ಬಿಳಿ ಸ್ಯಾಟಿನ್ ಹೊದಿಕೆ ಮೂಲಕ ಮಾಡಿಫೈಗೊಂಡ ಮಹೀಂದ್ರಾ ಥಾರ್ ಎಸ್‌ಯುವಿ

ಮಹೀಂದ್ರಾ ಥಾರ್ ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ 4×4 ಎಸ್‌ಯುವಿಗಳಲ್ಲಿ ಒಂದಾಗಿದೆ. 2020ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾದ ಈ ಎಸ್‌ಯುವಿಯು ಹೆಚ್ಚು ಬೇಡಿಕೆಯನ್ನು ಹೊಂದಿದೆ.

ಬಿಳಿ ಸ್ಯಾಟಿನ್ ಹೊದಿಕೆ ಮೂಲಕ ಮಾಡಿಫೈಗೊಂಡ ಮಹೀಂದ್ರಾ ಥಾರ್ ಎಸ್‌ಯುವಿ

ಮಹೀಂದ್ರಾ ಥಾರ್ ಎಸ್‌ಯುವಿ ಎಷ್ಟು ಬೇಡಿಕೆ ಹೊಂದಿದೆ ಎಂದರೆ ಮಹೀಂದ್ರಾ ಕಂಪನಿಯು ಈ ಎಸ್‌ಯುವಿಯ ಉತ್ಪಾದನೆಯನ್ನು ಹೆಚ್ಚಿಸಿದ್ದರೂ ಸಹ ವಿತರಣೆಯನ್ನು ಪಡೆಯಲು ಸುಮಾರು ಒಂದು ವರ್ಷ ಕಾಯಬೇಕಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಈ ಎಸ್‌ಯುವಿಯನ್ನು ಮಾಡಿಫೈಗೊಳಿಸಲಾಗಿದೆ.

ಬಿಳಿ ಸ್ಯಾಟಿನ್ ಹೊದಿಕೆ ಮೂಲಕ ಮಾಡಿಫೈಗೊಂಡ ಮಹೀಂದ್ರಾ ಥಾರ್ ಎಸ್‌ಯುವಿ

ಕೆಲವರು ಈ ಎಸ್‌ಯುವಿಯನ್ನು ಕೇವಲ ಪ್ರದರ್ಶನಕ್ಕಾಗಿ ಮಾಡಿಫೈಗೊಳಿಸಿದ್ದರೆ ಇನ್ನೂ ಕೆಲವರು ಆಫ್-ರೋಡ್ ಸಾಮರ್ಥ್ಯಗಳನ್ನು ಸುಧಾರಿಸಲು ಮಾಡಿಫೈಗೊಳಿಸಿದ್ದಾರೆ. ಈಗ ಮತ್ತೊಂದು ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಮಾಡಿಫೈಗೊಳಿಸಲಾಗಿದೆ.

ಬಿಳಿ ಸ್ಯಾಟಿನ್ ಹೊದಿಕೆ ಮೂಲಕ ಮಾಡಿಫೈಗೊಂಡ ಮಹೀಂದ್ರಾ ಥಾರ್ ಎಸ್‌ಯುವಿ

ಈ ಎಸ್‌ಯುವಿಯು ಬಿಳಿ ಸ್ಯಾಟಿನ್ ಹೊದಿಕೆಯನ್ನು ಪಡೆದುಕೊಂಡಿದೆ. ಈ ಎಸ್‌ಯುವಿ ಬಿಳಿ ಸ್ಯಾಟಿನ್ ಹೊದಿಕೆಯನ್ನು ಪಡೆದಿರುವ ದೇಶದ ಮೊದಲ ಮಹೀಂದ್ರಾ ಥಾರ್ ಆಗಿದೆ. ಈ ಥಾರ್ ಎಸ್‌ಯುವಿಯನ್ನು ಫೆಂಡರ್ ಹಾಗೂ ಕಪ್ಪು ಕ್ಲಾಡಿಂಗ್ ಸೇರಿದಂತೆ ಹಲವು ಭಾಗಗಳಲ್ಲಿ ಬಿಳಿ ಸ್ಯಾಟಿನ್ ಹೊದಿಕೆಯಿಂದ ಸಂಪೂರ್ಣವಾಗಿ ಸುತ್ತಲಾಗಿದೆ.

ಬಿಳಿ ಸ್ಯಾಟಿನ್ ಹೊದಿಕೆ ಮೂಲಕ ಮಾಡಿಫೈಗೊಂಡ ಮಹೀಂದ್ರಾ ಥಾರ್ ಎಸ್‌ಯುವಿ

ಈ ಎಸ್‌ಯುವಿಯ ಡೋರ್ ಹ್ಯಾಂಡಲ್, ಹಿಂಜ್, ಬಾನೆಟ್ ಲಾಕ್ ಹಾಗೂ ರೂಫ್'ನಲ್ಲಿ ಮಾತ್ರ ಕಪ್ಪು ಬಣ್ಣವನ್ನು ಕಾಣಬಹುದು. ಇವುಗಳನ್ನು ಹೊರತುಪಡಿಸಿ ಎಲ್ಲಾ ಭಾಗಗಳನ್ನು ಬಿಳಿ ಸ್ಯಾಟಿನ್'ನಿಂದ ವ್ರಾಪ್ ಮಾಡಲಾಗಿದೆ.

ಬಿಳಿ ಸ್ಯಾಟಿನ್ ಹೊದಿಕೆ ಮೂಲಕ ಮಾಡಿಫೈಗೊಂಡ ಮಹೀಂದ್ರಾ ಥಾರ್ ಎಸ್‌ಯುವಿ

ಇದರ ಜೊತೆಗೆ ಈ ಎಸ್‌ಯುವಿಯ ಮಾಲೀಕರು ಈ ಎಸ್‌ಯುವಿಯಲ್ಲಿ ಕೆಲವು ಮಾರ್ಪಾಡುಗಳನ್ನು ಸಹ ಮಾಡಿದ್ದಾರೆ. ಈ ಮಹೀಂದ್ರಾ ಥಾರ್ ಎಸ್‌ಯುವಿಯ ಮುಂಭಾಗದಲ್ಲಿ ಆಂಗ್ರಿ ಬರ್ಡ್ ಶೈಲಿಯ ಗ್ರಿಲ್ ಅಳವಡಿಸಲಾಗಿದೆ.

ಬಿಳಿ ಸ್ಯಾಟಿನ್ ಹೊದಿಕೆ ಮೂಲಕ ಮಾಡಿಫೈಗೊಂಡ ಮಹೀಂದ್ರಾ ಥಾರ್ ಎಸ್‌ಯುವಿ

ಈ ಎಸ್‌ಯುವಿಯಲ್ಲಿದ್ದ ರಿಂಗ್ ಟೈಪ್ ಡಿಆರ್‌ಎಲ್‌ಗಳನ್ನು ಹೊಂದಿದ್ದ ಹೆಡ್‌ಲ್ಯಾಂಪ್‌ಗಳನ್ನು ಬದಲಿಸಿ ಆಫ್ಟರ್ ಮಾರ್ಕೆಟ್ ಎಲ್ಇಡಿ ಪ್ರೊಜೆಕ್ಟರ್ ಯುನಿಟ್'ಗಳನ್ನು ಅಳವಡಿಸಲಾಗಿದೆ. ಜೊತೆಗೆ ಎಲ್ಇಡಿ ಫಾಗ್ ಲ್ಯಾಂಪ್'ಗಳನ್ನು ನೀಡಲಾಗಿದೆ.

ಬಿಳಿ ಸ್ಯಾಟಿನ್ ಹೊದಿಕೆ ಮೂಲಕ ಮಾಡಿಫೈಗೊಂಡ ಮಹೀಂದ್ರಾ ಥಾರ್ ಎಸ್‌ಯುವಿ

ಇದಲ್ಲದೆ ಅಲಾಯ್ ವ್ಹೀಲ್'ಗಳನ್ನು ಬದಲಿಸಿ ಆಫ್ಟರ್ ಮಾರ್ಕೆಟ್ ಡ್ಯುಯಲ್ ಟೋನ್ ಅಲಾಯ್ ವ್ಹೀಲ್'ಗಳನ್ನು ಅಳವಡಿಸಲಾಗಿದೆ. ಬಿಳಿ, ಕಪ್ಪು ಥೀಮ್ ಹೊಂದಿರುವ ಈ ಎಸ್‌ಯುವಿಯಲ್ಲಿ ಗ್ಲೋಸಿ ಬ್ಲಾಕ್ ಒಆರ್‌ವಿ‌ಎಂಗಳನ್ನು ನೀಡಲಾಗಿದೆ.

ಬಿಳಿ ಸ್ಯಾಟಿನ್ ಹೊದಿಕೆ ಮೂಲಕ ಮಾಡಿಫೈಗೊಂಡ ಮಹೀಂದ್ರಾ ಥಾರ್ ಎಸ್‌ಯುವಿ

ಬಿಳಿ ಸ್ಯಾಟಿನ್ ಹೊದಿಕೆಯನ್ನು ಹೊಂದಿರುವ ಈ ಮಹೀಂದ್ರಾ ಥಾರ್ ಎಸ್‌ಯುವಿಯು ವಾಹನ ದಟ್ಟಣೆಯಲ್ಲಿಯೂ ಸಹ ಜನರ ಗಮನವನ್ನು ತನ್ನತ್ತ ಸೆಳೆಯುತ್ತದೆ. ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಈ ಎಸ್‌ಯುವಿಯಲ್ಲಿ ಹಲವಾರು ಫೀಚರ್'ಗಳನ್ನು ನೀಡಿದೆ.

ಬಿಳಿ ಸ್ಯಾಟಿನ್ ಹೊದಿಕೆ ಮೂಲಕ ಮಾಡಿಫೈಗೊಂಡ ಮಹೀಂದ್ರಾ ಥಾರ್ ಎಸ್‌ಯುವಿ

ಇವುಗಳಲ್ಲಿ ಕನ್ವರ್ಟಿಬಲ್ ಸಾಫ್ಟ್ ಟಾಪ್, ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸ್ಕ್ರೀನ್, ಅಲಾಯ್ ವ್ಹೀಲ್, ರೂಫ್ ಮೌಂಟೆಡ್ ಸ್ಪೀಕರ್, ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ 2.0 ಲೀಟರ್ ಎಂಸ್ಟಾಲಿಯನ್ ಟರ್ಬೊ ಪೆಟ್ರೋಲ್ ಎಂಜಿನ್ 150 ಬಿಹೆಚ್‌ಪಿ ಪವರ್ ಹಾಗೂ 320 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಳಿ ಸ್ಯಾಟಿನ್ ಹೊದಿಕೆ ಮೂಲಕ ಮಾಡಿಫೈಗೊಂಡ ಮಹೀಂದ್ರಾ ಥಾರ್ ಎಸ್‌ಯುವಿ

ಇನ್ನು 2.2 ಲೀಟರ್ ಎಂಹಾಕ್ ಟರ್ಬೊ ಡೀಸೆಲ್ ಎಂಜಿನ್ 130 ಬಿಹೆಚ್‌ಪಿ ಪವರ್ ಹಾಗೂ 320 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಎರಡೂ ಮಾದರಿಗಳಲ್ಲೂ ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಲಭ್ಯವಿದೆ.

ಚಿತ್ರ ಕೃಪೆ: ದಿ ವ್ರಾಪ್ ಟೀಂ ಹೈದರಾಬಾದ್ /ಇನ್ಸ್​ಟಾಗ್ರಾಂ

Most Read Articles

Kannada
English summary
Thar SUV modified with satin white wrap. Read in Kannada.
Story first published: Monday, July 5, 2021, 20:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X