ಆಲ್‌ಟ್ರೋಜ್, ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಡಾರ್ಕ್ ಎಡಿಷನ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಆಲ್‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್, ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ನೆಕ್ಸನ್ ಇವಿ ಮತ್ತು ಹ್ಯಾರಿಯರ್ ಮಾದರಿಗಳ ಡಾರ್ಕ್ ಎಡಿಷನ್‌ಗಳನ್ನು ಬಿಡುಗಡೆಗೊಳಿಸಿದೆ. ಈ ಡಾರ್ಕ್ ಎಡಿಷನ್‌ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದ್ದಾರೆ.

ಆಲ್‌ಟ್ರೋಜ್, ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಜನಪ್ರಿಯ ಕಾರುಗಳ ಡಾರ್ಕ್ ಎಡಿಷನ್‌ಗಳ ಬೆಲೆಯ ಬಗ್ಗೆ ಹೇಳುವುದಾದರೆ, ಆಲ್‌ಟ್ರೊಜ್ ಡಾರ್ಕ್ ಎಡಿಷನ್ ಆರಂಭಿಕ ಬೆಲೆಯು ರೂ.8.71 ಲಕ್ಷಗಳಾದರೆ, ನೆಕ್ಸಾನ್ ಡಾರ್ಕ್ ಎಡಿಷನ್ ಆರಂಭಿಕ ಬೆಲೆಯು ರೂ.10.40 ಲಕ್ಷಗಳಾಗಿದೆ. ಇನ್ನು ನೆಕ್ಸಾನ್ ಇವಿ ಡಾರ್ಕ್ ಎಡಿಷನ್ ಆರಂಭಿಕ ಬೆಲೆಯು ರೂ.15.99 ಲಕ್ಷಗಳಾದರೆ, ಹ್ಯಾರಿಯರ್ ಡಾರ್ಕ್ ಎಡಿಷನ್ ಆರಂಭಿಕ ಬೆಲೆಯು ರೂ.18.04 ಲಕ್ಷಗಳಾಗಿದೆ.

ಆಲ್‌ಟ್ರೋಜ್, ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಆಲ್‌ಟ್ರೊಜ್ ಡಾರ್ಕ್ ಎಡಿಷನ್

ಈ ಹೊಸ ಡಾರ್ಕ್ ಎಡಿಷನ್ ಮಾದರಿಯು ಆಲ್‌ಟ್ರೊಜ್ ಟಾಪ್ ರೂಪಾಂತರ ಎಕ್ಸ್‌ಝಡ್ ಪ್ಲಸ್ ಅನ್ನು ಆಧರಿಸಿದೆ. ಈ ಆಲ್‌ಟ್ರೊಜ್ ಡಾರ್ಕ್ ಎಡಿಷನ್ ಮಾದರಿಯಲ್ಲಿ 1.2-ಲೀಟರ್ ಪೆಟ್ರೋಲ್ ಎನ್ಎ ಮತ್ತು ಐ-ಟರ್ಬೊ ಎಂಬ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿವೆ.

ಆಲ್‌ಟ್ರೋಜ್, ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಈ ಡಾರ್ಕ್ ಎಡಿಷನ್ ಬದಲಾವಣೆಗಳು ಮತ್ತು ಮುಖ್ಯಾಂಶಗಳು, ಇದು ಕಾಸ್ಮೊ ಡಾರ್ಕ್ ಬಣ್ಣವನ್ನು ಹೊಂದಿದೆ. ಇನ್ನು ಇದರಲ್ಲಿ 16 ಇಂಚಿನ ಅಲಾಯ್ ವ್ಹೀಲ್ ಗಳು ಹೊಂದಿದ್ದು, ಇಉ ಟಿಂಟ್ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನು ಹುಡ್ ನಲ್ಲಿ ಡಾರ್ಕ್ ಕ್ರೋಮ್ ಸ್ಟ್ರಿಪ್ ಅನ್ನು ಹೊಂದಿದೆ.

ಆಲ್‌ಟ್ರೋಜ್, ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಇನ್ನು ಈ ಡಾರ್ಕ್ ಎಡಿಷನ್ ಇಂಟಿರಿಯರ್ ಗ್ರಾನೈಟ್ ಬ್ಲ್ಯಾಕ್ ಥೀಮ್ ಅನ್ನು ಹೊಂದಿದೆ. ಇದರ ಮೆಟಾಲಿಕ್ ಗ್ಲೋಸ್ ಬ್ಲ್ಯಾಕ್ ಸೆಂಟರ್ ಕನ್ಸೋಲ್‌ನಲ್ಲಿ ಬ್ಲ್ಯೂ ಬಣ್ಣದ ಹೊಲಿಗೆಯನ್ನು ಹೊಂದಿದ್ದು, ಲೀಥೆರೆಟ್ ಸೀಟುಗಳಿವೆ. ಇನ್ನು ಉಳಿದ ವೈಶಿಷ್ಟ್ಯಗಳು ಮತ್ತು ಮೆಕ್ಯಾನಿಕಲ್‌ ಅಂಶಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ.

ಆಲ್‌ಟ್ರೋಜ್, ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಟಾಟಾ ನೆಕ್ಸಾನ್ ಡಾರ್ಕ್ ಎಡಿಷನ್

ಈ ಕಾಂಪ್ಯಾಕ್ಟ್-ಎಸ್‌ಯುವಿಯ ಡಾರ್ಕ್ ಎಡಿಷನ್ ಎಕ್ಸ್‌ಝಡ್ ಪ್ಲಸ್, ಎಕ್ಸ್‌ಝಡ್ಎ ಪ್ಲಸ್, ಎಕ್ಸ್‌ಝಡ್ ಪ್ಲಸ್(ಒ) ಮತ್ತು ಕ್ಸ್‌ಝಡ್ಎ ಪ್ಲಸ್(ಒ) ಎಂಬ ರೂಪಾಂತರಗಳನ್ನು ಹೊಂದಿವೆ. ಇವುಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಈ ಮಾದರಿಯ ಹೊರಭಾಗದಲ್ಲಿ ಅಟ್ಲಾಸ್ ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ಇದರಲ್ಲಿ 16-ಇಂಚಿನ 'ಚಾರ್ಕೋಲ್' ಅಲಾಯ್ ವ್ಹೀಲ್ಸ್ ಅನ್ನು ಹೊಂದಿವೆ.

ಆಲ್‌ಟ್ರೋಜ್, ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಈ ಟಾಟಾ ನೆಕ್ಸಾನ್ ಡಾರ್ಕ್ ಎಡಿಷನ್ ಇಂಟಿರಿಯರ್ ಪ್ಯಾಕ್ ಬ್ಲ್ಯಾಕ್ ಟ್ರೈ-ಏರೋ ಡ್ಯಾಶ್‌ಬೋರ್ಡ್ ಅನ್ನು ಮತ್ತು ಪ್ಯಾನಲ್ ಟ್ರೈ-ಏರೋ ಸೀಟುಗಳುನ್ನು ಹೊಂದಿವೆ. ಇನ್ನು ಮುಂಭಾಗದಲ್ಲಿ ಸೀಟಿನಲ್ಲಿ ಟ್ರೈ-ಏರೋ ಥೀಮ್‌ನೊಂದಿಗೆ ಡೋರ್ ಟ್ರಿಮ್ಸ್ ಅನ್ನು ಹೊಂದಿವೆ.

ಆಲ್‌ಟ್ರೋಜ್, ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ನೆಕ್ಸಾನ್ ಇವಿ ಡಾರ್ಕ್ ಎಡಿಷನ್

ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಎಸ್‌ಯುವಿಯಾದ ನೆಕ್ಸಾನ್ ಇವಿಯಡಾರ್ಕ್ ಎಡಿಷನ್ ಎಕ್ಸ್‌ಝಡ್ ಪ್ಲಸ್ ಮತ್ತು ಎಕ್ಸ್‌ಝಡ್ ಪ್ಲಸ್ ಲುಕ್ಸ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಎರಡೂ ರೂಪಾಂತರಗಳು ಆಯಾ ಸ್ಟ್ಯಾಂಡರ್ಡ್ ರೂಪಾಂತರಗಳಿಗಿಂತ ಹೆಚ್ಚಿನ ಆಂತರಿಕ ಮತ್ತು ಬಾಹ್ಯ ಬದಲಾವಣೆಗಳನ್ನು ಹೊಂದಿವೆ. ಡಾರ್ಕ್ ಎಡಿಷನ್ ಹೊರಭಾಗದಲ್ಲಿ 16-ಇಂಚಿನ 'ಚಾರ್ಕೋಲ್' ಅಲಾಯ್ ವ್ಹೀಲ್ಸ್, ಸ್ಯಾಟಿನ್ ಬ್ಲ್ಯಾಕ್ ಲೈನ್ ಗಳನ್ನು ಹೊಂದಿವೆ.

ಆಲ್‌ಟ್ರೋಜ್, ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ನೆಕ್ಸಾನ್ ಇವಿ ಡಾರ್ಕ್ ಎಡಿಷನ್ ಇಂಟಿರಿಯರ್ ನಲ್ಲಿ ಟ್ರೈ-ಎರೋ ಲೆಥೆರೆಟ್ ಸೀಟುಗಳು ಮತ್ತು ಬ್ಲ್ಯು ಲೈಟ್ ಹೊಲಿಗೆಗಳು, ಪಿಯಾನೋ ಬ್ಲ್ಯಾಕ್ ಡ್ಯಾಶ್‌ಬೋರ್ಡ್ ಡೋರಿನ ಟ್ರಿಮ್‌ಗಳಲ್ಲಿ ಟ್ರೈ-ಎರೋ ಲೆದರ್ ಅಂಶಗಳನ್ನು ಹೊಂದಿದೆ. ಮುಂಭಾಗದ ಹೆಡ್‌ರೆಸ್ಟ್ ನೊಂದಿಗೆ ಕಪ್ ಹೋಲ್ಡರ್‌, ಹಿಂದಿನ ಸೀಟ್ ಸೆಂಟ್ರಲ್ ಆರ್ಮ್‌ರೆಸ್ಟ್ ಅನ್ನು ಹೊಂದಿದೆ. ಇದರ ಹಿಂಭಾಗದ ಸೀಟುಗಳನ್ನು 60:40 ರಷ್ಟು ಮಾಡಚಬಹುದು. ಇನ್ನು ಯಾಂತ್ರಿಕವಾಗಿ ಯಾವುದೇ ಬದಲಾವಣೆಗನ್ನು ಹೊಂದಿಲ್ಲ.

ಆಲ್‌ಟ್ರೋಜ್, ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಟಾಟಾ ಹ್ಯಾರಿಯರ್ ಡಾರ್ಕ್ ಎಡಿಷನ್

ಟಾಟಾ ಹ್ಯಾರಿಯರ್ ಡಾರ್ಕ್ ಎಡಿಷನ್ ಮಾದರಿಯು ಈಗಾಗಲೇ ಮಾರಾಟದಲ್ಲಿರುವ ಮಾದರಿಯಾಗಿದೆ. ಈ ಟಾಟಾ ಹ್ಯಾರಿಯರ್ ಈಗ ಕೆಲವು ನವೀಕರಣಗಳನ್ನು ಪಡೆದುಕೊಂಡಿದೆ. ಟಾಟಾ ಹ್ಯಾರಿಯರ್ ಡಾರ್ಕ್ ಎಡಿಷನ್ ಮಾದರಿಯು ಎಕ್ಸ್‌ಟಿ ಪ್ಲಸ್, ಎಕ್ಸ್‌ಝಡ್ ಪ್ಲಸ್ ಮತ್ತು ಎಕ್ಸ್‌ಝಡ್ಎ ಪ್ಲಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಆಲ್‌ಟ್ರೋಜ್, ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಈ ಟಾಟಾ ಹ್ಯಾರಿಯರ್ ಡಾರ್ಕ್ ಎಡಿಷನ್ ಹೊರಭಾಗದಲ್ಲಿ ಒಬೆರಾನ್ ಬ್ಲ್ಯಾಕ್ ಮತ್ತು ಡೀಪ್ ಬ್ಲೂ ಅಸ್ಸೆಂಟ್ ಗಳ ಬಣ್ಣಗಳನ್ನು ಹೊಂದಿವೆ. ಹ್ಯಾರಿಯರ್ ಬ್ಯಾಡ್ಜ್ ಜೊತೆಗೆ ಪಿಯಾನೋ ಬ್ಲ್ಯಾಕ್ ಪಿನಿಶಿಂಗ್ ಅನ್ನು ಹೊಂದಿದೆ. ಇದರೊಂದಿಗೆ 18 ಇಂಚಿನ ಬ್ಲಾಕ್‌ಸ್ಟೋನ್ ಅಲಾಯ್ ವೀಲ್‌ಗಳನ್ನು ಹೊಂದಿವೆ.

ಆಲ್‌ಟ್ರೋಜ್, ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಹ್ಯಾರಿಯರ್ ಡಾರ್ಕ್ ಎಡಿಷನ್ ಇಂಟಿರಿಯರ್ ನಲ್ಲಿ, ಡಾರ್ಕ್ ಕ್ರೋಮ್ ಇಂಟಿರಿಯರ್ ಪ್ಯಾಕೇಜ್ ಅನ್ನು ಹೊಂದಿದೆ. ಇದರ ಬೆನೆಕೆ ಕಾಲಿಕೊ ಲೆದರ್ ಅಪ್ಹೋಲ್ಸ್ಟರಿ, ಹೆಡ್‌ರೆಸ್ಟ್‌ನಲ್ಲಿ ಡಾರ್ಕ್ ಕಸೂತಿಯನ್ನು ಹೊಂದಿದೆ. ಉಳಿದಂತೆ ವೈಶಿಷ್ಟ್ಯಗಳು ಮತ್ತು ಮೆಕ್ಯಾನಿಕಲ್‌ ಅಂಶಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ.

ಆಲ್‌ಟ್ರೋಜ್, ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಗ್ರಾಹಕರಿಗೆ ಆಹ್ಲಾದಕರ ಅನುಭವವನ್ನು ಒದಗಿಸಲು ಎಲ್ಲಾ ಅಧಿಕೃತ ಡೀಲರ್‌ಶಿಪ್‌ಗಳನ್ನು ಡಾರ್ಕ್ ಥೀಮ್‌ನಲ್ಲಿ ಅಲಂಕರಿಸಲಾಗಿದೆ ಎಂದು ಕಂಪನಿ ಹೇಳಿದೆ. ಹೆಚ್ಚುವರಿಯಾಗಿ, ಟಾಟಾ ಮೋಟಾರ್ಸ್ ವಿಶೇಷ ಕೊಡುಗೆಗಳನ್ನು ಸಹ ನೀಡುತ್ತಿದೆ

ಆಲ್‌ಟ್ರೋಜ್, ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಕಾರುಗಳ ಡಾರ್ಕ್ ಎಡಿಷನ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಬ್ರ್ಯಾಂಡೆಡ್ ಪ್ರೀಮಿಯಂ ಲೆದರ್ ಜಾಕೆಟ್‌ಗಳು ಮತ್ತು ಟೀ ಶರ್ಟ್‌ಗಳನ್ನು ಒಳಗೊಂಡಿರುತ್ತದೆ. ಇದಲ್ಲದೆ ಸಂಪೂರ್ಣ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಆದ್ಯತೆಯ ಗ್ರಾಹಕರಿಗೆ ಕೊಡುಗೆಯಾಗಿ ಟೈರ್ ಪಂಕ್ಚರ್ ರಿಪೇರಿ ಕಿಟ್ ಅನ್ನು ನೀಡಲಾಗುತ್ತದೆ.

Most Read Articles

Kannada
English summary
Tata Nexon, Altroz, Harrier Dark Editions Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X