ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ Tata Harrier ಹೊಸ ಮೈಲಿಗಲ್ಲು

ಹೊಸ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್‌(Tata Motors) ಕಂಪನಿಯು ಹ್ಯಾರಿಯರ್(Harrier) ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದು, ಹ್ಯಾರಿಯರ್ ಕಾರು ಮಾದರಿಯು ಮೊದಲ ಬಾರಿಗೆ 50 ಸಾವಿರ ಯುನಿಟ್ ಮಾರಾಟ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ Tata Harrier ಹೊಸ ಮೈಲಿಗಲ್ಲು

2018ರ ಆಟೋ ಎಕ್ಸ್‌ಫೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಹ್ಯಾರಿಯರ್ ಕಾರು ಮಾದರಿಯು 2019ರ ಜನವರಿಯಲ್ಲಿ ಅಧಿಕೃತ ಬಿಡುಗಡೆಗೊಂಡಿತ್ತು. ಹೊಸ ಕಾರು ಬಿಡುಗಡೆಯ ನಂತರ ಬೇಡಿಕೆಯಲ್ಲಿ ಏರಿಳಿತದೊಂದಿಗೆ ಸುಮಾರು 33 ತಿಂಗಳ ಅವಧಿಯಲ್ಲಿ 50 ಸಾವಿರ ಯುನಿಟ್ ಮಾರಾಟ ಗುರಿತಲುಪಿದೆ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ Tata Harrier ಹೊಸ ಮೈಲಿಗಲ್ಲು

ಆರಂಭದಲ್ಲಿ ಬಿಎಸ್-4 ಮಾದರಿಯೊಂದಿಗೆ ಬಿಡುಗಡೆಯಾಗಿದ್ದ ಹ್ಯಾರಿಯರ್ ಕಾರು ಮಾದರಿಯು 2020 ಮಧ್ಯಂತರದಲ್ಲಿ ಬಿಎಸ್-6 ಆವೃತ್ತಿಯೊಂದಿಗೆ ಉನ್ನತೀಕರಣಗೊಂಡಿತ್ತು. ಬಿಎಸ್-4 ಮಾದರಿಯಲ್ಲಿ ಕನಿಷ್ಠ ಬೇಡಿಕೆ ಹೊಂದಿದ್ದ ಹ್ಯಾರಿಯರ್ ಕಾರು ಮಾದರಿಯು ಬಿಎಸ್-6 ಮಾದರಿಯ ಬಿಡುಗಡೆಯ ನಂತರ ಸಾಕಷ್ಟು ಬೇಡಿಕೆ ಪಡೆದುಕೊಂಡಿದೆ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ Tata Harrier ಹೊಸ ಮೈಲಿಗಲ್ಲು

ಬಿಎಸ್-4 ಮಾದರಿಯೊಂದಿಗೆ ಕೇವಲ 17 ಸಾವಿರ ಯುನಿಟ್ ಮಾರಾಟಗೊಂಡಿದ್ದ ಹ್ಯಾರಿಯರ್ ಕಾರು ಮಾದರಿಯು ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಣಗೊಂಡ ನಂತರ ಸುಮಾರು 33 ಸಾವಿರ ಯುನಿಟ್ ಮಾರಾಟಗೊಂಡಿದೆ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ Tata Harrier ಹೊಸ ಮೈಲಿಗಲ್ಲು

ಹ್ಯಾರಿಯರ್ ಕಾರು ಮಾದರಿಗೆ ಮೊದಲ ಎರಡು ವರ್ಷದ ಬೇಡಿಕೆ ಪ್ರಮಾಣವು ಕಳೆದ ಹತ್ತು ತಿಂಗಳಿನಲ್ಲಿ ಬೇಡಿಕೆ ಹರಿದುಬಂದಿದ್ದು, 2020ರ ಕೊನೆಯ ತನಕವು 25 ಸಾವಿರ ಯುನಿಟ್ ಕೂಡಾ ಮಾರಾಟಗೊಂಡಿರಲಿಲ್ಲ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ Tata Harrier ಹೊಸ ಮೈಲಿಗಲ್ಲು

2021ರ ಆರಂಭದಿಂದ ಟಾಟಾ ಕಾರುಗಳಿಗೆ ಬೇಡಿಕೆಯು ಹೊಸ ಟ್ರೆಂಡ್ ಸೃಷ್ಠಿಸಿದ್ದು, ಹ್ಯಾರಿಯರ್ ಸೇರಿದಂತೆ ಕಂಪನಿಯ ಪ್ರಮುಖ ಕಾರುಗಳ ಮಾರಾಟವು ಹಲವಾರು ಹೊಸ ದಾಖಲೆಗಳಿಗೆ ಕಾರಣವಾಗಿವೆ. ಕಳೆದ ಜನವರಿಯಿಂದ ಇದುವರೆಗೆ ಹ್ಯಾರಿಯರ್ ಮಾದರಿಯು ಸುಮಾರು 25 ಸಾವಿರ ಯುನಿಟ್‌ ಮಾರಾಟಗೊಂಡಿದ್ದು, ಹೊಸ ಹೊಸ ಬದಲಾವಣೆಗಳೊಂದಿಗೆ ಹ್ಯಾರಿಯರ್ ಕಾರು ಹೊಸ ದಾಖಲೆಗಳನ್ನು ತನ್ನದಾಗಿಸಿಕೊಳ್ಳುತ್ತಿದೆ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ Tata Harrier ಹೊಸ ಮೈಲಿಗಲ್ಲು

ಹೊಸ ಕಾರು ಆರಂಭದಲ್ಲಿ ಪ್ರತಿ ತಿಂಗಳು 1 ಸಾವಿರದಿಂದ ಒಂದೂವರೆ ಸಾವಿರ ಯುನಿಟ್ ಮಾರಾಟ ಹೊಂದಿತ್ತಾದರೂ ಬಿಡುಗಡೆಯ ಕೆಲ ತಿಂಗಳ ನಂತರ ಹ್ಯಾರಿಯರ್ ಬೇಡಿಕೆಯು ಸಾಕಷ್ಟು ಇಳಿಕೆ ಕಂಡಿತ್ತು. 2019ರ ಕೊನೆಯಲ್ಲಿ ಮತ್ತು 2020ರಲ್ಲಿ ಹ್ಯಾರಿಯರ್ ಕಾರು ಮಾರಾಟವು ಪ್ರತಿ ತಿಂಗಳು 500 ರಿಂದ 1 ಸಾವಿರ ಯುನಿಟ್‌ಗಳಿಗೆ ಬೇಡಿಕೆ ಕುಸಿತ ಕಂಡಿತ್ತು.

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ Tata Harrier ಹೊಸ ಮೈಲಿಗಲ್ಲು

ಆದರೆ ಕೋವಿಡ್ ನಂತರ ಸ್ವದೇಶಿ ಕಾರುಗಳ ಬಳಕೆಗಾಗಿ ಭಾರತೀಯ ಗ್ರಾಹಕರ ಅಭಿಯಾನವು ಟಾಟಾ ಕಾರುಗಳ ಬೇಡಿಕೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಠಿಸಿತು. ಪರಿಣಾಮ ಟಾಟಾ ಕಾರುಗಳ ಮಾರಾಟವು ಕಳೆದ 9 ವರ್ಷಗಳಲ್ಲೇ ಅತಿ ಹೆಚ್ಚು ಬೇಡಿಕೆ ದಾಖಲಿಸಿತು.

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ Tata Harrier ಹೊಸ ಮೈಲಿಗಲ್ಲು

ಹ್ಯಾರಿಯರ್ ಕಾರು ಮಾದರಿಯು ಸದ್ಯ ಪ್ರತಿ ತಿಂಗಳು ಕನಿಷ್ಠ 2 ಸಾವಿರದಿಂದ ಎರಡೂವರೆ ಸಾವಿರ ಯುನಿಟ್ ಮಾರಾಟಗೊಳ್ಳುತ್ತಿದ್ದು, ಹ್ಯಾರಿಯರ್ ಜೊತೆ ಇನ್ನು ಹಲವು ಟಾಟಾ ಕಾರು ಮಾದರಿಗಳು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ Tata Harrier ಹೊಸ ಮೈಲಿಗಲ್ಲು

ಇನ್ನು ಹ್ಯಾರಿಯರ್ ಎಸ್‌ಯುವಿ ಮಾದರಿಯು ಸದ್ಯ ಸ್ಟ್ಯಾಂಡರ್ಡ್, ಡಾರ್ಕ್, ಕ್ಯಾಮೊ ಎಡಿಷನ್‌ ಒಳಗೊಂಡಂತೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.39 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.09 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಕಾರು ಬರೋಬ್ಬರಿ 26 ವೆರಿಯೆಂಟ್‌ಗಳನ್ನು ಪಡೆದುಕೊಂಡಿದೆ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ Tata Harrier ಹೊಸ ಮೈಲಿಗಲ್ಲು

2.0-ಲೀಟರ್ ಟರ್ಬೋ ಡೀಸೆಲ್ ಎಂಜಿನ್‌ನಲ್ಲಿ ಖರೀದಿಗೆ ಲಭ್ಯವಿರುವ ಹ್ಯಾರಿಯರ್ ಕಾರು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 170-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ Tata Harrier ಹೊಸ ಮೈಲಿಗಲ್ಲು

ಜೊತೆಗೆ ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಹೊಸ ಕಾರಿನ ಬೆಲೆಯು ತುಸು ದುಬಾರಿಯಾಗಿದ್ದರೂ ಸಹ ಪ್ರೀಮಿಯಂ ಫೀಚರ್ಸ್‌ಗಳು ಫೇಸ್‌ಲಿಫ್ಟ್ ಕಾರಿಗೆ ಮತ್ತಷ್ಟು ಬಲಿಷ್ಠತೆ ನೀಡಲಿದ್ದು, ಎಂಜಿನ್ ಪರ್ಫಾಮೆನ್ಸ್‌ನಲ್ಲೂ ಸಾಕಷ್ಟು ಸುಧಾರಣೆ ತಂದಿರುವುದು ಮಾಲಿನ್ಯ ತಡೆಗೆ ಸಹಕಾರಿಯಾಗಿದೆ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ Tata Harrier ಹೊಸ ಮೈಲಿಗಲ್ಲು

ಜೊತೆಗೆ ಹೊಸ ಕಾರು ಮಾದರಿಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಪ್ರತಿ ಎರಡು ತಿಂಗಳಿಗೆ ಒಂದು ಬಾರಿ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಉನ್ನತೀಕರಣ ಮಾಡುತ್ತಿದ್ದು, ಹೊಸ ಬದಲಾವಣೆಗಳು ಗ್ರಾಹಕರ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಅನುಕೂಲಕರವಾಗಿವೆ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ Tata Harrier ಹೊಸ ಮೈಲಿಗಲ್ಲು

ಡೀಸೆಲ್ ಎಂಜಿನ್ ಮಾದರಿಯಲ್ಲೇ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ ಹ್ಯಾರಿಯರ್ ಕಾರು ಶೀಘ್ರದಲ್ಲೇ ಪೆಟ್ರೋಲ್ ಮಾದರಿಯನ್ನು ಸಹ ಪಡೆದುಕೊಳ್ಳಲಿದ್ದು, ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲೇ ಬಲಿಷ್ಠ ಕಾರು ಮಾದರಿಯಾಗಿದೆ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ Tata Harrier ಹೊಸ ಮೈಲಿಗಲ್ಲು

ಮೊನ್ನೆಯಷ್ಟೇ ಬಿಡುಗಡೆಯಾದ 2021ರ ನವೀಕೃತ ಹ್ಯಾರಿಯರ್ ಡಾರ್ಕ್ ಎಡಿಷನ್ ಮಾದರಿಯು ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ಎ ಪ್ಲಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದ್ದು, ಹೊಸ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ರೂ.18.04 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.09 ಲಕ್ಷ ಬೆಲೆ ಹೊಂದಿವೆ.

Most Read Articles

Kannada
English summary
Tata harrier suv crossed the 50000 units sale mark details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X