆದರೆ ನಿಯಮಗಳನ್ನು ಉಲ್ಲಂಘಿಸುತ್ತಿರುವ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಅದರಲ್ಲೂ ವಿಶೇಷವಾಗಿ ರಾಜಕೀಯ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಜನಪ್ರಿಯ ರಾಜಕಾರಣಿಯಾದ ಅಸಾದುದ್ದೀನ್ ಓವೈಸಿ ರವರ ಕಾರಿಗೆ ನಂಬರ್ ಪ್ಲೇಟ್ ಇಲ್ಲ ಎಂಬ ಕಾರಣಕ್ಕೆ ಪೊಲೀಸ್ ಅಧಿಕಾರಿ ರಮೇಶ್ ಚಿಂತಂಕಿಡಿ ದಂಡ ವಿಧಿಸಿರುವುದು ನಿಜಕ್ಕೂ ಶ್ಲಾಘನೀಯ.

ಅಸಾದುದ್ದೀನ್ ಓವೈಸಿ ಕಾರಿಗೆ ದಂಡ ವಿಧಿಸಿದ ಅಧಿಕಾರಿಗೆ ಸಿಕ್ಕಿತು ನಗದು ಬಹುಮಾನ

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನೆಟಿಜನ್‌ಗಳು ಪೊಲೀಸ್ ಅಧಿಕಾರಿ ರಮೇಶ್ ರಮೇಶ್ ಚಿಂತಂಕಿಡಿ ರವರನ್ನು ಶ್ಲಾಘಿಸುತ್ತಿದ್ದಾರೆ. ಭಾರತದಲ್ಲಿ ಎಲ್ಲಾ ವಾಹನಗಳ ಮುಂಭಾಗ ಹಾಗೂ ಹಿಂಭಾಗದಲ್ಲಿ ನಂಬರ್ ಪ್ಲೇಟ್ ಹೊಂದಿರುವುದು ಕಡ್ಡಾಯವಾಗಿದೆ. ಅಪಘಾತಕ್ಕೆ ಕಾರಣವಾಗುವ ವಾಹನಗಳನ್ನು ಪತ್ತೆ ಹಚ್ಚುವುದು ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ನಂಬರ್ ಪ್ಲೇಟ್ ಅನ್ನು ಬಳಸಲಾಗುತ್ತದೆ.

ಅಸಾದುದ್ದೀನ್ ಓವೈಸಿ ಕಾರಿಗೆ ದಂಡ ವಿಧಿಸಿದ ಅಧಿಕಾರಿಗೆ ಸಿಕ್ಕಿತು ನಗದು ಬಹುಮಾನ

ಆದರೆ ಭಾರತದಲ್ಲಿ ಕೆಲವರು ನಂಬರ್ ಪ್ಲೇಟ್ ಇಲ್ಲದೆ ವಾಹನ ಚಲಾಯಿಸುವ ಕೆಟ್ಟ ಅಭ್ಯಾಸವನ್ನು ಹೊಂದಿದ್ದಾರೆ. ಅದೇ ರೀತಿ ನಂಬರ್ ಪ್ಲೇಟ್ ಹೇಗಿರಬೇಕು ಎಂಬುದಕ್ಕೆ ಹಲವಾರು ನಿಯಮಗಳಿವೆ. ಆದರೆ ಆ ನಿಯಮಗಳನ್ನು ಸಹ ಗಾಳಿಗೆ ತೂರಲಾಗಿದೆ. ಭಾರತದಲ್ಲಿನ ಬಹುತೇಕ ವಾಹನ ಮಾಲೀಕರು ತಮ್ಮ ಇಷ್ಟ ಬಂದ ರೀತಿಯಲ್ಲಿ ನಂಬರ್ ಪ್ಲೇಟ್‌ಗಳನ್ನು ವಿನ್ಯಾಸಗೊಳಿಸುತ್ತಾರೆ.

ಅಸಾದುದ್ದೀನ್ ಓವೈಸಿ ಕಾರಿಗೆ ದಂಡ ವಿಧಿಸಿದ ಅಧಿಕಾರಿಗೆ ಸಿಕ್ಕಿತು ನಗದು ಬಹುಮಾನ

ಇಂತಹ ವಾಹನಗಳು ರಸ್ತೆಗಳಲ್ಲಿ ಹೆಚ್ಚಾಗಿ ಕಾಣುತ್ತವೆ. ನಿಯಮಗಳ ಪ್ರಕಾರ ನಂಬರ್ ಪ್ಲೇಟ್‌ನಲ್ಲಿರುವ ಸಂಖ್ಯೆಗಳು ಹಾಗೂ ಅಕ್ಷರಗಳು ಸ್ಪಷ್ಟವಾಗಿ ಗೋಚರಿಸಬೇಕು. ಆದರೆ ಸಾಕಷ್ಟು ಮಂದಿ ವಿವಿಧ ವಿನ್ಯಾಸದ ನಂಬರ್ ಪ್ಲೇಟ್ ಗಳನ್ನು ಬಳಸುತ್ತಾರೆ. ಕೆಲವರು ತಮ್ಮ ವಾಹನಗಳ ನಂಬರ್ ಪ್ಲೇಟ್‌ನಲ್ಲಿ ರಾಜಕೀಯ ಪಕ್ಷಗಳ ನಾಯಕರು, ನಟ - ನಟಿಯರ ಚಿತ್ರಗಳನ್ನು, ಜಾತಿ ಸೂಚಕ ಹೆಸರುಗಳನ್ನು ಬಳಸುತ್ತಾರೆ.

ಅಸಾದುದ್ದೀನ್ ಓವೈಸಿ ಕಾರಿಗೆ ದಂಡ ವಿಧಿಸಿದ ಅಧಿಕಾರಿಗೆ ಸಿಕ್ಕಿತು ನಗದು ಬಹುಮಾನ

ಈ ಎಲ್ಲಾ ಸಂಗತಿಗಳು ಕಾನೂನು ಬಾಹಿರವಾಗಿವೆ. ಅಂತಹ ವಾಹನಗಳ ವಿರುದ್ಧ ದಂಡ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಅಧಿಕಾರವಿದೆ. ಒಂದು ವೇಳೆ ನಿಮ್ಮ ವಾಹನದ ನಂಬರ್ ಪ್ಲೇಟ್ ನಿಯಮಾವಳಿಗಳಿಗೆ ಅನುಸಾರವಾಗಿ ಇಲ್ಲದಿದ್ದರೆ ಕೂಡಲೇ ಅವುಗಳನ್ನು ನಿಯಮಗಳಿಗೆ ತಕ್ಕಂತೆ ಬದಲಾಯಿಸಿ.

ಅಸಾದುದ್ದೀನ್ ಓವೈಸಿ ಕಾರಿಗೆ ದಂಡ ವಿಧಿಸಿದ ಅಧಿಕಾರಿಗೆ ಸಿಕ್ಕಿತು ನಗದು ಬಹುಮಾನ

ಕೆಲವು ದಿನಗಳ ಹಿಂದೆ ತೆಲಂಗಾಣದಲ್ಲಿ ರಾಜಕಾರಣಿಯೊಬ್ಬರ ಕಾರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಆ ಕಾರಿಗೆದಂಡ ವಿಧಿಸಿದ್ದರು. ರಾಜಕಾರಣಿಗಳು ತಮ್ಮ ವಾಹನಗಳಿಗೆ ದಂಡ ವಿಧಿಸುವವರ ಗರಂ ಆಗುವುದು ಸಹಜ. ಆದರೆ ಈ ಪ್ರಕರಣದಲ್ಲಿ ತಮ್ಮ ಕಾರಿಗೆ ದಂಡ ವಿಧಿಸಿದಪೊಲೀಸ್ ಆಧಿಕಾರಿಗೆ ಆ ರಾಜಕಾರಣಿ ಸನ್ಮಾನ ಮಾಡಿದ್ದರು. ಜೊತೆಗೆ ಕಾರಿಗೆ ವಿಧಿಸಲಾಗಿದ್ದ ದಂಡವನ್ನೂ ಪಾವತಿಸಿದ್ದರು.

ಅಸಾದುದ್ದೀನ್ ಓವೈಸಿ ಕಾರಿಗೆ ದಂಡ ವಿಧಿಸಿದ ಅಧಿಕಾರಿಗೆ ಸಿಕ್ಕಿತು ನಗದು ಬಹುಮಾನ

ಇನ್ನು ಅಸಾದುದ್ದೀನ್ ಓವೈಸಿರವರು ಚಲಿಸುತ್ತಿದ್ದ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯು ರಾಜಕಾರಣಿಗಳ ನೆಚ್ಚಿನ ವಾಹನವಾಗುತ್ತಿದೆ. ಓವೈಸಿಯವರನ್ನುಹೊರತುಪಡಿಸಿದರೆ ಇತರ ರಾಜಕಾರಣಿಗಳು ಸಹ ಹೊಸ ತಲೆಮಾರಿನ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಗಳನ್ನು ಬಳಸುತ್ತಿದ್ದಾರೆ.ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸಹ ಹೊಸ ಲ್ಯಾಂಡ್ ರೋವರ್ ಎಸ್‌ಯುವಿಯನ್ನು ಬಳಸುತ್ತಿದ್ದಾರೆ.

ಅಸಾದುದ್ದೀನ್ ಓವೈಸಿ ಕಾರಿಗೆ ದಂಡ ವಿಧಿಸಿದ ಅಧಿಕಾರಿಗೆ ಸಿಕ್ಕಿತು ನಗದು ಬಹುಮಾನ

ತಮ್ಮ ದಿನ ನಿತ್ಯದ ಸಂಚಾರಕ್ಕೆ ಅವರು ಡಿಫೆಂಡರ್ 110 ಎಸ್‌ಯುವಿಯನ್ನು ಬಳಸುತ್ತಿದ್ದಾರೆ. ಭಾರತದಲ್ಲಿ ಈ ಹಿಂದೆ ಹಲವು ರಾಜಕಾರಣಿಗಳು ಟಾಟಾ ಸಫಾರಿಯನ್ನು ತಮ್ಮ ಅಧಿಕೃತ ವಾಹನವಾಗಿ ಬಳಸುತ್ತಿದ್ದರು. ಈಗ ಹೊಸ ಡಿಫೆಂಡರ್ ಆ ಸ್ಥಾನವನ್ನು ಪಡೆದುಕೊಳ್ಳುತ್ತಿದೆ.

Most Read Articles

Kannada
English summary
Sollapur cop fines asaduddin owaisi s suv details
Story first published: Tuesday, November 30, 2021, 12:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X