ನಿಮ್ಮ ಡಸ್ಟರ್ ಇತರ ಕಾರಿಗಿಂತ ಹೇಗೆ ಭಿನ್ನ?

Written By:

ಸದ್ಯ ಮಾರುಕಟ್ಟೆಯಲ್ಲಿ 'ಹಾಟ್ ಕೇಕ್' ತರಹನೇ ಸೇಲಾಗುತ್ತಿರುವ ಕಾರೆಂದರೆ ಡಸ್ಟರ್. ಇದಕ್ಕೊಂದು ಸೇರ್ಪಡೆಯೆಂಬಂತೆ ಡಸ್ಟರ್ ಫೇಸ್‌ಲಿಫ್ಟ್ ವರ್ಷನ್ ಮುಂದಿನ ವರ್ಷ ಆಗಮನವಾಗಲಿದೆ.

ಹಾಗಿರುವಂತೆಯೇ ರಸ್ತೆಯಲ್ಲಿ ಓಡಾಡುವ ಡಸ್ಟರ್ ಕಾರುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಗ್ರಾಹಕರು ತಮ್ಮ ಡಸ್ಟರ್ ಇತರ ಕಾರುಗಳಿಗಿಂತ ಹೇಗೆ ಭಿನ್ನವಾಗಿ ಗೋಚರಿಸಬೇಕೆಂಬ ಗೊಂದಲದಲ್ಲಿದ್ದಾರೆ. ಅಂತವರಿಗೆ ಕಾರನ್ನು ಕಸ್ಟಮೈಸ್ಡ್ ಮಾಡುವುದು ಉತ್ತಮ ಉದಾಹರಣೆಯಾಗಿದೆ. ಗರಿಷ್ಠ ವೆರಿಯಂಟ್ ಆಯ್ಕೆ ಮಾಡಿದಂತೆ ಡಸ್ಟರ್‌ನಲ್ಲಿ ಲಭ್ಯವಾಗುವ ಸೌಲಭ್ಯಗಳು ಹೆಚ್ಚುತ್ತದೆ.

ಸಾಮಾನ್ಯವಾಗಿ ಕಾರೊಂದರ ಅಂದತೆಯಲ್ಲಿ ಚಕ್ರಗಳ ಪಾತ್ರ ಮಹತ್ವದ್ದಾಗಿರುತ್ತದೆ. ಹಾಗಾಗಿ ಅದನ್ನೇ ಕಸ್ಟಮೈಸ್ಡ್ ಮಾಡಿದರೆ ಇನ್ನು ಚೆನ್ನಾಗಿರುತ್ತದೆ. ಕೆಳಗಡೆ ಕೊಡಲಾಗಿರುವ ವೀಡಿಯೋ ಚಿತ್ರಣ ಈ ಬಗ್ಗೆ ಸ್ಪಷ್ಟ ಚಿತ್ರಣವನ್ನು ಕೊಡಲಿದೆ. ಜರ್ಮನಿಯ ಸಂಸ್ಥೆಯೊಂದು ಡೇಸಿಯಾ ಡಸ್ಟರ್‌ಗೆ ಹೊಸ ಟಚ್ ನೀಡುವಲ್ಲಿ ಯಶಸ್ವಿಯಾಗಿದೆ.

ನಿಮ್ಮ ಡಸ್ಟರ್ ಇತರ ಕಾರಿಗಿಂತ ಹೇಗೆ ಭಿನ್ನ?

ಕಾಂಪಾಕ್ಟ್ ಎಸ್‌ಯುವಿ ಆಗಿರುವ ಹೊರತಾಗಿಯೂ ವಿಶಾಲವಾದ ಗಾತ್ರ ಹೊಂದಿರುವ ಡೇಸಿಯಾ ಡಸ್ಟರನ್ನು ಕಸ್ಟಮೈಸ್ಡ್ ಮಾಡುವುದು ಹೆಚ್ಚು ಸುಲಭ. ನಿಮ್ಮ ಅಗತ್ಯಕ್ಕಾನುಸಾರವಾಗಿ ಚಕ್ರಗಳನ್ನು ಬದಲಾಯಿಸಬಹುದು ಎಂದು ತಿಳಿಸಲಾಗಿದೆ.

ನಿಮ್ಮ ಡಸ್ಟರ್ ಇತರ ಕಾರಿಗಿಂತ ಹೇಗೆ ಭಿನ್ನ?

ಡ್ಯುಯಲ್ ಟೋನ್ ಕಲರ್, ದೊಡ್ಡದ ಎಲ್‌ಇಡಿ ಲೈಟ್, ಎಂಜಿನ್ ಗಾರ್ಡ್ ಮತ್ತು ಪ್ಲಾಸ್ಟಿಕ್ ಪರಿಕರಗಳು ಸಹ ನಿಮ್ಮ ಡಸ್ಟರ್‌ಗೆ ಹೆಚ್ಚಿನ ಆಕ್ರಮಣಕಾರಿ ವಿನ್ಯಾಸ ಕಲ್ಪಿಸಬಲ್ಲದು.

ನಿಮ್ಮ ಡಸ್ಟರ್ ಇತರ ಕಾರಿಗಿಂತ ಹೇಗೆ ಭಿನ್ನ?

ಟಾಪ್ ಎಂಡ್ ಡೇಸಿಯಾ ಡಸ್ಟರ್ 110 ಪಿಎಸ್ ಪವರ್ ಉತ್ಪಾದಿಸಬಹುದಾದ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ.

ನಿಮ್ಮ ಡಸ್ಟರ್ ಇತರ ಕಾರಿಗಿಂತ ಹೇಗೆ ಭಿನ್ನ?

ಇದರ ಕಾರ್ಯನಿರ್ವಹಣೆಯ ಡ್ಯುಯಲ್ ಎಕ್ಸಾಸ್ಟ್ ಕಾರಿಗೆ ಹೆಚ್ಚು ಕ್ರೀಡಾತ್ಮಕ ಲುಕ್ ಪ್ರದಾನ ಮಾಡುತ್ತಿದೆ.

ವೀಡಿಯೋ ವೀಕ್ಷಿಸಿ...

English summary
You could pick a few ideas from this extensively customised Duster SUV from Germany in the following video. It's not the best looking custom Duster we have come across, but it has plenty of good features which you can use as a reference for your customised Duster.
Story first published: Monday, November 11, 2013, 11:59 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark