ಹೊಸ ಸ್ಟೈಲಿಂಗ್‌ನೊಂದಿಗೆ ಮಿನಿ ಕೂಪರ್ SE ರೆಸೊಲ್ಯೂಟ್ ಇವಿ ಕಾರು ಬಿಡುಗಡೆ

ಬಿಎಂಡಬ್ಲ್ಯು ಮಿನಿ ಕೂಪರ್ SE ರೆಸೊಲ್ಯೂಟ್ ಎಲೆಕ್ಟ್ರಿಕ್ ಆವೃತ್ತಿಯನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ಬಣ್ಣದಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಕಾರನ್ನು ಹೊಸ ನ್ಯಾನೂಕ್ ವೈಟ್ ಬಾಡಿ ಬಣ್ಣದಲ್ಲಿ ಪರಿಚಯಿಸಲಾಗಿದೆ. ಕಾರಿನ ಬಿಳಿ ಬಣ್ಣವು ಉತ್ತರ ಧ್ರುವ ಪ್ರದೇಶದಿಂದ ಸ್ಪೂರ್ತಿ ಪಡೆದಿರುವುದಾಗಿ ಕಂಪನಿ ಹೇಳಿಕೊಂಡಿದ್ದು, ಅಲ್ಲಿನ ತಾಪಮಾನವು 0 ಡಿಗ್ರಿಗಿಂತ ಕಡಿಮೆಯಾಗಿರುವುದನ್ನು ಕಾರಿನ ಬಣ್ಣ ಪ್ರತಿಬಿಂಬಿಸುತ್ತದೆ.

MINI ಕೂಪರ್ SE ರೆಸಲ್ಯೂಟ್ ಆವೃತ್ತಿಯು ಹೆಚ್ಚಿನ ವೋಲ್ಟೇಜ್ ಬ್ಯಾಟರಿ ಪ್ಯಾಕ್, ಸುಧಾರಿತ ಎಲೆಕ್ಟ್ರಾನಿಕ್ಸ್ ಮತ್ತು ಹೆಚ್ಚಿನ ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಮಿನಿ ಕೂಪರ್ ಎಸ್‌ಇ ತನ್ನ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಶ್ರೇಣಿಗಾಗಿ ಪ್ರಪಂಚದಾದ್ಯಂತ ಜನಪ್ರಿಯ ಎಲೆಕ್ಟ್ರಿಕ್ ಕಾರ್ ಆಗಿ ಗುರ್ತಿಸಿಕೊಂಡಿದೆ. ಈ ಎಲೆಕ್ಟ್ರಿಕ್ ಕಾರ್ 184 bhp (135 kW) ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದೆ.

ಈ ಮೂಲಕ ಕಾರು ಕೇವಲ 7.03 ಸೆಕೆಂಡುಗಳಲ್ಲಿ 0-100 ಕಿ.ಮೀ/ಗಂ ವೇಗವನ್ನು ತಲುಪಲು ಅನುವು ಮಾಡಿಕೊಡುತ್ತದೆ. ಈ ಎಲೆಕ್ಟ್ರಿಕ್ ಕಾರ್ ಸ್ಪೋರ್ಟ್ ಮತ್ತು ಗ್ರೀನ್ ಪ್ಲಸ್ ಎಂಬ ಎರಡು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ. ಸಂಪೂರ್ಣ ಚಾರ್ಜ್ ಮಾಡಿದರೆ, ಈ ಕಾರು 234 ಕಿ.ಮೀ ಪ್ರಮಾಣೀಕೃತ ಶ್ರೇಣಿಯನ್ನು ನೀಡುತ್ತದೆ. ಕೂಪರ್ ಎಸ್ಇ ರೆಸಲ್ಯೂಟ್ ಆವೃತ್ತಿಯ ಹುಡ್ ವಿಶೇಷವಾದ ಕಪ್ಪು ಪಟ್ಟಿಗಳನ್ನು ಪಡೆಯುತ್ತದೆ.

ಅದು ಬೆಳಕು ಹೊಡೆದಾಗ ಬಣ್ಣವನ್ನು ಬದಲಾಯಿಸುತ್ತದೆ. ಈ ಆವೃತ್ತಿಯಲ್ಲಿ 'ರೆಸಲ್ಯೂಟ್' ಬ್ಯಾಡ್ಜಿಂಗ್ ಅನ್ನು ಸಹ ನೀಡಲಾಗಿದೆ. ಗ್ರಾಹಕರು ಇದನ್ನು ಬಯಸಿದರೆ, ಅವರು ನ್ಯಾನೂಕ್ ವೈಟ್ ಅಥವಾ ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿ ಖರೀದಿಸಬಹುದು. ಈ ಮಾದರಿಯಲ್ಲಿ 17-ಇಂಚಿನ ಅಲಾಯ್ ವೀಲ್‌ಗಳನ್ನು ಅಳವಡಿಸಲಾಗಿದ್ದು ಕಾರಿಗೆ ಸ್ಪೋರ್ಟಿ ಲುಕ್ ನೀಡುತ್ತದೆ. ಕಾರಿನ ಒಳಭಾಗವು ಡ್ಯಾಶ್‌ಬೋರ್ಡ್‌ನಲ್ಲಿ ತಿಳಿ ಗೋಲ್ಡ್ ಥೀಮ್ ಅನ್ನು ಪಡೆಯುತ್ತದೆ.

ಕಾರಿನ ಮುಂಭಾಗದ ಆಸನಗಳಲ್ಲಿ ಆರ್ಮ್ ರೆಸ್ಟ್ಗಳನ್ನು ಒದಗಿಸಲಾಗಿದ್ದು, ಇದು ದೀರ್ಘ ಪ್ರಯಾಣವನ್ನು ಆರಾಮದಾಯಕವಾಗಿಸುತ್ತದೆ. ಇತರ ಕೆಲವು ಆಂತರಿಕ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, ಮುಂಭಾಗ ಅದೇ ತನ್ನ ಹಳೆಯ ಲುಕ್‌ನೊಂದಿಗೆ ಆಂಥ್ರಾಸೈಟ್ ಬಣ್ಣದ ಹೆಡ್‌ಲೈನರ್, ಸನ್ ಪ್ರೊಟೆಕ್ಟಿವ್ ಗ್ಲೇಜಿಂಗ್ ಮತ್ತು ನಪ್ಪಾ ಫಿನಿಶ್‌ನಲ್ಲಿ ಸ್ಪೋರ್ಟಿ ಸ್ಟೀರಿಂಗ್ ವೀಲ್ ಅನ್ನು ನೀಡಲಾಗಿದ್ದು, ಇದು ಉತ್ತಮ ಡ್ರೈವಿಂಗ್ ಅನುಭವ ನೀಡುತ್ತದೆ.

ಸುರಕ್ಷತೆಗಾಗಿ, ಕಂಪನಿಯು ಅದರಲ್ಲಿ ಸ್ಟ್ಯಾಂಡರ್ಡ್ ಮಿನಿ ಡ್ರೈವರ್ ಅಸಿಸ್ಟೆಂಟ್ ವೈಶಿಷ್ಟ್ಯವನ್ನು ನೀಡಿದೆ, ಇದು ಚಾಲಕ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ನೋಡಿಕೊಳ್ಳುತ್ತದೆ. ಈ ಕಾರಿಗೆ ಆಕ್ಟಿವ್ ಗಾರ್ಡ್ ಡ್ರೈವಿಂಗ್ ಅಸಿಸ್ಟೆನ್ಸ್ ಫೀಚರ್ ಅನ್ನು ನೀಡಲಾಗಿದೆ. ಇದು ವೇಗ ಹೆಚ್ಚಾದಾಗ ಸ್ವಯಂಚಾಲಿತವಾಗಿ ಬ್ರೇಕ್ ಅನ್ನು ಅನ್ವಯಿಸುತ್ತದೆ. ಇದಲ್ಲದೆ, ಇದು ಲೇನ್ ನಿರ್ಗಮನ ಎಚ್ಚರಿಕೆ ವ್ಯವಸ್ಥೆಯನ್ನು ಸಹ ಪಡೆದುಕೊಂಡಿದೆ, ಇದು ಹೆದ್ದಾರಿಯಲ್ಲಿ ಲೇನ್ ಬದಲಾದ ತಕ್ಷಣ ಚಾಲಕನಿಗೆ ಎಚ್ಚರಿಕೆ ನೀಡುತ್ತದೆ.

ಹೆದ್ದಾರಿ ಚಾಲನೆಯನ್ನು ಸುರಕ್ಷಿತವಾಗಿಸಲು, ಕ್ಯಾಮರಾ ಆಧಾರಿತ ಸಕ್ರಿಯ ಕ್ರೂಸ್ ನಿಯಂತ್ರಣ ವ್ಯವಸ್ಥೆಯನ್ನು ಸಹ ಒದಗಿಸಲಾಗಿದೆ, ಇದು ಮುಂದೆ ಚಲಿಸುವ ವಾಹನದಿಂದ ಸ್ವಯಂಚಾಲಿತವಾಗಿ ಕಾರಿನ ಸುರಕ್ಷಿತ ಅಂತರವನ್ನು ಸ್ಪಷ್ಟಿಸುತ್ತದೆ. ಇನ್ನು ಮಿನಿ ಕೂಪರ್ SE ರೆಸೊಲ್ಯೂಟ್ ಎಲೆಕ್ಟ್ರಿಕ್ ಕಾರಿನಲ್ಲಿ ಆಧುನಿಕವಾಗಿ ಕಂಡುಬರುವ ಬಹುತೇಕ ಎಲ್ಲಾ ವೈಶಿಷ್ಟ್ಯಗಳನ್ನು ನೀಡಿರುವುದಾಗಿ ಕಂಪನಿ ತಿಳಿಸಿದೆ.

Most Read Articles

Kannada
English summary
Mini cooper se resolute ev launched with new styling
Story first published: Tuesday, November 22, 2022, 9:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X